Karnataka Budget Session: ವಿಧೇಯಕಗಳನ್ನು ಧ್ವನಿಮತಕ್ಕೆ ಹಾಕಿದಾಗ ಸದನದಲ್ಲಿ ಕೋಲಾಹಲ
ಸದನದ ಮಾರ್ಷಲ್ ಗಳು ಸ್ಪೀಕರ್ ಸುತ್ತ ನಿಂತರೆ ಅಡಳಿತ ಪಕ್ಷದ ಶಾಸಕರು ಮತ್ತು ಮಂತ್ರಿಗಳು ಸಿಎಂ ಅವರನ್ನು ಘೇರಾಯಿಸಿ ಕೋಟೆಯಂಥ ಸನ್ನಿವೇಶ ಸೃಷ್ಟಿ ಮಾಡುತ್ತಾರೆ. ಆಡಳಿತ ಮತ್ತು ವಿರೋಧ ಪಕ್ಷಗಳ ಶಾಸಕರ ನಡುವೆ ಮಾತಿನ ಚಕಮಕಿಯೂ ನಡೆಯುತ್ತದೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವೇಶದಲ್ಲಿ ಮಾತಾಡುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಬೆಂಗಳೂರು, 21 ಮಾರ್ಚ್: ವಿಧಾನ ಮಂಡಲದ ಕಲಾಪದಲ್ಲಿ ಇಂದು ಸ್ಪೀಕರ್ ಯುಟಿ ಖಾದರ್ ವಿಧೇಯಕಗಳನ್ನು (bills) ಸದನದ ಅನುಮೋದನೆಗೆಂದು ಧ್ವನಿಮತಕ್ಕೆ ಹಾಕಿದಾಗ ಕೋಲಾಹಲ ಸೃಷ್ಟಿಯಾಯಿತು. ವಿಧೇಯಕಗಳನ್ನು ವಿರೋಧಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸದಸ್ಯರು ಬಜೆಟ್ ಮತ್ತು ಚರ್ಚೆಯ ಪ್ರತಿಗಳನ್ನು ಹರಿದು ಸ್ಪೀಕರ್ ಅವರ ಮೇಲೆ ಎಸೆದರು. ನೆರವಿಗೆ ಧಾವಿಸುವ ಮಾರ್ಷಲ್ಗಳು ಸ್ಪೀಕರ್ ಸುತ್ತ ಗೋಡೆ ನಿರ್ಮಿಸಿ ಅವರ ಮೇಲೆ ಪೇಪರ್ ಗಳು ಬೀಳದಂತೆ ತಡೆದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget Session; ಕಾಂಗ್ರೆಸ್ ಸರ್ಕಾರಕ್ಕೆ ಸಮಾನತೆ ಹೇಳಲಷ್ಟೇ ಬೇಕು, ಕಾರ್ಯರೂಪದಲ್ಲಿ ತರಲಲ್ಲ: ಧೀರಜ್ ಮುನಿರಾಜ್