Viral: ಅವ್ರ ಮಕ್ಕಳ ಸಂಬಳಕ್ಕಿಂತ ಜಾಸ್ತಿ ನಾನು ಟ್ಯಾಕ್ಸ್ ಕಟ್ತಿದ್ದೇನೆ; ಒಂದು ಕಾಲದಲ್ಲಿ ವ್ಯಂಗ್ಯವಾಡಿದ್ದ ಸಂಬಂಧಿಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟ ವೈದ್ಯ
ವಿಶೇಷವಾಗಿ ಸಂಬಂಧಿಕರಿಗೆ ಓದು ಮತ್ತು ಸಂಬಳದ ಬಗ್ಗೆ ಪ್ರಶ್ನೆ ಕೇಳಿ ಒಬ್ರಿಗೆ ಅಪಹಾಸ್ಯ ಮಾಡುವ ಹುಚ್ಚು ಜಾಸ್ತಿ ಅಲ್ವಾ. ಅದೇ ರೀತಿ ಬೆಂಗಳೂರಿನ ವೈದ್ಯರೊಬ್ಬರಿಗೆ ಒಂದು ಕಾಲದಲ್ಲಿ ಅವರ ಸಂಬಂಧಿಕರೊಬ್ಬರು ಓದಿನ ವಿಷಯದಲ್ಲಿ ಹಾಗೂ ಹಣಕಾಸಿದ ಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದ್ದು, ಇದೀಗ ಅವರು ಅಪಹಾಸ್ಯ ಮಾಡಿದವರಿಗೆ ತಮ್ಮ ಸಾಧನೆಯ ಮೂಲಕವೇ ಮುಟ್ಟಿ ನೋಡುವಂತೆ ಉತ್ತರ ಕೊಟ್ಟಿದ್ದಾರೆ. ವೈದ್ಯರ ಈ ರಿವೇಂಜ್ ಕಥೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಬಡತನ, ನಾವು ಓದೋ ಓದಿನ ಬಗ್ಗೆ, ಕೆಲಸದ ಬಗ್ಗೆ ಅಪಹಾಸ್ಯ (Sarkiness) ಮಾಡುವವರೇ ಹೆಚ್ಚು. ಅದರಲ್ಲೂ ಕೆಲ ಸಂಬಂಧಿಕರು ಪ್ರೋತ್ಸಾಹ ನೀಡುವ ಬದಲು ಇವ್ನು ಬರೀ ವೇಸ್ಟ್, ಇವ್ನಿಂದ ಏನು ಸಾಧ್ಯವಿಲ್ಲ ಎಂದು ವ್ಯಂಗ್ಯದ ಹಾಗೂ ಚುಚ್ಚು ಮಾತುಗಳನ್ನಾಡುತ್ತಾರೆ. ಹೀಗೆ ಅಪಹಾಸ್ಯ ಮಾಡಿದವರ ಮುಂದೆ ಸಾಧನೆಯ ಶಿಖರವನ್ನೇರಿದ ಹಲವರಿದ್ದಾರೆ. ಅದೇ ರೀತಿ ಇಲ್ಲೊಬ್ರು ವೈದ್ಯ (Doctor), ತನ್ನ ಸಾಧನೆಯ ಮೂಲಕವೇ ವ್ಯಂಗ್ಯ ವಾಡ್ತಿದ್ದ ಸಂಬಂಧಿಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟಿದ್ದಾರೆ. ನನ್ನ ಬಗ್ಗೆ ವ್ಯಂಗ್ಯವಾಡ್ತಿದ್ರು, ಈಗ ಅವರ ಇಬ್ಬರು ಪುತ್ರರ ಸಂಬಳಕ್ಕಿಂತ ಜಾಸ್ತಿ ನಾನು ಟ್ಯಾಕ್ಸ್ ಕಟ್ತಿದ್ದೇನೆ ಎಂದು ಹೇಳಿದ್ದು, ಇವರ ಈ ರಿವೇಂಜ್ ಕಥೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಈ ಅಂಕಲ್, ಆಂಟಿಗಳು ನಿಮ್ಮ ಸಂಬಳದ ಬಗ್ಗೆ ಕೇಳುವುದನ್ನು ಹೇಗೆ ತಪ್ಪಿಸುತ್ತೀರಿ ಎಂಬ ಪೋಸ್ಟ್‌ಗೆ ಉತ್ತರಿಸಿದ ಬೆಂಗಳೂರಿನ ವೈದ್ಯರೊಬ್ಬರು ತನ್ನ ಓದು ಹಾಗೂ ನಾನು ತಂದೆಯ ಮೇಲೆ ಅವಲಂಬಿತನಾಗಿದ್ದೇನೆ ಎಂದು ವ್ಯಂಗ್ಯವಾಡಿದ್ದ ಸಂಬಂಧಿಗೆ ಹೇಗೆ ಮುಟ್ಟಿ ನೋಡುವಂತೆ ಉತ್ತರ ಕೊಟ್ಟೆ ಎಂಬ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.
A relative who was always condescending about me joining the medical stream with taunts about how I’m dependent on my father when others are earning money happened to ask my salary once when I was well settled. My annual taxes were higher than both his sons’ annual income.… https://t.co/v3HK6gNYSj
— Dr Deepak Krishnamurthy (@DrDeepakKrishn1) March 18, 2025
ಕಾವೇರಿ ಆಸ್ಪತ್ರೆಯ ಹೃದ್ರೋಗ ವಿಭಾಗದ ನಿರ್ದೇಶಕ ಡಾ. ದೀಪಕ್ ಕೃಷ್ಣಮೂರ್ತಿ (Dr Deepak Krishnamurthy) ತಮ್ಮ ಹಣಕಾಸಿನ ಸ್ಥಿತಿಯ ಬಗ್ಗೆ ವ್ಯಂಗ್ಯವಾಡುತ್ತಿದ್ದ ಸಂಬಂಧಿಯ ಬಾಯಿ ಮುಚ್ಚಿದ ಸ್ವೀಟ್ ರಿವೇಂಜ್ ಕಥೆಯನ್ನು ಹಂಚಿಕೊಂಡಿದ್ದಾರೆ.
“ಇತರರು ಕೆಲಸಕ್ಕೆ ಹೋಗಿ ಹಣ ಸಂಪಾದಿಸುತ್ತಿದ್ದಾಗ, ನಾನು ನನ್ನ ತಂದೆಯ ಮೇಲೆಯೇ ಅವಲಂಬಿತನಾಗಿದ್ದೇನೆ ಎಂದು ವ್ಯಂಗವಾಡುತ್ತಿದ್ದ ನಾನು ವೈದ್ಯಕೀಯ ವಿಭಾಗಕ್ಕೆ ಸೇರುತ್ತೇನೆ ಎಂದು ಹೇಳಿದಾಗ ಅಪಹಾಸ್ಯ ಮಾಡಿದ್ದ ಸಂಬಂಧಿಯೊಬ್ಬರು, ನಾನು ಚೆನ್ನಾಗಿ ನೆಲೆಸಿದ ಬಳಿಕ ಒಮ್ಮೆ ನನ್ನ ಸಂಬಳ ಎಷ್ಟು ಎಂದು ಕೇಳಿದ್ರು. ನಾನು ಪಾವತಿಸುವ ವಾರ್ಷಿಕ ತೆರಿಗೆ ಆ ವ್ಯಕ್ತಿ ಇಬ್ಬರು ಪುತ್ರರ ಆದಾಯಕ್ಕಿಂತ ಹೆಚ್ಚಿವೆ. ಇದರಲ್ಲೇನೋ ತೃಪ್ತಿಯಿದೆ” ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ಓದಿ: Viral: ದೆಹಲಿ ಮೆಟ್ರೋದಲ್ಲಿ ಮಹಿಳಾ ಪ್ರಯಾಣಿಕರ ಜಡೆ ಜಗಳ; ವೈರಲ್ ಆಯ್ತು ವಿಡಿಯೋ
ಮಾರ್ಚ್ 18 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ಕೂಡಾ ನನ್ನ ಸಂಬಂಧಿಕರಿಗೆ ಹೀಗೆ ಉತ್ತರ ಕೊಡುವ ದಿನಕ್ಕಾಗಿ ಕಾಯುತ್ತಿದ್ದೇನೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅವರ ಅಪಹಾಸ್ಯಗಳನ್ನು ನಿರ್ಲಕ್ಷಿಸಿ ನಿಮ್ಮ ಜೀವನವನ್ನು ಆನಂದಿಸಿʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Wed, 19 March 25