AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ನಡುರಸ್ತೆಯಲ್ಲಿ ಶಾಲಾ ಬಾಲಕಿಯರ ಕಿತ್ತಾಟ; ಫೈಟ್ ನೋಡಿ ಕುಣಿದು ಕುಪ್ಪಳಿಸಿದ ಹುಡುಗರು

ಸಾಮಾನ್ಯವಾಗಿ ಬೀದಿ ಜಗಳ, ಜಡೆ ಜಗಳ ನಡೆದರೆ ಹೆಚ್ಚಿನವರು ಓಡಿ ಹೋಗಿ ಜಗಳ ಬಿಡಿಸಸಲು ಪ್ರಯತ್ನಿಸುತ್ತಾರೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ಶಾಲಾ ಬಾಲಕಿಯರ ಎರಡು ತಂಡದ ನಡುವೆ ನಡು ಬೀದಿಯಲ್ಲೇ ಜಗಳ ಏರ್ಪಟ್ಟಾಗ, ಈ ಬೀದಿ ಜಗಳವನ್ನು ಬಿಡಿಸುವ ಬದಲು ಅಲ್ಲಿದ್ದ ಹುಡುಗರ ತಂಡವೊಂದು ಫೈಟ್‌ ನೋಡಿ ಕುಣಿದು ಕುಪ್ಪಳಿಸಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಮಾಲಾಶ್ರೀ ಅಂಚನ್​
| Edited By: |

Updated on: Jan 03, 2025 | 2:03 PM

Share

ನೀರಿನ ವಿಚಾರವಾಗಿ, ಬಾಯ್‌ಫ್ರೆಂಡ್‌ ವಿಚಾರವಾಗಿ ಹೀಗೆ ಕೆಲವೊಂದು ಕಾರಣಗಳಿಗೆ ಹುಡುಗಿಯರು, ಮಹಿಳೆಯ ನಡೆವೆ ಜಡೆ ಜಗಳಗಳು ಏರ್ಪಡುತ್ತಿರುತ್ತವೆ. ಇಂತಹ ಬೀದಿ ಕಾಳಗಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಸಾಮಾನ್ಯವಾಗಿ ಇಂತಹ ರಂಪಾಟಗಳು ಏರ್ಪಟ್ಟಾಗ ಹೆಚ್ಚಿನವರು ಜಗಳವನ್ನು ಬಿಡಿಸಲು ಪ್ರಯತ್ನಿಸುತ್ತಾರೆ. ಆದ್ರೆ ಇಲ್ಲೊಂದಷ್ಟು ಹುಡುಗರು ಜಡೆ ಜಗಳವನ್ನು ನೋಡಿ ಫುಲ್‌ ಎಂಜಾಯ್‌ ಮಾಡಿದ್ದಾರೆ. ಹೌದು ನಡುಬೀದಿಯಲ್ಲಿ ಶಾಲಾ ಬಾಲಕಿಯರ ಎರಡು ತಂಡಗಳ ನಡುವೆ ಜಗಳ ಏರ್ಪಟ್ಟಿದ್ದು, ಈ ಜಗಳವನ್ನು ಬಿಡಿಸುವ ಬದಲು ಅಲ್ಲಿದ್ದ ಹುಡುಗರು ಕುಣಿದು ಕುಪ್ಪಳಿಸಿದ್ದಾರೆ. ಈ ಫನ್ನಿ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ‌

ಈ ಕುರಿತ ವಿಡಿಯೋವನ್ನು gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ನಡು ಬೀದಿಯಲ್ಲಿಯೇ ಶಾಲಾ ಬಾಲಕಿಯರ ಎರಡು ತಂಡಗಳ ನಡುವೆ ಬಿಗ್‌ ಫೈಟ್‌ ಏರ್ಪಟ್ಟಂತಹ ದೃಶ್ಯವನ್ನು ಕಾಣಬಹುದು. ಆ ಹುಡುಗಿಯರು ಬೆಲ್ಟ್‌ನಲ್ಲಿ ಹೊಡೆದಾಡುತ್ತಾ, ಜಡೆ ಎಳೆದಾಡುತ್ತಾ ಫೈಟ್‌ ಮಾಡ್ತಿದ್ರೆ, ಆ ಜಗಳವನ್ನು ತಡೆಯುವ ಬದಲು ಅಲ್ಲಿದ್ದ ಒಂದಷ್ಟು ಹುಡುಗರು ಆ ಫೈಟಿಂಗ್‌ ದೃಶ್ಯವನ್ನು ಎಂಜಾಯ್‌ ಮಾಡ್ತಾ ಕುಣಿದು ಕುಪ್ಪಳಿಸಿದ್ದಾರೆ.

ಇದನ್ನೂ ಓದಿ: ಕುಡಿದು ಟೈಟ್‌ ಆದ ಮಾಲೀಕನನ್ನು ಜೋಪಾನವಾಗಿ ಮನೆಗೆ ಕರೆದುಕೊಂಡು ಹೋದ ಗೂಳಿ; ವಿಡಿಯೋ ವೈರಲ್‌

ಜನವರಿ 2 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.5 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ದೃಶ್ಯವಂತೂ ತುಂಬಾನೇ ಫನ್ನಿಯಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇವರು ಸಿನಿಮಾ ನೋಡ್ದಂಗೆ ಜಗಳವನ್ನು ಎಂಜಾಯ್‌ ಮಾಡ್ತಿದ್ದಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಹುಡುಗರೇ ಅವರನ್ನು ಜಗಳಕ್ಕೆ ಹುರಿದುಂಬಿಸುವಂತಿದೆʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ