AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Constipation: ಮಲಬದ್ಧತೆ ಸಮಸ್ಯೆಯಾ? ಯಾವ ಆಹಾರ ಸೂಕ್ತ? ಇಲ್ಲಿದೆ ಪತಂಜಲಿ ಸಲಹೆ

Baba Ramdev's Ayurvedic Remedies for Constipation: ಬಾಬಾ ರಾಮದೇವ್ ಅವರು ಮಲಬದ್ಧತೆ ಸಮಸ್ಯೆಗೆ ಆಯುರ್ವೇದದಲ್ಲಿ ಲಭ್ಯವಿರುವ ಪರಿಹಾರಗಳನ್ನು ತಿಳಿಸುತ್ತಾರೆ. ಮರಸೇಬು, ಮಾವು, ಪೇರಳೆ ಮುಂತಾದ ಹಣ್ಣುಗಳ ಸೇವನೆ, ಸಾಕಷ್ಟು ನೀರು ಕುಡಿಯುವುದು ಮತ್ತು ಫೈಬರ್ ಭರಿತ ಆಹಾರ ಸೇವಿಸುವುದು ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ. ನಿಯಮಿತ ವ್ಯಾಯಾಮ ಮತ್ತು ಯೋಗ ಕೂಡ ಮುಖ್ಯ ಎಂದು ಅವರು ಒತ್ತಿ ಹೇಳುತ್ತಾರೆ. ಮಲಬದ್ಧತೆಯನ್ನು ನಿರ್ಲಕ್ಷಿಸದೆ, ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆಯುವುದು ಅತ್ಯವಶ್ಯಕ.

Constipation: ಮಲಬದ್ಧತೆ ಸಮಸ್ಯೆಯಾ? ಯಾವ ಆಹಾರ ಸೂಕ್ತ? ಇಲ್ಲಿದೆ ಪತಂಜಲಿ ಸಲಹೆ
ಮಲಬದ್ಧತೆ ಪರಿಹಾರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 16, 2025 | 7:18 PM

Share

ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ (Baba Ramdev) ಅವರು ಬೃಹತ್ ಕಾರ್ಯಕ್ರಮಗಳ ಮೂಲಕ ಯೋಗ ಕಲಿಸುತ್ತಾರೆ. ಅಷ್ಟೇ ಅಲ್ಲದೆ, ಆಯುರ್ವೇದ ಗಿಡಮೂಲಿಕೆಗಳಿಂದ ರೋಗಗಳಿಗೆ ಚಿಕಿತ್ಸೆ ಕೂಡ ನೀಡುವ ಕೆಲಸ ಮಾಡುತ್ತಾ ಬಂದಿದ್ದಾರೆ. ಹೊಟ್ಟೆಕಟ್ಟುವುದು ಅಥವಾ ಮಲಬದ್ಧತೆ (constipation) ಸಮಸ್ಯೆಗೆ ಅವರು ಆಯುರ್ವೇದ ಪರಿಹಾರ ನೀಡುತ್ತಾರೆ. ನಿಮಗೆ ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದರೆ ಬಾಬಾ ರಾಮದೇವ್ ತಿಳಿಸುವ ವಿಧಾನವನ್ನು ಪ್ರಯತ್ನಿಸಬಹುದು. ದಿನದಲ್ಲಿ ಒಮ್ಮೆಯಾದರೂ ಮಲ ವಿಸರ್ಜನೆ ಮಾಡಲು ಆಗದೇ ಇದ್ದರೆ, ಅಥವಾ ಮಲ ಗಟ್ಟಿಗೊಂಡು ವಿಸರ್ಜನೆ ಮಾಡುವುದು ಕಷ್ಟ ಆಗುತ್ತಿದ್ದರೆ, ಅಂಥ ಸ್ಥಿತಿಯನ್ನು ಮಲಬದ್ಧತೆ ಎಂದು ಪರಿಗಣಿಸಬಹುದು. ಈ ಮಲಬದ್ಧತೆ ಒಂದು ಸಾಧಾರಣ ಆರೋಗ್ಯ ಸಮಸ್ಯೆ ಇರಬಹುದು ಎಂದು ಉಪೇಕ್ಷಿಸಲು ಆಗುವುದಿಲ್ಲ. ಮಲಬದ್ಧತೆಯು ಇಡೀ ದಿನ ಕಿರಿಕಿರಿ ತರಬಹುದು. ಮಲಬದ್ಧತೆಯ ಸಮಸ್ಯೆ ದೀರ್ಘಕಾಲ ಮುಂದುವರಿಯುತ್ತಿದೆ ಎಂದರೆ ಕೂಡಲೇ ಗಮನ ಹರಿಸುವ ಅವಶ್ಯಕತೆ ಇರುತ್ತದೆ.

ಆಹಾರದಲ್ಲಿ ಫೈಬರ್ ಕೊರತೆ ಇದ್ದರೆ, ಅಥವಾ ದಿನದಲ್ಲಿ ಸಾವಶ್ಯ ನೀರು ಕುಡಿಯದೇ ಇದ್ದರೆ, ಅಥವಾ ದೈಹಿಕ ಚಟುವಟಿಕೆ ಕಡಿಮೆ ಇದ್ದರೆ ಮಲಬದ್ಧತೆ ಸಮಸ್ಯೆ ಬರುವ ಸಾರ್ಧಯತೆ ಇರುತ್ತದೆ. ಒತ್ತಡದಿಂದಲೂ ಕೆಲವೊಮ್ಮೆ ಈ ಸಮಸ್ಯೆ ಬರಬಹುದು. ಇನ್ನೂ ಕೆಲ ಔಷಧಗಳೂ ಕೂಡ ಸೈಡ್ ಎಫೆಕ್ಟ್ಸ್ ಆಗಿ ಮಲಬದ್ಧತೆ ತರಬಹುದು. ಈ ಸಮಸ್ಯೆ ನಿವಾರಣೆಗೆ ಪತಂಜಲಿ ಆಯುರ್ವೇದ ಸಂಸ್ಥೆ ಕೆಲ ಪರಿಹಾರಗಳನ್ನು ಹೊಂದಿದೆ. ಮಲಬದ್ಧತೆ ನಿಯಂತ್ರಿಸಲು ಬಾಬಾ ರಾಮದೇವ್ ಕೆಲ ಅಮೂಲ್ಯ ಸಲಹೆಗಳನ್ನೂ ನೀಡಿದ್ದಾರೆ.

ಇದನ್ನೂ ಓದಿ: ದೇಹದಲ್ಲಿ ವಾತ ದೋಷ ಹೆಚ್ಚಲು ಏನು ಕಾರಣ? ಅದರ ನಿಯಂತ್ರಣ ಹೇಗೆ? ಇಲ್ಲಿದೆ ಪತಂಜಲಿ ಮಾಹಿತಿ

ಮಲಬದ್ಧತೆಯನ್ನು ನಿರ್ಲಕ್ಷಿಸಬೇಡಿ

ಮಲಬದ್ಧತೆಯನ್ನು ಸಾಮಾನ್ಯ ಸಮಸ್ಯೆ ಎಂದು ಪರಿಗಣಿಸಿ ನಿರ್ಲಕ್ಷಿಸಬಾರದು. ದೀರ್ಘಕಾಲದವರೆಗೆ ಮಲಬದ್ಧತೆ ಇದ್ದರೆ ಅದು ಮೂಲವ್ಯಾಧಿಗೆ ಕಾರಣವಾಗಬಹುದು ಮತ್ತು ಕರುಳನ್ನು ಹಾನಿಗೊಳಿಸಬಹುದು. ಈ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ತೊಡೆದುಹಾಕಲು ಪ್ರಯತ್ನಿಸಬೇಕು. ಇದಕ್ಕಾಗಿ, ಫೈಬರ್ ಭರಿತ ಆಹಾರವನ್ನು ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು, ನಿಯಮಿತ ವ್ಯಾಯಾಮ ಅಥವಾ ಯೋಗ ಮಾಡಲಾಗುವ ರೀತಿಯಲ್ಲಿ ಜೀವನಶೈಲಿ ಬದಲಾಯಿಸಿಕೊಳ್ಳುವುದು ಅತ್ಯವಶ್ಯ.

ಬಾಬಾ ರಾಮದೇವ್ ಇನ್ಸ್​ಟ ಪೋಸ್ಟ್

View this post on Instagram

A post shared by Swami Ramdev (@swaamiramdev)

ಮಲಬದ್ಧತೆ ನಿವಾರಿಸಬಲ್ಲುದಾ ಮರಸೇಬು ಹಣ್ಣು?

ಪಿಯರ್ಸ್ ಅಥವಾ ಮರಸೇಬು ಹಣ್ಣು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಬಗೆಹರಿಸಬಹುದು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ, ಪ್ರತಿದಿನ ಒಂದು ಲೋಟ ಜ್ಯೂಸ್ ರೀತಿಯಲ್ಲೋ ಅಥವಾ ಕಚ್ಚಿ ತಿನ್ನುವ ಮೂಲಕವೋ ಮರಸೇಬು ಹಣ್ಣನ್ನು ಸೇವಿಸಬೇಕು. ಇದರಿಂದ ಅರ್ಧದಿಂದ ಒಂದು ಗಂಟೆಯೊಳಗೆ ಹೊಟ್ಟೆ ಕ್ಲಿಯರ್ ಆಗುತ್ತದೆ.

ಮಾವು ಮತ್ತು ಪೇರಳೆ ಹಣ್ಣು ಸೇವನೆಯೂ ಸಹಾಯ ಮಾಡುತ್ತದಾ?

ಮರಸೇಬು ಮಾತ್ರವಲ್ಲ, ಮಾವಿನ ಹಣ್ಣು ಮತ್ತು ಪೇರಳೆ ಹಣ್ಣು ಕೂಡ ಮಲಬದ್ಧತೆ ನಿವಾರಣೆ ಪ್ರಯತ್ನದಲ್ಲಿ ಸಹಾಯವಾಗುತ್ತದೆ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ದೇಸೀ ಮಾವಿನ ಹಣ್ಣು ಇನ್ನೂ ಹೆಚ್ಚಿನ ಪ್ರಯೋಜನಕಾರಿಯಂತೆ. ಆದರೆ ಮಧುಮೇಹ ಇರುವವರು ಮಾವು ತಿನ್ನಬಾರದು ಎಂಬುದು ಗಮನದಲ್ಲಿರಲಿ. ಇನ್ನು, ಸೀಬೆ ಅಥವಾ ಪೇರಳೆ ಹಣ್ಣು ಕೂಡ ಉಪಯುಕ್ತ.

ಇದನ್ನೂ ಓದಿ: ಪತಂಜಲಿಯ ಈ ಔಷಧಿಯಿಂದ ಸಂಧಿವಾತವನ್ನು ನಿಯಂತ್ರಿಸಬಹುದು; ಸಂಶೋಧನೆಯಿಂದ ಬಹಿರಂಗ

ಮರಸೇಬಿನಲ್ಲಿ ಅದೆಂಥ ಸತ್ವ ಇರುತ್ತೆ?

ಹೆಲ್ತ್ ಲೈನ್​ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಮಧ್ಯಮ ಗಾತ್ರದ ಮರಸೇಬು ಅಥವಾ ಪಿಯರ್ಸ್ ಹಣ್ಣು ತಿನ್ನುವುದರಿಂದ 1 ಗ್ರಾಂ ಪ್ರೋಟೀನ್ ಮತ್ತು 101 ಕ್ಯಾಲೋರಿಗಳು ದೊರೆಯುತ್ತವೆ. ಇದಲ್ಲದೆ, ದೈನಂದಿನ ವಿಟಮಿನ್ ಸಿ ಅಗತ್ಯತೆಯಲ್ಲಿ ಶೇಕಡಾ 9 ರಷ್ಟು ಇದರಲ್ಲಿ ಕಂಡುಬರುತ್ತದೆ. ಇದು ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಕಾಪರ್ ಅಂಶಗಳಿಗೆ ಉತ್ತಮ ಮೂಲವಾಗಿದೆ. ಪಿಯರ್ಸ್ ಹಣ್ಣು ತಿನ್ನುವುದರಿಂದ 6 ಗ್ರಾಂ ಫೈಬರ್ ಸಿಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸರಿಯಾಗಿಡಲು ಸಹಾಯ ಮಾಡುತ್ತದೆ ಮತ್ತು ಆದ್ದರಿಂದ ಇದು ಮಲಬದ್ಧತೆಗೆ ಪ್ರಯೋಜನಕಾರಿ ಹಣ್ಣು. ರಾಷ್ಟ್ರೀಯ ಔಷಧ ಗ್ರಂಥಾಲಯದಲ್ಲಿ ನೀಡಲಾದ ಮಾಹಿತಿಯ ಪ್ರಕಾರವೂ ಈ ಮರಸೇಬು ಹಣ್ಣು ಮಲಬದ್ಧತೆಯನ್ನು ನಿವಾರಿಸಲು ಉಪಯುಕ್ತವಾಗಿದೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ