AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿ

ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಮೆದುಳಿಗೆ ವ್ಯಾಯಾಮವನ್ನು ನೀಡುವುದು ಮಾತ್ರವಲ್ಲದೆ, ನಮ್ಮ ನಿಗೂಢ ವ್ಯಕ್ತಿತ್ವವನ್ನು ಸಹ ಬಹಿರಂಗಪಡಿಸುತ್ತದೆ. ಇಂತಹದ್ದೊಂದು ಚಿತ್ರ ಇದೀಗ ವೈರಲ್‌ ಆಗಿದ್ದು, ಜಲಪಾತ ಅಥವಾ ಪಾಂಡ ಇದರಲ್ಲಿ ನಿಮಗೇನು ಕಾಣಿಸಿದ್ದು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಿ.

Personality Test: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿ
ವ್ಯಕ್ತಿತ್ವ ಪರೀಕ್ಷೆImage Credit source: Times Of India
ಮಾಲಾಶ್ರೀ ಅಂಚನ್​
|

Updated on:Jul 10, 2025 | 4:49 PM

Share

ನಾವು ಧರಿಸುವ ಬಟ್ಟೆ, ನಮ್ಮಿಷ್ಟದ ಬಣ್ಣ, ಕೈ ಬರಹ, ನಡಿಗೆ, ತುಟಿ ಆಕಾರ, ಮೂಗಿನ ಆಕಾರ, ಪಾದದ ಆಕಾರ ಸೇರಿದಂತೆ ವ್ಯಕ್ತಿತ್ವ ಪರೀಕ್ಷೆಯ (Personality Test) ಹಲವು ವಿಧಾನಗಳ ಮೂಲಕ ನಮ್ಮ ನಿಗೂಢ ಗುಣ ಸ್ವಭಾವ ಹೇಗಿದೆಯೆಂದು ನಾವೇ ತಿಳಿದುಕೊಳ್ಳಬಹುದು. ಆಪ್ಟಿಕಲ್‌ ಇಲ್ಯೂಷನ್‌ (optical illusion) ಪರ್ಸನಾಲಿಟಿ ಟೆಸ್ಟ್‌ ಕೂಡಾ ಈ ವ್ಯಕ್ತಿತ್ವ ಪರೀಕ್ಷೆಯ ಒಂದು ಭಾಗವಾಗಿದ್ದು, ಇದರಲ್ಲಿ ನಮ್ಮ ಕಣ್ಣಿಗೆ ಕಾಣಿಸುವ ಚಿತ್ರದ ಆಧಾರದ ಮೇಲೆ ನಾವು ಅಂತರ್ಮುಖಿಯೋ, ಬಹಿರ್ಮುಖಿಯೋ, ತಾಳ್ಮೆಯನ್ನು ಹೊಂದಿರುವವರೇ, ಕೋಪಿಷ್ಠರೆ ಎಂಬುದನ್ನು ತಿಳಿಯಬಹುದಾಗಿದೆ. ಇಲ್ಲೊಂದು ಅಂತಹದ್ದೇ ಚಿತ್ರ ಇದೀಗ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಪಾಂಡ ಅಥವಾ ಜಲಪಾತ ಇವೆರಡರಲ್ಲಿ ಕಾಣಿಸಿದ್ದೇನು ಎಂಬುದರ ಮೇಲೆ ನೀವು ಮುಕ್ತ ಹೃದಯದವರೇ ಎಂಬುದನ್ನು ಪರೀಕ್ಷಿಸಿ.

ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ:

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ಜಲಪಾತ ಮತ್ತು ಪಾಂಡ ಇವೆರಡು ಅಂಶಗಳಿದ್ದು, ಇದರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇಲೆ ನಿಮ್ಮ ವ್ಯಕ್ತಿತ್ವದ ಆಕರ್ಷಕ ಒಳನೋಟವನ್ನು ತಿಳಿಯಿರಿ.

ಜಲಪಾತ: ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವು ಜಲಪಾತವನ್ನು ನೋಡಿದರೆ, ನೀವು ಮುಕ್ತ ಹೃದಯದ ವ್ಯಕ್ತಿಯೆಂದು ಅರ್ಥ.  ನೀವು ಸುಲಭವಾಗಿ ತೆರೆದುಕೊಳ್ಳುವ ಮತ್ತು ಯಾವುದೇ ತೊಂದರೆಗಳಿಲ್ಲದೆ ಎಲ್ಲರೊಂದಿಗೂ ಸಂಪರ್ಕಗಳನ್ನು ರೂಪಿಸುವ ವ್ಯಕ್ತಿಯಾಗಿರುತ್ತೀರಿ.  ಅಲ್ಲದೆ ನಿಮ್ಮ ಸಕಾರಾತ್ಮಕ ಸ್ವಭಾವದಿಂದಾಗಿ ಜನರು ಹೆಚ್ಚಾಗಿ ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ.

ಇದನ್ನೂ ಓದಿ
Image
ಚಿತ್ರದಲ್ಲಿ ನೀವು ಮೊದಲು ನೋಡುವ ಕಣ್ಣೇ ಹೇಳುತ್ತೆ ನೀವು ಎಂತಹ ವ್ಯಕ್ತಿಯೆಂದು
Image
ಮೂಗಿನ ಆಕಾರವೂ ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಹೇಳುತ್ತದೆಯಂತೆ
Image
ಕಾಲ್ಬೆರಳಿನ ಆಕಾರದಿಂದಲೂ ತಿಳಿಯಬಹುದು ನಿಮ್ಮ ಗುಣ ಸ್ವಭಾವ
Image
ನಿಮ್ಮ ಗುಣ ಸ್ವಭಾವ ತಿಳಿಸುತ್ತೆ ಈ ಚಿತ್ರದಲ್ಲಿ ನೀವು ಆಯ್ಕೆ ಮಾಡುವ ಪ್ರಾಣಿ

ಇದನ್ನೂ ಓದಿ: ಈ ಚಿತ್ರದಲ್ಲಿ ನೀವು ಆಯ್ಕೆ ಮಾಡುವ ಕಣ್ಣು ‌ಬಹಿರಂಗಪಡಿಸುತ್ತೆ ನಿಮ್ಮ ಸೀಕ್ರೆಟ್‌ ವ್ಯಕ್ತಿತ್ವ

ಪಾಂಡ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವೇನಾದರೂ ಮೊದಲು ಪಾಂಡವನ್ನು ನೋಡಿದರೆ, ನೀವು ತುಂಬಾನೇ ಜಾಗರೂಕರಾಗಿರುವ ವ್ಯಕ್ತಿಯೆಂದು ಅರ್ಥ. ನೀವು ಹೊರಗೆ ಸಿಹಿಯಾಗಿ ಅಥವಾ ಸ್ನೇಹಪರವಾಗಿ ಕಾಣಿಸಿಕೊಂಡರೂ, ನೀವು ಇತರರನ್ನು ನಿಮ್ಮ ಹೃದಯದೊಳಗೆ ಸುಲಭವಾಗಿ ಬಿಡುವುದಿಲ್ಲ ಅಂದರೆ ನೀವು ಅಷ್ಟು ಸುಲಭವಾಗಿ ಯಾರಿಗೂ ಹತ್ತಿರವಾಗುವುದಿಲ್ಲ ಎಂದರ್ಥ. ನಿಮ್ಮ ಈ ಸ್ವಭಾವವು ನ್ಯೂನತೆಯಲ್ಲ, ಬದಲಾಗಿ ಇದು ನೀವು ಈ ಹಿಂದೆ ಕಲಿತ ಪಾಠಗಳಾಗಿದ್ದು,  ಭವಿಷ್ಯದಲ್ಲಿ ಯಾವುದೇ  ರೀತಿಯ ನೋವುಗಳಾಗಬಾರದೆಂದು ನೀವು ಈ ರೀತಿಯಾಗಿ ಇರುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Thu, 10 July 25