AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Raksha Bandhan 2025: ರಕ್ಷಾ ಬಂಧನದ ದಿನ ನಿಮ್ಮ ಪ್ರೀತಿಯ ಸಹೋದರಿಗೆ ಈ ಉಡುಗೊರೆಗಳನ್ನು ನೀಡಿ

ರಕ್ಷಾ ಬಂಧನವು ಸಹೋದರ ಮತ್ತು ಸಹೋದರಿಯರ ನಡುವಿನ ಸುಂದರ ಬಾಂಧವ್ಯವನ್ನು ಆಚರಿಸುವ ಒಂದು ವಿಶೇಷ ಹಬ್ಬವಾಗಿದೆ. ಈ ಹಬ್ಬದ ದಿನ ಸಹೋದರಿ ತನ್ನ ಮುದ್ದಿನ ಸಹೋದರನ ಕೈಗೆ ರಾಖಿ ಕಟ್ಟಿ, ಆತನ ದೀರ್ಘಾಯುಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾಳೆ. ಮತ್ತು ಸಹೋದರ ತನ್ನ ಮುದ್ದಿನ ಸಹೋದರಿಗೆ ಉಡುಗೊರೆಯನ್ನು ನೀಡುತ್ತಾನೆ. ಈ ಬಾರಿಯ ಹಬ್ಬಕ್ಕೆ ನೀವು ಕೂಡ ನಿಮ್ಮ ಸಹೋದರಿಯರಿಗೆ ಈ ಕೆಲವು ಉಡುಗೊರೆಯನ್ನು ನೀಡುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಿ.

Raksha Bandhan 2025: ರಕ್ಷಾ ಬಂಧನದ ದಿನ ನಿಮ್ಮ ಪ್ರೀತಿಯ ಸಹೋದರಿಗೆ ಈ ಉಡುಗೊರೆಗಳನ್ನು ನೀಡಿ
ರಕ್ಷಾ ಬಂಧನ ಉಡುಗೊರೆImage Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 07, 2025 | 6:13 PM

Share

ರಕ್ಷಾ ಬಂಧನ  (Raksha Bandhan) ಹಬ್ಬಕ್ಕೆ ಇನ್ನೇನು ಕ್ಷಣ ಗಣನೆ ಶುರುವಾಗಿದೆ. ಈ ಹಬ್ಬವನ್ನು ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನವನ್ನು ಆಚರಿಸಲಾಗುತ್ತದೆ. ಇದು ಸಹೋದರ ಸಹೋದರಿಯರ ಸುಂದರ ಬಾಂಧವ್ಯವನ್ನು ಆಚರಿಸುವ ಒಂದು ಸುಂದರ ಹಬ್ಬವಾಗಿದೆ. ಈ ದಿನ ಸಹೋದರಿಯರು ತಮ್ಮ ಸಹೋದರ ಕೈಗೆ ರಾಖಿ ಕಟ್ಟಿ, ಹಣೆಗೆ ತಿಲಕ ಹಚ್ಚಿ ಅವರ ದೀರ್ಘಾಯುಷ್ಯ, ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸಿದರೆ, ಸಹೋದರರು ತಮ್ಮ ಎಂತಹದ್ದೇ ಪರಿಸ್ಥಿತಿಯಲ್ಲೂ ಸಹೋದರಿಯನ್ನು ರಕ್ಷಿಸುವ ಭರವಸೆಯನ್ನು ನೀಡುತ್ತಾರೆ. ಜೊತೆಗೆ ಸಹೋದರಿಗೆ ಪ್ರೀತಿಯಿಂದ ಉಡುಗೊರೆಯನ್ನು (Gift Idea)  ಸಹ ನೀಡುತ್ತಾರೆ. ಈ ಬಾರಿ ನೀವು ನಿಮ್ಮ ಸಹೋದರಿಗೆ ವಿಶೇಷವಾದ  ಉಡುಗೊರೆಯನ್ನು ನೀಡಲು ಬಯಸಿದರೆ,  ಇಲ್ಲಿವೆ ನಿಮಗಾಗಿ ಕೆಲವು ಗಿಫ್ಟ್‌ ಐಡಿಯಾಗಳು.

ರಕ್ಷಾ ಬಂಧನದ ದಿನ ನಿಮ್ಮ ಸಹೋದರಿಗೆ ಈ ಉಡುಗೊರೆ ನೀಡಿ:

ಕಸ್ಟಮೈಸ್ಡ್‌ ಉಡುಗೊರೆಗಳು: ನಿಮ್ಮ ಸಹೋದರಿಗೆ ಏನಾದ್ರೂ ವಿಶೇಷವಾದದ್ದನ್ನು ನೀಡಲು ಬಯಸುವಿರಾ? ಹಾಗಿದ್ರೆ ನೀವು  ಫೋಟೋ ಫ್ರೇಮ್, ಕಸ್ಟಮೈಸ್ ಮಾಡಿದ ಮಗ್ ಅಥವಾ ಸಹೋದರಿಯ  ಹೆಸರನ್ನು ಬರೆದ ಬ್ರೇಸ್ಲೆಟ್‌ನಂತಹ ಕಸ್ಟಮೈಸ್ಡ್ ಉಡುಗೊರೆಗಳನ್ನು ನೀಡಬಹುದು.

ಫ್ಯಾಶನ್‌ ಹ್ಯಾಂಪರ್ಸ್: ನಿಮ್ಮ ಸಹೋದರಿ ಫ್ಯಾಷನ್ ಪ್ರಿಯರಾಗಿದ್ದರೆ ನೀವು ಅವರಿಗೆ ಒಂದು ಸ್ಟೈಲಿಶ್ ಹ್ಯಾಂಡ್‌ಬ್ಯಾಗ್ ಟ್ರೆಂಡಿ ಕಿವಿಯೋಲೆಗಳು ಅಥವಾ ಡಿಸೈನರ್ ದುಪಟ್ಟಾ, ಕೂಲ್ ಸ್ನೀಕರ್ಸ್ ಅಥವಾ ಸ್ಮಾರ್ಟ್‌ವಾಚ್‌ಗಳು, ಇಲ್ಲವೆ ಬಟ್ಟೆಗಳನ್ನು ಸಹ ಉಡುಗೊರೆಯಾಗಿ ನೀಡಬಹುದು. ಈ ಉಡುಗೊರೆಯನ್ನು ಖಂಡಿತ ಇಷ್ಟಪಡುತ್ತಾರೆ.

ಇದನ್ನೂ ಓದಿ
Image
ರಕ್ಷಾ ಬಂಧನ ಹಬ್ಬದ ಶುಭ ಸಂದೇಶಗಳು
Image
ರಕ್ಷಾ ಬಂಧನದ ದಿನ ಹೆಣ್ಮಕ್ಕಳು ಯಾರಿಗೆಲ್ಲಾ ರಾಖಿ ಕಟ್ಟಬಹುದು?
Image
ವರಮಹಾಲಕ್ಷ್ಮಿ ಹಬ್ಬದ ದಿನ ಮುತ್ತೈದೆಯರು ಹಸಿರು ಬಳೆಗಳನ್ನು ತೊಡುವುದೇಕೆ
Image
ರಾಖಿ ಕಟ್ಟುವಾಗ ಮೂರು ಗಂಟು ಹಾಕೋದು ಏಕೆ ಗೊತ್ತಾ?

ಬ್ಯೂಟಿ ಕಿಟ್:‌ ಬಹುತೇಕ ಹೆಚ್ಚಿನ ಹುಡುಗಿಯರು, ತಮ್ಮ ಚರ್ಮದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ದುಬಾರಿ ಸ್ಕಿನ್‌ ಪ್ರಾಡಕ್ಟ್‌ಗಳನ್ನು ಖರೀದಿಸುತ್ತಾರೆ. ಹೀಗಿರುವಾಗ ನೀವು ಸಹ ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ನಿಮ್ಮ ಸಹೋದರಿಗೆ ಫೇಸ್ ಮಾಸ್ಕ್, ಸೀರಮ್, ಲಿಪ್ ಬಾಮ್, ಬಾಡಿ ಲೋಷನ್, ಫೌಂಡೇಶನ್, ಕಾಜಲ್, ಮಸ್ಕರಾ, ಐ ಲೈನರ್ ಮುಂತಾದ ಉತ್ಪನ್ನಗಳನ್ನೊಳಗೊಂಡ ಬ್ಯೂಟಿ ಕಿಟ್‌ ಇಲ್ಲವೇ ಮೇಕಪ್‌ ಕಿಟ್‌ ಉಡುಗೊರೆಯಾಗಿ ನೀಡಬಹುದು.

ಪ್ರವಾಸಕ್ಕೆ ಕರೆದುಕೊಂಡು ಹೋಗಿ: ನಿಮ್ಮ ಸಹೋದರಿಯನ್ನು ಎಲ್ಲಾದರೂ ಪ್ರವಾಸಕ್ಕೆ ಕರೆದುಕೊಂಡು ಹೀಗುವ ಮೂಲಕವೂ ನೀವು ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಬಹುದು. ಈ ಬಾರಿ ರಾಖಿಯಂದು, ನೀವು ನಿಮ್ಮ ಸಹೋದರಿಯೊಂದಿಗೆ ಪ್ರವಾಸವನ್ನು ಯೋಜಿಸಬಹುದು. ನಿಮ್ಮ ಸಹೋದರಿಯ ನೆಚ್ಚಿನ ಸ್ಥಳಕ್ಕೆ ಆಕೆಯನ್ನು ಕರೆದುಕೊಂಡು ಹೋಗುವ ಮೂಲಕ ಈ ರಕ್ಷಾಬಂಧನವನ್ನು ಇನ್ನಷ್ಟು ವಿಶೇಷವಾಗಿಸಬಹುದು.

ಇದನ್ನೂ ಓದಿ: ರಕ್ಷಾ ಬಂಧನ ಹಬ್ಬದ ದಿನ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶಗಳು

ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ: ಗಿಫ್ಟ್‌ ಎಲ್ಲಾ ಕೊಡೋದು ಸುಮ್ಮನೆ ದುಡ್ಡು ಖರ್ಚು ಎಂದು ಯೋಚಿಸುವವರು, ತಂಗಿಯ ಭವಿಷ್ಯದ ದೃಷ್ಟಿಯಿಂದ ಆಕೆಯ ಹೆಸರಲ್ಲಿ ನೀವು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯನ್ನು ಮಾಡಬಹುದು. ಇದು ಕೂಡಾ ಒಂದು ರೀತಿಯ ಬೆಸ್ಟ್‌ ಉಡುಗೊರೆಯಾಗಿದೆ.

ಚಿನ್ನ: ರಕ್ಷಾ ಬಂಧನ ಹಬ್ಬದ ದಿನ ನೀವು ನಿಮ್ಮ ಸಹೋದರಿಗೆ ಚಿನ್ನದ ಸರ, ಚಿನ್ನದ ಉಂಗುರವನ್ನು ಸಹ ಉಡುಗೊರೆಯಾಗಿ ನೀಡಬಹುದು.

ಇನ್ನೂ ಅಕ್ಕಂದಿರು ಅವರ ತಮ್ಮಂದಿರಿಗೆ ಅಥವಾ ತಂಗಿಯರು ತಮ್ಮ ಅಣ್ಣಂದಿರಿಗೆ  ಎಲೆಕ್ಟ್ರಾನಿಕ್‌ ಗ್ಯಾಜೆಟ್‌, ಶರ್ಟ್‌,  ಕಸ್ಟಮೈಸ್ಡ್‌ ವ್ಯಾಲೆಟ್‌, ಸ್ಟೈಲಿಶ್‌ ಬ್ಯಾಗ್‌, ವಾಚ್‌, ಸನ್‌ಗ್ಲಾಸ್‌, ಸ್ಕಿನ್‌ಕೇರ್‌ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ