Guru Purnima 2025: ಗುರು ಪೂರ್ಣಿಮಾ ದಿನ ನಿಮ್ಮ ಗುರುಗಳಿಗೆ ಹೀಗೆ ಶುಭಾಶಯ ತಿಳಿಸಿ
ಪ್ರತಿಯೊಬ್ಬರ ಸಾಧನೆಯ ಹಿಂದೆ ಗುರುವಿನ ಶ್ರಮ ಇದ್ದೇ ಇರುತ್ತದೆ. ಅದಕ್ಕಾಗಿಯೇ ಗುರುವಿಗೆ ಆ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ. ಹೀಗೆ ನಿಮ್ಮ ಜೀವನದಲ್ಲೂ ನಿಮ್ಮ ಪ್ರತಿ ಹಂತದಲ್ಲೂ ನಿಮ್ಮ ಸಾಧನೆಗೆ ಬೆನ್ನೆಲುಬಾಗಿ ನಿಂತಂತಹ ನೆಚ್ಚಿನ ಗುರುಗಳಿರಬಹುದಲ್ವಾ. ನಿಮ್ಮ ಈ ನೆಚ್ಚಿನ ಗುರುಗಳಿಗೆ ಗುರು ಪೂರ್ಣಿಮಾ ಹಬ್ಬದ ದಿನದಂದು ಈ ರೀತಿಯಾಗಿ ಶುಭಾಶಯಗಳನ್ನು ತಿಳಿಸುವ ಮೂಲಕ ಅವರ ದಿನವನ್ನು ವಿಶೇಷವಾಗಿಸಿ.

ಜ್ಞಾನವೇ ಇಲ್ಲದ ಒಂದು ಕಲ್ಲನ್ನು ಸುಂದರ ಶಿಲೆಯಾಗಿ ರೂಪಿಸುವಲ್ಲಿ ಗುರುಗಳ ಪಾತ್ರ ಮಹತ್ತರವಾದ್ದು. ತಂದೆ-ತಾಯಿಗಳು ಹೇಗೋ ಅದೇ ರೀತಿ ಗುರುಗಳು ಸಹ ನಮ್ಮ ಪ್ರತಿ ಹಂತದ ಸಾಧನೆಗೆ ನೇರ, ಪರೋಕ್ಷವಾಗಿ ಕಾರಣಿಕರ್ತರು. ಅದಕ್ಕಾಗಿಯೇ ಗುರುಗಳಿಗೆ (Teachers) ಮಹತ್ತರ ಸ್ಥಾನವನ್ನು ನೀಡಲಾಗಿದೆ. ಯಾವುದೇ ಸ್ವಾರ್ಥವಿಲ್ಲದೆ, ನಿಷ್ಕಲ್ಮಶ ಮನಸ್ಸಿನಿಂದ ಜ್ಞಾನದ ಧಾರೆಯೆರೆದು, ಶಿಷ್ಯರನ್ನು ಸಾಧನೆಯ ಹಾದಿಯತ್ತ ಕೊಂಡೊಯ್ಯುವ ಗುರುಗಳನ್ನು ಸ್ಮರಿಸಲೆಂದೇ ಗುರು ಪೂರ್ಣಿಮಾ ದಿನವನ್ನು ಆಚರಿಸಲಾಗುತ್ತದೆ. ಹೌದು ವೇದವ್ಯಾಸರ ಜನ್ಮ ದಿನವಾದ ಆಷಾಢ ಮಾಸದ ಶುಕ್ಲ ಪೂರ್ಣಿಮೆ ತಿಥಿಯಂದು ಗುರು ಪೂರ್ಣಿಮಾ (Guru Purnima Wishes) ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಜುಲೈ 9 ರಂದು ಗುರು ಪೂರ್ಣಿಮಾವನ್ನು ಆಚರಿಸಲಾಗುತ್ತಿದ್ದು, ಈ ಶುಭದಿನದಂದು ನಿಮ್ಮ ನೆಚ್ಚಿನ ಗುರುಗಳಿಗೆ ಈ ರೀತಿ ಶುಭಾಶಯಗಳನ್ನು ತಿಳಿಸಿ.
ಗುರು ಪೂರ್ಣಿಮಾ ದಿನ ನಿಮ್ಮ ಗುರುಗಳಿಗೆ ಹೀಗೆ ಶುಭಾಶಯ ತಿಳಿಸಿ:
- ಯಾವುದೇ ವಿದ್ಯೆ ಫಲಪ್ರದವಾಗಬೇಕಾದರೆ ಗುರುಕೃಪೆ, ಆಶಿರ್ವಾದ ಬೇಕೇ ಬೇಕು. ನಮ್ಮ ಜೀವನವನ್ನು ಬೆಳಗಿದ ನನ್ನ ನೆಚ್ಚಿನ ಗುರುಗಳಿಗೆ ಗುರು ಪೂರ್ಣಿಮೆಯ ಶುಭಾಶಯಗಳು.
- ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ವಾಕ್ಯದಂತೆ ನನ್ನ ಬದುಕನ್ನು ಬೆಳಗಿದ ಗುರುಗಳಿಗೆ ಗುರು ಪೂರ್ಣಿಮೆಯ ಶುಭಾಶಯಗಳು.
- ಗುರುವಾಗಿದ್ದುಕೊಂಡು ಜೀವನದ ಗುರಿ ತೋರಿದ ನನ್ನೆಲ್ಲಾ ಗುರುಗಳಿಗೆ ಗುರು ಪೂರ್ಣಿಮಾದ ಶುಭಾಶಯಗಳು.
- ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ, ಗುರು ಪೂರ್ಣಿಮೆಯ ಶುಭಾಶಯಗಳು ಗುರುಗಳೇ.
- ಅಜ್ಞಾನದಿಂದ ಜ್ಞಾನದೆಡೆಗೆ ನನ್ನನ್ನು ಕೊಂಡೊಯ್ದ ಗುರುಗಳಿಗೆ ಗುರು ಪೂರ್ಣಿಮೆಯ ಶುಭಾಶಯಗಳು.
- ನನ್ನ ಜೀವನವನ್ನು ರೂಪಿಸಿದ, ಸರಿಯಾದ ಮಾರ್ಗದರ್ಶನ ನೀಡಿ ನನ್ನ ಜೀವನವನ್ನು ಬೆಳಗಿದೆ ನನ್ನೆಲ್ಲಾ ಶಿಕ್ಷಕರಿಗೆ ಗುರು ಪೂರ್ಣಿಮೆಯ ಶುಭಾಶಯಗಳು.
- ಗುರುಗಳೇ ಗುರು ಪೂರ್ಣಿಮೆಯ ಈ ಶುಭ ಸಂದರ್ಭದಲ್ಲಿ, ನನಗೆ ಸ್ಫೂರ್ತಿ ನೀಡಿ, ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕರಿಸಿದ, ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತ ನಿಮಗೆ ಕೋಟಿ ಕೋಟಿ ಧನ್ಯವಾದಗಳನ್ನು ತಿಳಿಸಲು ಇಷ್ಟಪಡುತ್ತೇನೆ.
- ವ್ಯಕ್ತಿಯನ್ನು ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಭಯದಿಂದ ನಿರ್ಭಯದ ಕಡೆಗೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯೇ ಗುರು. ಗುರು ಪೂರ್ಣಿಮೆಯ ಶುಭಾಶಯಗಳು.
ಇದನ್ನೂ ಓದಿ: ನಾಳೆ ಗುರು ಪೂರ್ಣಿಮಾ, ಈ ದಿನದ ಇತಿಹಾಸ ಮತ್ತು ಮಹತ್ವವನ್ನು ಇಲ್ಲಿ ತಿಳಿಯಿರಿ
- ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಕಲಿಸಿದ, ನನ್ನ ಜೀವನದ ದಿಕ್ಕನ್ನೇ ಬದಲಿಸಿದ ಪೂಜ್ಯ ಗುರುಗಳಿಗೆ ನಮನಗಳು.
- ನಿಮ್ಮ ಜೀವನವೂ ಜ್ಞಾನದ ಬೆಳಕಿನಿಂದ ಬೆಳಗಲಿ, ಗುರು ಪೂರ್ಣಿಮೆಯ ಶುಭಾಶಯಗಳು.
- ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಕಲಿಸಿದ, ನಮ್ಮ ಜೀವನದ ದಿಕ್ಕನ್ನೇ ಸೂಚಿಸುವ ಇಂತಹ ಪೂಜ್ಯ ಗುರುವಿಗೆ ನಮನಗಳು.
- ಗುರು ಪೂರ್ಣಿಮೆಯಂದು ನಿಮ್ಮ ಜೀವನವೂ ಜ್ಞಾನದ ಬೆಳಕಿನಿಂದ ಬೆಳಗಲಿ, ಇದು ನನ್ನ ಶುಭಾಶಯಗಳು.
- ನನ್ನ ಸಾಧನೆಯ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತ ನನ್ನ ನೆಚ್ಚಿನ ಗುರುಗಳಿಗೆ ಗುರು ಪೂರ್ಣಿಮೆಯ ಶುಭಾಶಯಗಳು.
- ನನ್ನ ಜೀವನದಲ್ಲಿ ಬೆಳಕು ಚೆಲ್ಲಿದ ನನ್ನೆಲ್ಲಾ ಗುರುಗಳಿಗೆ ಗುರು ಪೂರ್ಣಿಮಾ ದಿನದ ಶುಭಾಶಯಗಳು
- ನೀವು ನನಗೆ ಹೇಳಿಕೊಟ್ಟ ಪ್ರತಿಯೊಂದು ಜೀವನ ಪಾಠಕ್ಕೂ ನಾನು ಆಭಾರಿಯಾಗಿದ್ದೇನೆ. ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




