ಐಸ್ ಕ್ಯೂಬ್, ಕಾಂಡೋಮ್, ಚಿಪ್ಸ್: ಹೊಸ ವರ್ಷ ಆಚರಣೆಯಂದು ಭಾರತೀಯರು ಹೆಚ್ಚು ಆನ್‌ಲೈನ್‌ನಲ್ಲಿ ಏನು ಆರ್ಡರ್ ಮಾಡಿದ್ದಾರೆ ನೋಡಿ…
ಹೊಸ ವರ್ಷ ಪಾರ್ಟಿ ಅಥವಾ ಇನ್ಯಾವುದೇ ಪಾರ್ಟಿಗಳ ಸಂದರ್ಭದಲ್ಲಿಯೂ ಹೆಚ್ಚಿನವರು ತಮ್ಮ ಪಾರ್ಟಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಆನ್‌ಲೈನ್‌ನಲ್ಲಿಯೇ ಆರ್ಡರ್ ಮಾಡ್ತಾರೆ. ನ್ಯೂ ಇಯರ್ ಸಂದರ್ಭದಲ್ಲೂ ಪಾರ್ಟಿಗೆ ಸಂಬಂಧಿಸಿದ ಆರ್ಡರ್‌ಗಳು ಜೋರಾಗಿದ್ದು, ಹೊಸ ವರ್ಷದ ಮುನ್ನಾದಿನದಂದು ಜನ ಬ್ಲಿಂಕಿಟ್‌ನಲ್ಲಿ ಹೆಚ್ಚಾಗಿ ಏನೆಲ್ಲಾ ಆರ್ಡರ್ ಮಾಡಿದ್ರು ಎಂಬ ಮಾಹಿತಿಯನ್ನು ಬ್ಲಿಂಕಿಟ್ ಸಿಇಒ ಅಲ್ಬಿಂದರ್ ದಿಂಡ್ಸಾ ಹಂಚಿಕೊಂಡಿದ್ದಾರೆ.
2024 ಕ್ಕೆ ಬೈ ಬೈ ಹೇಳಿ, 2025 ನೇ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಜನರಂತೂ ಪಾರ್ಟಿ, ಎಂಜಾಯ್‌ಮೆಂಟ್ ಅಂತೆಲ್ಲಾ ಫುಲ್ ಎಂಜಾಯ್ ಮಾಡಿದ್ದಾರೆ. ಇನ್ನೂ ಆನ್‌ಲೈನ್‌ನಲ್ಲೂ ಪಾರ್ಟಿಗೆ ಬೇಕಾದಂತಹ ವಸ್ತುಗಳನ್ನು ಬಲು ಜೋರಾಗಿಯೇ ಶಾಪಿಂಗ್ ಮಾಡಿದ್ದು, ಐಸ್ ಕ್ಯೂಬ್‌ನಿಂದ ಹಿಡಿದು ಕಾಂಡೋಮ್, ಚಿಪ್ಸ್ ವರೆಗೆ ಬ್ಲಿಂಕಿಟ್‌ನಲ್ಲಿ ಹೊಸ ವರ್ಷದ ಮುನ್ನಾದಿನದಂದು ಜನ ಹೆಚ್ಚಾಗಿ ಏನೆಲ್ಲಾ ಆರ್ಡರ್ ಮಾಡಿದ್ರು ಎಂಬುದರ ಬಗ್ಗೆ ಬ್ಲಿಂಕಿಟ್ ಸಿಇಒ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹೊಸ ವರ್ಷದ ಮುನ್ನಾದಿನದಂದು ಬ್ಲಿಂಕಿಟ್‌ನಲ್ಲಿ ಜನ ಯಾವುದನ್ನು ಹೆಚ್ಚು ಆರ್ಡರ್ ಮಾಡಿದು ಎಂಬ ಬಗ್ಗೆ ಬ್ಲಿಂಕಿಟ್ ಸಿಇಒ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಡಿಸೆಂಬರ್ 31 ರಂದು ರಾತ್ರಿ 8 ಗಂಟೆಯವರೆಗೆ ಸುಮಾರು ಆಲೂ ಭುಜಿಯಾ ಮತ್ತು 6834 ಪ್ಯಾಕೆಟ್ ಐಸ್‌ಕ್ಯೂಬ್‌ಗಳನ್ನು ಡೆಲಿವರಿ ಬಾಯ್ಸ್ ಡೆಲಿವರಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ 1.22 ಲಕ್ಷದಷ್ಟು ಕಾಂಡೋಮ್, 45,531 ಮಿನರಲ್ ವಾಟರ್ ಬಾಟಲ್, 2,434 ಇನೋ ಆರ್ಡರ್ ಬಂದಿದೆ ಎಂದು ಹೇಳಿದ್ದಾರೆ. ಜೊತೆಗೆ ದ್ರಾಕ್ಷಿ, ಪಾರ್ಟಿ ಸ್ಟೇಪಲ್ಸ್‌ಗಳಾದ ಚಿಪ್ಸ್, ಕೋಕ್‌ಗಳನ್ನು ಆರ್ಡರ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಮ್ ಮರಿಗಳ ತಂಟೆಗೆ ಬಂದ್ರೆ ಜೋಕೆ; ಕಾಡಿನ ರಾಜನನ್ನೇ ಅಟ್ಟಾಡಿಸಿಕೊಂಡು ಹೋದ ಸಿಂಹಿಣಿಯರು
ಎಕ್ಸ್ ಫೋಸ್ಟ್ ಇಲ್ಲಿದೆ ನೋಡಿ:
1,22,356 packs of condoms 45,531 bottles of mineral water 22,322 Partysmart 2,434 Eno
..are enroute right now! Prep for after party? 😅
— Albinder Dhindsa (@albinder) December 31, 2024
ಡಿಸೆಂಬರ್ 31 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಾಗಾದರೆ ಈ ಹೊಸ ಪೀಳಿಗೆಯ ಪ್ರಕಾರ ಲೈಂಗಿಕತೆಯೇ ಪಾರ್ಟಿಯೇ?ʼ ಎಂಬ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼದೇವ್ರೇ 1 ಲಕ್ಷ ಕಾಂಡೋಮ್‌ಗಳು ಆರ್ಡರ್ ಆಗಿವೆಯೇʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ಮಾಹಿತಿಯನ್ನು ಕಂಡು ಫುಲ್ ಶಾಕ್ ಆಗಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:43 pm, Wed, 1 January 25