Personality Test: ಮನುಷ್ಯ ದೂರ ಓಡ್ತಿದ್ದಾನಾ, ಹತ್ತಿರ ಬರುತ್ತಿದ್ದಾನಾ? ನಿಮ್ಮ ಆಲೋಚನಾ ಶಕ್ತಿ ಹೇಗಿದೆ ಎಂಬುದನ್ನು ತಿಳಿಸುವ ಚಿತ್ರವಿದು
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಒಗಟಿನ ಆಟ ಮಾತ್ರವಲ್ಲದೆ ಇದು ವ್ಯಕ್ತಿತ್ವ ಪರೀಕ್ಷೆಯ ಒಂದು ವಿಧಾನವೂ ಆಗಿದೆ. ವ್ಯಕ್ತಿತ್ವ ಪರೀಕ್ಷೆಯ ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ಹರಿದಾಡುತ್ತಿದ್ದು, ಈ ಚಿತ್ರದಲ್ಲಿ ಮನುಷ್ಯ ದೂರ ಓಡ್ತಿದ್ದಾನೆಯೇ ಅಥವಾ ಹತ್ತಿರ ಬರುತ್ತಿದ್ದಾನೆಯೇ ಎಂಬ ಆಧಾರದ ಮೇಲೆ ನಿಮ್ಮದು ಪುರುಷ ಮೆದುಳೇ ಅಥವಾ ಸ್ತ್ರೀ ಮೆದುಳೇ ಎಂಬುದನ್ನು ಪರೀಕ್ಷಿಸಿ.

ವ್ಯಕ್ತಿತ್ವ ಪರೀಕ್ಷೆಯ (Personality Test) ಹಲವು ವಿಧಾನಗಳಿವೆ. ಅವುಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಕೂಡಾ ಒಂದು. ಈ ಚಿತ್ರಗಳ ಮೂಲಕ ನೀವು ಅಂತರ್ಮುಖಿಯೇ, ಬಹಿರ್ಮುಖಿಯೇ, ಕೋಪಿಷ್ಠರೇ, ಸಹಾನುಭೂತಿಯನ್ನು ಹೊಂದಿದವರೇ ಎಂಬಿತ್ಯಾದಿ ವ್ಯಕ್ತಿತ್ವದ ರಹಸ್ಯವನ್ನು ತಿಳಿಯಬಹುದು. ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ಹರಿದಾಡುತ್ತಿದ್ದು, ಅದರಲ್ಲಿ ವ್ಯಕ್ತಿ ದೂರ ಓಡ್ತಿದ್ದಾನಾ ಅಥವಾ ಹತ್ತಿರ ಬರುತ್ತಿದ್ದಾನಾ, ನಿಮ್ಮ ಕಣ್ಣಿಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನಿಮ್ಮದು ಪುರುಷ ಮೆದುಳೇ ಅಥವಾ ಸ್ತ್ರೀ ಮೆದುಳೇ ಎಂಬುದನ್ನು ಪರೀಕ್ಷಿಸಿ.
ಈ ಚಿತ್ರದ ಮೂಲಕ ನಿಮ್ಮ ಆಲೋಚನಾ ಶಕ್ತಿ ಹೇಗಿದೆ ತಿಳಿಯಿರಿ:
ಈ ನಿರ್ದಿಷ್ಟ ಆಪ್ಟಿಕಲ್ ಚಿತ್ರದಲ್ಲಿ ಕೆಲವರಿಗೆ ಮನುಷ್ಯ ದೂರ ಹೋದಂತೆ ಕಂಡರೆ, ಕೆಲವರಿಗೆ ಮನುಷ್ಯ ಹತ್ತಿರ ಬಂದಂತೆ ಭಾಸವಾಗುತ್ತದೆ. ಇದರಲ್ಲಿ ನಿಮಗೆ ಯಾವ ಅಂಶ ಕಾಣಿಸಿತು ಎಂಬ ಆಧಾರದ ಮೇಲೆ ನಿಮ್ಮ ಆಲೋಚನಾ ಶಕ್ತಿ ಎಂಬುದು ಹೇಗಿದೆ ಎಂಬುದನ್ನು ಪರೀಕ್ಷಿಸಿ.
ವ್ಯಕ್ತಿ ಹತ್ತಿರಕ್ಕೆ ಬಂದಂತೆ ಕಂಡರೆ: ಈ ಚಿತ್ರದಲ್ಲಿ ನಿಮಗೆ ವ್ಯಕ್ತಿ ಹತ್ತಿರಕ್ಕೆ ಬಂದಂತೆ ಕಂಡರೆ ನಿಮ್ಮದು ಪುರುಷ ಮೆದುಳು ಎಂದರ್ಥ. ನಿಮ್ಮದು ಮಾತು ಕಡಿಮೆ, ಕೆಲಸ ಹೆಚ್ಚು. ತುಂಬಾ ಪ್ರಯೋಗಿಕರಾದ ನೀವು ನಿಮ್ಮ ವಿಶ್ಲೇ಼ಷಣಾತ್ಮಕ ಕೌಶಲ್ಯಗಳು, ತಾರ್ಕಿಕತೆಯನ್ನು ಬಳಸಿಕೊಂಡು ಸಮಸ್ಯೆಗಳನ್ನು ಬಗೆಹರಿಸುತ್ತೀರಿ. ಕೆಲಸದ ಮೇಲೆ ಹೆಚ್ಚು ಗಮನ ಹರಿಸುವ ನೀವು ನಿಮಗೆ ಆಸಕ್ತದಾಯವೆನಿಸುವ ವಿಷಯಗಳನ್ನು ತ್ವರಿತವಾಗಿ ಕಲಿಯುತ್ತೀರಿ. ನೀವು ಒಂದೇ ವಿಷಯದ ಮೇಲೆ ಹೆಚ್ಚು ಗಮನ ಹರಿಸುವುದರಿಂದ ನಿಮಗೆ ಒಂದೇ ಬಾರಿಗೆ ಬಹುಕಾರ್ಯಗಳನ್ನು ಮಾಡಲು ಕಷ್ಟವಾದೀತು.
ಇದನ್ನೂ ಓದಿ: ನೀವು ಭಾವನಾತ್ಮಕ ವ್ಯಕ್ತಿಯೇ? ಈ ಚಿತ್ರದ ಮೂಲಕ ತಿಳಿಯಿರಿ ನಿಮ್ಮ ಗುಣ ಸ್ವಭಾವ
ವ್ಯಕ್ತಿ ಓಡಿ ಹೋದಂತೆ ಕಂಡರೆ: ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮಗೇನಾದರೂ ವ್ಯಕ್ತಿ ಓಡಿ ಹೋಗುತ್ತಿದ್ದಂತೆ ಕಂಡರೆ ನಿಮ್ಮದು ಸ್ತ್ರೀ ಮೆದುಳು ಎಂದರ್ಥ. ನಿಮ್ಮದು ಸ್ತ್ರೀ ಆಲೋಚನಾ ಶೈಲಿಯಾಗಿದ್ದು, ನೀವು ಭಾವನೆಗಳು ಮತ್ತು ಅಂತಃಪ್ರಜ್ಞೆಯನ್ನು ಅವಲಂಬಿಸಿರುತ್ತೀರಿ ಮತ್ತು ನೀವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಪಡುವುದಿಲ್ಲ. ಯೋಜನೆ ಮತ್ತು ಕೆಲಸ ಸಂಘಟಿಸುವಲ್ಲಿ ತುಂಬಾನೇ ಉತ್ಸಾಹ ಹೊಂದಿರುವ ನೀವು ಒಂದೇ ಬಾರಿಗೆ ಬಹು ಕಾರ್ಯಗಳನ್ನು ಸಲೀಸಾಗಿ ನಿರ್ವಹಿಸುತ್ತೀರಿ. ಅಲ್ಲದೆ ಅತ್ಯುತ್ತಮ ಸ್ಮರಣಾಶಕ್ತಿಯನ್ನು ಹೊಂದಿರುವ ನೀವು ನಿಮ್ಮ ಭಾವನೆಗಳನ್ನು ಪ್ರೀತಿಪಾತ್ರರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








