ಪತಂಜಲಿಯ ಈ ಔಷಧಿಯಿಂದ ಸಂಧಿವಾತವನ್ನು ನಿಯಂತ್ರಿಸಬಹುದು; ಸಂಶೋಧನೆಯಿಂದ ಬಹಿರಂಗ
ಇತ್ತೀಚಿನ ದಿನಗಳಲ್ಲಿ ಸಂಧಿವಾತ ಸಮಸ್ಯೆ ಸಾಮಾನ್ಯವಾಗುತ್ತಿದೆ. ಆದರೆ ಈ ರೀತಿಯ ಸಮಸ್ಯೆ ಬಂದಾಗ ಚಿಂತಿಸುವ ಅಗತ್ಯವಿಲ್ಲ ಏಕೆಂದರೆ ಈ ರೋಗವನ್ನು ನಿಯಂತ್ರಿಸಬಹುದು. ಆಯುರ್ವೇದದಲ್ಲಿ ಇದಕ್ಕೆ ಸೂಕ್ತ ಔಷಧಿಗಳಿವೆ. ಅದರಲ್ಲಿಯೂ ಪತಂಜಲಿಯಿಂದ ಈ ಕಾಯಿಲೆಗೆ ಔಷಧವಿದೆ. ಮಾತ್ರವಲ್ಲ ಈ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಪತಂಜಲಿಯ ಆರ್ಥೋಗ್ರಿಟ್ ಎಂಬ ಔಷಧವು ಈ ರೋಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂಬುದನ್ನು ಬಹಿರಂಗಪಡಿಸಿದೆ.

ಸ್ವಲ್ಪ ವರ್ಷಗಳ ಹಿಂದೆ ಸಂಧಿವಾತ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಈಗ ಈ ಆರೋಗ್ಯ ಸಮಸ್ಯೆ ಎಲ್ಲರಲ್ಲಿಯೂ ಸಾಮಾನ್ಯವಾಗಿದೆ. ಹಿರಿಯರು, ಕಿರಿಯರು ಎಂಬ ಭೇದ- ಭಾವವಿಲ್ಲದೆ ಎಲ್ಲರನ್ನೂ ಬಾಧಿಸುತ್ತಿದೆ. ಆದರೆ ಇವುಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಏಕೆಂದರೆ ಆಯುರ್ವೇದದಲ್ಲಿ ಈ ರೋಗವನ್ನು ತಡೆಗಟ್ಟಲು ಸೂಕ್ತವಾದ ಮದ್ದನ್ನು ನೀಡಲಾಗುತ್ತದೆ. ಅದರಲ್ಲಿಯೂ ಸುಲಭವಾಗಿ ಎಲ್ಲ ಕಡೆಗಳಲ್ಲಿಯೂ ಸಿಗುವ ಪತಂಜಲಿ ಆರ್ಥೋಗ್ರಿಟ್ ಔಷಧವು (Patanjali Orthogrit Tablet) ಈ ರೋಗವನ್ನು ನಿಯಂತ್ರಿಸಬಹುದು. ಎಲ್ಸೆವಿಯರ್ ಅವರ ಅಂತರಾಷ್ಟ್ರೀಯ ಸಂಶೋಧನಾ ಜರ್ನಲ್ ಫಾರ್ಮಾಕೊಲಾಜಿಕಲ್ ರಿಸರ್ಚ್ ರಿಪೋರ್ಟ್ಸ್‌ನಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ, ಸಂಧಿವಾತದಿಂದ ಉಂಟಾಗುವ ಉರಿಯೂತವನ್ನು ಕಡಿಮೆ ಮಾಡಲು, ಕಾರ್ಟಿಲೆಜ್ ಸವೆತವನ್ನು ತಡೆಗಟ್ಟಲು ಆರ್ಥೋಗ್ರಿಟ್ ಮಾತ್ರೆ ಬಹಳ ಪರಿಣಾಮಕಾರಿ ಎಂದು ತೋರಿಸಿಕೊಟ್ಟಿದೆ.
ಇಂದಿನ ಕಾಲದಲ್ಲಿ, ಮೊಣಕಾಲು ನೋವಿನಿಂದ ಬಳಲುತ್ತಿರುವ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪತಂಜಲಿಯ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ. ಪ್ರಸ್ತುತ ವೈದ್ಯಕೀಯ ಪದ್ಧತಿಗಳು ಮೂಲ ಕಾರಣದ ಮೇಲೆ ಅಲ್ಲ, ರೋಗಲಕ್ಷಣಗಳ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಆದರೆ ಆಯುರ್ವೇದದಲ್ಲಿ, ಪ್ರತಿಯೊಂದು ಕಾಯಿಲೆಯ ಮೂಲ ಕಾರಣವನ್ನು ಗುರುತಿಸಿ ಪರಿಹಾರ ನೀಡಲಾಗುತ್ತದೆ. ಅದಕ್ಕೆ ಪೂರಕವಾಗಿ ತಯಾರಾದ ಈ ಆರ್ಥೋಗ್ರಿಟ್ ಮಾತ್ರೆ ಕೂಡ ಆಯುರ್ವೇದ ಮತ್ತು ಆಧುನಿಕ ವಿಜ್ಞಾನದ ಮಿಶ್ರಣವಾಗಿದ್ದು, ಇದು ಸಂಧಿವಾತದಂತಹ ಗುಣಪಡಿಸಲಾಗದ ಕಾಯಿಲೆಗಳನ್ನು ಬುಡದಿಂದಲೇ ತೆಗೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ.
ನೈಸರ್ಗಿಕ ಗಿಡಮೂಲಿಕೆಗಳ ಮಿಶ್ರಣ
ಆಚಾರ್ಯ ಬಾಲಕೃಷ್ಣ ಅವರು ನೀಡಿರುವ ಮಾಹಿತಿ ಅನುಸಾರ, ಆರ್ಥೋಗ್ರಿಟ್ ಔಷಧವನ್ನು ವಾಚಾ, ಮೋಥ, ದಾರುಹಲ್ದಿ, ಪಿಪ್ಪಲಿಮೂಲ, ಅಶ್ವಗಂಧ, ನಿರ್ಗುಂಡಿ, ಪುನರ್ನವ ಮುಂತಾದ ನೈಸರ್ಗಿಕ ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಇವು ಸನಾತನ ಸಂಸ್ಕೃತಿಯಲ್ಲಿ ಪ್ರಾಚೀನ ಕಾಲದಿಂದಲೂ ಕೀಲು ನೋವು, ಊತ ಇತ್ಯಾದಿಗಳಿಗೆ ಪ್ರಯೋಜನಕಾರಿ ಎಂಬುದು ಕಂಡುಬಂದಿದೆ. ಪತಂಜಲಿ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಅನುರಾಗ್ ವರ್ಷ್ಣಿ, ಅವರ ಪ್ರಕಾರ, ಸಂಧಿವಾತವು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತಿರುವ ದೀರ್ಘಕಾಲದ ಕಾಯಿಲೆಯಾಗಿದೆ ಎಂದು ಹೇಳಿದರು. ಮಾತ್ರವಲ್ಲ ಸಂಶೋಧನೆಯಲ್ಲಿ 3D ಸ್ಪೆರಾಯ್ಡ್‌ಗಳು ಮತ್ತು ಸಿ. ಎಲೆಗನ್ಸ್‌ಗಳಲ್ಲಿ ಮಾನವ ಕಾರ್ಟಿಲೆಜ್ ಕೋಶಗಳನ್ನು ಅಧ್ಯಯನ ಮಾಡಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Patanjali ದಿವ್ಯ ಶ್ವಾಸಾರಿ ವಟಿ: ಪ್ರಯೋಜನಗಳು, ಡೋಸೇಜ್ ಮತ್ತು ಮುನ್ನೆಚ್ಚರಿಕೆಗಳು
ಈ ಔಷಧ ಕಾರ್ಟಿಲೆಜ್ ದುರ್ಬಲಗೊಳಿಸುವುದನ್ನು ತಡೆಯುತ್ತದೆ
ಆರ್ಥೋಗ್ರಿಟ್ ಔಷಧವು ಕಾರ್ಟಿಲೆಜ್ ಅನ್ನು ದುರ್ಬಲಗೊಳಿಸದಂತೆ ರಕ್ಷಿಸುತ್ತದೆ. ಮಾತ್ರವಲ್ಲ, ಮಾನವ ಕಾರ್ಟಿಲೆಜ್ ಕೋಶಗಳನ್ನು ಉರಿಯೂತದ ಅಡ್ಡಪರಿಣಾಮಗಳಿಂದ ರಕ್ಷಿಸಿಸುತ್ತದೆ, ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳನ್ನು (ROS) ಕಡಿಮೆ ಮಾಡುತ್ತದೆ ಮತ್ತು IL-6, PEG-2, ಮತ್ತು IL-1β ನಂತಹ ಉರಿಯೂತದ ಗುರುತುಗಳ ಮಟ್ಟವನ್ನು ಕಡಿಮೆ ಮಾಡುತ್ತದೆ, ಮಾತ್ರವಲ್ಲ ಅದರ ಜೊತೆಗೆ JAK2, COX2, MMP1, MMP3, ಮತ್ತು ADAMTS-4 ನ ಜೀನ್ ಅಭಿವ್ಯಕ್ತಿಗಳನ್ನು ಸುಧಾರಿಸುತ್ತದೆ. ಔಷಧದ ಮೇಲಿನ ಸಂಶೋಧನೆಯು ಆರ್ಥೋಗ್ರಿಟ್ ಸಂಧಿವಾತದ ಲಕ್ಷಣಗಳನ್ನು ನಿವಾರಿಸುವುದಲ್ಲದೆ, ರೋಗದ ಪ್ರಗತಿಯನ್ನು ತಡೆಗಟ್ಟುವಲ್ಲಿಯೂ ಪರಿಣಾಮಕಾರಿಯಾಗಿದೆ ಎಂದು ಹೇಳಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:24 pm, Thu, 3 July 25








