Viral: ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ; ನಡುರಾತ್ರಿ ಸ್ಕೂಟಿಯಲ್ಲಿ ಕುಳಿತು ನಾಯಿಯನ್ನು ಎಳೆದೊಯ್ದ ವ್ಯಕ್ತಿ
ಈ ಸಮಾಜದಲ್ಲಿ ನಡೆಯುವ ಕೆಲವೊಂದು ಅಮಾನವೀಯ ಘಟನೆಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಇದೀಗ ಇಲ್ಲೊಂದು ಇಂತಹ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ನಡುರಾತ್ರಿ ಸ್ಕೂಟಿಯಲ್ಲಿ ಹೋಗುತ್ತಾ ತನ್ನ ಸಾಕು ನಾಯಿಯನ್ನು ಕೂಡಾ ಎಳೆದುಕೊಂಡು ಹೋಗಿದ್ದಾನೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋದ ವ್ಯಕ್ತವಾಗುತ್ತಿದೆ.
ಇಡೀ ಮನುಕುಲವೇ ತಲೆ ತಗ್ಗಿಸುವಂತಹ ಕೆಲವೊಂದು ಅಮಾನವೀಯ ಘಟನೆಗಳು ಈ ಸಮಾಜದಲ್ಲಿ ನಡೆಯುತ್ತಲೇ ಇವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಮನೆಯ ಸಾಕು ನಾಯಿಯನ್ನೇ ಹೆದ್ದಾರಿಯಲ್ಲಿ ಎಳೆದುಕೊಂಡು ಹೋಗಿದ್ದಾನೆ. ಹೌದು ಆ ವ್ಯಕ್ತಿ ನಡುರಾತ್ರಿ ಸ್ಕೂಟಿಯಲ್ಲಿ ಹೋಗುತ್ತಾ ತನ್ನ ಸಾಕು ನಾಯಿಯ ಕುತ್ತಿಗೆ ಬೆಲ್ಟ್ ಕಟ್ಟಿ ಅದನ್ನು ಎಳೆದೊಯ್ದಿದ್ದಾನೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋದ ವ್ಯಕ್ತವಾಗುತ್ತಿದೆ.
ಈ ಆಘಾತಕಾರಿ ಬೆಂಗಳೂರಿನಲ್ಲಿ ನಡೆದಿದ್ದು, ಡಿಸೆಂಬರ್ 30 ರ ರಾತ್ರಿ ಹೆಣ್ಣೂರು ರೈಲ್ವೆ ನಿಲ್ದಾಣದ ಬಳಿ ವ್ಯಕ್ತಿಯೊಬ್ಬ ರೋಡಲ್ಲಿ ಸ್ಕೂಟಿಯಲ್ಲಿ ಹೋಗುತ್ತಾ ತನ್ನ ನಾಯಿಯನ್ನು ಎಳೆದುಕೊಂಡು ಹೋಗಿದ್ದಾನೆ. ಹೌದು ನಾಯಿಯ ಕುತ್ತಿಗೆಗೆ ಬೆಲ್ಟ್ ಕಟ್ಟಿ, ವೇಗವಾಗಿ ಸ್ಕೂಟಿ ಚಲಾಯಿಸುತ್ತಾ ನಾಯಿಯನ್ನು ಎಳೆದೊಯ್ದಿದ್ದಾನೆ. ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಹೆಚ್.ಬಿ.ಆರ್ ಲೇಔಟ್ ನಿವಾಸಿ ಬಾಲಾಜಿ ಎಂಬಾತ ಈ ಕೃತ್ಯವನ್ನು ಎಸಗಿರುವುದಾಗಿ ತಿಳಿದು ಬಂದಿದ್ದು, ವ್ಯಾಯಾಯಮದ ಭಾಗವಾಗಿ ನಾನು ನಾಯಿಯನ್ನು ಓಡಿಸುತ್ತಾ ಹೋದೆ ಎಂದು ಹೇಳಿಕೊಂಡಿದ್ದಾನೆ.
“ಸಾಮಾನ್ಯವಾಗಿ ನಾನು ಆಟೋ ರಿಕ್ಷಾದಲ್ಲಿ ಕುಳಿತು ನಾಯಿಯನ್ನು ಹೀಗೆ ಓಡಿಸುತ್ತಾ ಹೋಗುತ್ತಿದ್ದೆ, ಆದ್ರೆ ಈ ಬಾರಿ ನಾನು ಸ್ಕೂಟಿಯಲ್ಲಿ ನಾಯಿಯನ್ನು ಓಡಿಸುತ್ತಾ ಹೋದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ನಾಯಿಗೆ ವ್ಯಾಯಾಮ ಮಾಡಿಸುವ ಸಲುವಾಗಿ ಹೀಗೆ ಮಾಡಿದ್ದು” ಎಂದು ಹೇಳಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Outrage as Bengaluru Man Seen Dragging Dog Behind Bike
On December 30, 2024, a shocking incident near Hennur railway station sparked outrage across Bengaluru. Around 10 PM, a man was filmed dragging a dog by its leash while riding a two-wheeler. The dog visibly struggled to keep… pic.twitter.com/Q9jz3B8YkY
— Karnataka Portfolio (@karnatakaportf) December 31, 2024
karnatakaportf ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಸ್ಕೂಟರ್ ಸವಾರ ಸಾಕು ನಾಯಿಯನ್ನು ಹೆದ್ದಾರಿಯಲ್ಲಿ ಓಡಿಸಿಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸ್ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರೆಂಟ್ ತೆಗೆದ್ರೆ ಜಾಗ್ರತೆ; ಲೈನ್‌ಮ್ಯಾನ್ ಹಿಂದೆಯೇ ದೊಣ್ಣೆ ಹಿಡಿದು ವಿದ್ಯುತ್ ಕಂಬವನ್ನೇರಿ ಅವಾಜ್ ಹಾಕಿದ ಮಹಿಳೆ
ಡಿಸೆಂಬರ್ 31 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 2.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಿಡಿಯೋ ಮಾಡುವ ಬದಲು ಹೋಗಿ ನಾಯಿಗೆ ಸಹಾಯ ಮಾಡಬಹುದಿತ್ತಲ್ಲವೇʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಈ ದೃಶ್ಯ ಭಯಾನಕವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ