AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pumpkin Benefits: ಕ್ಯಾನ್ಸರ್ ನಿಂದ ಪುರುಷರ ಲೈಂಗಿಕ ಸಮಸ್ಯೆ ತಡೆಗಟ್ಟುವ ವರೆಗೆ; ಈ ತರಕಾರಿಯೇ ಬೆಸ್ಟ್ ಮೆಡಿಸಿನ್

ಸಿಹಿ ಕುಂಬಳದ ಆರೋಗ್ಯ ಪ್ರಯೋಜನ: ಸಿಹಿ ಕುಂಬಳದ ಬೀಜವನ್ನು ಜನ ಯಥೇಚ್ಛವಾಗಿ ಸೇವನೆ ಮಾಡುವುದನ್ನು ನೋಡಿರಬಹುದು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಹಾಗಾಗಿ ಇದರ ಸೇವನೆ ಮಾಡುತ್ತಾರೆ. ಆದ್ರೆ ಅದರಕ್ಕಿಂತ ಹೆಚ್ಚಿನ ಪ್ರಯೋಜನ ಸಿಹಿ ಕುಂಬಳದಲ್ಲಿಯೇ ಇದೆ ಎಂಬುದು ಜನರಿಗೆ ತಿಳಿದಿಲ್ಲ. ಹೌದು, ನೈಸರ್ಗಿಕ ಆಹಾರಗಳ ಪೈಕಿ ಸಿಹಿ ಕುಂಬಳಕಾಯಿ ಮನುಷ್ಯನ ಬೆಸ್ಟ್ ಫ್ರೆಂಡ್. ಸಾಮಾನ್ಯವಾಗಿ ವರ್ಷಪೂರ್ತಿ ದೊರೆಯುವ ಈ ತರಕಾರಿ ಪುರುಷರ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Pumpkin Benefits: ಕ್ಯಾನ್ಸರ್ ನಿಂದ ಪುರುಷರ ಲೈಂಗಿಕ ಸಮಸ್ಯೆ ತಡೆಗಟ್ಟುವ ವರೆಗೆ; ಈ ತರಕಾರಿಯೇ ಬೆಸ್ಟ್ ಮೆಡಿಸಿನ್
ಚೀನಿಕಾಯಿಯ ಉಪಯೋಗImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jun 27, 2025 | 4:00 PM

Share

ಆರೋಗ್ಯ ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕ. ಇದನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುವ ಅಗತ್ಯವಿಲ್ಲ. ಆದರೆ ನಾವು ಮಾಡುವಂತಹ ಕೆಲಸಗಳನ್ನು ಸರಿಯಾಗಿ ಮಾಡಿದರೆ ಸಾಕಾಗುತ್ತದೆ. ಹಾಗೆಯೇ ಪ್ರತಿನಿತ್ಯ ಯೋಗ, ವ್ಯಾಯಾಮ (exercise), ಧ್ಯಾನ ಮಾಡುವದರ ಜೊತೆ ಜೊತೆಗೆ ಉತ್ತಮ ಆಹಾರ ಪದ್ದತಿ ಅನುಸರಿಸುವುದು ಕೂಡ ಬಹಳ ಮುಖ್ಯವಾಗುತ್ತದೆ. ಇನ್ನು ನೈಸರ್ಗಿಕ ಆಹಾರಗಳ ಪೈಕಿ ಸಿಹಿ ಕುಂಬಳಕಾಯಿ (pumpkin) ಮನುಷ್ಯನ ಬೆಸ್ಟ್ ಫ್ರೆಂಡ್ ಎಂದರೆ ತಪ್ಪಾಗಲಾರದು. ಆದರೆ ಇವುಗಳ ಬಗ್ಗೆ ಸರಿಯಾದ ಮಾಹಿತಿ ಇರದ ಕಾರಣ ಇವುಗಳ ಸೇವನೆ ಮಾಡುವುದಕ್ಕೆ ಜನ ಅಷ್ಟು ಮುತುವರ್ಜಿ ವಹಿಸುವುದಿಲ್ಲ. ಕೆಲವೆಡೆ ಚೀನಿಕಾಯಿ ಎಂದೂ ಕರೆಯಲ್ಪಡುವ ಸಿಹಿ ಕುಂಬಳಕಾಯಿ ವರ್ಷಪೂರ್ತಿ ಲಭ್ಯವಿದ್ದು ಪೋಷಕಾಂಶಗಳಿಂದ ಕೂಡಿರುತ್ತವೆ. ನಿಜ ಹೇಳಬೇಕೆಂದರೆ ಇದರಿಂದ ಪುರುಷರ ಆರೋಗ್ಯಕ್ಕೆ (Men’s Health) ಹೆಚ್ಚು ಪ್ರಯೋಜನ ಸಿಗುತ್ತದೆ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಸಿಹಿ ಕುಂಬಳಕಾಯಿ ಅಥವಾ ಕೆಂಪು ಕುಂಬಳಕಾಯಿ ಇದು ಪೌಷ್ಟಿಕಾಂಶ ಭರಿತ ತರಕಾರಿಯಾಗಿದೆ. ಇದು ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಕಾರಿ. ಮಾತ್ರವಲ್ಲ ಪುರುಷರ ಫಲವತ್ತತೆ ಹೆಚ್ಚಿಸಲು ಕೂಡ ಇದು ಸಹಾಯ ಮಾಡುತ್ತದೆ. ಇಂಡಿಯನ್ ಜರ್ನಲ್ ಆಫ್ ಯೂರಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸಿಹಿ ಕುಂಬಳಕಾಯಿ ಬೀಜ ಸೇವನೆಯು ಪ್ರಾಸ್ಟೇಟ್ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಪುರುಷರ ಲೈಂಗಿಕ ಆರೋಗ್ಯಕ್ಕೆ ಬಹಳ ಮುಖ್ಯವಾಗಿದ್ದು ಇದನ್ನು ಸಾಮಾನ್ಯವಾಗಿ ಪ್ರಾಸ್ಟೇಟ್ ಗ್ರಂಥಿಯನ್ನು ಬಲಪಡಿಸಲು ಮತ್ತು ಪುರುಷರಲ್ಲಿನ ಆರೋಗ್ಯಕರ ಹಾರ್ಮೋನ್ ಕಾರ್ಯವನ್ನು ಉತ್ತೇಜಿಸಲು ಬಳಸಲಾಗುತ್ತದೆ.

ಸಿಹಿ ಕುಂಬಳಕಾಯಿಯ ಪ್ರಯೋಜನಗಳು:

ಕಣ್ಣಿನ ಆರೋಗ್ಯ:

ಸಿಹಿ ಕುಂಬಳಕಾಯಿಯಲ್ಲಿರುವ ಬೀಟಾ ಕ್ಯಾರೋಟಿನ್ ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ
Image
ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣಗಳು ಹೇಗಿರುತ್ತೆ ಗೊತ್ತಾ?
Image
ಎಸಿಯಲ್ಲಿ ಗಂಟೆಗಟ್ಟಲೆ ಸಮಯ ಕಳೆಯುವವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ
Image
ರಾತ್ರಿ ಈ ರೀತಿ ಲಕ್ಷಣ ಕಂಡು ಬರುವುದು ಕಿಡ್ನಿ ಫೇಲ್ಯೂರ್ ಆಗುವ ಮುನ್ಸೂಚನೆ

ಕ್ಯಾನ್ಸರ್ ತಡೆಗಟ್ಟುವಿಕೆ:

ಸಿಹಿ ಕುಂಬಳಕಾಯಿ ಬೀಜಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿರುವುದರಿಂದ, ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಹೃದಯದ ಆರೋಗ್ಯ:

ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಕರಗುವ ನಾರುಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ.

ಚಯಾಪಚಯ ಶಕ್ತಿ ವೃದ್ಧಿ:

ಸಿಹಿ ಕುಂಬಳಕಾಯಿ ಬೀಜಗಳು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ:

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ.

ಇದನ್ನೂ ಓದಿ: Pumpkin Benefits: ಕಣ್ಣಿನ ಸಮಸ್ಯೆಯಿಂದ ರೋಗನಿರೋಧಕ ಶಕ್ತಿಯವರೆಗೆ; ಚೀನಿಕಾಯಿಯ ಉಪಯೋಗಗಳಿವು

ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ:

ಸಿಹಿ ಕುಂಬಳಕಾಯಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹಾಗಾಗಿ ಸಿಹಿ ಕುಂಬಳಕಾಯಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಹಾಗಂತ ಅಗತ್ಯಕ್ಕಿಂತ ಹೆಚ್ಚು ಇದರ ಸೇವನೆ ಮಾಡಬೇಡಿ. ಬದಲಾಗಿ ನಿಯಮಿತವಾಗಿ ಇದರ ಸೇವನೆ ಮಾಡಿ. ಇದರಿಂದ ಸಿಗುವ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ