Safest City: ವಿಶ್ವದ ಸುರಕ್ಷಿತ ನಗರಗಳ ಪಟ್ಟಿ ಪ್ರಕಟ; ಭಾರತದ ಅತ್ಯಂತ ಸುರಕ್ಷಿತ ನಗರಗಳ ಪೈಕಿ ಮಂಗಳೂರು ಫಸ್ಟ್
ಕಡಲನಗರಿ ಎಂದೇ ಖ್ಯಾತವಾಗಿರುವ ಮಂಗಳೂರಿನ ಮುಡಿಗೆ ಮತ್ತೊಂದು ಗರಿ ಬಂದಿದೆ. ನಂಬಿಯೋ ತನ್ನ 2025ರ ವರ್ಷದ ಮಧ್ಯ ಭಾಗದಲ್ಲಿ ಬಿಡುಗಡೆಗೊಳಿಸಿರುವ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಮಂಗಳೂರಿನ ಹೆಸರಿದೆ. ದೇಶದ ಅತ್ಯಂತ ಸುರಕ್ಷಿತ ನಗರಗಳ ಸಾಲಿಗೆ ಕರ್ನಾಟಕದ ಮಂಗಳೂರು ನಗರವು ಸೇರಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಇತ್ತೀಚೆಗಿನ ದಿನಗಳಲ್ಲಿ ಜನರು ವಾಸಿಸುವ ಸ್ಥಳಗಳಲ್ಲಿ ಸುರಕ್ಷತೆಯೇ (Safety) ಇಲ್ಲದಂತಾಗಿದೆ. ದಿನೇ ದಿನೇ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ವಾಸಯೋಗ್ಯವಾದ ವಾತಾವರಣವು ಇಲ್ಲದಂತಾಗಿದೆ. ಈ ಎಲ್ಲಾ ಅಂಶಗಳಿಂದಲೂ ಆತಂಕದಲ್ಲೇ ಜನರು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಇದೀಗ ನಗರವಾರು ಸುರಕ್ಷತಾ ಶ್ರೇಯಾಂಕದಲ್ಲಿ ಕರ್ನಾಟಕದ ಮಂಗಳೂರು (Mangalore) ನಗರವು ಎಲ್ಲಾ ಅಂಶಗಳಿಂದಲೂ ಅತ್ಯಂತ ಸುರಕ್ಷಿತ ನಗರ (safest city) ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು ಭಾರತದಲ್ಲೇ ಅಗ್ರಸ್ಥಾನವನ್ನು ಸ್ಥಾನ ಪಡೆದಿದೆ, ಈ ಬಗೆಗಿನ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಮಂಗಳೂರಿಗೆ ಮೊದಲ ಸ್ಥಾನ
ಜಾಗತಿಕ ಡೇಟಾ ಸಂಸ್ಥೆಯಾದ ನಂಬಿಯೊ ಪ್ರಕಟಿಸಿದ 2025ರ ಮಧ್ಯಭಾಗದ ಸುರಕ್ಷತಾ ಸೂಚ್ಯಂಕ ವರದಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ ಮಂಗಳೂರು 74.2 ಸುರಕ್ಷತಾ ಅಂಕದೊಂದಿಗೆ ಜಾಗತಿಕ ಮಟ್ಟದಲ್ಲಿ 49 ನೇ ಸ್ಥಾನ ಪಡೆದುಕೊಂಡಿದ್ದು, ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಕಡಿಮೆ ಅಪರಾಧ ಪ್ರಕರಣಗಳು ಸೇರಿದಂತೆ ಉತ್ತಮ ಮೂಲಸೌಕರ್ಯಗಳಿಂದಲೇ ಈ ಕಡಲನಗರಿ ಮಂಗಳೂರು ಭಾರತದಲ್ಲಿ ಮೊದಲ ಸುರಕ್ಷಿತ ನಗರವೆನ್ನುವ ಖ್ಯಾತಿಗೆ ಪಾತ್ರವಾಗಿದೆ.
ಇದನ್ನೂ ಓದಿ: ಸಂಸ್ಕೃತದ್ದೇ ಕಾರುಬಾರು ಇರುವ ಈ ಸುಸಂಸ್ಕೃತ ಹಳ್ಳಿಗೆ ನೀವು ಭೇಟಿ ನೀಡಲೇಬೇಕು ನೋಡಿ
ಭಾರತದ ಸುರಕ್ಷಿತ ನಗರಗಳ ಪಟ್ಟಿ ಹೀಗಿವೆ
ಸುರಕ್ಷಿತ ನಗರಗಳ ವಿಭಾಗದಲ್ಲಿ ವಿಶ್ವದ ಒಟ್ಟು 393 ನಗರದ ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಭಾರತದ 23 ನಗರಗಳು ಈ ಪಟ್ಟಿಯಲ್ಲಿ ಸೇರಿವೆ. ಮಂಗಳೂರು 74.2 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಗಳಿಸಿಕೊಂಡರೆ, 69.2, 68.2 ಮತ್ತು 66.6 ಸುರಕ್ಷತಾ ಅಂಕಗಳೊಂದಿಗೆ ಗುಜರಾತ್‌ನಲ್ಲಿ ವಡೋದರಾ, ಅಹಮದಾಬಾದ್ ಹಾಗೂ ಸೂರತ್ ಈ ಮೂರು ನಗರಗಳು ಎರಡು, ಮೂರು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಭಾರತದ ಹತ್ತು ಸುರಕ್ಷಿತ ನಗರಗಳ ಪೈಕಿ ಜೈಪುರ ನವಿ ಮುಂಬೈ, ತಿರುವನಂತಪುರಂ, ಚೈನ್ನೈ, ಪುಣೆ ಹಾಗೂ ಚಂಢೀಗಢ ನಗರಗಳು ಸೇರಿವೆ. ಅದಲ್ಲದೇ, 59.03, 55.1 ಹಾಗೂ 58.44 ಅಂಕಗಳೊಂದಿಗೆ ಕ್ರಮವಾಗಿ ರಾಜಧಾನಿ ನವದೆಹಲಿ, ನೋಯ್ಡಾ ಹಾಗೂ ಗಾಜಿಯಾಬಾದ್ ಅಸುರಕ್ಷಿತ ನಗರವೆನ್ನುವ ಪಟ್ಟಿಯಲ್ಲಿ ಸೇರಿಕೊಂಡಿವೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Fri, 8 August 25








