AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Chocolate Day: ಚಾಕೊಲೇಟ್‌ ಪ್ರಿಯರೇ… ವಿಶ್ವ ಚಾಕೊಲೇಟ್‌ ದಿನದ ಆಚರಣೆಯ ಬಗ್ಗೆ ನಿಮ್ಗೊತ್ತಾ?

ಸಿಹಿಯಾದ, ರುಚಿಕರವಾದ ಚಾಕೊಲೇಟ್‌ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಚಾಕೊಲೇಟನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದು ಸಂತೋಷವನ್ನು ಹಂಚುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿ. ಇಂತಹ ಅತ್ಯದ್ಭುತ ಚಾಕೊಲೇಟ್‌ಗೂ ಒಂದು ದಿನವಿದೆ. ಹೌದು ಪ್ರತಿ ವರ್ಷ ಜುಲೈ 07 ರಂದು ವಿಶ್ವ ಚಾಕೊಲೇಟ್‌ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

World Chocolate Day: ಚಾಕೊಲೇಟ್‌ ಪ್ರಿಯರೇ… ವಿಶ್ವ ಚಾಕೊಲೇಟ್‌ ದಿನದ ಆಚರಣೆಯ ಬಗ್ಗೆ ನಿಮ್ಗೊತ್ತಾ?
ವಿಶ್ವ ಚಾಕೊಲೇಟ್‌ ದಿನImage Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 06, 2025 | 8:22 PM

Share

ಮಕ್ಕಳು ಮಾತ್ರವಲ್ಲ ಚಾಕೊಲೇಟನ್ನು (Chocolate) ದೊಡ್ಡವರು ಸಹ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಹೀಗೆ ಸಿಹಿಯಾದ, ರುಚಿಕರವಾಗ ಈ ಚಾಕೊಲೇಟ್‌ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಈ ಚಾಕೊಲೇಟ್‌ ಸಿಹಿ, ಖುಷಿಯನ್ನು ಹಂಚುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ ವಿಶೇಷವಾಗಿ ಡಾರ್ಕ್‌ ಚಾಕೊಲೇಟ್‌ ಹಲವು ಪ್ರಯೋಜನಗಳನ್ನು ಹೊಂದಿವೆ. ಹೌದು ಇದು ಮನಸ್ಥಿತಿಯನ್ನು ಸುಧಾರಿಸಲು, ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸಲು, ಹೃದಯದ ಆರೋಗ್ಯಕ್ಕೆ, ಒತ್ತಡವನ್ನು ನಿರ್ವಹಿಸಲು ಸಹಕಾರಿ. ಚಾಕೊಲೇಟ್‌ನ ಈ ಪ್ರಯೋಜನಗಳು ಮತ್ತು ಮಹತ್ವದ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಪ್ರತಿವರ್ಷ ಜುಲೈ 07 ರಂದು ವಿಶ್ವ ಚಾಕೊಲೇಟ್‌ (World Chocolate Day) ದಿನವನ್ನು ಆಚರಿಸಲಾಯಿತು. ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ನೋಡೋಣ ಬನ್ನಿ.

ವಿಶ್ವ ಚಾಕೊಲೇಟ್ ದಿನದ ಇತಿಹಾಸವೇನು?

ವಿಶ್ವ ಚಾಕೊಲೇಟ್ ದಿನವನ್ನು ಜುಲೈ 7, 2009 ರಂದು ಪ್ರಾರಂಭಿಸಲಾಯಿತು. 16 ನೇ ಶತಮಾನದಲ್ಲಿ ಅಂದ್ರೆ, ಜುಲೈ 07, 1550 ರಂದು  ಯುರೋಪಿನಲ್ಲಿ ಚಾಕೊಲೇಟನ್ನು ಪರಿಚಯಿಸಲಾಯಿತು ಎಂದು ನಂಬಲಾಗಿದೆ. ಈ ದಿನದ ನೆನಪಿಗಾಗಿ 2009 ರಲ್ಲಿ ವಿಶ್ವ ಚಾಕೊಲೇಟ್‌ ದಿನವನ್ನು ಆಚರಿಸಲು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಚಾಕೊಲೇಟ್ ದಿನದ ಮಹತ್ವವೇನು?

ಚಾಕೊಲೇಟನ್ನು  ಹೆಚ್ಚಾಗಿ ಸಂತೋಷ, ಖುಷಿ ಸಂದರ್ಭಗಳಲ್ಲಿ ಸಿಹಿಯ ರೂಪದಲ್ಲಿ ತಿನ್ನಲಾಗುತ್ತದೆ. ಜನರು ಪರಸ್ಪರ ಚಾಕೊಲೇಟ್‌ಗಳನ್ನು ನೀಡುವ ಮೂಲಕ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.  ಒಟ್ಟಾರೆಯಾಗಿ ಚಾಕೊಲೇಟ್‌ ಸಂತೋಷ ಮತ್ತು ಆಚರಣೆಯ ಸಂಕೇತವಾಗಿದೆ. ಇಷ್ಟು ಮಾತ್ರವಲ್ಲದೆ ಚಾಕೊಲೇಟ್‌ ಹಲವಾರು ಆರೋಗ್ಯ ಪ್ರಯೋಜನಗಳು ಸಹ ಹೊಂದಿವೆ.  ಹೌದು ಚಾಕೊಲೇಟ್ ತಿನ್ನುವುದರಿಂದ ಕೇವಲ ಒಂದಲ್ಲ, ಹಲವು ಪ್ರಯೋಜನಗಳಿವೆ. ಇದು  ಹೃದಯವನ್ನು ಆರೋಗ್ಯವಾಗಿರಿಸುತ್ತದೆ, ಅದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಅಲ್ಲದೆ  ಚಾಕೊಲೇಟ್ ತಿನ್ನುವುದರಿಂದ ಮನಸ್ಥಿತಿಯೂ ಸುಧಾರಿಸುತ್ತದೆ. ಚಾಕೊಲೇಟ್‌ನ ಈ ಪ್ರಯೋಜನಗಳು ಮತ್ತು ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ
Image
ಜುಲೈ 1 ರಂದೇ ಏಕೆ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ ಗೊತ್ತಾ?
Image
ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯವನ್ನು ಕಾಪಾಡಿಕೊಳ್ಳಿ
Image
ಭೂಮಿಯ ಶ್ವಾಸಕೋಶವೆಂದೇ ಕರೆಯಲ್ಪಡುವ ಮಳೆಕಾಡನ್ನು ಸಂರಕ್ಷಿಸೋಣ
Image
ಪರಿಸರ, ಆರೋಗ್ಯ ಎರಡಕ್ಕೂ ಪ್ರಯೋಜನಕಾರಿ ಸೈಕಲ್‌ ಸವಾರಿ

ಚಾಕೊಲೇಟ್ ತಿನ್ನುವುದರ ಪ್ರಯೋಜನಗಳು:

  • ಹೃದಯವು ಆರೋಗ್ಯಕರವಾಗಿರುತ್ತದೆ.
  • ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
  • ಚಾಕೊಲೇಟ್ ತಿನ್ನುವುದರಿಂದ ದಿನವಿಡೀ ಚಟುವಟಿಕೆಯಿಂದ ಇರಬಹುದು.
  • ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ.
  • ಚಾಕೊಲೇಟ್ ತಿನ್ನುವುದರಿಂದ ಒತ್ತಡ ಕಡಿಮೆಯಾಗುತ್ತದೆ.
  • ಚಾಕೊಲೇಟ್‌ನಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
  • ರಕ್ತದೊತ್ತಡವನ್ನು ನಿಯಂತ್ರಿಸಲು ಚಾಕೊಲೇಟ್ ಪ್ರಯೋಜನಕಾರಿ  .
  • ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ತೂಕವನ್ನು ಸಹ ಇಳಿಸಿಕೊಳ್ಳಬಹುದು.

ಇದನ್ನೂ ಓದಿ: ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ ಈ ಮೂರು ಆಹಾರಗಳು

ಚಾಕೊಲೇಟ್ ಯಾರು ತಿನ್ನಬಾರದು?

  • ಮಧುಮೇಹ ರೋಗಿಗಳು ಚಾಕೊಲೇಟ್ ತಿನ್ನುವುದನ್ನು ತಪ್ಪಿಸಬೇಕು.
  • ನೀವು ಆಮ್ಲೀಯತೆ ಮತ್ತು ಗ್ಯಾಸ್‌ನಿಂದ ತೊಂದರೆಗೊಳಗಾಗಿದ್ದರೆ ಚಾಕೊಲೇಟ್ ತಿನ್ನುವುದನ್ನು ತಪ್ಪಿಸಿ.
  • ಮೂತ್ರಪಿಂಡದ ಕಲ್ಲುಗಳ ಸಮಯದಲ್ಲಿ ಚಾಕೊಲೇಟ್ ತಿನ್ನಬಾರದು.
  • ಮೈಗ್ರೇನ್ ಸಮಸ್ಯೆ ಇದ್ದರೆ ಚಾಕೊಲೇಟ್‌ ತಿನ್ನಬಾರದು.
  • ಇದಲ್ಲದೆ ಬೆಕ್ಕು, ಹಾಗೂ ನಾಯಿಗಳಿಗೂ ಕೂಡಾ ಚಾಕೊಲೇಟ್‌ ತಿನ್ನಿಸಬಾರದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ