ಈ ಮಳೆಗಾಲದಲ್ಲಿ ಬೆಂಗಳೂರಿಗೆ ಹತ್ತಿರ ಇರುವ ಈ ಜಲಪಾತಗಳಿಗೆ ಹೋಗಲೇಬೇಕು ನೋಡಿ
ನಮ್ಮ ಕರ್ನಾಟಕದಲ್ಲಿ ಹತ್ತು ಹಲವು ಪ್ರವಾಸಿ ತಾಣಗಳಿವೆ. ಭೋರ್ಗರೆದು ಹರಿವ ಸಾಕಷ್ಟು ಜಲಪಾತಗಳಿವೆ. ನೀವು ಈ ಮಳೆಗಾದಲ್ಲಿ ಪ್ರವಾಸಕ್ಕೆ ಹೋಗುವ ಆಲೋಚನೆಯಲ್ಲಿದ್ದರೆ, ಈ ವೀಕೆಂಡ್‌ನಲ್ಲಿ ನಮ್ಮ ಬೆಂಗಳೂರಿಗೆ ಹತ್ತಿರವಿರುವ ಕೆಲವೊಂದು ಜಲಪಾತಗಳಿಗೆ ಭೇಟಿ ನೀಡಲು ಮರೆಯದಿರಿ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಫಾಲ್ಸ್‌ಗಳ ಸೌಂದರ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಹೀಗಿರುವಾಗ ನೀವು ಈ ಜಲಪಾತಗಳಿಗೆ ಭೇಟಿ ನೀಡಲೇಬೇಕು ನೋಡಿ.

ಮಳೆಗಾಲದಲ್ಲಿ ಜಲಪಾತಗಳಿಗೆ (Falls) ಜೀವ ಕಳೆ ಬರುವ ಕಾರಣ, ಫಾಲ್ಸ್‌ಗಳ ಸೌಂದರ್ಯವೂ ದುಪ್ಪಟ್ಟಾಗುತ್ತದೆ. ಈ ಸೌಂದರ್ಯವನ್ನು ಕಣ್ತುಂಬಲೆಂದೇ ಹೆಚ್ಚಿನ ಪ್ರವಾಸಿಗರು ಮಾನ್ಸೂನ್‌ನಲ್ಲಿಯೇ ಜಲಪಾತಗಳತ್ತ ಭೇಟಿ ನೀಡುತ್ತಾರೆ. ಬೆಟ್ಟ-ಗುಡ್ಡಗಳು, ಹಸಿರು ಕಣಿವೆಯ ನಡುವೆ ಜೀವಕಳೆ ತುಂಬಿ ಹಾಲಿನ ನೊರೆಯಂತೆ ಭೋರ್ಗರೆಯುವ ಜಲಪಾತಗಳ ಸೊಬಗನ್ನು ನೋಡುವುದೇ ಚೆಂದ. ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಜೋಗ ಜಲಪಾತದಿಂದ ಹಿಡಿದು ಶಿವನಸಮುದ್ರ ಜಲಪಾತದವರೆಗೆ ನೈಸರ್ಗಿಕ ಸೌಂದರ್ಯ ಮತ್ತು ವೈಭವದಿಂದ ಪ್ರಸಿದ್ಧಿ ಪಡೆದಿರುವ ಹಲವು ಜಲಪಾತಗಳಿವೆ. ಈ ವಿಕೆಂಡ್‌ನಲ್ಲಿ ಪ್ರವಾಸ ಮಾಡೋ ಯೋಜನೆಯಲ್ಲಿದ್ದರೆ, ಬೆಂಗಳೂರಿಗೆ (falls near Bangalore) ಹತ್ತಿರವಿರುವ ಈ ಕೆಲವು ತಾಣಗಳಿಗೆ ತಪ್ಪದೆ ಭೇಟಿ ನೀಡಿ.
ಬೆಂಗಳೂರಿಗೆ ಹತ್ತಿರವಿರುವ ಈ ಜಲಪಾತಗಳಿಗೆ ತಪ್ಪದೆ ಭೇಟಿ ನೀಡಿ:
ಶಿವನಸಮುದ್ರ ಜಲಪಾತ: ಶಿವನಸಮುದ್ರ ಕರ್ನಾಟಕದ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಶಿವನ ಸಮುದ್ರ ಕಾವೇರಿ ನದಿ ನೀರನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿ ಎರಡು ಜಲಪಾತಗಳನ್ನು ರೂಪಿಸುತ್ತದೆ. ಒಂದು ಗಗನಚುಕ್ಕಿ, ಇನ್ನೊಂದು ಭರ ಚುಕ್ಕಿ. ಇವೆರಡನ್ನು ಒಟ್ಟಾಗಿ ಶಿವನಸಮುದ್ರ ಜಲಪಾತ ಎಂದು ಕರೆಯಲಾಗುತ್ತದೆ. ಮಳೆಗಾಲದಲ್ಲಂತೂ ಈ ಸ್ಥಳ ತುಂಬಾನೇ ಅದ್ಭುತವಾಗಿರುತ್ತದೆ. ಈ ವೀಕೆಂಡ್‌ನಲ್ಲಿ ಈ ಸುಂದರ ತಾಣಕ್ಕೆ ಹೋಗಿ ಬರಬಹುದು.
ಚುಂಚಿ ಜಲಪಾತ: ಈ ವೀಕೆಂಡ್‌ನಲ್ಲಿ ಎಲ್ಲಿಗಾದ್ರೂ ಹೋಗುವ ಪ್ಲಾನ್ ಇದ್ರೆ, ನೀವು ಚುಂಚಿ ಜಲಪಾತಕ್ಕೆ ಭೇಟಿ ನೀಡಬಹುದು. ಬೆಂಗಳೂರಿನಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಚುಂಚಿ ಅರ್ಕಾವತಿ ನದಿ ಮೇಲಿರುವ ರಮಣೀಯವಾದ ಜಲಪಾತವಾಗಿದೆ. ಮಳೆಗಾಲದಲ್ಲಿ ಇಲ್ಲಿ ಭೋರ್ಗರೆದು ಹರಿವ ನೀರಿನ ಅದ್ಭುತ ದೃಶ್ಯವನ್ನು ನೋಡುವುದೇ ಕಣ್ಣಿಗೊಂದು ಹಬ್ಬ.
ಮೇಕೆದಾಟು: ಬೆಂಗಳೂರಿನಿಂದ ಸುಮಾರು 100 ಕಿಮೀ ದೂರದಲ್ಲಿರುವ ಮೇಕೆದಾಟುವಿಗೆ ನೀವು ಭೇಟಿ ನೀಡಬಬಹುದು. ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮದ ಬಳಿ ಇರುವ ಈ ಸ್ಥಳವು ತುಂಬಾನೇ ಅದ್ಭುತವಾಗಿದೆ. ಇಲ್ಲಿ ನೀವು ಸಾಹಸ ಚಟುವಟಿಕೆಗಳನ್ನು ಸಹ ಆನಂದಿಸಬಹುದು. ಈ ವೀಕೆಂಡ್‌ನಲ್ಲಿ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಜೊತೆ ಇಲ್ಲಿ ಬಂದು ಕಾಲ ಕಳೆಯಬಹುದು.
ಇದನ್ನೂ ಓದಿ: ಪ್ರಕೃತಿ ಪ್ರೇಮಿಗಳನ್ನು ಕೈ ಬೀಸಿ ಕರೆಯುತ್ತಿದೆ ಸ್ವರ್ಗದಂತಿರುವ “ರಾಣಿ ಝರಿ”
ತೊಟ್ಟಿಕಲ್ಲು ಜಲಪಾತ: ಈ ವೀಕೆಂಡ್‌ನಲ್ಲಿ ಟ್ರಿಪ್ ಮಾಡೋ ಯೋಜನೆಯಲ್ಲಿದ್ದರೆ ಬೆಂಗಳೂರಿನಿಂದ ಕೇವಲ 35 ಕಿಮೀ ದೂರದಲ್ಲಿರುವ ತೊಟ್ಟಿಕಲ್ಲು ಫಾಲ್ಸ್‌ಗೆ ಭೇಟಿ ನೀಡಿ. ಈ ಜಲಪಾತ ತನ್ನ ಮೋಡಿ ಮಾಡುವ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.
ಮುತ್ಯಾಲ ಮಡುವು ಜಲಪಾತ: ಬೆಂಗಳೂರಿನಿಂದ ಸರಿಸುಮಾರು 40 ಕಿ.ಮೀ ದೂರದಲ್ಲಿರುವ ಈ ಹಸಿರು ಕಣಿವೆಯ ಜಲಪಾತವು ಮಳೆಗಾಲದಲ್ಲಿ ಭೇಟಿ ನೀಡಲು ಹೇಳಿ ಮಾಡಿಸಿದಂತಹ ಸ್ಥಳವಾಗಿದೆ. ಕುಟುಂಬದೊಂದಿಗೆ ಪಿಕ್ನಿಕ್ ಹೋಗಲು ಅಥವಾ ಸ್ನೇಹಿತರ ಜೊತೆ ಟ್ರೆಕ್ಕಿಂಗ್ ಮಾಡಲು ಈ ಸ್ಥಳವು ಪರ್ಫೆಕ್ಟ್ ಆಯ್ಕೆಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








