Viral Video: ಇಂಥ ತಾಯಿಯೂ ಇರ್ತಾರಾ! ಮಗನಿಗಿಂತ ಸೀರೆಯೇ ಹೆಚ್ಚಾಯ್ತಾ?
ವೈರಲ್ ಆಗಿರುವ ವಿಡಿಯೋದ ಪ್ರಕಾರ, 8ನೇ ಮಹಡಿಯಲ್ಲಿ ವಾಸಿಸುತ್ತಿದ್ದ ಮಹಿಳೆಯ ಸೀರೆ 7ನೇ ಮಹಡಿಯ ಬಾಲ್ಕನಿಗೆ ಹಾರಿಹೋಗಿದೆ. ಅದನ್ನು ಮರಳಿ ಪಡೆಯಲು, ಅವರು ತಮ್ಮ ಮಗನನ್ನು ಮತ್ತೊಂದು ಸೀರೆಯ ಸಹಾಯದಿಂದ ನೇತು ಹಾಕಿದರು. ಅವರು ತಮ್ಮ ಮಗನ ಸೊಂಟಕ್ಕೆ ಸೀರೆಯನ್ನು ಕಟ್ಟಿ, ಅದನ್ನು ಬಿಗಿಯಾಗಿ ಹಿಡಿದು, ಮೂರನೇ ಮಹಡಿಯ ಬಾಲ್ಕನಿಯಲ್ಲಿ ನೇತು ಹಾಕಿದರು. ಗಾಳಿಯಲ್ಲಿ ನೇತಾಡುತ್ತಿದ್ದ ಹುಡುಗ, ಕೆಳಗಿನ ಬಾಲ್ಕನಿಯಲ್ಲಿ ಸಿಲುಕಿಕೊಂಡಿದ್ದ ಸೀರೆಯನ್ನು ಹಿಡಿದನು. ಇದರೊಂದಿಗೆ ತಾಯಿ ಹುಡುಗನನ್ನು ಮೇಲಕ್ಕೆ ಎಳೆದಳು.
ನವದೆಹಲಿ, ಫೆಬ್ರವರಿ 23: ನೂರಾರು ರೂಪಾಯಿ ಬೆಲೆಯ ಸೀರೆ ಕೆಳಗೆ ಬಿದ್ದಿದ್ದಕ್ಕೆ ತಾಯಿಯೊಬ್ಬಳು ತನ್ನ ಮಗನ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗುತ್ತಿದೆ. ಅಪಾರ್ಟ್ಮೆಂಟ್ನ 8ನೇ ಮಹಡಿಯಲ್ಲಿ ವಾಸಿಸುತ್ತಿದ್ದ ಮಹಿಳೆ ತನ್ನ ಬಾಲ್ಕನಿಯಿಂದ 7ನೇ ಮಹಡಿಯ ಬಾಲ್ಕನಿಗೆ ಬಿದ್ದಿದ್ದ ತನ್ನ ಸೀರೆಯನ್ನು ಪಡೆಯಲು ತನ್ನ ಮಗನಿಗೆ ಸೀರೆಯನ್ನು ಕಟ್ಟಿ ಕೆಳಗೆ ನೇತಾಡಿಸಿದ್ದಾಳೆ. ಆ ಬಾಲಕ ಆ ಸೀರೆಯನ್ನು ಹಿಡಿದುಕೊಂಡು ಕೆಳಗಿನ ಬಾಲ್ಕನಿಗೆ ಹೋಗಿ ಅಲ್ಲಿ ಬಿದ್ದಿದ್ದ ಅಮ್ಮನ ಸೀರೆಯನ್ನು ತೆಗೆದುಕೊಂಡು ಮತ್ತೆ ಸೀರೆಯಲ್ಲಿ ನೇತಾಡುತ್ತಾ ಮೇಲೆ ಬಂದಿದ್ದಾನೆ. ಅಪ್ಪಿತಪ್ಪಿ ಆ ಮಗುವೇನಾದರೂ ಕೈ ಜಾರಿ ಕೆಳಗೆ ಬಿದ್ದಿದ್ದರೆ ಬದುಕುವ ಸಾಧ್ಯತೆಯಂತೂ ಇರಲೇಇಲ್ಲ ಬಿಡಿ. ಹೀಗಾಗಿ, ಆ ತಾಯಿಗೆ ತನ್ನ ಮಗನ ಪ್ರಾಣಕ್ಕಿಂತ ಸೀರೆಯೇ ಮುಖ್ಯವಾಯಿತಾ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಈ ಘಟನೆಯನ್ನು ಎದುರಿನ ಅಪಾರ್ಟ್ಮೆಂಟ್ ನಿವಾಸಿಗಳು ಮೊಬೈಲಿನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಡಿಕೆ ವಿರುದ್ಧ ‘ಕೋಳಿ’ ಪೋಸ್ಟರ್ ಅಂಟಿಸಿ ಕಾಂಗ್ರೆಸ್ ವ್ಯಂಗ್ಯ
ಗೆಳೆಯ ವಾಸುಕಿ ವೈಭವ್ ಕಾನ್ಸರ್ಟ್ಗೆ ಟಿಕೆಟ್ ಖರೀದಿಸಿ ಬಂದ ಶೈನ್ ಶೆಟ್ಟಿ
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್ಒ ಸೇತುವೆ

