Personality Test: ನಿಮ್ಮ ಮೂಗಿನ ಆಕಾರ ನೋಡಿ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿ
ಸಂಖ್ಯಾಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಮಾತ್ರವಲ್ಲದೆ ವ್ಯಕ್ತಿತ್ವ ಪರೀಕ್ಷೆಯ ವಿಧಾನಗಳ ಮೂಲಕವು ನಮ್ಮ ಗುಪ್ತ ಗುಣ ಸ್ವಭಾವವನ್ನು ತಿಳಿಯಬಹುದು. ಪರ್ಸನಾಲಿಟಿ ಟೆಸ್ಟ್‌ಗಳಿಗೆ ಸಂಬಂಧಿಸಿದ ಇಂತಹ ಸಾಕಷ್ಟು ವಿಷಯಗಳು ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಮೂಗಿನ ಆಕಾರ ಯಾವ ರೀತಿ ಇದೆ ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ, ನಿಗೂಢ ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿ.

ವ್ಯಕ್ತಿತ್ವ ಪರೀಕ್ಷೆಯ (Personality Test) ವಿಧಾನಗಳ ಮೂಲಕ ನಮ್ಮ ನಿಗೂಢ ಚಿಂತನೆ, ನಡವಳಿಕೆ, ಭಾವನಾತ್ಮಕ ನಿಲುವು, ನಾವು ಅಂತರ್ಮುಖಿಯೋ, ಬಹಿರ್ಮುಖಿಯೋ ಇತ್ಯಾದಿ ನಮ್ಮ ನಿಗೂಢ ಗುಣ ಸ್ವಭಾವಗಳನ್ನು ನಾವೇ ತಿಳಿದುಕೊಳ್ಳಬಹುದು. ಕಣ್ಣು, ಮೂಗು, ಪಾದ, ಕಾಲ್ಬೆರಳು ಸೇರಿದಂತೆ ದೇಹಕಾರದ ಮೂಲಕ ವ್ಯಕ್ತಿಯ ವ್ಯಕ್ತಿತ್ವ ಪರೀಕ್ಷಿಸುವುದು ಸಹ ಪರ್ಸನಾಲಿಟಿ ಟೆಸ್ಟ್‌ನ ಒಂದು ಭಾಗವಾಗಿದೆ. ಇಂದು ಮೂಗಿನ ಆಕಾರದ (shape of nose) ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷೆ ಮಾಡಿ. ಪ್ರತಿಯೊಬ್ಬರ ಮೂಗಿನ ಆಕಾರವು ಭಿನ್ನವಾಗಿರುತ್ತವೆ. ನಿಮ್ಮ ಮೂಗಿನ ಆಕಾರ ಯಾವ ರೀತಿ ಎಂಬುದರ ಮೇಲೆ ನೀವು ಪ್ರಾಮಾಣಿಕ ವ್ಯಕ್ತಿಯೇ, ಭಾವನಾತ್ಮಕ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.
ಮೂಗಿನ ಆಕಾರವೇ ನಿಮ್ಮ ವ್ಯಕ್ತಿತ್ವದ ಒಳನೋಟವನ್ನು ಬಹಿರಂಗಪಡಿಸುತ್ತದೆ:
ರೋಮನ್ ಮೂಗು: ಈ ಆಕಾರದ ಮೂಗನ್ನು ಹೊಂದಿರುವ ಜನರು ಮುಕ್ತತೆಯನ್ನು ಗೌರವಿಸುತ್ತಾರೆ. ನೀವು ಈ ರೀತಿಯ ಮೂಗು ಹೊಂದಿದ್ದರೆ, ನೀವು ನಿಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಬಹಳ ಎಚ್ಚರ ವಹಿಸುತ್ತೀರಿ. ಬಲವಾದ ವ್ಯಕ್ತಿತ್ವವನ್ನು ಹೊಂದಿರುವ ನೀವು ಹೆಚ್ಚಿನ ಮಹತ್ವಕಾಂಕ್ಷೆಯನ್ನು ಹೊಂದಿದವರಾಗಿರುತ್ತೀರಿ. ಅಲ್ಲದೆ ಸವಾಲುಗಳನ್ನು ಸಲುಭವಾಗಿ ಸ್ವೀಕರಿಸುವ ನೀವು ನಾಯಕತ್ವದ ಗುಣವನ್ನು ಸಹ ಹೊಂದಿದ್ದೀರಿ. ನೀವು ನಿರ್ಧಾರ ತೆಗೆದುಕೊಳ್ಳಲು ಆತುರ ಪಡುವುದಿಲ್ಲ. ನೀವು ಪ್ರಾಮಾಣಿಕತೆ ಮತ್ತು ಸೂಕ್ಷ್ಮ ಸ್ವಭಾವದ ಸಮ್ಮಿಶ್ರಣದ ವ್ಯಕ್ತಿಯಾಗಿದ್ದೀರಿ.
ನುಬಿಯನ್ ಮೂಗು: ಈ ಆಕಾರದ ಮೂಗನ್ನು ನೀವು ಹೊಂದಿದ್ದರೆ, ನೀವು ಪ್ರಚೋದನೆಯ ಮೇಲೆ ವರ್ತಿಸುವ ಪ್ರವೃತ್ತಿಯನ್ನು ಹೊಂದಿದವರಾಗಿರುತ್ತೀರಿ. ನೀವು ಹೆಚ್ಚು ಯೋಚಿಸದೆ ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಅಲ್ಲದೆ ನೀವು ಆಶಾವಾದಿ, ಕುತೂಹಲಕಾರಿ ಮತ್ತು ಸುಲಭ ಸಂಪರ್ಕದ ವ್ಯಕ್ತಿಯಾಗಿರುತ್ತೀರಿ. ನೀವು ತುಂಬಾ ಮುಕ್ತ ಮನಸ್ಸಿನವರು, ಕುತೂಲಹವನ್ನು ಹೊಂದಿರುವವರು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಅಥವಾ ಫಲಿತಾಂಶವನ್ನು ತಲುಪಲು ಯಾವಾಗಲೂ ಹೊಸ ಸೃಜನಶೀಲ ಮಾರ್ಗಗಳನ್ನು ಹುಡುಕುವವರಾಗಿರುತ್ತೀರಿ. ಆಕರ್ಷಕ ಮತ್ತು ವರ್ಚಸ್ವಿ ವ್ಯಕ್ತಿತ್ವವನ್ನು ಹೊಂದಿರುವ ನೀವು ಯಾರ ಮೇಲೂ ಕೋಪ ಮಾಡಿಕೊಳ್ಳುವುದಿಲ್ಲ ಅಥವಾ ಕೂಗಾಡುವುದಿಲ್ಲ.
ಗ್ರೀಕ್ ಮೂಗು: ಗ್ರೀಕ್ ಅಥವಾ ನೇರ ಮೂಗು ಹೊಂದಿರುವವರು ಎಲ್ಲಕ್ಕಿಂತ ಹೆಚ್ಚಾಗಿ ಪ್ರಾಮಾಣಿಕತೆಯನ್ನು ಗೌರವಿಸುವವರಾಗಿರುತ್ತಾರೆ. ಮತ್ತು ಇವರು ಯಾವುದೇ ರೀತಿಯ ಮೋಸವನ್ನು ಇಷ್ಟಪಡುವುದಿಲ್ಲ. ಮತ್ತು ಇವರು ಬೂಟಾಟಿಕೆಯನ್ನು ದೃಢವಾಗಿ ವಿರೋಧಿಸುತ್ತಾರೆ. ಅಲ್ಲದೆ ಇವರು ಉನ್ನತ ಮಟ್ಟದ ಆಕರ್ಷಣೆ, ಸ್ಪಷ್ಟ ಚಿಂತನೆ, ಸಹಿಷ್ಣುತೆ, ತಾಳ್ಮೆ, ಕರುಣೆ, ಸರಳತೆ, ಪ್ರಾಮಾಣಿಕತೆ, ಶಿಸ್ತು, ವಿಶ್ವಾಸಾರ್ಹತೆಯನ್ನು ಹೊಂದಿರುತ್ತಾರೆ.
ತಲೆಕೆಳಗಾದ ಮೂಗು: ತಲೆಕೆಳಗಾದ ಅಥವಾ ಅಪ್‌ಟರ್ನ್‌ಡ್ ಆಕಾರದ ಮೂಗನ್ನು ಹೊಂದಿರುವವರು ಸ್ವಾಭಾವಿಕವಾಗಿ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ನಿರ್ಣಾಯಕ, ಸಂಘಟಿತ ಮತ್ತು ಪ್ರಾಮಾಣಿಕವಾಗಿರುವ ಈ ವ್ಯಕ್ತಿಗಳು ಇತರರಿಗೆ ಸ್ಫೂರ್ತಿ ನೀಡುವ ನೈಸರ್ಗಿಕ ನಾಯಕರು. ನಿಮ್ಮದು ಸಹ ಈ ರೀತಿಯ ಮೂಗಾಗಿದ್ದರೆ ನೀವು ನಿಮಗೆ ಅನುಕೂಲವಾಗುವಂತೆ ಸನ್ನಿವೇಶಗಳನ್ನು ರೂಪಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತೀರಿ ಮತ್ತು ನಿಮ್ಮ ಗುರಿಗಳನ್ನು ತಲುಪಲು ಸತ್ಯದ ಹಾದಿಯಲ್ಲೇ ನೀವು ನಡೆಯುತ್ತೀರಿ.
ಇದನ್ನೂ ಓದಿ: ಕಾಲ್ಬೆರಳಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ಗುಣ ಸ್ವಭಾವ
ಕೊಕ್ಕೆ ಮೂಗು: ಹಕ್ಕಿಯ ಕೊಕ್ಕಿನಂತಿರುವ ಮೂಗನ್ನು ನೀವು ಹೊಂದಿದ್ದರೆ, ನೀವು ನಂಬಿಕೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿದವರು ಎಂದರ್ಥ. ಜನ ನಿಮ್ಮ ಈ ನಿಜ ಸ್ವಭಾವವನ್ನು ಮೆಚ್ಚುತ್ತಾರೆ. ನಿಮ್ಮ ಈ ನೇರ ಸ್ವಭಾವ ಇತರರನ್ನು ಹೆಚ್ಚು ಮುಕ್ತ ಮತ್ತು ಪ್ರಾಮಾಣಿಕವಾಗಿರಲು ಪ್ರೇರೇಪಿಸುತ್ತದೆ.
ಚಪ್ಪಟೆ ಮೂಗು: ಚಪ್ಪಟೆಯಾದ ಮೂಗನ್ನು ಹೊಂದಿರುವವರು ನೀವು ಭಾವನೆಗಳ ಮೇಲೆ ಕಾರ್ಯನಿರ್ವಹಿಸುತ್ತೀರಿ. ಜೊತೆಗೆ ನೀವು ತುಂಬಾನೇ ಉತ್ಸಾಹಭರಿತರಾಗಿರುತ್ತೀರಿ. ಈ ಉತ್ಸಾಹವು ನಿಮ್ಮ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ನೀವು ಯಾವಾಗಲೂ ಹೊಸ ಅನುಭವಗಳನ್ನು ಕಲಿಯಲು ಸಿದ್ಧರಿರುತ್ತೀರಿ. ಇದು ನಿಮ್ಮನ್ನು ಪ್ರಾಮಾಣಿಕವಾಗಿ ಬದುಕಲು ಪ್ರೋತ್ಸಾಹಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








