AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಳೆಗಟ್ಟಿದ ಗ್ಯಾಸ್‌ ಸ್ಟೌವ್‌ ಬರ್ನರ್‌ ಕ್ಲೀನ್‌ ಮಾಡಲು ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ

ಪ್ರತಿನಿತ್ಯ ಅಡುಗೆ ಮಾಡುವ ಕಾರಣ ಎಷ್ಟೇ ಸ್ವಚ್ಛವಾಗಿ ಇಟ್ಟುಕೊಂಡರೂ ಗ್ಯಾಸ್‌ ಸ್ಟೌವ್‌ ಹಾಗೂ ಗ್ಯಾಸ್‌ ಸ್ಟೌವ್‌ ಬರ್ನರ್‌ ಕೊಳೆಯಾಗುತ್ತವೆ. ಹಾಲಿನ ಕಲೆ, ಜಿಡ್ಡು ಕಲೆಗಳು ಹಾಗೆಯೇ ಉಳಿದು ಬಿಡುತ್ತವೆ. ಇದನ್ನು ಕ್ಲೀನ್‌ ಮಾಡೋದೇ ಹಲವರಿಗೆ ಸವಾಲಿನ ಕೆಲಸ. ಹೀಗೆ ಬರ್ನರ್‌ ಅನ್ನು ಸರಿಯಾಗಿ ಕ್ಲೀನ್‌ ಮಾಡಿಲ್ಲ ಅಂದ್ರೆ ಗ್ಯಾಸ್‌ ಕೂಡ ಸರಿಯಾಗಿ ಉರಿಯುವುದಿಲ್ಲ. ಹೀಗಿರುವಾಗ ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಯಾವುದೇ ತಲೆನೋವಿಲ್ಲದೆ ಗ್ಯಾಸ್‌ ಸ್ಟೌವ್‌ ಬರ್ನರ್‌ ಸ್ವಚ್ಛಗೊಳಿಸಿ.

ಕೊಳೆಗಟ್ಟಿದ ಗ್ಯಾಸ್‌ ಸ್ಟೌವ್‌ ಬರ್ನರ್‌ ಕ್ಲೀನ್‌ ಮಾಡಲು ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ
ಸಾಂದರ್ಭಿಕ ಚಿತ್ರ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Feb 19, 2026 | 5:16 PM

Share

ಅಡುಗೆ ಮನೆಯಲ್ಲಿ ಹೆಚ್ಚು ಬಳಸಲ್ಪಡುವ ವಸ್ತು ಎಂದ್ರೆ ಅದು ಗ್ಯಾಸ್‌ ಸ್ಟೌವ್.‌ ಪ್ರತಿನಿತ್ಯ ಅಡುಗೆ ಮಾಡುವ ಕಾರಣ ಹಾಲು, ಎಣ್ಣೆ ಪದಾರ್ಥಗಳು ಬಿದ್ದು, ಗ್ಯಾಸ್‌ ಸ್ಟೌವ್‌ ಮತ್ತು ಬರ್ನರ್‌ (gas burner) ಮೇಲೆ ಕಲೆಗಳಾಗುತ್ತವೆ. ಇದನ್ನು ಪ್ರತಿನಿತ್ಯ ಕ್ಲೀನ್‌ ಮಾಡಿಲ್ಲ ಅಂದ್ರೆ ಆ ಜಿಡ್ಡು ಕಲೆಗಳು ಹಾಗೆಯೇ ಉಳಿದು ಬಿಡುತ್ತವೆ. ಹಾಗಾಗಿ ಸಾಮಾನ್ಯವಾಗಿ ಎಲ್ಲರೂ ನಿತ್ಯ ಸ್ಟೌವ್‌ ಸ್ವಚ್ಛಗೊಳಿಸುತ್ತಾರೆ. ಆದ್ರೆ ಗ್ಯಾಸ್‌ ಸ್ಟೌವ್‌ ಬರ್ನರ್‌ ಸ್ವಚ್ಛತೆಯ ಬಗ್ಗೆ ಗಮನ ಹರಿಸುವುದೇ ಇಲ್ಲ. ಹೀಗೆ ಅದನ್ನು ಕ್ಲೀನ್‌ ಮಾಡದಿದ್ದರೆ ಕಲೆ ಕೊಳೆಗಳು ಹಾಗೆಯೇ ಉಳಿಯುವುದು ಮಾತ್ರವಲ್ಲದೆ ಗ್ಯಾಸ್‌ ಸರಿಯಾಗಿ ಉರಿಯುವುದು ಕೂಡ ಇಲ್ಲ. ಆದ್ದರಿಂದ, ಬರ್ನರ್ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಈ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಗ್ಯಾಸ್‌ ಬರ್ನರ್‌ ಅನ್ನು ಸುಲಭವಾಗಿ ಕ್ಲೀನ್‌ ಮಾಡಬಹುದು.

ಗ್ಯಾಸ್ ಬರ್ನರ್ ಅನ್ನು ರೀತಿ ಸ್ವಚ್ಛಗೊಳಿಸಿ:

ಅಡಿಗೆ ಸೋಡಾ ಮತ್ತು ನಿಂಬೆ ರಸ: ಗ್ಯಾಸ್ ಬರ್ನರ್ ಸ್ವಚ್ಛಗೊಳಿಸಲು ನೀವು ಅಡಿಗೆ ಸೋಡಾ ಮತ್ತು ನಿಂಬೆ ರಸವನ್ನು ಬಳಸಬಹುದು. ಇದನ್ನು ಮಾಡಲು, ಒಂದು ಪಾತ್ರೆಗೆ ಉಗುರು ಬೆಚ್ಚಗಿನ ನೀರಿನಿಂದ ತುಂಬಿಸಿ, 2-3 ಚಮಚ ಅಡಿಗೆ ಸೋಡಾ ಸೇರಿಸಿ, ಮತ್ತು ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿ. ಬರ್ನರ್ ಅನ್ನು ಈ ದ್ರಾವಣದಲ್ಲಿ 30 ನಿಮಿಷದಿಂದ ಒಂದು ಗಂಟೆಯವರೆಗೆ ನೆನೆಸಿಡಿ. ಬಳಿಕ ಹಳೆಯ ಟೂತ್ ಬ್ರಷ್ ಅಥವಾ ಸ್ಕ್ರಬ್ಬರ್ ಬಳಸಿ ಬರ್ನರ್ ಅನ್ನು ಸ್ವಚ್ಛಗೊಳಿಸಿ.

ವಿನೆಗರ್ : ಬರ್ನರ್‌ಗಳಲ್ಲಿ ಅಂಟಿರುವ ಗ್ರೀಸ್ ಮತ್ತು ಕಲೆಗಳನ್ನು ಹೋಗಲಾಡಿಸಲು ವಿನೆಗರ್ ಸಹ ತುಂಬಾ ಸಹಕಾರಿ. ಇದಕ್ಕಾಗಿ ಸ್ಪ್ರೇ ಬಾಟಲಿಯಲ್ಲಿ ಬಿಳಿ ವಿನೆಗರ್ ಮತ್ತು ನೀರನ್ನು ಸಮಾನ ಭಾಗಗಳಲ್ಲಿ ಮಿಶ್ರಣ ಮಾಡಿ. ಈ ದ್ರಾವಣವನ್ನು ಬರ್ನರ್‌ಗಳ ಮೇಲೆ ಸಿಂಪಡಿಸಿ. ಕನಿಷ್ಠ 15-20 ನಿಮಿಷಗಳ ಕಾಲ ಅದನ್ನು ಬಿಡಿ ಮತ್ತು ನಂತರ ಸ್ಕ್ರಬ್ಬರ್‌ನಿಂದ ಸ್ವಚ್ಛಗೊಳಿಸಿ.

ಡಿಶ್‌ವಾಶ್‌ ಸೋಪ್ ಮತ್ತು ಬೆಚ್ಚಗಿನ ನೀರು: ಇದನ್ನು ಮಾಡಲು, ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಡಿಶ್ ವಾಶ್ ಸೋಪ್ ಸೇರಿಸಿ. ನಂತರ, ಬರ್ನರ್ ಅನ್ನು ಈ ದ್ರಾವಣದಲ್ಲಿ ಅದ್ದಿ 30 ನಿಮಿಷಗಳ ಕಾಲ ಬಿಡಿ. ಈಗ, ಅದನ್ನು ಸ್ಕ್ರಬ್ಬರ್‌ನಿಂದ ಸ್ವಚ್ಛಗೊಳಿಸಿ. ಇದರಿಂದ ಬರ್ನರ್ ಹೊಸದರಂತೆ ಹೊಳೆಯುತ್ತದೆ.

ಇದನ್ನೂ ಓದಿ: ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಸಿಂಪಲ್‌ ಮನೆಮದ್ದುಗಳನ್ನು ಪ್ರಯತ್ನಿಸಿ

ವಿನೆಗರ್ ಮತ್ತು ಬೇಕಿಂಗ್ ಸೋಡಾ : ಈ ಪರಿಹಾರವು ಭಾರೀ ಕೊಳೆ ಮತ್ತು ಮಸಿ ಕಲೆಗಳನ್ನು ಹೋಗಲಾಡಿಸಲು  ಉತ್ತಮವಾಗಿದೆ. ಇದಕ್ಕಾಗಿ ಒಂದು ಪಾತ್ರೆಗೆ ಸಮಾನ ಪ್ರಮಾಣದಲ್ಲಿ ನೀರು ಮತ್ತು ವಿನೆಗರ್‌ ಸೇರಿಸಿ. ಅದರಲ್ಲಿ ಬರ್ನರ್ ಹಾಕಿ ರಾತ್ರಿಯಿಡೀ ಅಥವಾ ಕನಿಷ್ಠ 2-3 ಗಂಟೆಗಳ ಕಾಲ ನೆನೆಸಿಡಿ. ಬಳಿಕ ಅದರ ಮೇಲೆ ಸ್ವಲ್ಪ ಅಡಿಗೆ ಸೋಡಾ ಸಿಂಪಡಿಸಿ ಮತ್ತು ಹಳೆಯ ಟೂತ್ ಬ್ರಷ್‌ನಿಂದ ಸ್ಕ್ರಬ್ ಮಾಡಿ. ಇದು ಈಸಿಯಾಗಿ ಕಲೆಗಳನ್ನು ನಿವಾರಿಸುತ್ತವೆ.

ನಿಂಬೆ ಮತ್ತು ಉಪ್ಪು: ಬರ್ನರ್ ಮೇಲೆ  ಗ್ರೀಸ್ ಕಲೆಗಳಿದ್ದರೆ,  ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಅದರ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ. ಅದನ್ನು ಬರ್ನರ್ ಮೇಲೆ ಉಜ್ಜಿಕೊಳ್ಳಿ. ಇದು ಕಲೆಗಳನ್ನು ನಿವಾರಿಸಿ, ಬರ್ನರ್‌ ಹೊಸದರಂತೆ ಹೊಳೆಯುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ