ಮಹಿಳೆಯರೇ… 35 ಆಯ್ತಾ? ಹಾಗಿದ್ರೆ ನಿಮ್ಮ ಊಟದ ಪ್ಲೇಟ್ ನಲ್ಲಿ ಇವು ಇರಲೇಬಾರದು!
35ರ ನಂತರ ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಹಾರದ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಪ್ರತಿನಿತ್ಯ ಸೇವನೆ ಮಾಡುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಆಹಾರದಿಂದ ಈ ರೀತಿ ಕಂಡುಬರುವ ಸಮಸ್ಯೆಗಳನ್ನು ತಡೆಗಟ್ಟಬಹುದು. ಹಾಗಾದರೆ ಯಾವ ಆಹಾರಗಳ ಸೇವನೆ ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ 35 ವರ್ಷ ವಯಸ್ಸಿನ ನಂತರ, ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ಹಾರ್ಮೋನುಗಳ ಬದಲಾವಣೆಗಳಾಗುತ್ತದೆ. ಚಯಾಪಚಯ ಕ್ರಿಯೆ ಕ್ರಮೇಣ ನಿಧಾನಗೊಳ್ಳುತ್ತದೆ, ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಹೆಚ್ಚಾಗಿಯೇ ಇರುತ್ತದೆ. ಈ ವಯಸ್ಸಿನ ನಂತರ, ಥೈರಾಯ್ಡ್ ಅಸಮತೋಲನ, ರಕ್ತಹೀನತೆ, ಮೂಳೆ ದೌರ್ಬಲ್ಯ, ವಿಟಮಿನ್ ಡಿ (Vitamin D) ಮತ್ತು ಬಿ 12 ಕೊರತೆಗಳು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಅನೇಕ ಮಹಿಳೆಯರಲ್ಲಿ ಪಿಸಿಓಎಸ್, ಅನಿಯಮಿತ ಮುಟ್ಟು ಅಥವಾ ಮುಟ್ಟು ನಿಲ್ಲುವ ರೋಗಲಕ್ಷಣಗಳು ಕಂಡುಬರುತ್ತದೆ. ಹಾಗಾಗಿ 35ರ ನಂತರ ಪ್ರತಿನಿತ್ಯ ಸೇವನೆ ಮಾಡುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಆಹಾರದಿಂದ ಈ ರೀತಿ ಕಂಡುಬರುವ ಸಮಸ್ಯೆಗಳನ್ನು ತಡೆಗಟ್ಟಬಹುದು. ಹಾಗಾದರೆ ಯಾವ ಆಹಾರಗಳ ಸೇವನೆ ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪ್ರತಿನಿತ್ಯ ಸೇವನೆ ಮಾಡುವ ಆಹಾರದಲ್ಲಿ ಏನೇನಿರಬೇಕು?
ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಎಚ್‌ಒಡಿ ಡಾ. ಎಲ್.ಎಚ್. ಘೋಟೇಕರ್ ಹೇಳುವ ಪ್ರಕಾರ, 35 ವರ್ಷದ ನಂತರ ಮಹಿಳೆಯರು ಸಮತೋಲಿತ ಮತ್ತು ಪೌಷ್ಟಿಕ- ಭರಿತ ಆಹಾರವನ್ನು ಸೇವನೆ ಮಾಡಬೇಕು. ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ಬೇಳೆ, ಪನೀರ್, ಮೊಟ್ಟೆ, ಸೋಯಾ ಮತ್ತು ಕಡಲೆ ಮುಂತಾದ ಪ್ರೋಟೀನ್ ಭರಿತ ಆಹಾರಗಳನ್ನು ದಿನನಿತ್ಯ ಸೇವನೆ ಮಾಡಬೇಕು. ಹಾಲು, ಮೊಸರು, ಎಳ್ಳು ಮತ್ತು ರಾಗಿಯಂತಹ ಕ್ಯಾಲ್ಸಿಯಂ- ಭರಿತ ಆಹಾರಗಳು ಕೂಡ ಮೂಳೆಗಳಿಗೆ ಅತ್ಯಗತ್ಯವಾಗಿದ್ದು ನಿಯಮಿತವಾಗಿ ಈ ರೀತಿಯ ಪದಾರ್ಥಗಳನ್ನು ಕೂಡ ಸೇವನೆ ಮಾಡಬೇಕು.
ಇದನ್ನೂ ಓದಿ: 35 ವರ್ಷದ ನಂತರ ಪ್ರೆಗ್ನನ್ಸಿಗೆ ಪ್ಲಾನ್ ಮಾಡುವವರು ಕಡ್ಡಾಯವಾಗಿ ಈ 3 ಪರೀಕ್ಷೆಗಳನ್ನು ಮಾಡಿಸಬೇಕು!
ಎಲೆ ತರಕಾರಿಗಳು, ದಾಳಿಂಬೆ, ಬೀಟ್ರೂಟ್ ಮತ್ತು ಬೆಲ್ಲ ಕಬ್ಬಿಣಾಂಶಕ್ಕೆ ಪ್ರಯೋಜನಕಾರಿ. ಧಾನ್ಯಗಳು, ಓಟ್ಸ್ ಮತ್ತು ಹಣ್ಣುಗಳು ಫೈಬರ್ ಅನ್ನು ಒದಗಿಸುತ್ತವೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಮೆಗಾ- 3 ಗಾಗಿ ವಾಲ್ನಟ್ಸ್ ಮತ್ತು ಅಗಸೆ ಬೀಜಗಳ ಸೇವನೆ ಮಾಡಬಹುದು. ವಿಟಮಿನ್ ಡಿ ಗಾಗಿ, ಸೂರ್ಯನ ಬೆಳಕನ್ನು ಪಡೆಯಿರಿ, ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಪೂರಕ ಮಾತ್ರೆಗಳ ಸೇವನೆ ಮಾಡಿ. ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ.
ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬಾರದು?
35ರ ನಂತರ ಹೆಚ್ಚು ಹುರಿದ, ಕರಿದ, ಸಂಸ್ಕರಿಸಿದ ಮತ್ತು ಜಂಕ್ ಫುಡ್ ಅನ್ನು ತಿನ್ನಬಾರದು. ಸಕ್ಕರೆ ಮತ್ತು ಉಪ್ಪಿನ ಸೇವನೆಯನ್ನು ಕಡಿಮೆ ಮಾಡಬೇಕು. ಏಕೆಂದರೆ ಇದು ತೂಕ ಹೆಚ್ಚಾಗುವುದು, ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಸಕ್ಕರೆ ಪಾನೀಯಗಳು ಮತ್ತು ಪ್ಯಾಕ್ ಮಾಡಿದ ತಿಂಡಿಗಳನ್ನು ತಪ್ಪಿಸುವುದು ಒಳ್ಳೆಯದು. ಆಗಾಗ ಹೊರಗೆ ತಿನ್ನುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕೇವಲ ಆಹಾರ ಪದ್ಧತಿ ಮಾತ್ರವಲ್ಲ, ಜೀವನಶೈಲಿಯೂ ಬಹಳ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ, ಚುರುಕಾದ ನಡಿಗೆ, ಒಳ್ಳೆಯ ನಿದ್ರೆ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದೆಲ್ಲದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




