Personality Test: ನಿಮ್ಮ ಕೂದಲು ಸಹ ನಿಮ್ಮ ಗುಣ ಸ್ವಭಾವ ಹೇಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ
ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಸೇರಿದಂತೆ ನೀವು ನಿಮ್ಮ ಕಾಲ್ಬೆರಳಿನ ಆಕಾರ ಹೇಗಿದೆ, ಪಾದ, ಮೂಗು, ಹುಬ್ಬು, ಕಣ್ಣಿನ ಆಕಾರ ಹೇಗಿದೆ ಎಂಬುದರ ಮೇಲೆ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಕೂದಲಿನ ಪ್ರಕಾರ ಹೇಗಿದೆ ಎಂಬುದರ ಮೇಲೆ ನಿಮ್ಮ ಗುಣಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಕೂದಲು (Hair) ಸೌಂದರ್ಯದ ಸಂಕೇತ ಅಂತಾನೇ ಹೇಳಬಹುದು. ಒಬ್ಬೊಬ್ಬರ ಕೂದಲು ಒಂದೊಂದು ರೀತಿ ಇರುತ್ತದೆ. ಕೆಲವರು ಗುಂಗುರು ಕೂದಲನ್ನು ಹೊಂದಿದ್ದರೆ, ಇನ್ನೂ ಕೆಲವರು ಸ್ಟ್ರೈಟ್, ವೇವಿ ಕೂದಲನ್ನು ಹೊಂದಿರುತ್ತಾರೆ. ಕೂದಲಿನ ಈ ಪ್ರಕಾರಗಳ ಮೂಲಕವು ವ್ಯಕ್ತಿಯ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಬಹುದಂತೆ. ಹೌದು ಮೂಗಿನ ಆಕಾರ, ಕಣ್ಣಿನ ಬಣ್ಣ, ಕೈ ಬೆರಳು, ಕಾಲ್ಬೆರಳಿನ ಆಕಾರದ ಮೂಲಕ ವ್ಯಕ್ತಿತ್ವವನ್ನು ಪರೀಕ್ಷಿಸುವಂತೆ ಕೂದಲಿನ ಪ್ರಕಾರದ ಮೂಲಕವೂ ವ್ಯಕ್ತಿತ್ವ (Personality Test) ಹೇಗಿದೆ ಎಂಬುದನ್ನು ತಿಳಿಯಬಹುದು. ಹಾಗಿದ್ರೆ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ನಿಮ್ಮ ಕೂದಲು ಹೇಗಿದೆ ಎಂಬುದನ್ನು ನೋಡಿ, ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ.
ನಿಮ್ಮ ಕೂದಲ ಆಕಾರದಿಂದ ವ್ಯಕ್ತಿತ್ವ ಪರೀಕ್ಷಿಸಿ:
ವೇವಿ ಹೇರ್: ನೀವು ಅಲೆಅಲೆಯಾದ ಕೂದಲನ್ನು ಹೊಂದಿದ್ದರೆ, ನೀವು ಏನೇ ಬಂದರೂ ಬರಲಿ ಎಂದು ಎಲ್ಲವನ್ನೂ ಸ್ವೀಕರಿಸುವ ಸ್ವಭಾವವನ್ನು ಹೊಂದಿರುವವರಾಗಿರುತ್ತೀರಿ. ಈ ನಿಮ್ಮ ಗುಣ ನೋವು ಮತ್ತು ವಿಷಾದಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ತುಂಬಾನೇ ಉತ್ಸಾಹಭರಿತ ಸ್ವಭಾವದವರಾದ ನೀವು ನಿಮ್ಮ ಯಶಸ್ಸಿಗೆ ಅಡ್ಡಿಯಾಗುವ ಅಂಶ ಅದು ಸಂಬಂಧವಾಗಿದ್ದರೂ ಸರಿ ಅದನ್ನು ನೀವು ತ್ಯಜಿಸುತ್ತೀರಿ. ಒಟ್ಟಾರೆಯಾಗಿ ನೀವು ಜೀವನದ ಬಗ್ಗೆ ತುಂಬಾನೇ ಉತ್ಸಾಹವನ್ನು ಹೊಂದಿದವರಾಗಿರುತ್ತೀರಿ.
ಗುಂಗುರು ಕೂದಲು: ನೀವು ಗುಂಗುರು ಕೂದಲನ್ನು ಹೊಂದಿದ್ದರೆ ನೀವು ಆಕರ್ಷಕ , ಕ್ರಿಯಾತ್ಮಕ, ಒಳನೋಟವುಳ್ಳ, ಭಾವೋದ್ರಿಕ್ತ, ಉತ್ಸಾಹಭರಿತ, ನಾಯಕ, ಅರ್ಥಗರ್ಭಿತ, ಅಭಿವ್ಯಕ್ತಿಶೀಲ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂದರ್ಥ. ಯೋಚನಾ ಶಕ್ತಿಯನ್ನು ಹೊಂದಿರುವ ನೀವು ನಿಮ್ಮ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುತ್ತೀರಿ. ಜೊತೆಗೆ ನೀವು ಯಾರಿಂದಲೂ ಸುಲಭವಾಗಿ ಪ್ರಭಾವಿತರಾಗುವುದಿಲ್ಲ. ಹಾಗೂ ಸುಲಭವಾಗಿ ಮೋಸ ಹೋಗುವುದಿಲ್ಲ. ಅಲ್ಲದೆ ನೀವು ಎರಡು ಮುಖದ ಜನರನ್ನು ಇಷ್ಟಪಡುವುದಿಲ್ಲ. ಯಾರಾದರೂ ನಿಮ್ಮನ್ನು ನೋಯಿಸಿದರೆ ನೀವು ಅವರನ್ನು ಕ್ಷಮಿಸಬಹುದು ಆದರೆ ಯಾರಾದರೂ ನಿಮ್ಮ ನಂಬಿಕೆಗೆ ಮೋಸ ಮಾಡಿದರೆ ಅಂತಹವರನ್ನು ನೀವು ಎಂದಿಗೂ ಕ್ಷಮಿಸುವುದಿಲ್ಲ.
ಇದನ್ನೂ ಓದಿ: ಮನುಷ್ಯ ದೂರ ಓಡ್ತಿದ್ದಾನಾ, ಹತ್ತಿರ ಬರುತ್ತಿದ್ದಾನಾ? ನಿಮ್ಮ ಆಲೋಚನಾ ಶಕ್ತಿ ಹೇಗಿದೆ ಎಂಬುದನ್ನು ತಿಳಿಸುವ ಚಿತ್ರವಿದು
ಸ್ಟ್ರೈಟ್ ಹೇರ್: ನೀವು ನೇರವಾದ ಕೂದಲನ್ನು ಹೊಂದಿದ್ದರೆ, ನೀವು ಪ್ರಾಯೋಗಿಕವಾಗಿ ಕನಸು ಕಾಣುವವರು ಎಂದರ್ಥ. ನೀವು ನಿಮ್ಮ ಗುರಿಗಳು ಏನೆಂಬುದನ್ನು ಮೊದಲೇ ಗುರುತಿಸುತ್ತೀರಿ ಮತ್ತು ಆ ಗುರಿಯನ್ನು ಸಾಧಿಸಲು ಅಡೆತಡೆಗಳನ್ನು ದಾಟಿ, ಸಲೀಸಾದ ಹಾದಿಗಾಗಿ ಹಾತೊರೆಯುತ್ತೀರಿ. ಅಲ್ಲದೆ ನಿಮ್ಮನ್ನು ಸಾಮಾನ್ಯವಾಗಿ ಸರಳ ಮತ್ತು ಪ್ರಾಮಾಣಿಕ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ನೀವು ನೇರವಾಗಿರುತ್ತೀರಿ. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ನೀವು ಗಂಭೀರ, ಹಠಮಾರಿ ಮತ್ತು ನಿಯಂತ್ರಣ ಸಾಧಿಸಲು ಬಯಸುವ ವ್ಯಕ್ತಿಯಂತೆ ಕಂಡರೂ ನೀವು ತುಂಬಾನೇ ಶಾಂತ ಸ್ವಭಾವದವರಾಗಿರುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








