Personality Test: ಕಾಲ್ಬೆರಳಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ಗುಣ ಸ್ವಭಾವ
ವ್ಯಕ್ತಿಯ ಕಣ್ಣು, ಮೂಗಿನ ಆಕಾರ ಹೇಗಿದೆ, ಮುಖದ ಆಕಾರ ಹೇಗಿದೆ ಹೀಗೆ ದೇಹಕಾರದ ಮೂಲಕವೇ ಆತನ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ಇವುಗಳ ಮೂಲಕ ನೀವು ಸಹ ನಿಮ್ಮ ನಿಗೂಢ ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಕಾಲ್ಬೆರಳಿನ ಆಕಾರದ ಆಧಾರದ ಮೇಲೆ ನಿಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಮುಖದ ಆಕಾರ, ಮೂಗಿನ ಆಕಾರ, ಕೈಬೆರಳಿನ ಆಕಾರ ಸೇರಿದಂತೆ ದೇಹಕಾರ ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುತ್ತದೆ. ಕೆಲವರ ಮುಖ ದುಂಡಾಗಿದ್ದರೆ, ಇನ್ನೂ ಕೆಲವರು ಕೋಲು ಮುಖವನ್ನು ಹೊಂದಿರುತ್ತಾರೆ. ಕೆಲವರ ಮೂಗು ಸಣ್ಣ ಗಾತ್ರದಲ್ಲಿದ್ದರೆ, ಇನ್ನೂ ಕೆಲವರ ಮೂಗು ದೊಡ್ಡದಾಗಿರುತ್ತದೆ. ಹೀಗೆ ಈ ಭಿನ್ನ ವಿಭಿನ್ನ ದೇಹಕಾರದಿಂದಲೂ ನಾವು ನಮ್ಮ ವ್ಯಕ್ತಿತ್ವ (Personality), ರಹಸ್ಯ ಗುಣ ಸ್ವಭಾವ ಹೇಗಿದೆ ಎಂಬುದನ್ನು ತಿಳಿಯಬಹುದು. ನೀವು ಕೂಡ ಕಣ್ಣು, ಮೂಗು, ಕಿವಿಗಳ ಆಕಾರದಿಂದ ನಿಮ್ಮ ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ(Personality Test) ನಿಮ್ಮ ಕಾಲ್ಬೆರಳಿನ ಆಕಾರ ಹೇಗಿದೆ ಎಂಬುದರ ಮೇಲೆ ನೀವು ಎಂತಹ ವ್ಯಕ್ತಿ ಎಂಬುದನ್ನು ತಿಳಿಯಿರಿ.
ನಿಮ್ಮ ಕಾಲ್ಬೆರಳಿನ ಆಕಾರವೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ:
- ಈಜಿಫ್ಟ್ ಪಾದ: ಈ ಈಜ್ಟಿಫ್ಟ್ ಪಾದದ ಆಕಾರದಲ್ಲಿ ಹೆಬ್ಬೆರಳು ಅತೀ ಉದ್ದವಾಗಿರುತ್ತದೆ ಮತ್ತು ಉಳಿದ ಬೆರಳುಗಳು ಕ್ರಮವಾಗಿ ಅದಕ್ಕಿಂತ ಸಣ್ಣದಾಗಿರುತ್ತವೆ. ನಿಮ್ಮ ಕಾಲ್ಬೆರಳಿನ ಆಕಾರ ಈ ರೀತಿ ಇದ್ದರೆ, ನೀವು ಆಳವಾದ ಚಿಂತಕರೆಂದು ಅರ್ಥ. ಈ ರೀತಿಯ ಕಾಲ್ಬೆರಳಿನ ಆಕಾರವನ್ನು ಹೊಂದಿರುವ ಜನ ಆತ್ಮಾವಲೋಕನ ಮಾಡಿಕೊಳ್ಳುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಮತ್ತು ಇವರು ಹೆಚ್ಚು ಆಧ್ಯಾತ್ಮಿಕ ಮತ್ತು ತಾತ್ವಿಕ ಅನ್ವೇಷಣೆಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಜೊತೆಗೆ ಇವರು ಶಾಂತ ಸ್ವಭಾವದವರಾಗಿದ್ದು, ಇವರು ಪ್ರತಿಯೊಂದು ವಿಷಯವನ್ನೂ ಗೌರವಿಸುತ್ತಾರೆ.
- ರೋಮನ್ ಪಾದ: ಈ ಪಾದದ ಆಕಾರದಲ್ಲಿ ಹೆಬ್ಬೆರಳು ಸೇರಿ ಮೊದಲ ಎರಡು ಬೆರಳುಗಳು ಸಮಾನ ಉದ್ದವನ್ನು ಹೊಂದಿದ್ದರೆ, ಕೊನೆಯ ಎರಡು ಬೆರಳುಗಳು ಚಿಕ್ಕದಾಗಿರುತ್ತವೆ. ಈ ರೀತಿಯ ಕಾಲ್ಬೆರಳಿನ ಆಕಾರವನ್ನು ಹೊಂದಿರುವ ಜನ ಶಕ್ತಿ, ನಾಯಕತ್ವ ಗುಣ ಮತ್ತು ನ್ಯಾಯ ಪ್ರಜ್ಞೆಯನ್ನು ಹೊಂದಿರುತ್ತಾರೆ. ನ್ಯಾಯಯುತವಾಗಿ ವರ್ತಿಸುವ ಇವರು ತಮ್ಮ ದೃಢ ನಿಲುವಿನಲ್ಲಿ ನಿಲ್ಲಲು ಹೆದರುವುದೇ ಇಲ್ಲ. ಬಲವಾದ ಇಚ್ಛಾಶಕ್ತಿ ಮತ್ತು ದೃಢ ನಿಶ್ಚಯವನ್ನು ಹೊಂದಿರುವ ಇವರು ಹಠಮಾರಿಗಳೂ ಹೌದು.
- ಗ್ರೀಕ್ ಪಾದ: ಈ ಪಾದದ ಆಕಾರದಲ್ಲಿ ಎರಡನೇ ಬೆರಳು ಹೆಬ್ಬೆರಳಿಗಿಂತ ಉದ್ದವಾಗಿರುತ್ತದೆ. ಯಾರ ಕಾಲ್ಬೆರಳಿನ ಆಕಾರ ಈ ರೀತಿ ಇದೆಯೋ ಅವರು ಕ್ರಿಯಾತ್ಮಕ ಮತ್ತು ಶಕ್ತಿಯುತ ವ್ಯಕ್ತಿಗಳಾಗಿರುತ್ತದೆ. ಇವರು ಹೊಸ ವಿಚಾರಗಳನ್ನು ಕಲಿಯಲು, ಹೊಸ ಹೊಸ ಜನರನ್ನು ಭೇಟಿಯಾಗಲು, ಸವಾಲುಗಳನ್ನು ಸ್ವೀಕರಿಸಲು ಬಹಳ ಉತ್ಸುಕರಾಗಿರುತ್ತಾರೆ. ಇವರ ಅಪರಿಮಿತ ಶಕ್ತಿ ಮತ್ತು ಉತ್ಸಾಹ ಇವರನ್ನು ಅತ್ಯುತ್ತಮ ಪ್ರೇರಕ ವ್ಯಕ್ತಿ ಮತ್ತು ಸ್ಫೂರ್ತಿದಾಯಕ ಸ್ನೇಹಿತನನ್ನಾಗಿ ಮಾಡುತ್ತದೆ.
ಇದನ್ನೂ ಓದಿ: ಈ ಚಿತ್ರದಲ್ಲಿ ನಿಮ್ಮಿಷ್ಟದ ಪ್ರಾಣಿಯನ್ನು ಆಯ್ಕೆ ಮಾಡಿ, ನಿಮ್ಮ ರಹಸ್ಯ ಸ್ವಭಾವ ಹೇಗಿದೆಯಂತ ಪರೀಕ್ಷಿಸಿ
- ಜರ್ಮನ್ ಪಾದ: ಈ ಪಾದದ ಆಕಾರದಲ್ಲಿ ಹೆಬ್ಬೆರಳು ಉದ್ದವಾಗಿದ್ದು, ಉಳಿದ ಎಲ್ಲಾ ಬೆರೆಳುಗಳು ಸಮಾನವಾಗಿರುತ್ತವೆ. ಇಂತಹ ಬೆರಳುಗಳನ್ನು ಹೊಂದಿರುವವರು ಪ್ರಾಯೋಗಿಕತೆ ಮತ್ತು ವಿಶ್ವಾಸಾರ್ಹ ವ್ಯಕ್ತಿಗಳಾಗಿರುತ್ತಾರೆ. ಇವರು ಉತ್ತಮ ಸಮಸ್ಯೆ ನಿವಾರಕರಾಗಿದ್ದು, ಎಂತಹದ್ದೇ ಕಷ್ಟದ ಸಂದರ್ಭವನ್ನು ಸುಲಭವಾಗಿ ಎದುರಿಸುತ್ತಾರೆ. ಸಂಯಮವನ್ನು ಹೊಂದಿರುವ ಇವರು, ಇತರರೊಂದಿಗೆ ಒಮ್ಮೆ ನಂಬಿಕೆಯನ್ನು ಬೆಳೆಸಿಕೊಂಡರೆ, ಅವರಿಗೆ ನಿಷ್ಠಾವಂತರಾಗಿರುತ್ತಾರೆ.
- ಸೆಲ್ಟಿಕ್ ಪಾದ: ಈ ಪಾದದ ಆಕಾರದಲ್ಲಿ ಎರಡನೇ ಬೆರಳು ಹೆಬ್ಬೆರಳಿಗಿಂತ ಅತೀ ಉದ್ದವಾಗಿರುತ್ತದೆ. ಇಂತಹ ಬೆರಳುಗಳನ್ನು ಹೊಂದಿರುವವರು ಸೃಜನಶೀಲ ಮತ್ತು ಸ್ವತಂತ್ರ ವ್ಯಕ್ತಿಗಳೆಂದು ಅರ್ಥ. ಇವರು ಎಲ್ಲಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯವನ್ನು ಗೌರವಿಸುವ ಜನಗಳಾಗಿರುತ್ತಾರೆ. ಅಲ್ಲದೆ ಸೃಜನಶೀಲ ವ್ಯಕ್ತಿಗಳಾಗಿರುವ ಇವರು, ತಮ್ಮ ಪ್ರತ್ಯೇಕತೆ ಮತ್ತು ಸೃಜನಶೀಲ ವ್ಯಕ್ತಿತ್ವದಿಂದಲೇ ಇತರರನ್ನು ಆಕರ್ಷಿಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ