AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟೀಲ್‌ ಪಾತ್ರೆಗಳಲ್ಲಿ ಈ ಕೆಲವು ಆಹಾರಗಳನ್ನು ಸಂಗ್ರಹಿಸಿಡಲೇಬಾರದು; ಏಕೆ ಗೊತ್ತಾ?

ಬಹುತೇಕ ಹೆಚ್ಚಿನವರ ಮನೆಯಲ್ಲಿ ಸ್ಟೀಲ್‌ ಪಾತ್ರೆಗಳು ಇದ್ದೇ ಇರುತ್ತದೆ. ಊಟದ ಡಬ್ಬಿಯಿಂದ ಹಿಡಿದು, ಬೇಳೆಕಾಳು, ಸಕ್ಕರೆ ಸೇರಿದಂತೆ ಇತ್ಯಾದಿ ದಿನಸಿ ಸಾಮಾಗ್ರಿಗಳನ್ನು ಸಂಗ್ರಹಿಸಿಡಲು ಇದೇ ಸ್ಟೀಲ್‌ ಪಾತ್ರೆಗಳನ್ನು ಬಳಕೆ ಮಾಡುತ್ತಾರೆ. ಆದ್ರೆ ಕೆಲವೊಂದಿಷ್ಟು ಆಹಾರ ಪದಾರ್ಥಗಳನ್ನು ಈ ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಿಡುವುದರಿಂದ ಆ ಆಹಾರದ ರುಚಿ ಹಾಳಾಗುವುದಲ್ಲದೆ, ಅದರ ಪೌಷ್ಠಿಕಾಂಶ ಮೌಲ್ಯವೂ ಕೂಡಾ ಕುಂಠಿತಗೊಳ್ಳುತ್ತದೆ. ಹಾಗಾದ್ರೆ ಯಾವೆಲ್ಲಾ ಆಹಾರಗಳನ್ನು ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಬಾರದು ಎಂಬುದನ್ನು ನೋಡೋಣ ಬನ್ನಿ.

ಮಾಲಾಶ್ರೀ ಅಂಚನ್​
|

Updated on: Jul 09, 2025 | 4:12 PM

Share
ಉಪ್ಪಿನಕಾಯಿ:  ಉಪ್ಪಿನಕಾಯಿಯನ್ನು ಯಾವುದೇ ಕಾರಣಕ್ಕೂ ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಬಾರದು. ಉಪ್ಪು, ಹುಳಿ, ಎಣ್ಣೆ ಇವೆಲ್ಲದರ ಮಿಶ್ರಣವಾದ ಉಪ್ಪಿನಕಾಯಿ ನೈಸರ್ಗಿಕ ಆಮ್ಲದಿಂದ ತುಂಬಿರುತ್ತದೆ. ಇವುಗಳು ಲೋಹದೊಂದಿಗೆ ಪ್ರತಿಕ್ರಿಯಿಸುವ ಸಾಧ್ಯತೆ ಇರುತ್ತದೆ. ಇದರಿಂದ ಉಪ್ಪಿನಕಾಯಿ ಬೇಗ ಕೆಡಬಹುದು ಮತ್ತು ಅದರ ರುಚಿ ಕೂಡ ಹಾಳಾಗಬಹುದು. ಹಾಗಾಗಿ ಉಪ್ಪಿನಕಾಯಿಯನ್ನು ಗಾಜಿನ ಅಥವಾ ಪಿಂಗಾಣಿ ಜಾಡಿಯಲ್ಲಿ ಸಂಗ್ರಹಿಸಿಡುವುದು ಸೂಕ್ತ.

1 / 6
ಮೊಸರು: ಮೊಸರು ನೈಸರ್ಗಿಕವಾಗಿ ಆಮ್ಲೀಯ ಅಂಶವನ್ನು ಹೊಂದಿರುವ ಕಾರಣ ಇದನ್ನು ವಿಶೇಷವಾಗಿ ದೀರ್ಘ ಗಂಟೆಗಳ ಕಾಲ ಸ್ಟೀಲ್‌ ಪಾತ್ರೆಯಲ್ಲಿ ಸಂಗ್ರಹಿಸಿದಾಗ, ಮೊಸರಿನ ರುಚಿ ಕೆಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊಸರು ರುಚಿಕರವಾಗಿರಬೇಕೆಂದರೆ ಅವುಗಳನ್ನುಸೆರಾಮಿಕ್ ಅಥವಾ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿಡಿ.

2 / 6
ನಿಂಬೆ ಮಿಶ್ರಿತ ಆಹಾರಗಳು: ನಿಂಬೆ ಹಣ್ಣಿನಂತಹ ಸಿಟ್ರಸ್‌ ಹಣ್ಣುಗಳು ಸ್ಟೀಲ್‌ ಪಾತ್ರೆಗಳಲ್ಲಿ ಹೊಂದಿಕೊಳ್ಳುವುದಿಲ್ಲ. ಹೀಗಿರುವಾಗ ಈ ಸಿಟ್ರಸ್‌ ಹಣ್ಣುಗಳ ಭಕ್ಷ್ಯವನ್ನು ಸ್ಟೀಲ್‌ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟಾಗ ಅವುಗಳ ರುಚಿ ನಕಾರಾತ್ಮಕವಾಗಿ ಬದಲಾಗಬಹುದು. ಮತ್ತು ಇವುಗಳ ಆಮ್ಲೀಯತ ಪಾತ್ರೆಯ ಕರಗುವಿಕೆಗೂ ಕಾರಣವಾಗಬಹುದು. ಹಾಗಾಗಿ ಸಿಟ್ರಸ್‌ ಹಣ್ಣುಗಳಾಗಿರಬಹುದು, ನಿಂಬೆ ರಸ ಸೇರಿದಂತೆ ಇತರೆ ಖಾದ್ಯಗಳೇ ಆಗಿರಬಹುದು. ಇವುಗಳನ್ನು ಗಾಜಿನ ಅಥವಾ ಉತ್ತಮ ದರ್ಜೆಯ ಪ್ಲಾಸ್ಟಿಕ್‌ ಡಬ್ಬಗಳಲ್ಲಿ ಸಂಗ್ರಹಿಸಿಡಬೇಕು.

3 / 6
ಟೊಮೆಟೊ ಮಿಶ್ರಿತ ಭಕ್ಷ್ಯಗಳು: ಟೊಮೆಟೊ ಆಗಿರಬಹುದು ಅಥವಾ ಟೊಮೆಟೊ ಮಿಶ್ರಿತ ಭಕ್ಷ್ಯಗಳೇ ಆಗಿರಬಹುದು ಇವುಗಳನ್ನು ಸ್ಟೀಲ್‌ ಪಾತ್ರೆಗಳಲ್ಲಿ ಸಂಗ್ರಹಿಸುವುದು ಸೂಕ್ತವಲ್ಲ. ಏಕೆಂದರೆ ಟೊಮೆಟೊ ಆಮ್ಲೀಯ ಅಂಶವನ್ನು ಹೊಂದಿರುವ ಕಾರಣ ಖಾದ್ಯದ ರುಚಿ ಮತ್ತು ಪೌಷ್ಠಿಕಾಂಶ ಎರಡೂ ಹಾಳಾಗಬಹುದು. ಹಾಗಾಗಿ ಇಂತಹ ಭಕ್ಷ್ಯಗಳನ್ನು ಸೆರಾಮಿಕ್‌ ಮತ್ತು ಗಾಜಿನ ಬೌಲ್‌ಗಳಲ್ಲಿ ಸಂಗ್ರಹಿಸಿ.

4 / 6
ಹಣ್ಣುಗಳು ಮತ್ತು  ಸಲಾಡ್‌ಗಳು: ಕತ್ತರಿಸಿದ ಹಣ್ಣುಗಳಾಗಿರಬಹುದು ಅಥವಾ ಹಣ್ಣಿನ ಸಲಾಡ್‌ಗಳಾಗಿರಬಹುದು ಇವುಗಳನ್ನು ಸ್ಟೀಲ್‌ ಡಬ್ಬದಲ್ಲಿ ಸಂಗ್ರಹಿಸಬಾರದು. ಹೌದು ಇದರಿಂದ ಹಣ್ಣಿನಲ್ಲಿರುವ ನೀರಿನ ಅಂಶ ಹೊರ ಬರಬಹುದು ಮತ್ತು ಹಣ್ಣಿನ ರುಚಿ ಕೆಡುವ ಸಾಧ್ಯತೆಯೂ ಇದೆ. ಹಾಗಾಗಿ ಇವುಗಳನ್ನು ಗಾಜಿನ ಅಥವಾ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌, ಸೆರಾಮಿಕ್‌ ಬೌಲ್‌ಗಳಲ್ಲಿ ಇಡಬೇಕು.

5 / 6
ಉಪ್ಪು: ಉಪ್ಪನ್ನು ಸಹ ಸ್ಟೀಲ್‌ ಪಾತ್ರೆಗಳಲ್ಲಿ ಸಂಗ್ರಹಿಸಿಡಬಾರದು. ಇದು ಲೋಹದೊಂದಿಗೆ ಪ್ರತಿಕ್ರಿಯಿಸುವುದಿಲ್ಲವಾದರೂ, ಲೋಹದ ಪಾತ್ರೆಗಳಲ್ಲಿ ಉಪ್ಪನ್ನು ದೀರ್ಘಕಾಲ ಸಂಗ್ರಹಿಸುವುದರಿಂದ ಉಪ್ಪಿನಲ್ಲಿ ತೇವಾಂಶ ಕಾಣಿಸುತ್ತದೆ, ಉಪ್ಪಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಆ ಪಾತ್ರೆ ತುಕ್ಕು ಹಿಡಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಉಪ್ಪನ್ನು ಯಾವಾಗಲೂ ಗಾಳಿಯಾದಡ ಗಾಜಿನ ಮತ್ತು ಸೆರಾಮಿಕ್‌ ಡಬ್ಬಗಳಲ್ಲಿ ಸಂಗ್ರಹಿಸಿಡುವುದು ಸೂಕ್ತ.

6 / 6
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!