Raksha Bandhan
ಈ ಜಗತ್ತಿನಲ್ಲಿ ತಂದೆ ತಾಯಿಯಂತೆ ಪೋಷಣೆ ಹಾಗೂ ಕಾಳಜಿ ವಹಿಸುವ ಸಂಬಂಧವಿದ್ದರೆ ಅದು ಅಣ್ಣ ತಂಗಿ ಅಥವಾ ಅಕ್ಕ ತಮ್ಮ ಸಂಬಂಧ. ಈ ಸಂಬಂಧವನ್ನು ಸಂಭ್ರಮಿಸುವ ಹಬ್ಬವೇ ರಕ್ಷಾ ಬಂಧನ. ಈ ದಿನವು ಅಣ್ಣ ತಂಗಿಯರ ಭಾಂಧವ್ಯದ ಸಂಕೇತವಾಗಿದೆ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸಹೋದರ-ಸಹೋದರಿಯರ ಬಾಂಧವ್ಯ ಇನ್ನಷ್ಟು ಗಟ್ಟಿಗೊಳಿಸುವ ಹಬ್ಬ ಕೂಡ ಹೌದು. ಈ ದಿನದಂದು ಅಣ್ಣನ ಒಳಿತನ್ನು ಬಯಸುವ ಸಹೋದರಿಯರು ರಾಖಿ ಕಟ್ಟುತ್ತಾರೆ. ಇದಕ್ಕೆ ಪ್ರತಿಯಾಗಿ ತನ್ನ ಮುದ್ದಿನ ತಂಗಿ ಅಥವಾ ಅಕ್ಕನಿಗೆ ವಿಶೇಷ ಉಡುಗೆಯನ್ನು ನೀಡುವುದು ವಾಡಿಕೆ. ಅಣ್ಣ ತಂಗಿಯರ ಸುಂದರ ಬಾಂಧವ್ಯವನ್ನು ಸಾರುವ ಈ ಬಾರಿಯ ರಕ್ಷಾ ಬಂಧನ ಹಬ್ಬಕ್ಕೆ ಸಂಬಂಧಪಟ್ಟ ವಿಶೇಷ ಸ್ಟೋರಿಗಳು ಇಲ್ಲಿದೆ ಓದಿ.
Raksha Bandhan: ರಾಯಚೂರಿನ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿದ ರಾಷ್ಟಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು ರಕ್ಷಾ ಬಂಧನದಂದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಐವರು ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿದ್ದಾರೆ. ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಪತಿ ಭವನದಲ್ಲಿ ಈ ವಿಶೇಷ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಷ್ಟ್ರಪತಿಯವರು ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು ಮಕ್ಕಳಿಗೆ ಸಿಹಿ ವಿತರಿಸಿದರು.
- Bhemesh Poojar
- Updated on: Aug 11, 2025
- 10:55 am
ಕೈತುಂಬ ರಾಖಿ, ಮುಖದ ತುಂಬ ನಗು; ಮಕ್ಕಳ ಜೊತೆ ಮಗುವಿನಂತೆ ಸಂಭ್ರಮಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ತಮ್ಮ ನಿವಾಸದಲ್ಲಿ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಮಕ್ಕಳೊಂದಿಗೆ ರಾಖಿ ಆಚರಿಸಿದರು. ದೆಹಲಿಯ ಶಾಲೆಗಳ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಪ್ರಧಾನಿಯವರ ನಿವಾಸಕ್ಕೆ ಹೋಗಿ ರಾಖಿ ಕಟ್ಟಿದರು. ಮಕ್ಕಳು ನಗುನಗುತ್ತಾ ಮೋದಿಗೆ ಬಹಳ ಪ್ರೀತಿಯಿಂದ ರಾಖಿ ಕಟ್ಟಿದರು. ಈ ಸಂದರ್ಭದಲ್ಲಿ ಮೋದಿ ಮಕ್ಕಳೊಂದಿಗೆ ಮೋಜಿನ ಸಂವಾದ ನಡೆಸಿದರು. ರಾಖಿ ಕಟ್ಟುವಾಗ ಅವರು ವಿದ್ಯಾರ್ಥಿಗಳ ಹೆಸರು ಮತ್ತು ತರಗತಿಗಳನ್ನು ಕೇಳಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಪ್ರಸ್ತುತ ವೈರಲ್ ಆಗುತ್ತಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೂಡ ಮಕ್ಕಳೊಂದಿಗೆ ರಾಖಿ ಆಚರಿಸಿದರು.
- Sushma Chakre
- Updated on: Aug 9, 2025
- 7:08 pm
RSS ಮುಖ್ಯಸ್ಥ ಮೋಹನ್ ಭಾಗವತ್ಗೆ ರಾಖಿ ಕಟ್ಟಿದ ರಾಷ್ಟ್ರೀಯ ಸೇವಿಕಾ ಸಮಿತಿಯ ಸಹೋದರಿಯರು
ಸಹೋದರ-ಸಹೋದರಿಯರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಹಬ್ಬವೇ ರಕ್ಷಾ ಬಂಧನ. ನಾಗ್ಪುರದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಅವರು ರಕ್ಷಾ ಬಂಧನವನ್ನು ಆಚರಿಸಿದ್ದಾರೆ. ಟಿಬೆಟಿಯನ್ ಮಹಿಳಾ ಸಂಘ ಮತ್ತು ಭಾರತ್ ಟಿಬೆಟ್ ಸಹಕಾರ ವೇದಿಕೆಯ ಸಹೋದರಿಯರು ಅವರಿಗೆ ರಾಖಿ ಕಟ್ಟಿದರು.
- Gangadhar Saboji
- Updated on: Aug 9, 2025
- 2:26 pm
Raksha Bandhan 2025: ಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಸಂಭ್ರಮಿಸಿದ ಪ್ರಧಾನಿ ಮೋದಿ
ರಕ್ಷಾ ಬಂಧನ ಅಥವಾ ರಾಖಿ ಹಬ್ಬವು ಸಹೋದರ ಮತ್ತು ಸಹೋದರಿಯ ನಡುವಿನ ಸಂಬಂಧದ ಅಭಿವ್ಯಕ್ತಿಯಿಂದಾಗಿ ಅಮೂಲ್ಯವಾದ ಒಂದು ಹಬ್ಬವೆಂದು ಗುರುತಿಸಿಕೊಂಡಿದೆ. ಈ ಶುಭ ದಿನದಂದು ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಕಟ್ಟುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಅದರಂತೆ ಪ್ರಧಾನಿ ನರೇಂದ್ರ ಮೋದಿಯವರು ಇಂದು(ಆಗಸ್ಟ್ 10) ರಕ್ಷಾ ಬಂಧನವನ್ನು ನವದೆಹಲಿಯ ತಮ್ಮ ನಿವಾಸದಲ್ಲಿ ಆಚರಿಸಿದ್ದು, ಈ ವೇಳೆ ಮಕ್ಕಳು ಪ್ರಧಾನಿ ಮೋದಿಗೆ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ.
- Web contact
- Updated on: Aug 9, 2025
- 2:11 pm
Raksha Bandhan 2025: ರಕ್ಷಾ ಬಂಧನದಂದು ಈ ತಪ್ಪುಗಳನ್ನು ಮಾಡಲೇಬೇಡಿ; ಸಂಬಂಧದಲ್ಲಿ ಬಿರುಕಿಗೆ ಕಾರಣವಾಗಬಹುದು
ರಕ್ಷಾಬಂಧನದಂದು ರಾಖಿ ಕಟ್ಟಲು ಶುಭ ಸಮಯ, ಸರಿಯಾದ ದಿಕ್ಕು ಮತ್ತು ಬಣ್ಣಗಳನ್ನು ಆಯ್ಕೆ ಮಾಡುವುದು ಮುಖ್ಯ. ಕಪ್ಪು ಬಣ್ಣವನ್ನು ತಪ್ಪಿಸಿ, ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ರಾಖಿ ಕಟ್ಟುವುದು ಶುಭ. ರಾಹುಕಾಲ ಮತ್ತು ಭದ್ರಕಾಲದ ಸಮಯವನ್ನು ತಪ್ಪಿಸಿ. ಇಲ್ಲಿ ರಕ್ಷಾಬಂಧನದ ಸಂಪ್ರದಾಯ ಮತ್ತು ವಿಧಿವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
- Akshatha Vorkady
- Updated on: Aug 9, 2025
- 10:43 am
Daily Devotional: ರಕ್ಷಾಬಂಧನ ಹಬ್ಬದ ಆಚರಣೆಯ ಹಿಂದಿನ ಮಹತ್ವವೇನು?
ರಕ್ಷಾಬಂಧನವು ಕೇವಲ ಹಬ್ಬವಲ್ಲ. ಇದು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ರಕ್ಷಣೆಯ ಸಂಕೇತ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಕ್ಷಾ ಕಟ್ಟಿ ಅವರ ಆರೋಗ್ಯ ಮತ್ತು ಸುಖಕ್ಕಾಗಿ ಪ್ರಾರ್ಥಿಸುತ್ತಾರೆ. ಪುರಾಣಗಳಲ್ಲಿಯೂ ರಕ್ಷಾಬಂಧನದ ಉಲ್ಲೇಖಗಳಿವೆ. ಪಾರ್ವತಿ ದೇವಿ ದೇವೇಂದ್ರನಿಗೆ ರಕ್ಷೆಯನ್ನು ಕಟ್ಟಿದ್ದು, ದ್ರೌಪದಿ ಶ್ರೀಕೃಷ್ಣನಿಗೆ ಕಟ್ಟಿದ್ದು ಇದಕ್ಕೆ ಕೆಲವು ಉದಾಹರಣೆಗಳು ಎಂದು ಡಾ. ಬಸವರಾಜ್ ಗುರೂಜಿಯವರು ವಿವರಿಸಿದ್ದಾರೆ.
- Akshatha Vorkady
- Updated on: Aug 9, 2025
- 10:25 am
ದುಪಟ್ಟಾವನ್ನೇ ಹರಿದು ಉತ್ತರಾಖಂಡದ ಸಿಎಂಗೆ ರಾಖಿ ಕಟ್ಟಿದ ಉತ್ತರಕಾಶಿ ಪ್ರವಾಹ ಸಂತ್ರಸ್ತೆ
ಉತ್ತರಕಾಶಿಯ ಧರಾಲಿಯಲ್ಲಿ ಉಂಟಾದ ಪ್ರವಾಹದ ಸಮಯದಲ್ಲಿ ಸಿಲುಕಿದ ಜನರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಿದ ಉತ್ತರಾಖಂಡದ ಸರ್ಕಾರಕ್ಕೆ ಧನ್ಯವಾದ ಹೇಳಲು ಹರ್ಸಿಲ್ ಹೆಲಿಪ್ಯಾಡ್‌ನಲ್ಲಿ ರಕ್ಷಿಸಲ್ಪಟ್ಟ ಯಾತ್ರಿಕರೊಬ್ಬರು ತಮ್ಮ ದುಪಟ್ಟಾ ಹರಿದು ಅದನ್ನೇ ರಾಖಿಯನ್ನಾಗಿ ಉತ್ತರಾಖಂಡದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಕೈಗೆ ಕಟ್ಟಿದರು. ಅದರ ವಿಡಿಯೋ ಇಲ್ಲಿದೆ.
- Sushma Chakre
- Updated on: Aug 8, 2025
- 10:06 pm
Raksha Bandhan 2025: ಕೈಗೆ ಕಟ್ಟಿದ ರಾಖಿಯನ್ನು ಎಷ್ಟು ದಿನಗಳ ಬಳಿಕ ತೆಗೆಯಬೇಕು?
ಒಡಹುಟ್ಟಿದವರ ನಡುವಿನ ಪ್ರೀತಿ ಹಾಗೂ ಬಾಂಧವ್ಯವನ್ನು ಬಲಪಡಿಸುವ ಹಬ್ಬವಾದ ರಕ್ಷಾ ಬಂಧನಕ್ಕೆ ಒಂದೇ ಒಂದು ದಿನವಷ್ಟೇ ಬಾಕಿಯಿವೆ. ಈ ದಿನದಂದು ಎಲ್ಲಾ ಸಹೋದರರು ತಮ್ಮ ಪ್ರೀತಿಯ ಅಕ್ಕ ಅಥವಾ ತಂಗಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾರೆ. ಆದರೆ ಕೈಗೆ ಕಟ್ಟಿದ ರಾಖಿಯನ್ನು ಯಾವಾಗ ತೆಗೆಯಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಾಗಿ ಪ್ರತಿಯೊಬ್ಬ ಸಹೋದರರು ಈ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.
- Sainandha P
- Updated on: Aug 8, 2025
- 5:25 pm
Raksha Bandhan 2025: ರಾಖಿ ಖರೀದಿಸುವ ಬದಲು ನೀವೇ ಮನೆಯಲ್ಲಿ ಹೀಗೆ ತಯಾರಿಸಿ
ರಕ್ಷಾ ಬಂಧನಕ್ಕೆ ಇನ್ನೇನು ಒಂದೆರಡು ದಿನಗಳಷ್ಟೇ ಬಾಕಿಯಿವೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಹಾಗೂ ರಂಗುರಂಗಿನ ರಾಖಿಗಳು ಲಗ್ಗೆ ಇಟ್ಟಿವೆ. ಹೀಗಿರುವಾಗ ತಮ್ಮ ಅನುಕೂಲಕ್ಕೆ ತಕ್ಕಂತೆ ರಾಖಿ ಖರೀದಿಸಿ ಅಣ್ಣನಿಗೆ ರಾಖಿ ಕಟ್ಟಿ ಸಹೋದರಿಯರು ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ನಿಮ್ಮ ಕೈಯಾರೆ ರಾಖಿ ತಯಾರಿಸಿ ನೂಲ ಹುಣ್ಣಿಮೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬಹುದು.
- Sainandha P
- Updated on: Aug 7, 2025
- 6:40 pm
Raksha Bandhan 2025: ರಕ್ಷಾ ಬಂಧನದ ದಿನ ನಿಮ್ಮ ಪ್ರೀತಿಯ ಸಹೋದರಿಗೆ ಈ ಉಡುಗೊರೆಗಳನ್ನು ನೀಡಿ
ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಸುಂದರ ಬಾಂಧವ್ಯವನ್ನು ಆಚರಿಸುವ ಒಂದು ವಿಶೇಷ ಹಬ್ಬವಾಗಿದೆ. ಈ ಹಬ್ಬದ ದಿನ ಸಹೋದರಿ ತನ್ನ ಮುದ್ದಿನ ಸಹೋದರನ ಕೈಗೆ ರಾಖಿ ಕಟ್ಟಿ, ಆತನ ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾಳೆ. ಮತ್ತು ಸಹೋದರ ತನ್ನ ಮುದ್ದಿನ ಸಹೋದರಿಗೆ ಉಡುಗೊರೆಯನ್ನು ನೀಡುತ್ತಾನೆ. ಈ ಬಾರಿಯ ಹಬ್ಬಕ್ಕೆ ನೀವು ಕೂಡ ನಿಮ್ಮ ಸಹೋದರಿಯರಿಗೆ ಈ ಕೆಲವು ಉಡುಗೊರೆಯನ್ನು ನೀಡುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಿ.
- Malashree anchan
- Updated on: Aug 7, 2025
- 6:13 pm