Viral: ವಿವಾಹಿತ ಮಹಿಳೆಯೊಂದಿಗೆ ಯುವಕನ ರೊಮ್ಯಾನ್ಸ್; ಗಂಡನ ಕೈಯಿಂದ ಹೆಂಡ್ತಿ ಲವರ್‌ಗೆ ಬಿತ್ತು ಗೂಸಾ
ವಿವಾಹೇತರ ಸಂಬಂಧಗಳ ಕಾರಣದಿಂದ ಸಂಸಾರದಲ್ಲಿ ರಂಪಾಟ, ಜಗಳಗಳು ಏರ್ಪಡುವಂತಹ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಕೇಳಿ ಬರುತ್ತಲೇ ಇರುತ್ತವೆ. ಇಲ್ಲೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಹೆಂಡ್ತಿಯ ಜೊತೆ ಮನೆಯ ಟೇರೆಸ್ ಮೇಲೆ ರೊಮ್ಯಾನ್ಸ್ ಮಾಡ್ತಿದ್ದ ಯುವಕನಿಗೆ ಪತಿರಾಯ ಮನಬಂದಂತೆ ಥಳಿಸಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ವಿವಾಹೇತರ ಅಥವಾ ಅಕ್ರಮ ಸಂಬಂಧಗಳ ಪ್ರಕರಣಗಳು ತೀರಾ ಹೆಚ್ಚಾಗಿವೆ. ಮನೆಯಲ್ಲಿ ಹೆಂಡ್ತಿ ಇದ್ದರೂ ಬೇರೊಬ್ಬ ಮಹಿಳೆಯ ಜೊತೆ ಸುತ್ತಾಡುವ ಗಂಡ, ಪರ ಪುರುಷನೊಂದಿಗೆ ಸಂಬಂಧ ಇಟ್ಟುಕೊಂಡು ಗಂಡನ ಕೈಲಿ ಸಿಕ್ಕಿಬಿದ್ದ ಮಹಿಳೆಯರ ಕಥೆಗಳಿಗೆ ಸಂಬಂಧಿಸಿದ ವಿಡಿಯೋ, ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಆಗೊಮ್ಮೆ ಈಗೊಮ್ಮೆ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮನೆಯ ಟೇರೆಸ್ ಮೇಲೆ ಯುವಕನೊಬ್ಬ ವಿವಾಹಿತ ಮಹಿಳೆಯ ಜೊತೆ ರೊಮ್ಯಾನ್ಸ್ ಮಾಡ್ತಿದ್ದ ವೇಳೆ ಆಕೆಯ ಗಂಡ ಹಾಗೂ ಕುಟುಂಬಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಅನೈತಿಕ ಸಂಬಂಧದ ಆರೋಪದ ಮೇಲೆ ಯುವಕನೊಬ್ಬನಿಗೆ ತೀವ್ರವಾಗಿ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅವ್ರೋಹಾದಲ್ಲಿ ನಡೆದಿದೆ. ಮನೆಯ ಟೆರೇಸ್ ಮೇಲೆ ವಿವಾಹಿತ ಮಹಿಳೆಯೊಂದಿಗೆ ಯುವಕ ರೊಮ್ಯಾನ್ಸ್ ಮಾಡ್ತಿದ್ದ ವೇಳೆ ಈ ಇಬ್ಬರೂ ಆಕೆಯ ಗಂಡ ಮತ್ತು ಕುಟುಂಬಸ್ಥರ ಕೈಲಿ ತಗ್ಲಾಕೊಂಡಿದ್ದು, ಈ ದೃಶ್ಯವನ್ನು ಕಂಡು ಕೋಪಗೊಂಡ ಪತಿರಾಯ ಯುವಕನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
अमरोहा में युवक को आशिकी करना पड़ा भारी
पति ने पत्नी के प्रेमी को रंगे हाथों पकड़ा
पति ने प्रेमी को लात घुसो से जमकर पीटा
पति व उसके परिजनों ने पत्नी के प्रेमी को जमीन गिरा गिराकर जमकर पीटा
पिटाई से बुरी तरह से लहुलुहान हुआ प्रेमी
मारपीट का लाइव विडियों वायरल
गजरौला थाना… pic.twitter.com/4YOX4F5aNH
— News1India (@News1IndiaTweet) December 31, 2024
ಈ ಕುರಿತ ವಿಡಿಯೋವನ್ನು News1IndiaTweet ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅನೈತಿಕ ಸಂಬಂಧದ ಆರೋಪದ ಮೇರೆಗೆ ಯುವಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರು ದೃಶ್ಯವನ್ನು ಕಾಣಬಹುದು. ಬೆಲ್ಟ್ ಮತ್ತು ಚಪ್ಪಲಿಯೊಂದ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಪಟಾಕಿ ಬದಲು ಡ್ರೋನ್ ಶೋ ಮೂಲಕ ಹೊಸ ವರ್ಷ ಸಂಭ್ರಮದ ಆಚರಣೆ
ಡಿಸೆಂಬರ್ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಯುವಕನೊಂದಿಗಿದ್ದ ಮಹಿಳೆಗೂ ಇದೇ ರೀತಿ ತಕ್ಕ ಪಾಠ ಕಲಿಸಬೇಕಿತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼತಪ್ಪು ಇಬ್ಬರದ್ದೂ ಎಂದಾದ ಮೇಲೆ ಆತನಿಗೆ ಮಾತ್ರ ಶಿಕ್ಷೆ ನೀಡಿದ್ದು ಎಷ್ಟು ಸರಿʼ ಎಂದು ಕೆಳಿದ್ದಾರೆ.
ವೈರಲ್ ಸುಸ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ