ಚೇಳು ಕಚ್ಚಿದ್ರೆ ಮೊದಲು ಏನು ಮಾಡಬೇಕು? ಆಯುರ್ವೇದ ವೈದ್ಯರು ಹೀಗೆ ಹೇಳುತ್ತಾರೆ
ಚೇಳು ಕಚ್ಚಿದ್ರೆ ಭಯಪಡುವ ಅಗತ್ಯ ಇಲ್ಲ. ಆ ಚೇಳಿನ ವಿಷದಿಂದ ಅಪಾಯ ಇರುವುದು ಹೌದು, ಆದರೆ ಆದ್ದರಿಂದ ಪ್ಯಾನಿಕ್ ಆಗುವ ಅವಶ್ಯಕತೆ ಇಲ್ಲ, ಚೇಳು ಕಚ್ಚಿದ ನಂತರ ಏನು ಮಾಡಬೇಕು. ಯಾವೆಲ್ಲ ಮನೆಮದ್ದುಗಳನ್ನು ಬಳಸಬಹುದು. ಹೇಗೆಲ್ಲ ಇದಕ್ಕೆ ಮದ್ದು ನೀಡಲಾಗತ್ತದೆ ಎಂಬುದನ್ನು ಹಿರಿಯ ಆಯುರ್ವೇದಾಚಾರ್ಯ ಡಾ. ಪ್ರತಾಪ್ ಚೌಹಾಣ್ ಹೇಳಿದ್ದಾರೆ. ಈ ಬಗ್ಗೆ ಇಲ್ಲಿದೆ ನೋಡಿ.

ಕೆಲವೊಂದು ವಿಷಕಾರಿ ಪ್ರಾಣಿಗಳು ಮನೆಯ ಸುತ್ತಮುತ್ತ ಬರುವುದು ಸಹಜ, ಆದರೆ ಈ ವಿಷಕಾರಿ ಪ್ರಾಣಿಗಳು ಕಚ್ಚಿದ್ರೆ ಜೀವ ಹೋಗುವುದು ಖಂಡಿತ, ಆದರೆ ಅದು ಕಚ್ಚಿದ ಕೆಲವು ಕ್ಷಣದ ವರೆಗೆ ಕಚ್ಚಿಸಿಕೊಂಡ ವ್ಯಕ್ತಿಯ ದೇಹ ಆ ವಿಷವನ್ನು ತಡೆದುಕೊಳ್ಳುವ ಶಕ್ತಿ ಇರುತ್ತದೆ. ಆ ಸಮಯದಲ್ಲಿ ಆ ವಿಷವನ್ನು ತಕ್ಷಣದಲ್ಲಿ ತೆಗೆದು ಹಾಕುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಹೆಚ್ಚಾಗಿ ಈ ಮಳೆಗಾಲದಲ್ಲಿ ಚೇಳುಗಳು (scorpion) ಮನೆಯ ಸುತ್ತ ಓಡಾಡುತ್ತದೆ. ಒಂದು ವೇಳೆ ಚೇಳು ಕಚ್ಚಿದ್ರೆ ಏನು ಮಾಡಬೇಕು. ಅದರಿಂದ ಮನುಷ್ಯನ ದೇಹಕ್ಕೆ ಸೇರಿದ ವಿಷವನ್ನು ಹೇಗೆ ತೆಗೆಯುವುದು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಚೇಳಿನ ವಿಷ ಬೇಗ ದೇಹಕ್ಕೆ ಸೇರುವುದು, ಆ ಕ್ಷಣದಲ್ಲಿ ವಿಷವನ್ನು ಹೇಗೆ ತೆಗೆಯಬೇಕು ಎಂಬ ಜ್ಞಾನ ಪ್ರತಿಯೊಬ್ಬರಿಗೂ ಇರಬೇಕು.
ಎನ್‌ಡಿಟಿವಿ ಜೊತೆ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಯುರ್ವೇದದ ನಿರ್ದೇಶಕ ಮತ್ತು ಹಿರಿಯ ಆಯುರ್ವೇದಾಚಾರ್ಯ ಡಾ. ಪ್ರತಾಪ್ ಚೌಹಾಣ್ ಚೇಳು ಕಚ್ಚಿದಾಗ ಏನು ಮಾಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಚೇಳಿನ ವಿಷವು ಮಾರಕವಲ್ಲ, ಆದರೆ ಇದು ಊರಿ, ಊತ, ತೀವ್ರ ನೋವು ಮತ್ತು ಕೆಲವೊಮ್ಮೆ ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ. ಚೇಳು ಕಚ್ಚಿದ ತಕ್ಷಣ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ , ಇದರಿಂದ ವಿಷವು ದೇಹದಲ್ಲಿ ಹರಡುವುದಿಲ್ಲ ಮತ್ತು ತ್ವರಿತವಾಗಿ ಪರಿಹಾರ ಸಿಗುತ್ತದೆ ಎಂದು ಹೇಳಿದ್ದಾರೆ.
ಚೇಳು ಕಚ್ಚಿದ ಮೊದಲು ಏನು ಮಾಡಬೇಕು?
- ಚೇಳು ಕಚ್ಚಿದ ನಂತರ ವ್ಯಕ್ತಿಯನ್ನು ಎಚ್ಚರದಿಂದ ಇರುವಂತೆ ನೋಡಿಕೊಳ್ಳುವುದು.
- ವಿಷವು ದೇಹದಲ್ಲಿ ವೇಗವಾಗಿ ಹರಡದಂತೆ ಚಲನೆಯನ್ನು ಕಡಿಮೆ ಮಾಡಿ.
- ಬಾಹ್ಯ ಸೋಂಕನ್ನು ತಡೆಗಟ್ಟಲು ಕಚ್ಚಿದ ಪ್ರದೇಶವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
- ಒಂದು ವೇಳೆ ಇದಕ್ಕೆ ಆಯುರ್ವೇದದ ಮದ್ದುಗಳನ್ನು ಮಾಡುವುದಾದರೆ, ತುಳಸಿ ಎಲೆಗಳ ರಸವನ್ನು ಕಚ್ಚಿದ ಜಾಗಕ್ಕೆ ಹಚ್ಚಿ. ತುಳಸಿಯು ನೈಸರ್ಗಿಕ ಪರಿಹಾರ ನೀಡುತ್ತದೆ. ಹಾಗೂ ಊತ, ಊರಿಯನ್ನು ಕಡಿಮೆ ಮಾಡುತ್ತದೆ.
- ಅರಿಶಿನ ಮತ್ತು ಸಾಸಿವೆ ಎಣ್ಣೆಯನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ತಯಾರಿಸಿ ಕಚ್ಚಿದ ಜಾಗದ ಮೇಲೆ ಹಚ್ಚಿ. ಇದು ನೋವು ಮತ್ತು ಊತದಿಂದ ಪರಿಹಾರವನ್ನು ನೀಡುತ್ತದೆ.
- ಇನ್ನು ಚೇಳು ಕಚ್ಚಿದ ನಂತರ ತೀವ್ರ ಜ್ವರ, ವಾಂತಿ ಅಥವಾ ಉಸಿರಾಟದ ತೊಂದರೆ ಇದ್ದರೆ, ವಿಳಂಬ ಮಾಡಬೇಡಿ. ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಇದನ್ನೂ ಓದಿ: ಕೊಲೆಸ್ಟ್ರಾಲ್ ಕರಗಿಸಿ ಹೃದಯದ ಸಮಸ್ಯೆಗಳನ್ನು ದೂರವಿಡಲು ಇಲ್ಲಿದೆ ಸರಳ ಪರಿಹಾರ
ಈ ತಪ್ಪು ಮಾಡಬೇಡಿ:
ಚೇಳು ಕಚ್ಚಿದ ನಂತರ ಭಯಭೀತರಾಗುತ್ತಾರೆ. ಈ ಸಮಯದಲ್ಲಿ ಬಿಸಿ ಕಬ್ಬಿಣದ ಸರಳುಗಳನ್ನು ಬಳಸುತ್ತಾರೆ. ಆದರೆ ಇದು ಕಚ್ಚಿದ ವ್ಯಕ್ತಿಯ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ. ಇಂತಹ ತಪ್ಪುಗಳನ್ನು ಮಾಡಬಾರದು. ಈ ಬಗ್ಗೆ ಆಯುರ್ವೇದದ ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು. ಚೇಳು ಕಚ್ಚಿದ್ರೆ ಭಯಪಡಬೇಡಿ. ಎಚ್ಚರ ವಹಿಸಿ ಹಾಗೂ ತಕ್ಷಣ ಆಯುರ್ವೇದದ ಪರಿಹಾರಗಳನ್ನು ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ