AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ

ಐಫೋನ್ ವಿಷಯ ಎತ್ತಿದ್ದಕ್ಕೆ ಸಿಕ್ಕಾಪಟ್ಟೆ ಗರಂ ಆದ ಸೋನು ಶ್ರೀನಿವಾಸ ಗೌಡ

ಮದನ್​ ಕುಮಾರ್​
|

Updated on:Jul 05, 2026 | 8:35 AM

Share

ಮುಖ್ಯಾಂಶಗಳು

  • ಗಂಡುಮಕ್ಕಳು ಬಗ್ಗೆ ಮಾತನಾಡಿ ವಿವಾದ ಮಾಡಿಕೊಂಡ ಸೋನು ಗೌಡ.
  • ತಮ್ಮ ವೈಯಕ್ತಿಕ ವಿಷಯದ ಬಗ್ಗೆ ಮಾತನಾಡಿದ್ದಕ್ಕೆ ಸೋನು ಗೌಡ ಗರಂ.
  • ‘ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ’ ಎಂದು ಪಟ್ಟು ಹಿಡಿದ ಸೋನು.

ಹುಡುಗರ ಬಗ್ಗೆ ಸೋನು ಗೌಡ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿವಾದದ ಮಧ್ಯೆ ತಮ್ಮ ವೈಯಕ್ತಿಕ ವಿಷಯವನ್ನು ಎಳೆದುತಂದವರ ವಿರುದ್ಧ ಸೋನು ಗೌಡ ಗರಂ ಆಗಿದ್ದಾರೆ. ಐಫೋನ್ ಬಗ್ಗೆ ಮಾತನಾಡಿದವರ ಬಗ್ಗೆ ಸೋನು ಕಿಡಿಕಾರಿದ್ದಾರೆ.

ಹುಡುಗರ ಬಗ್ಗೆ ಸೋನು ಗೌಡ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣ ಆಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿವಾದದ ಮಧ್ಯೆ ತಮ್ಮ ವೈಯಕ್ತಿಕ ವಿಷಯವನ್ನು ಎಳೆದುತಂದವರ ವಿರುದ್ಧ ಸೋನು ಗೌಡ (Sonu Srinivas Gowda) ಗರಂ ಆಗಿದ್ದಾರೆ. ಐಫೋನ್ ಬಗ್ಗೆ ಮಾತನಾಡಿದವರ ಬಗ್ಗೆ ಸೋನು ಕಿಡಿಕಾರಿದ್ದಾರೆ. ‘ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಲ್ಲ. ಆದರೆ ನಾನು ತಮಾಷೆಯಾಗಿ ಹೇಳಿದ್ದಕ್ಕೆ ಕ್ಷಮೆ ಕೇಳಿಸಲು ಒತ್ತಾಯಿಸಿದ್ದಾರೆ. ಆದರೆ ನಾನು ಕ್ಷಮೆ ಕೇಳಲ್ಲ. ಹುಡುಗರನ್ನು ಕಳ್ಳ ನನ್ನ ಮಕ್ಕಳು ಅಂತ ನಾನು ಹೇಳಿದ್ದಕ್ಕೆ ಇಷ್ಟೆಲ್ಲ ವಿವಾದ ಮಾಡುತ್ತಿದ್ದಾರೆ. ಆದರೆ ನನ್ನ ವೈಯಕ್ತಿಕ ವಿಷಯ ಇಟ್ಟುಕೊಂಡು ಐಫೋನ್ ಅಂತ ಹೇಳಲು ಇವನು ಯಾವನು? ಇವನಿಗೆ ಏನು ಅಧಿಕಾರ ಇದೆ? ನನ್ನ ಹತ್ತಿರ ಇದೆಲ್ಲ ನಡೆಯಲ್ಲ. ಕಾನೂನು ಪ್ರಕಾರವಾಗಿ ಎಫ್​ಐಆರ್ ಮಾಡಿಸಿದ್ದೇನೆ’ ಎಂದು ಸೋನು ಗೌಡ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jul 05, 2026 08:31 AM

Follow Us