Personality Test: ಈ ಚಿತ್ರ ನೋಡಿ ನೀವು ಸಹಾನುಭೂತಿಯುಳ್ಳವರೇ ಎಂದು ಪರೀಕ್ಷಿಸಿ
ಪ್ರತಿಯೊಬ್ಬ ವ್ಯಕ್ತಿಯೂ ಒಂದೇ ರೀತಿ ಇರುವುದಿಲ್ಲ, ಒಬ್ಬರಿಗಿಂತ ಇನ್ನೊಬ್ಬರು ಭಿನ್ನವಾಗಿರುತ್ತಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆಪ್ಟಿಕಲ್ ಇಲ್ಯೂಷನ್, ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧಿಸಿದ ಫೋಟೋಗಳು ವ್ಯಕ್ತಿತ್ವ ಹೇಳುತ್ತೆ. ಇದೀಗ ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ಮೊದಲು ನೋಡಿದ್ದೇನು ಎನ್ನುವುದು ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಹಾಗಾದ್ರೆ ಈ ಚಿತ್ರ ನೋಡಿ ನಿಮ್ಮ ನಿಗೂಢ ವ್ಯಕ್ತಿತ್ವ ಕಂಡುಕೊಳ್ಳಿ.

ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (optical illusion) ಚಿತ್ರಗಳನ್ನು ವೈರಲ್ ಆಗುತ್ತಿರುತ್ತದೆ. ಇದರಲ್ಲಿ ಕೆಲವು ಚಿತ್ರಗಳು ಮೆದುಳಿಗೆ ಕೆಲಸವನ್ನು ನೀಡಿದರೆ, ಇನ್ನು ಕೆಲ ಫೋಟೋಗಳು ನಮ್ಮ ವ್ಯಕ್ತಿತ್ವವನ್ನು (personality) ಬಹಿರಂಗಪಡಿಸುತ್ತದೆ. ಸಾಮಾನ್ಯವಾಗಿ ನಮ್ಮ ಕಿವಿ, ಕಣ್ಣು, ಮೂಗು, ಹಣೆ, ಹುಬ್ಬು ಹೀಗೆ ದೇಹದ ಅಂಗಗಳ ಆಕಾರದ ಮೇಲೆ ವ್ಯಕ್ತಿತ್ವ, ಗುಣಸ್ವಭಾವವನ್ನು ತಿಳಿದುಕೊಳ್ಳಬಹುದು. ಆದರೆ ಇದೀಗ ವೈರಲ್ ಆಗಿರುವ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಜಲಪಾತದ ನಡುವೆ ಮಹಿಳೆ, ಬಂಡೆಗಳಲ್ಲಿ ಪ್ರಾಣಿಗಳ ಮುಖ, ಇದರಲ್ಲಿ ನೀವು ಮೊದಲು ನೋಡಿದ್ದೇನು ಎನ್ನುವುದರ ಆಧಾರದ ಮೇಲೆ ವ್ಯಕ್ತಿತ್ವವನ್ನು ಬಹಿರಂಗವಾಗುತ್ತದೆ.
ಈ ಆಪ್ಟಿಕಲ್ ಇಲ್ಯೂಷನ್ ಚಿತ್ರ ನೋಡಿ ವ್ಯಕ್ತಿತ್ವ ತಿಳಿಯಿರಿ
ಮೊದಲು ಬಂಡೆಗಳಲ್ಲಿ ಪ್ರಾಣಿಗಳ ಮುಖವನ್ನು ನೋಡಿದರೆ : ಈ ಚಿತ್ರದಲ್ಲಿ ಬಂಡೆಗಳಲ್ಲಿ ತೋಳಗಳ ಮುಖವನ್ನು ಮೊದಲು ಗಮನಿಸಿದರೆ ಈ ವ್ಯಕ್ತಿಗಳು ತಮ್ಮ ಪ್ರಬಲ ವ್ಯಕ್ತಿತ್ವದಿಂದಲೇ ಗುರುತಿಸಿಕೊಳ್ಳುತ್ತಾರೆ. ಉತ್ಸಾಹಭರಿತವಾದ ಮಾತು, ನಡೆ ನುಡಿಯಿಂದಲೇ ಗಮನ ಸೆಳೆಯುವ ವ್ಯಕ್ತಿತ್ವ ಇವರದ್ದು. ತಮ್ಮ ಜೀವನದಲ್ಲಿ ಎದುರಾಗುವ ಸವಾಲುಗಳು ಹಾಗೂ ಅಡೆತಡೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೇ ಸಲೀಸಾಗಿ ಎದುರಿಸಿಕೊಂಡು ಹೋಗುವ ಗುಣ ಇವರಲ್ಲಿ ಹೆಚ್ಚಿರುತ್ತದೆ. ಕೆಲಸಕಾರ್ಯದಲ್ಲಿ ಯಾವುದೇ ಪ್ರತಿಫಲದ ಬಗ್ಗೆ ಚಿಂತಿಸದೇ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾರೆ. ಅವಕಾಶಗಳು ಬಂದಾಗ ಸರಿಯಾಗಿ ಸದುಪಯೋಗಪಡಿಸಿಕೊಂಡು ಹೋಗುವುದು ಇವರಿಗೆ ಚೆನ್ನಾಗಿ ಗೊತ್ತು ಎಂದರ್ಥ. ಕರಡಿ ಮುಖ ಕಂಡರೆ ಶಾಂತ ಸ್ವಭಾವದ ವ್ಯಕ್ತಿಗಳು ಇವರಾಗಿದ್ದು, ಸಕಾರಾತ್ಮಕ ಮನೋಭಾವವನ್ನು ಹೊಂದಿರುವ ವ್ಯಕ್ತಿ. ಮಾತಿಗಿಂತ ಕೆಲಸದಲ್ಲಿಯೇ ಉತ್ತಮ ಫಲಿತಾಂಶ ಪಡೆಯಲು ಮುಂದಾಗುತ್ತಾರೆ. ಶಾಂತವಾಗಿದ್ದು ಉತ್ತಮ ಲಾಭವನ್ನು ಪಡೆಯುವ ಮನೋಭಾವ ಇವರದ್ದು, ಹೀಗಾಗಿ ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.
ಇದನ್ನೂ ಓದಿ : Personality Test: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿ
ಮೊದಲು ಜಲಪಾತದಲ್ಲಿ ಮಹಿಳೆಯನ್ನು ನೋಡಿದರೆ : ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ಜಲಪಾತದಲ್ಲಿ ಮೊದಲು ಮಹಿಳೆ ಕಂಡರೆ ಈ ವ್ಯಕ್ತಿಗಳು ತನ್ನ ಸುತ್ತಮುತ್ತಲಿನವರ ಮಾತನ್ನು ಸುಲಭವಾಗಿ ಕೇಳುತ್ತಾರೆ. ತಮ್ಮ ವ್ಯಕ್ತಿತ್ವದಿಂದಲೇ ಎಲ್ಲರ ಮೇಲೆ ಸುಲಭವಾಗಿ ಪ್ರಭಾವ ಬೀರುತ್ತಾರೆ. ಸಹಾನುಭೂತಿಯುಳ್ಳ ವ್ಯಕ್ತಿಗಳಾಗಿ ಇತರರ ಅಗತ್ಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವವರು. ಅಂತಃಪ್ರಜ್ಞೆಯುಳ್ಳ ಕಾರಣ ಸುತ್ತಲಿನ ಸನ್ನಿವೇಶ ಸಂದರ್ಭಗಳನ್ನು ಸುಲಭವಾಗಿ ಗ್ರಹಿಸುತ್ತಾರೆ. ತಮ್ಮ ಮಾತಿನಿಂದಲೇ ಎಲ್ಲರನ್ನು ಒಂದು ಕ್ಷಣ ಮೋಡಿ ಮಾಡುವ ಗುಣ ಇವರದ್ದಾಗಿರುತ್ತದೆ. ಸಂವಹನ ಕೌಶಲ್ಯ ಹೊಂದಿದ್ದು ತಮ್ಮ ಮಾತಿನಿಂದಲೇ ಇತರರಿಗೆ ಧೈರ್ಯ ತುಂಬುತ್ತಾರೆ. ಕೆಟ್ಟ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗುವ ಗುಣ ಈ ಜನರಲ್ಲಿ ಹೆಚ್ಚಿರುತ್ತದೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Fri, 11 July 25








