Viral: ಮುದ್ದು ಕಂದನ ಮೊದಲ ಹೆಜ್ಜೆ ಕಂಡು ಸಂಭ್ರಮಿಸಿದ ತಾಯಿ; ಮುದ್ದಾದ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ
ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಸಕ್ರಿಯವಾಗಿರುವ ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಎಕ್ಸ್ ಖಾತೆಯಲ್ಲಿ ಯಾವಾಗಲೂ ವಿಶೇಷ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ಅದೇ ರೀತಿ ಇದೀಗ ಮುದ್ದು ಕಂದಮ್ಮನ ಮೊದಲ ಹೆಜ್ಜೆಯನ್ನು ಕಂಡು ತಾಯಿ ಸಂಭ್ರಮಿಸಿದಂತಹ ವಿಡಿಯೋವನ್ನು ಹಂಚಿಕೊಂಡು, ಈ ಮಗುವಿನ ಮೊದಲ ಹೆಜ್ಜೆಯಂತೆ ನಮ್ಮ ಹೊಸ ರೆಸೆಲ್ಯೂಷನ್‌ಗಳನ್ನು ಪೂರೈಸುವ ಮೊದಲ ಹೆಜ್ಜೆಯನ್ನಿಡೋಣ ಎಂಬ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಉದ್ಯಮಿ ಆನಂದ್ ಮಹೀಂದ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಅವರು ಸ್ಪೂರ್ತಿದಾಯಕ ಹಾಗೂ ಕೆಲವೊಂದು ಇಂಟರೆಸ್ಟಿಂಗ್ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಅವರು ಹೊಸ ವರ್ಷದ ಸಂಭ್ರಮದಂದು ಪುಟ್ಟ ಕಂದಮ್ಮ ಮೊದಲ ಹೆಜ್ಜೆಯನ್ನಿಡುವ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡುವ ಮೂಲಕ “ಈ ಮಗುವಿನ ಮೊದಲ ಹೆಜ್ಜೆಯಂತೆ ನಮ್ಮ ಹೊಸ ಹೊಸ ರೆಸೆಲ್ಯೂಷನ್‌ಗಳನ್ನು ಪೂರೈಸುವ ಮೊದಲ ಹೆಜ್ಜೆಯನ್ನಿಡೋಣ” ಎಂಬ ಒಂದೊಳ್ಳೆ ಸಂದೇಶವನ್ನು ನೀಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ. ಉದ್ಯಮಿ ಆನಂದ್ ಮಹೀಂದ್ರಾ (anandmahindra) ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಹೊಸ ವರ್ಷವನ್ನು ಪ್ರಾರಂಭಿಸಲು ಇದು ಒಂದು ಮಾರ್ಗವಾಗಿದೆ; ಈ ಮಗುವಿನ ಮೊದಲ ಹೆಜ್ಜೆಯಂತೆ ನಮ್ಮ ಹೊಸ ಹೊಸ ರೆಸೆಲ್ಯೂಷನ್‌ಗಳನ್ನು ಪೂರೈಸುವ ಮೊದಲ ಹೆಜ್ಜೆಯನ್ನಿಡೋಣ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತಾಯಿ ಮನೆಕೆಲಸದಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಮಗು ಎದ್ದು ನಿಲ್ಲಲು ಪ್ರಯತ್ನಿಸುತ್ತಿರುವ ದೃಶ್ಯವನ್ನು ಕಾಣಹುದು. ಹೀಗೆ ಎದ್ದು ನಿಂತ ಮಗು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ತಾಯಿಯ ಬಳಿ ಹೋಗಿದೆ. ಕಂದಮ್ಮ ಮೊದಲ ಹೆಜ್ಜೆಯಿಡುವ ದೃಶ್ಯವನ್ನು ಕಂಡ ತಾಯಿ ಖುಷಿಯಿಂದ ಮಗುವನ್ನು ತಬ್ಬಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಗರ್ಲ್ಸ್ ಹಾಸ್ಟೆಲ್ ಬಾತ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಕೆ ಆರೋಪ; 300ಕ್ಕೂ ವಿಡಿಯೋ ಇರುವ ಶಂಕೆ
ಜನವರಿ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 6.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ತುಂಬಾನೇ ಸ್ಪೂರ್ತಿದಾಯಕವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಗುವಿನ ಮೊದಲ ಹೆಜ್ಜೆಯನ್ನು ಕಂಡು ತಾಯಿಯ ಪ್ರತಿಕ್ರಿಯೆ ತುಂಬಾನೇ ಅಮುಲ್ಯವಾಗಿತ್ತುʼ ಎಂದು ಹೇಳಿಕೊಂಡಿದ್ದಾರೆ.
ವೈರಲ್ ಸುಸ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ