AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raksha Bandhan 2025: ಕೈಗೆ ಕಟ್ಟಿದ ರಾಖಿಯನ್ನು ಎಷ್ಟು ದಿನಗಳ ಬಳಿಕ ತೆಗೆಯಬೇಕು?

ಒಡಹುಟ್ಟಿದವರ ನಡುವಿನ ಪ್ರೀತಿ ಹಾಗೂ ಬಾಂಧವ್ಯವನ್ನು ಬಲಪಡಿಸುವ ಹಬ್ಬವಾದ ರಕ್ಷಾ ಬಂಧನಕ್ಕೆ ಒಂದೇ ಒಂದು ದಿನವಷ್ಟೇ ಬಾಕಿಯಿವೆ. ಈ ದಿನದಂದು ಎಲ್ಲಾ ಸಹೋದರರು ತಮ್ಮ ಪ್ರೀತಿಯ ಅಕ್ಕ ಅಥವಾ ತಂಗಿಯ ಕೈಯಿಂದ ರಾಖಿ ಕಟ್ಟಿಸಿಕೊಳ್ಳುತ್ತಾರೆ. ಆದರೆ ಕೈಗೆ ಕಟ್ಟಿದ ರಾಖಿಯನ್ನು ಯಾವಾಗ ತೆಗೆಯಬೇಕು ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ಹೀಗಾಗಿ ಪ್ರತಿಯೊಬ್ಬ ಸಹೋದರರು ಈ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.

Raksha Bandhan 2025: ಕೈಗೆ ಕಟ್ಟಿದ ರಾಖಿಯನ್ನು ಎಷ್ಟು ದಿನಗಳ ಬಳಿಕ ತೆಗೆಯಬೇಕು?
ರಕ್ಷಾ ಬಂಧನImage Credit source: Mayur Kakade/E+/Getty Images
ಸಾಯಿನಂದಾ
|

Updated on: Aug 08, 2025 | 5:25 PM

Share

ರಕ್ಷಾ ಬಂಧನವು (Raksha Bandhan) ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಅಣ್ಣ ತಂಗಿಯರ ಸಂಬಂಧವನ್ನು ಗಟ್ಟಿಗೊಳಿಸುವ ಈ ಪವಿತ್ರ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 09 ರಂದು ರಕ್ಷಾ ಬಂಧನ ಅಥವಾ ನೂಲ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಾರೆ. ಈ ವಿಶೇಷ ದಿನದಂದು ಸಹೋದರಿಯರು ತಮ್ಮ ಸಹೋದರನ ಕೈಗೆ ರಕ್ಷಾ ದಾರವನ್ನು ಕಟ್ಟುತ್ತಾರೆ. ಇದು ಇಬ್ಬರ ನಡುವಿನ ಪ್ರೀತಿ, ಬಾಂಧವ್ಯವನ್ನು ಗಟ್ಟಿಗೊಳಿಸುವ ದಾರವಾಗಿದೆ. ಹೀಗಾಗಿ ಕೈಗೆ ಕಟ್ಟಿದ ದಾರವನ್ನು (Rakhi) ಎಷ್ಟು ದಿನಗಳ ಬಳಿಕ ತೆಗೆಯಬೇಕು?, ಈ ರಾಖಿಯನ್ನು ತೆಗೆದು ಏನು ಮಾಡಬೇಕು? ಈ ಕುರಿತಾದ ಮಾಹಿತಿ ಇಲ್ಲಿದೆ.

ಕೈಗೆ ಕಟ್ಟಿದ ರಾಖಿಯನ್ನು ಯಾವಾಗ ತೆಗೆಯುವುದು ಸೂಕ್ತ

ಪ್ರೀತಿಯಿಂದ ಸಹೋದರಿಯರು ಕಟ್ಟಿದ ರಾಖಿಯನ್ನು ಕೆಲ ಸಹೋದರರು ಹಾಗೆಯೇ ಕೈಯಲ್ಲೇ ಇಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಮಾರನೇ ದಿನವೇ ರಕ್ಷಾ ದಾರವನ್ನು ತೆಗೆದು ಬಿಡುತ್ತಾರೆ. ಆದರೆ ರಾಖಿ ಕಟ್ಟಿದ ನಂತರ ಅದನ್ನು ಯಾವಾಗ ತೆಗೆಯಬೇಕು ಎಂಬುದಕ್ಕೆ ಯಾವುದೇ ಕಟ್ಟುನಿಟ್ಟಾದ ನಿಯಮಗಳು ಇಲ್ಲ. ಹೀಗಾಗಿ ಕೈಗೆ ಕಟ್ಟಿದ ರಾಖಿಯನ್ನು ಯಾವಾಗ ಬೇಕಾದರೂ ತೆಗೆಯಬಹುದು.

ಇದನ್ನೂ ಓದಿ
Image
ರಕ್ಷಾ ಬಂಧನ ಹಬ್ಬಕ್ಕೆ ಮನೆಯಲ್ಲೇ ರಾಖಿ ತಯಾರಿಸುವುದು ಹೇಗೆ? ಇಲ್ಲಿದೆ ಸಲಹೆ
Image
ರಕ್ಷಾ ಬಂಧನದ ದಿನ ನಿಮ್ಮ ಪ್ರೀತಿಯ ಸಹೋದರಿಗೆ ಈ ಉಡುಗೊರೆಗಳನ್ನು ನೀಡಿ
Image
ರಕ್ಷಾ ಬಂಧನ ಹಬ್ಬದ ಶುಭ ಸಂದೇಶಗಳು
Image
ರಕ್ಷಾ ಬಂಧನದ ದಿನ ಹೆಣ್ಮಕ್ಕಳು ಯಾರಿಗೆಲ್ಲಾ ರಾಖಿ ಕಟ್ಟಬಹುದು?
  • ಸಾಂಪ್ರಾದಾಯಿಕವಾಗಿ ರಾಖಿ ತೆಗೆಯಲು ಸರಿಯಾದ ದಿನವಿದ್ದರೆ ಅದು ಕೃಷ್ಣ ಜನ್ಮಾಷ್ಠಮಿ. ರಕ್ಷಾ ಬಂಧನದ ಎಂಟನೇ ದಿನವಾದ ಕೃಷ್ಣ ಜನ್ಮಾಷ್ಟಮಿಯಂದು ರಾಖಿಯನ್ನು ತೆಗೆಯುತ್ತಾರೆ.
  •  ರಕ್ಷಾ ದಾರವನ್ನು ಎಷ್ಟು ದಿನ ಬೇಕಾದರೂ ಕಟ್ಟಬಹುದು. ಇದು ನಿಮ್ಮ ವೈಯುಕ್ತಿಕ ಆದ್ಯತೆಯನ್ನು ಅವಲಂಬಿಸಿರುತ್ತದೆ. ಈ ದಾರಕ್ಕೆ ಹಾಳಾಗುವವರೆಗೂ ಕೈಯಲ್ಲಿ ಹಾಗೆಯೇ ಇಟ್ಟುಕೊಳ್ಳಬಹುದು. ಒಂದು ವೇಳೆ ನಿಮ್ಮ ದೈನಂದಿನ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದ್ದರೆ, ನೀವು ಅದನ್ನು ತೆಗೆದುಹಾಕಬಹುದು. ಸಾಧ್ಯವಾದರೆ ಮುಂದಿನ ರಕ್ಷಾ ಬಂಧನದವರೆಗೂ ರಾಖಿಯಲ್ಲಿ ಕೈಯಲ್ಲಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: Raksha Bandhan 2025: ರಾಖಿ ಖರೀದಿಸುವ ಬದಲು ನೀವೇ ಮನೆಯಲ್ಲಿ ಹೀಗೆ ತಯಾರಿಸಿ

ಕೈಯಿಂದ ತೆಗೆದ ರಾಖಿಯನ್ನು ಏನು ಮಾಡಬೇಕು?

ರಾಖಿಯನ್ನು ತೆಗೆದ ಬಳಿಕ ಎಲ್ಲೆಂದರಲ್ಲಿ ಎಸೆಯುವುದು ಸರಿಯಲ್ಲ. ಸಹೋದರಿಯೂ ಪ್ರೀತಿಯಿಂದ ಕಟ್ಟಿದ ರಕ್ಷಾ ದಾರವನ್ನು ನೀವು ನೆನಪಿಗಾಗಿ ಇಟ್ಟುಕೊಳ್ಳಬಹುದು. ಇಲ್ಲದಿದ್ದರೆ ಹರಿಯುವ ನೀರಿನಲ್ಲಿ ಬಿಡಬಹುದು ಅಥವಾ ಮರ ಕೆಳಗೆ ಇಡುವುದು ಸೂಕ್ತ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ