AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope for March 2: ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ

Daily Horoscope for March 2: ಈ ರಾಶಿಯವರು ಇಂದು ಮಾಡುವ ಎಲ್ಲ ಕಾರ್ಯಗಳು ಯಶಸ್ಸು ಕಾಣಲಿದೆ

ಅಕ್ಷಯ್​ ಪಲ್ಲಮಜಲು​​
|

Updated on: Mar 02, 2026 | 6:24 AM

Share

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 2, 2026ರ ಸೋಮವಾರದ ದ್ವಾದಶ ರಾಶಿಗಳ ದಿನಭವಿಷ್ಯ ನೀಡಿದ್ದಾರೆ. ಶುಕ್ರ ಗ್ರಹದ ಕುಂಭ ರಾಶಿಯಿಂದ ಮೀನ ರಾಶಿಗೆ ಉಚ್ಚ ಸ್ಥಾನದಲ್ಲಿ ಸಂಚಾರ, ಚತುರ್ದಶಿ ಮುಕ್ತಾಯಗೊಂಡು ಹುಣ್ಣಿಮೆ ಪ್ರಾರಂಭ, ಮತ್ತು ಕಾಮದಹನದಂತಹ ಹಬ್ಬಗಳೊಂದಿಗೆ ಆಶ್ಲೇಷ ನಕ್ಷತ್ರದ ಇಂದಿನ ದಿನವು ಎಲ್ಲಾ ರಾಶಿಗಳ ಮೇಲೆ ಬೀರುವ ಪ್ರಭಾವ, ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ವಿವರಿಸಿದ್ದಾರೆ.

ಬೆಂಗಳೂರು, ಮಾ.2: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 2, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ವಿಶ್ವಾ ವಸನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ ಚತುರ್ದಶಿ ದಿನವಾದ ಇಂದು ಬೆಳಗ್ಗೆ 5:57ಕ್ಕೆ ಚತುರ್ದಶಿ ಮುಗಿದು ಹುಣ್ಣಿಮೆ ಪ್ರಾರಂಭವಾಗುತ್ತದೆ. ಆಶ್ಲೇಷ ನಕ್ಷತ್ರ, ಅತಿಗಂಡ ಯೋಗ, ವಣಿಕ ಕರಣವಿರುವ ಈ ದಿನದ ರಾಹುಕಾಲ ಬೆಳಗಿನ ಜಾವ 8:03 ರಿಂದ 9:32 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 9:33 ರಿಂದ 11:02 ರವರೆಗೆ ಇದೆ. ಇಂದು ಶುಕ್ರ ಗ್ರಹವು ಕುಂಭ ರಾಶಿಯಿಂದ ಮೀನ ರಾಶಿಗೆ (ಉಚ್ಚ ಸ್ಥಾನ) ಬೆಳಗಿನ ಜಾವ 1:01ಕ್ಕೆ ಸಂಚಾರ ಮಾಡಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಕಟಕ ರಾಶಿಯಲ್ಲಿ ಇರುತ್ತಾನೆ. ಕಾಮದಹನದ ಹಬ್ಬವೂ ಇಂದು ಆಚರಿಸಲ್ಪಡುತ್ತದೆ. ಕನಕಗಿರಿ ಧ್ವಜ, ತುರುವೇಕೆರೆ ಬೆಟ್ಟದ ರಥ, ನೇರಳೆಕಟ್ಟೆ ಜಾತ್ರೆ, ದೇವರಾಯನದುರ್ಗದಲ್ಲಿ ರಥೋತ್ಸವ ನಡೆಯುವ ಪರ್ವದಿನ ಕೂಡ ಇದಾಗಿದೆ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಗುರೂಜಿ ಶುಭ ಕೋರಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ, ಕೌಟುಂಬಿಕ, ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಆಗುವ ಬದಲಾವಣೆಗಳು, ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಮಾಹಿತಿ ನೀಡಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us