AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನದಲ್ಲಿ ಆರು ವಿಶ್ವ ದಾಖಲೆ; ಮಾನವ ಕ್ಯಾಲ್ಕುಲೇಟರ್‌ ಅಪ್ರತಿಮ ಸಾಧನೆಗೆ ಮನಸೋತ ಆನಂದ್‌ ಮಹೀಂದ್ರಾ

ಇತ್ತೀಚಿಗಷ್ಟೇ ಮಹಾರಾಷ್ಟ್ರದ ಮೂಲದ ಆರ್ಯನ್‌ ಶುಕ್ಲಾ ಎಂಬ 14 ವರ್ಷ ವಯಸ್ಸಿನ ಬಾಲಕ ಗಣಿತಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಆರು ಗಿನ್ನೆಸ್‌ ದಾಖಲೆ ಸೃಷ್ಟಿಸುವ ಮೂಲಕ ಮಾನವ ಕ್ಯಾಲ್ಕುಲೇಟರ್‌ ಎಂಬ ಮನ್ನಣೆಗೆ ಪಾತ್ರನಾಗಿದ್ದ. ಈ ಬಾಲಕನ ಅಸಾಧಾರಣ ಗಣಿತ ಪ್ರತಿಭೆ ಹಾಗೂ ಸಾಧನೆಯನ್ನು ಉದ್ಯಮಿ ಆನಂದ್‌ ಮಹೀಂದ್ರಾ ಶ್ಲಾಘಿಸಿದ್ದು, ಕ್ಯಾಲ್ಕುಲೇಟರ್‌ಗಳಿಂತಲೂ ವೇಗವಾಗಿ ಲೆಕ್ಕಾಚಾರ ಮಾಡುವ ಈತನ ಕೌಶಲ್ಯಕ್ಕೆ ಬೆರಗಾಗಿದ್ದಾರೆ

ಒಂದೇ ದಿನದಲ್ಲಿ ಆರು ವಿಶ್ವ ದಾಖಲೆ; ಮಾನವ ಕ್ಯಾಲ್ಕುಲೇಟರ್‌ ಅಪ್ರತಿಮ ಸಾಧನೆಗೆ ಮನಸೋತ ಆನಂದ್‌ ಮಹೀಂದ್ರಾ
ಆನಂದ್ ಮಹೀಂದ್ರಾ
ಮಾಲಾಶ್ರೀ ಅಂಚನ್​
| Edited By: |

Updated on: Mar 19, 2025 | 8:53 AM

Share

ಹೆಚ್ಚಿನ ಮಕ್ಕಳಿಗೆ ಗಣಿತ (Mathamatics) ಎಂದ್ರೆ ಕಬ್ಬಿಣದ ಕಡಲೆ. ವಯಸ್ಕರರಲ್ಲೂ ನನಗೆ ಸರಿಯಾಗಿ ಲೆಕ್ಕ ಬರಲ್ಲ ಅನ್ನುವವರೇ ಹೆಚ್ಚು. ಗಣಿತ ಕಬ್ಬಿಣದ ಕಡಲೆಯಲ್ಲ ಬದಲಿಗೆ ಅದು ಸಿಹಿಯಾದ ಸಕ್ಕರೆ ಎಂದು ಭಾವಿಸಿದ ಕೆಲವರು ಮಾತ್ರ ಅದೇ ಗಣಿತದಲ್ಲಿ ಅಪ್ರತಿಮ ಯಶಸ್ಸು ಗಳಿಸುತ್ತಾರೆ. ಹೀಗೆ ತನ್ನ ಭೌದ್ಧಿಕ ಸಾಮರ್ಥ್ಯದಿಂದಲೇ ಫಟಾಫಟ್‌ ಅಂತ ಗಣಿತದ ಲೆಕ್ಕಗಳನ್ನು ಪರಿಹರಿಸುವ ಮೂಲಕ ಇಲ್ಲೊಬ್ಬ ಬಾಲಕ ಒಂದೇ ದಿನದಲ್ಲಿ ಬರೋಬ್ಬರಿ 6 ಗಿನ್ನೆಸ್‌ ವಿಶ್ವ ದಾಖಲೆಗಳನ್ನು (Guinness World Record) ಸೃಷ್ಟಿಸಿದ್ದಾನೆ. ಹೀಗೆ ತನ್ನ ಸಾಧನೆಯ ಮೂಲಕವೇ ಮಾನವ ಕ್ಯಾಲ್ಕುಲೇಟರ್‌ ಎಂಬ ಮನ್ನಣೆಗೆ ಪಾತ್ರನಾದ ಈ ಬಾಲಕನ ಅಸಾಧಾರಣ ಗಣಿತ ಪ್ರತಿಭೆ ಹಾಗೂ ಗಣಿತ ಕೌಶಲ್ಯಕ್ಕೆ ಉದ್ಯಮಿ ಆನಂದ್‌ ಮಹೀಂದ್ರಾ (Ananad Mahindra) ಫುಲ್‌ ಫಿದಾ ಆಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಆತನ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಇತ್ತೀಚಿಗೆ ದುಬೈನಲ್ಲಿ ಆಯೋಜಿಸಲಾಗಿದ್ದ ಗಿನ್ನೆಸ್‌ ವರ್ಲ್ಡ್‌ ರೆಕಾರ್ಡ್‌ ಕಾರ್ಯಕ್ರಮಕ್ಕೆ ಆಹ್ವಾನದ ಮೇರೆಗೆ ಹೋಗಿದ್ದ ಆರ್ಯನ್‌ ಶುಕ್ಲಾ ಎಂಬ 14 ವರ್ಷ ವಯಸ್ಸಿನ ಬಾಲಕ ಸ್ಪರ್ಧೆಯ ನಿಯಮಾನುಸಾರ 4 ಅಂಕೆಯ ಒಟ್ಟು 100 ಸಂಖ್ಯೆಗಳನ್ನು ಕೇವಲ 30.9 ಸೆಕೆಂಡುಗಳಲ್ಲಿ ಕೂಡಿಸುವುದು ಸೇರಿದಂತೆ ನಿಖರ ಭಾಗಾಕಾರ, ಅನಿಖರ ಭಾಗಾಕಾರ, ಗುಣಾಕಾರ ಸೇರಿದಂತೆ ವಿವಿಧ ಕ್ಲಿಷ್ಟಕರ ಗಣಿತದ ಸವಾಲುಗಳನ್ನು ತನ್ನ ಬೌದ್ಧಿಕ ಸಾಮರ್ಥ್ಯದಿಂದ ಹಾಗೂ ಫಿಂಗರ್ ಮ್ಯಾಥಮ್ಯಾಟಿಕ್ಸ್ ಕೌಶಲ್ಯದಿಂದ ಪರಿಹರಿಸುವ ಮೂಲಕ ವಿಶ್ವ ದಾಖಲೆಯನ್ನು ಮಾಡಿದ್ದಾನೆ. ಈ ಮಾನವ ಕ್ಯಾಲ್ಕುಲೇಟರ್‌ ಅಪ್ರತಿಮ ಸಾಧನೆಯನ್ನು ಉದ್ಯಮಿ ಆನಂದ್‌ ಮಹೀಂದ್ರಾ ಶ್ಲಾಘಿಸಿದ್ದಾರೆ.

ಈ ಕುರಿತ ಪೋಸ್ಟ್‌ ಒಂದನ್ನು ಆನಂದ್‌ ಮಹೀಂದ್ರಾ (Anand Mahindra) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಅಭಿನಂದನೆಗಳು ಆರ್ಯನ್‌; ಮಕ್ಕಳು ಈ ತಂತ್ರವನ್ನು ಬಳಸುವ ಮೂಲಕ ಲೆಕ್ಕಾಚಾರವನ್ನು ಮಾಡುವುದನ್ನು ನಾನು ಇದೇ ಮೊದಲು ನೋಡಿದ್ದು, ಇದು ಅವನಿಗೆ ಸಿಕ್ಕ ವಿಶೇಷ ಉಡುಗೊರೆ. ಈ ಲೆಕ್ಕಾಚಾರವನ್ನು ಕಲಿಯುವ ಯಾವುದಾದರೂ ಸೈಟ್‌ ಇದೆಯೇ, ಯಾವುದೇ ವಿಶ್ವ ದಾಖಲೆಯನ್ನು ಮುರಿಯಲು ಅಲ್ಲ, ನನ್ನ ದೈನಂದಿನ ವ್ಯವಹಾರದ ಅನುಕೂಲಕ್ಕಾಗಿ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಆರ್ಯನ್‌ ಶುಕ್ಲಾ “ಧನ್ಯವಾದಗಳು ಸರ್‌, ಈ ತಂತ್ರವನ್ನು ಫ್ಲ್ಯಾಶ್‌ ಅಂಝಾನ್‌ ಎಂದು ಕರೆಯಲಾಗುತ್ತದೆ. ಇಲ್ಲಿನ ನಾವು ಮಿಂಚಿನ ವೇಗದಲ್ಲಿ ಪರದೆಯಲ್ಲಿ ಕಾಣಿಸುವ ಸಂಖ್ಯೆಗಳು, ಲೆಕ್ಕದ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಕೌಶಲ್ಯವನ್ನು ಕರಗತ ಮಾಡಲು ನಾನು 8 ವರ್ಷಗಳಿಂದ ತರಬೇತಿ ಪಡೆಯುತ್ತಿದ್ದೇನೆ” ಎಂದು ಹೇಳಿದ್ದಾನೆ.

ಮತ್ತಷ್ಟು ಓದಿ: Viral: ಮುದ್ದು ಕಂದನ ಮೊದಲ ಹೆಜ್ಜೆ ಕಂಡು ಸಂಭ್ರಮಿಸಿದ ತಾಯಿ; ಮುದ್ದಾದ ವಿಡಿಯೋ ಹಂಚಿಕೊಂಡ ಆನಂದ್‌ ಮಹೀಂದ್ರಾ

ಆರ್ಯನ್ ಶುಕ್ಲಾ ಯಾರು? ಮಹಾರಾಷ್ಟ್ರ ಮೂಲದ 14 ವರ್ಷ ವಯಸ್ಸಿನ ಆರ್ಯನ್‌ ಶುಕ್ಲಾ ತನ್ನ ಅಪ್ರತಿಮ ಸಾಧನೆಯ ಮೂಲಕ ಮಾನವ ಕ್ಯಾಲ್ಕುಲೇಟರ್‌ ಎಂಬ ಮನ್ನಣೆಗೆ ಪಾತ್ರನಾಗಿದ್ದಾನೆ. ಗ್ಲೋಬಲ್‌ ಮೆಂಟಲ್‌ ಕ್ಯಾಲ್ಕುಲೇಟರ್ಸ್‌ ಅಸೋಸಿಯೇಷನ್‌ನ ಸ್ಥಾಪಕ ಮಂಡಳಿಯ ಸದಸ್ಯರಲ್ಲಿ ಒಬ್ಬನಾದ ಆರ್ಯನ್‌ ತನ್ನ ಆರನೇ ವಯಸ್ಸಿನಿಂದಲೂ ಮಾನಸಿಕ ಗಣಿತವನ್ನು ಅಭ್ಯಾಸ ಮಾಡುತ್ತಿದ್ದಾನೆ.

ಎಂಟನೇ ವಯಸ್ಸಿನಲ್ಲಿ ಗಣಿತ ಸ್ಪರ್ಧೆಯಲ್ಲಿ ಭಾಗವಹಿಸಲು ಆರಂಭಿಸಿದ ಆರ್ಯನ್ 2018 ರಲ್ಲಿ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 7 ಚಿನ್ನ, 1 ಬೆಳ್ಳಿ ಮತ್ತು 2 ಕಂಚು ಸೇರಿದಂತೆ 10 ಪದಕಗಳನ್ನು ಗೆದ್ದಿದ್ದನು. ಹೀಗೆ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿರುವ ಈ ಬಾಲಕ ಇದೀಗ ಗಣಿತ ಲೆಕ್ಕಾಚಾರದಲ್ಲಿ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾನೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು