Viral: ಕರೆಂಟ್ ತೆಗೆದ್ರೆ ಜಾಗ್ರತೆ; ಲೈನ್‌ಮ್ಯಾನ್ ಹಿಂದೆಯೇ ದೊಣ್ಣೆ ಹಿಡಿದು ವಿದ್ಯುತ್ ಕಂಬವನ್ನೇರಿ ಅವಾಜ್ ಹಾಕಿದ ಮಹಿಳೆ
ಇಲ್ಲೊಂದು ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದ್ದು, ಲೈನ್‌ಮ್ಯಾನ್ ಕರೆಂಟ್ ಕಡಿತಗೊಳಿಸಲು ಬಂದ ಸಂದರ್ಭದಲ್ಲಿ ಮಹಿಳೆಯೊಬ್ಬರು ಕರೆಂಟ್ ಕಂಬವನ್ನೇರಿ ಅವಾಸ್ ಹಾಕಿದ್ದಾರೆ. ಹೌದು ಕರೆಂಟ್ ಬಿಲ್ ಸರಿಯಾಗಿ ಪಾವತಿಸದ ಕಾರಣ ವಿದ್ಯುತ್ ಕಂಬವನ್ನೇರಿ ಲೈನ್‌ಮ್ಯಾನ್ ವಿದ್ಯುತ್ ಕಡಿತಗೊಳಿಸಲು ಮುಂದಾದಾಗ ಆತನ ಹಿಂದೆಯೇ ದೊಣ್ಣೆ ಹಿಡಿದು ಕಂಬವನ್ನೇರಿದ ಮಹಿಳೆಯೊಬ್ಬರು ಅವಾಜ್ ಹಾಕಿ ಆತನನ್ನು ಕಂಬದಿಂದ ಕೆಳಗಿಳಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಅಚ್ಚರಿಯ ಪ್ರಕರಣಗಳಿಗೆ ಸಂಬಂಧಿಸಿದ ಕೆಲವೊಂದು ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಕಾಣ ಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಮಹಿಳೆಯೊಬ್ಬರು ಕರೆಂಟ್ ಕಂಬವನ್ನೇರಿ ಲೈನ್‌ಮ್ಯಾನ್‌ಗೆ ಧಮ್ಕಿ ಹಾಕಿದ್ದಾರೆ. ಹೌದು ಕರೆಂಟ್ ಬಿಲ್ ಸರಿಯಾಗಿ ಪಾವತಿಸದ ಕಾರಣ ವಿದ್ಯುತ್ ಕಂಬವನ್ನೇರಿ ಲೈನ್‌ಮ್ಯಾನ್ ವಿದ್ಯುತ್ ಕಡಿತಗೊಳಿಸಲು ಮುಂದಾದ ಸಂದರ್ಭದಲ್ಲಿ ಆತನ ಹಿಂದೆಯೇ ದೊಣ್ಣೆ ಹಿಡಿದು ಕಂಬವನ್ನೇರಿದ ಮಹಿಳೆಯೊಬ್ಬರು ಅವಾಸ್ ಹಾಕಿ ಆತನನ್ನು ಕಂಬದಿಂದ ಕೆಳಗಿಳಿಸಿದ್ದಾರೆ. ಮಹಿಳೆಯ ಭಂಡ ಧೈರ್ಯವನ್ನು ಕಂಡು ನೆಟ್ಟಿಗರು ಬೆರಗಾಗಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಈ ಅಚ್ಚರಿಯ ಪ್ರಕರಣ ನಡೆದಿದ್ದು, ಹಲವು ತಿಂಗಳುಗಳಿಂದ ವಿದ್ಯುತ್ ಬಿಲ್ ಪಾವತಿಸುತ್ತಿಲ್ಲ ಎಂಬ ಕಾರಣಕ್ಕೆ ಲೈನ್‌ಮ್ಯಾನ್ ಬಂದು ನೇರವಾಗಿ ಕರೆಂಟ್ ಕಂಬದಿಂದಲೇ ವಿದ್ಯುತ್ ಕಡಿತಗೊಳಿಸಲು ಮುಂದಾಗಿದ್ದಾನೆ. ಇದನ್ನು ಕಂಡಂತಹ ಮಹಿಳೆಯೊಬ್ಬರು ತಾನು ಕೂಡಾ ಕೈಯಲ್ಲೊಂದು ದೊಣ್ಣೆ ಹಿಡಿದು ಏಣಿಯ ಮೂಲಕ ಕಂಬವನ್ನೇರಿ ಕರೆಂಟ್ ತೆಗೆದ್ರೆ ಜಾಗ್ರತೆ ಎಂದು ಆತನಿಗೆ ಬೈದಿದ್ದಾರೆ. ಈ ಮಹಿಳೆಯ ಬೈಗುಳಕ್ಕೆ ಹೆದರಿದ ಲೈನ್‌ಮ್ಯಾನ್ ಕರೆಂಟ್ ಕಟ್ ಮಾಡದೆಯೇ ಕಂಬದಿಂದ ಇಳಿದು ಸೀದಾ ಹೋಗಿದ್ದಾನೆ.
Gharkakalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಕೈಯಲ್ಲೊಂದು ದೊಣ್ಣೆ ಹಿಡಿದು ಕರೆಂಟ್ ಕಂಬವನ್ನೇರಿ ಲೈನ್‌ಮ್ಯಾನ್‌ಗೆ ಕರೆಂಟ್ ತೆಗೆದ್ರೆ ಜಾಗ್ರತೆ ಎಂದು ಧಮ್ಕಿ ಹಾಕುತ್ತಿರುವ ದೃಶ್ಯವನ್ನು ಕಾಣಬಹುದು.
ಡಿಸೆಂಬರ್ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ 62 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮಹಿಳೆ ನಿಜಕ್ಕೂ ಗಟ್ಟಿಗಿತ್ತಿʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಷ್ಟೆಲ್ಲಾ ಧಮ್ಕಿ ಹಾಕುವ ಬದಲು ಆಕೆಗೆ ಕರೆಂಟ್ ಬಿಲ್ ಪಾವತಿಸಬಹುದಿತ್ತಲ್ವಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ