AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಗೊತ್ತಾ ಪೆನ್ನು ಹಿಡಿದುಕೊಳ್ಳುವ ಶೈಲಿ ಸಹ ನೀವು ಎಂತಹ ವ್ಯಕ್ತಿ ಎಂಬುದನ್ನು ಬಹಿರಂಗಪಡಿಸುತ್ತದೆ

ಕಣ್ಣು, ಕಿವಿ, ಮೂಗಿನ ಆಕಾರ, ನಡಿಗೆಯ ಶೈಲಿ, ಪಾದದ ಆಕಾರ, ಕೂದಲಿನ ಆಕಾರ, ಆಪ್ಟಿಕಲ್‌ ಇಲ್ಯೂಷನ್‌ ಹೀಗೆ ಸಾಕಷ್ಟು ವಿಧಾನಗಳ ಮೂಲಕ ನೀವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನೀವು ಪೆನ್ನು ಹಿಡಿಯುವ ರೀತಿಯಿಂದ ನೀವು ಸ್ನೇಹಪರ ವ್ಯಕ್ತಿಯೇ, ಸೃಜನಶೀಲರೇ ಎಂಬುದನ್ನು ಪರೀಕ್ಷಿಸಿ.

Personality Test: ನಿಮ್ಗೊತ್ತಾ  ಪೆನ್ನು ಹಿಡಿದುಕೊಳ್ಳುವ ಶೈಲಿ ಸಹ ನೀವು ಎಂತಹ ವ್ಯಕ್ತಿ ಎಂಬುದನ್ನು ಬಹಿರಂಗಪಡಿಸುತ್ತದೆ
ವ್ಯಕ್ತಿತ್ವ ಪರೀಕ್ಷೆ
ಮಾಲಾಶ್ರೀ ಅಂಚನ್​
|

Updated on: Aug 02, 2025 | 6:37 PM

Share

ವ್ಯಕ್ತಿತ್ವ ಪರೀಕ್ಷೆಯ (Personality Test) ಹಲವು ವಿಧಾನಗಳಿಗೆ. ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌, ನೆಚ್ಚಿನ ಬಣ್ಣ, ನಡೆಯುವ ಶೈಲಿ, ಪಾದಗಳ ಆಕಾರ, ಮೂಗಿನ ಆಕಾರ, ಕೂದಲಿನ ಆಕಾರ, ಕೈ ಕಟ್ಟಿಕೊಳ್ಳುವ ರೀತಿ ಹೀಗೆ ಸಾಕಷ್ಟು ವಿಧಾನಗಳ ಮೂಲಕ ನಮ್ಮ ನಿಗೂಢ ವ್ಯಕ್ತಿತ್ವ, ಸ್ವಭಾವ ಹೇಗಿದೆ ಎಂಬುದನ್ನು ನಾವೇ ತಿಳಿಯಬಹುದಾಗಿದೆ. ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಪರ್ಸನಾಲಿಟಿ ಟೆಸ್ಟ್‌ ವೈರಲ್‌ ಆಗಿದ್ದು, ಅದರಲ್ಲಿ ನೀವು ಯಾವ ರೀತಿ ಪೆನ್ನು ಹಿಡಿದುಕೊಳ್ಳುತ್ತೀರಿ  (Pen holding style) ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಬಹುದಾಗಿದೆ.

ಪೆನ್ನು ಹಿಡಿಯುವ ಶೈಲಿಯಿಂದ ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ:

ಈ ವ್ಯಕ್ತಿತ್ವ ಪರೀಕ್ಷೆಯನ್ನು @thespiritualflame’s ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ, ನೀವು ಯಾವ ರೀತಿ ಪೆನ್ನು ಹಿಡಿದುಕೊಳ್ಳುತ್ತೀರಿ ಎಂಬುದರ ಮೇಲೆ ನೀವು ಸ್ನೇಹಪರರೇ, ಭಾವೋದ್ರಿಕರೇ, ಬುದ್ಧಿವಂತರೇ, ಕನಸುಗಾರರೇ ಎಂಬುದನ್ನು ಪರೀಕ್ಷಿಸಿ.

ಇದನ್ನೂ ಓದಿ
Image
ನಿಮ್ಮ ಉಗುರಿನ ಆಕಾರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವ
Image
ನಿಮ್ಮ ಕೂದಲು ಸಹ ನಿಮ್ಮ ಗುಣ ಸ್ವಭಾವ ಹೇಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ
Image
ಮೂಗಿನ ಆಕಾರವೂ ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತದೆಯಂತೆ
Image
ಕಾಲ್ಬೆರಳಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ಗುಣ ಸ್ವಭಾವ

ವಿಡಿಯೋ ಇಲ್ಲಿದೆ ನೋಡಿ:

1 ನೇ ಗುಂಪು: ನೀವು ಸಂಖ್ಯೆ ಒಂದರಲ್ಲಿ ತೋರಿಸಿರುವಂತೆ ಪೆನ್ನು ಹಿಡಿದುಕೊಳ್ಳುವವರಾಗಿದ್ದರೆ, ನೀವು ಸ್ನೇಹಪರರು ಮತ್ತು ಮುಕ್ತ ಮನಸ್ಸಿನ ವ್ಯಕ್ತಿಯೆಂದು ಅರ್ಥ. ನೀವು ಎಲ್ಲರೊಂದಿಗೂ ಪ್ರೀತಿಯಿಂದ, ಕಾಳಜಿಯಿಂದ ವರ್ತಿಸುತ್ತೀರಿ. ಅಲ್ಲದೆ ಸಹಾನುಭೂತಿಯನ್ನು ಹೊಂದಿರುವ ನೀವು ಜನರು ಹೇಗಿರುತ್ತಾರೋ ಅವರನ್ನು ಹಾಗೆಯೇ ಸ್ವೀಕರಿಸುತ್ತೀರಿ. ಜೊತೆ ತೀವ್ರ ಉತ್ಸಾಹಭರಿತ ಹಾಗೂ ಸೃಜನಶೀಲರಾದ ನಿಮಗೆ ಸಂಗೀತ, ಚಿತ್ರಕಲೆ ಹಾಗೂ ಹಾಡುಗಾರಿಕೆಯಂತಹ ಸೃಜನಶೀಲ  ಅಭ್ಯಾಸಗಳೆಂದರೆ ಬಲು ಇಷ್ಟ.

2 ನೇ ಗುಂಪು: ನೀವು ಸಂಖ್ಯೆ ಎರಡರಲ್ಲಿ ತೋರಿಸಿರುವಂತೆ ಪೆನ್ನು ಹಿಡಿದುಕೊಳ್ಳುವವರಾಗಿದ್ದರೆ ನೀವು ತುಂಬಾನೇ ಬುದ್ಧಿವಂತರೆಂದು ಅರ್ಥ. ನೀವು ನಿಮ್ಮ ಗುಣಗಳಿಂದಲೇ ಇತರರನ್ನು ಬಹು ಬೇಗ ಆಕರ್ಷಿಸುತ್ತೀರಿ. ನಿಮ್ಮ ಜೀವನವನ್ನು ಹೇಗೆ  ಪರಿವರ್ತಿಸಬೇಕೆಂದು ಚೆನ್ನಾಗಿ ತಿಳಿದಿರುವ ನೀವು ಬರವಣಿಗೆ, ಕಲೆಯಲ್ಲಿ ಆಸಕ್ತಿಯನ್ನು ಹೊಂದಿರುತ್ತೀರಿ.  ಅಲ್ಲದೆ ನಿಮಗೆ ಹೆಚ್ಚಿನ ಮಟ್ಟದ ಏಕಾಗ್ರತೆಯಿದ್ದು, ನೀವು ಒಂದು ಕೆಲಸದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿದರೆ, ಅದನ್ನು ಮುಗಿಸಿಯೇ ತೀರುತ್ತೀರಿ. ಜೊತೆಗೆ ನೀವು ತುಂಬಾನೇ ಸತ್ಯವಂತರಾಗಿದ್ದು, ಅನ್ಯಾಯಗಳನ್ನು ಸಹಿಸುವುದಿಲ್ಲ.

ಇದನ್ನೂ ಓದಿ: ನಿಮ್ಮ ಉಗುರಿನ ಆಕಾರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ

3 ನೇ ಗುಂಪು: ನೀವು ಸಂಖ್ಯೆ ಮೂರರಲ್ಲಿ ತೋರಿಸಿರುವಂತೆ ಪೆನ್ನು ಹಿಡಿದುಕೊಳ್ಳುವವರಾಗಿದ್ದರೆ, ನೀವು ಸ್ವಪ್ನಶೀಲರು ಎಂದರ್ಥ. ತುಂಬಾನೇ ಪ್ರೀತಿಯನ್ನು ಹೊಂದಿರುವ ನೀವು ಜನರನ್ನು ಬಹು ಬೇಗನೇ ನಂಬುತ್ತೀರಿ. ಆದ್ದರಿಂದ ಅವಕಾಶವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ನೀವು ತುಂಬಾ ನಿಗೂಢರು ಮತ್ತು ನಿಮ್ಮ ಜೀವನದ ಬಗ್ಗೆ ಎಲ್ಲರಿಗೂ ಎಲ್ಲವನ್ನೂ ಹೇಳಲು ಇಷ್ಟಪಡುವುದಿಲ್ಲ. ಜೊತೆಗೆ ನೀವು ಶಾಂತಿಯನ್ನು ಇಷ್ಟಪಡುತ್ತೀರಿ ಮತ್ತು ಅತಿಯಾಗಿ ಯೋಚಿಸುತ್ತೀರಿ, ಆ ಚಿಂತೆಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಈ ನಿಮ್ಮ ಗುಣದಿಂದ ನೀವು ಯಾವುದೇ ರೀತಿಯ ನೋವಿನಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು.

4 ನೇ ಗುಂಪು: ಸಂಖ್ಯೆ ನಾಲ್ಕರಲ್ಲಿ ತೋರಿಸಿದಂತೆ, ನೀವು ಪೆನ್ನು ಹಿಡಿದುಕೊಳ್ಳುತ್ತೀರಿ ಎಂದಾದರೆ ನೀವು ಜೀವನದ ಬಗ್ಗೆ ಬಹಳಷ್ಟು ತಿಳಿದವರೆಂದು ಅರ್ಥ. ತುಂಬಾನೇ ಮೋಸ ಹೋಗಿರುವ, ನೋವನ್ನು ಅನುಭವಿಸಿರುವ ನಿಮಗೆ ಜೀವನವನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಚೆನ್ನಾಗಿ ತಿಳಿದಿದೆ. ಈ ನೋವುಗಳೇ ನಿಮ್ಮನ್ನು ಸದೃಢವನ್ನಾಗಿ ಮಾಡಿದ್ದು, ನಿಮ್ಮ ಈ ಅನುಭವದ ಕಾರಣದಿಂದ ನೀವು ಅಷ್ಟು ಸುಲಭವಾಗಿ ಯಾರನ್ನು ನಂಬಲು ಹೋಗುವುದಿಲ್ಲ. ನಿಮ್ಮ ನಂಬಿಕೆಯನ್ನು ಗಳಿಸುವುದು ಕಷ್ಟ ಆದರೆ ಯಾರಾದರೂ ನಿಮ್ಮ ನಂಬಿಕೆಯನ್ನು ಗಳಿಸಿದ್ದರೆ, ಅವರಷ್ಟು  ಅದೃಷ್ಟವಂತರು ಯಾರೂ ಇಲ್ಲ. ಮಾನಸಿಕವಾಗಿ ತುಂಬಾನೇ ಬಲಶಾಲಿಯಾಗಿರುವ ನೀವು ಎಂತಹದ್ದೇ ಸವಾಲನ್ನು ಬೇಕಾದರೂ ಸುಲಭವಾಗಿ ಎದುರಿಸುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ