AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ನಿಮ್ಮ ಉಗುರಿನ ಆಕಾರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ

ಮೂಗಿನ ಆಕಾರ, ಕೂದಲಿನ ಆಕಾರ ಸೇರಿದಂತೆ, ದೇಹಕಾರ, ಆಪ್ಟಿಕಲ್‌ ಇಲ್ಯೂಷನ್‌ ಹೀಗೆ ವ್ಯಕ್ತಿತ್ವ ಪರೀಕ್ಷೆಯ ಹಲವು ವಿಧಾನಗಳಿವೆ. ಇವುಗಳ ಮುಖಾಂತರ ನಮ್ಮ ಗುಪ್ತ ಸಾಮರ್ಥ್ಯ, ದೌರ್ಬಲ್ಯ ಏನೆಂಬುದನ್ನು ನಾವು ತಿಳಿಯಬಹುದಾಗಿದೆ. ಅದೇ ರೀತಿ ಉಗುರಿನ ಆಕಾರದ ಮೂಲಕವೂ ನೀವು ನಿಮ್ಮ ಗುಪ್ತ ಗುಣ ಸ್ವಭಾವನ್ನು ಪರೀಕ್ಷೆ ಮಾಡಬಹುದಾಗಿದೆ. ಇಂದಿನ ಈ ವ್ಯಕ್ತಿತ್ವ ಪರೀಕ್ಷೆಯಲ್ಲಿ ನಿಮ್ಮ ಉಗುರಿನ ಆಕಾರ ಹೇಗಿದೆ ಎಂಬುದರ ಮೇಲೆ ನೀವು ನೇರ ಸ್ವಭಾವದ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿ.

Personality Test: ನಿಮ್ಮ ಉಗುರಿನ ಆಕಾರವೇ ತಿಳಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
ವ್ಯಕ್ತಿತ್ವ ಪರೀಕ್ಷೆImage Credit source: Jagran Josh
ಮಾಲಾಶ್ರೀ ಅಂಚನ್​
|

Updated on: Jul 23, 2025 | 3:45 PM

Share

ನಮ್ಮ ಸಾಮರ್ಥ್ಯ ಏನು, ದೌರ್ಬಲ್ಯ ಏನು, ನಾವು ಅಂತರ್ಮುಖಿಯೇ, ಬಹಿರ್ಮುಖಿಯೇ, ಭಾವನಾತ್ಮಕ ವ್ಯಕ್ತಿಯೇ ಹೀಗೆ ನಮಗೆಯೇ ತಿಳಿದಿರದ ನಮ್ಮ ಗುಪ್ತ ವ್ಯಕ್ತಿತ್ವದ (secret personality)  ಬಗ್ಗೆ ತಿಳಿಯಲು ವ್ಯಕ್ತಿತ್ವ ಪರೀಕ್ಷೆಗಳು ಬಹಳಷ್ಟು ಸಹಾಯ ಮಾಡುತ್ತವೆ. ಪರ್ಸನಾಲಿಟಿ ಟೆಸ್ಟ್‌ಗೆ ಸಂಬಂಧಿಸಿದ ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇವುಗಳ ಮೂಲಕ ನೀವು ಸಹ ನಿಮ್ಮ ವ್ಯಕ್ತಿತ್ವ ಒಳನೋಟವನ್ನು ಅನ್ವೇಷಣೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ (Personality Test) ನಿಮ್ಮ ಉಗುರಿನ ಆಕಾರ ಹೇಗಿದೆ ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ಪರೀಕ್ಷಿಸಿ.

ನಿಮ್ಮ ಉಗುರಿನ ಆಕಾರದಿಂದ ನಿಮ್ಮ ವ್ಯಕ್ತಿತ್ವ ತಿಳಿಯಿರಿ:

ಉದ್ದನೆಯ ಉಗುರು: ಲಾಂಗ್‌ ನೈಲ್‌ ಶೇಪ್‌ ಅಂದರೆ ಉದ್ದನೆಯ ಉಗುರು ನಿಮ್ಮದಾಗಿದ್ದರೆ ನೀವು ಶಾಂತ, ಸಂಯೋಜಿತ ಮತ್ತು ಸ್ವತಂತ್ರ ವ್ಯಕ್ತಿತ್ವವನ್ನು ಹೊಂದಿದವರೆಂದು ಅರ್ಥ. ನೀವು ಸೃಜನಶೀಲತೆ ಮತ್ತು ವೈಚಾರಿಕತೆಯ ಉತ್ತಮ ಸಮತೋಲನವನ್ನು ಸಹ ಹೊಂದಿದ್ದೀರಿ. ಸೂಕ್ಷ್ಮ ಸ್ವಭಾವ ಮತ್ತು ವಿವರಗಳ ಮೇಲೆ ಕೇಂದ್ರೀಕರಿಸುವ ನೀವು ಹೆಚ್ಚಾಗಿ ವಿಷಯಗಳ ಬಗ್ಗೆ ತಿಳಿಯಲು ಪ್ರಾಯೋಗಿಕ ವಿಧಾನವನ್ನು ಅನುಸರಿಸುತ್ತೀರಿ. ಅಲ್ಲದೆ ನೀವು ಯಾವುದೇ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಒಲವನ್ನು ತೋರುತ್ತೀರಿ. ಸರಳ ಸಾಮಾನ್ಯ ಸ್ವಭಾವದವರಾಗಿದ್ದರೂ ನೀವು ಕೆಲವೊಮ್ಮೆ ತಾಳ್ಮೆಯನ್ನು ಕಳೆದುಕೊಳ್ಳುತ್ತೀರಿ.

ಇದನ್ನೂ ಓದಿ: ಚಿಟ್ಟೆ, ಮನುಷ್ಯನ ಮುಖ; ಇದರಲ್ಲಿ ನಿಮಗೆ ಕಾಣಿಸುವ ಮೊದಲ ಅಂಶ ನಿಮ್ಮ ಆಂತರಿಕ ಶಕ್ತಿಯ ಬಗ್ಗೆ ತಿಳಿಸುತ್ತೆ

ಇದನ್ನೂ ಓದಿ
Image
ಚಿತ್ರದಲ್ಲಿ ಕಾಣಿಸುವ ಮೊದಲ ಅಂಶ ನಿಮ್ಮ ಆಂತರಿಕ ಶಕ್ತಿಯ ಬಗ್ಗೆ ತಿಳಿಸುತ್ತದೆ
Image
ನಿಮ್ಮ ಕೂದಲು ಸಹ ನಿಮ್ಮ ಗುಣ ಸ್ವಭಾವ ಹೇಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ
Image
ಮೂಗಿನ ಆಕಾರವೂ ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತದೆಯಂತೆ
Image
ಕಾಲ್ಬೆರಳಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ಗುಣ ಸ್ವಭಾವ

ಅಗಲವಾದ ಉಗುರು: ವೈಡ್‌ ನೈಲ್‌ ಶೇಪ್‌ ಅಂದರೆ ಅಗಲ ಆಕಾರದ ಉಗುರು ನಿಮ್ಮದಾಗಿದ್ದರೆ ನೀವು ನೇರ, ಮುಕ್ತ ಮನಸ್ಸಿನ ಮತ್ತು ಅಭಿವ್ಯಕ್ತಿಶೀಲ ವ್ಯಕ್ತಿಯಾಗಿರುತ್ತೀರಿ. ಉತ್ತಮ ನಾಯಕತ್ವ ಗುಣವನ್ನು ಹೊಂದಿರುವ ನೀವು ಸಮಯ ಮತ್ತು ಸಂಪನ್ಮೂಲಗಳನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ನಿಪುಣರಾಗಿರುತ್ತೀರಿ. ಅಲ್ಲದೆ ನೀವು ಸಂಬಂಧ ಮತ್ತು ಸಂವಹನವನ್ನು ನಿರ್ವಹಿಸುವಲ್ಲಿಯೂ ತುಂಬಾನೇ ನಿಪುಣರು. ಜೊತೆಗೆ ನೀವು ಏನೇ ಕೆಟ್ಟದ್ದು ನಡೆದರೂ ಅದರ ವಿರುದ್ಧ ಧ್ವನಿಯನ್ನು ಎತ್ತುತ್ತೀರಿ. ನೀವು ನಿಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಹೆದರುವುದಿಲ್ಲ, ಪ್ರಾಮಾಣಿಕವಾಗಿ, ಮುಕ್ತವಾಗಿ ನಿಮ್ಮ ಭಾವನೆಗಳು ಮತ್ತು ಆಲೋಚನೆಗಳನ್ನು ವ್ಯಕ್ತಪಡಿಸುತ್ತೀರಿ. ಒಟ್ಟಾರೆಯಾಗಿ ಹೇಳಬೇಕೆಂದರೆ ನೀವು ಇದ್ದ ವಿಷಯವನ್ನು ಇದ್ದ ಹಾಗೆ ಹೇಳುವ ಸ್ಟ್ರೈಟ್‌ ಫಾರ್ವರ್ಡ್‌ ವ್ಯಕ್ತಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ