ಗಂಟೆಗಟ್ಟಲೆ ರೀಲ್ಸ್ ನೋಡುತ್ತಾ ಸಮಯ ಕಳೆಯುತ್ತಿದ್ದೀರಾ? ಈ ಗೀಳಿನಿಂದ ಹೊರ ಬರಲು ಈ ಸಲಹೆ ಪಾಲಿಸಿ
ಇತ್ತೀಚಿನ ದಿನಗಳಲ್ಲಿ, ರೀಲ್ಸ್ ಕ್ರೇಜ್ ಉತ್ತುಂಗದಲ್ಲಿದೆ. ಮೊಬೈಲ್‌ನಲ್ಲಿ ರೀಲ್ಸ್ ಸ್ಕ್ರೋಲ್ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ನೀವು ಸಹ ಹೀಗೆ ಗಂಟೆಗಟ್ಟಲೇ ರೀಲ್ಸ್ ನೋಡುತ್ತಾ ಸಮಯ ಕಳೆಯುತ್ತಿದ್ದೀರಾ? ಹಾಗಿದ್ರೆ ಒಂದಷ್ಟು ಸಲಹೆಗಳನ್ನು ಪಾಲಿಸುವ ಮೂಲಕ ರೀಲ್ಸ್ ನೋಡುವ ಗೀಳಿನಿಂದ ಹೊರ ಬನ್ನಿ.

ಇಂದಿನ ಈ ಡಿಜಿಟಲ್ ಯುಗದಲ್ಲಿ ಸೋಷಿಯಲ್ ಮೀಡಿಯಾ (Social Media) ರೀಲ್ಸ್‌ಗಳು ಮನೋರಂಜನೆಯ ಒಂದು ಭಾಗವಾಗಿದೆ. ಹಿಂದೆಲ್ಲಾ ಟಿವಿ ನೋಡುತ್ತಾ ಟೈಮ್ ಪಾಸ್ ಮಾಡಿದ್ರೆ, ಈಗೆಲ್ಲಾ ಜನ ರೀಲ್ಸ್ ನೋಡುತ್ತಾ ಸಮಯ ಕಳೆಯುತ್ತಾರೆ. ಅದರಲ್ಲೂ ಕೆಲವರಂತೂ ಈ ರೀಲ್ಸ್‌ಗೆ ವ್ಯಸನಿಗಳಾಗಿಬಿಟ್ಟಿದ್ದಾರೆ. ಹೌದು ಯಾವಾಗ್ಲೂ ರೀಲ್ಸ್ ಸ್ಕ್ರೋಲ್ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿರುತ್ತಾರೆ. ಹೀಗಿರುವಾಗ ಈ ಅಭ್ಯಾಸವನ್ನು ನಿಯಂತ್ರಿಸುವುದು ಬಹಳ ಮುಖ್ಯ. ನೀವು ಕೂಡ ಇದೇ ರೀತಿ ಗಂಟೆಗಟ್ಟಲೆ ರೀಲ್ಸ್ (Reels addiction) ನೋಡುತ್ತೀರಾ? ಹಾಗಿದ್ರೆ ಈ ಅಭ್ಯಾಸವನ್ನು ಬಿಟ್ಟು ಬಿಡಲು ಈ ಒಂದಷ್ಟು ಸಲಹೆಗಳನ್ನು ಪಾಲಿಸಿ.
ರೀಲ್ಸ್ ನೋಡುವ ಅಭ್ಯಾಸವನ್ನು ಕಡಿಮೆ ಮಾಡಲು ಇಲ್ಲಿವೆ ಟಿಪ್ಸ್:
ಸಮಯದ ಮಿತಿ: ರೀಲ್ಸ್ ನೋಡಲು ಸಮಯದ ಮಿತಿಯನ್ನು ಹೊಂದಿಸಿ. ಕೆಲವರು 5 ನಿಮಿಷ ರೀಲ್ಸ್ ನೋಡಲು ಕೂತರೆ ಗಂಟೆಗಟ್ಟಲೇ ರೀಲ್ಸ್ ವೀಕ್ಷಿಸುತ್ತಾ ಸಮಸಯ ಕಳೆಯುತ್ತಾರೆ. ಆದ್ದರಿಂದ ಮೊದಲು ಸಮಯದ ಮಿತಿಯನ್ನು ನಿಗದಿಪಡಿಸಿ. ಉದಾಹರಣೆಗೆ ಪ್ರತಿದಿನ 15 ರಿಂದ 20 ನಿಮಿಷಗಳ ಕಾಲ ರೀಲ್ಸ್ ನೋಡುವುದು. ಹೀಗೆ ಸಮಯದ ಮಿತಿಯನ್ನು ನಿಗದಿ ಪಡಿಸಿ ಹಾಗೂ ಅದಕ್ಕಿಂತ ಹೆಚ್ಚು ರೀಲ್ಸ್ ನೋಡಬೇಡಿ.
ನೋಟಿಫಿಕೇಶನ್ ಆಫ್ ಮಾಡಿ: ನೀವು ಸೋಷಿಯಲ್ ಮೀಡಿಯಾದ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ ಇಡಬೇಕು. ನಿಮ್ಮ ಫ್ರೆಂಡ್ಸ್ ರೀಲ್ಸ್ ಶೇರ್ ಮಾಡಿದ್ರೆ, ಮತ್ತೆ ನೀವು ಪದೇ ಪದೇ ಸೋಷಿಯಲ್ ಮೀಡಿಯಾ ನೋಡುತ್ತಾ ಕೂರುತ್ತೀರಿ. ಅದಕ್ಕಾಗಿ ನೋಟಿಫಿಕೇಶನ್ ಆಫ್ ಮಾಡಿ.
ಹೊಸ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ಹೆಚ್ಚಿನವರು ಫ್ರೀ ಟೈಮ್‌ನಲ್ಲಿ ರೀಲ್ಸ್ ನೋಡುತ್ತಾರೆ. ಆದರೆ ರೀಲ್ಸ್ ನೋಡುವ ಬದಲು ನೀವು ಫ್ರೀ ಟೈಮಲ್ಲಿ ಪುಸ್ತಕ ಓದುವುದೋ, ಸಾಂಗ್ ಕೇಳುವುದು, ಚಿತ್ರ ಬಿಡಿಸುವುದು, ಆಟ ಆಡುವುದು ಇತ್ಯಾದಿ ಚಟುವಟಿಕೆಗಳನ್ನು ಮಾಡಲು ಅಭ್ಯಾಸ ಮಾಡಿ. ಇದು ಕೂಡಾ ನೀವು ರೀಲ್ಸ್ ಚಟದಿಂದ ಹೊರ ಬರಲು ಸಹಾಯ ಮಾಡುತ್ತದೆ.
ಮೊಬೈಲ್ ಡೇಟಾ ಆಫ್ ಮಾಡಿ: ಯಾವಾಗಲೂ ಮೊಬೈಲ್ ಡೇಟಾ ಆನ್ ಮಾಡಿ ಇಟ್ಟುಕೊಳ್ಳಬೇಡು. ಅದರಲ್ಲೂ ನೀವು ಕುಟುಂಬ ಮತ್ತು ಸ್ನೇಹಿತರೊಂದಿಗೆ ಇದ್ದರೆ, ಡೇಟಾವನ್ನು ಆಫ್ ಮಾಡಿ ಮತ್ತು ಫೋನನ್ನು ನಿಮ್ಮಿಂದ ದೂರವಿಡಿ. ಇದರಿಂದಲೂ ನೀವು ರೀಲ್ಸ್ ನೋಡುವುದನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: ಹೆಚ್ಚು ಸಮಯ ಫೋನ್‌ನಲ್ಲಿಯೇ ಕಳೆಯುತ್ತಿದ್ದೀರಾ? ಈ ಅಡಿಕ್ಷನ್‌ನಿಂದ ಹೊರ ಬರಲು ಇಲ್ಲಿದೆ ಸಲಹೆ
ಡಿಜಿಟಲ್ ಡಿಟಾಕ್ಸ್ ಅಭ್ಯಾಸ ಮಾಡಿ: ವಾರದಲ್ಲಿ ಒಂದು ದಿನ ಸಾಮಾಜಿಕ ಮಾಧ್ಯಮದಿಂದ ಸಂಪೂರ್ಣವಾಗಿ ದೂರವಿರಿ. ಇದನ್ನು ಡಿಜಿಟಲ್ ಡಿಟಾಕ್ಸ್ ಎಂದು ಕರೆಯಲಾಗುತ್ತದೆ. ಈ ದಿನ, ನೀವು ನಿಮ್ಮ ಮೊಬೈಲ್‌ನಿಂದ ದೂರವಿರಿ ಮತ್ತು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೊರಗೆ ಹೋಗಿ ಅವರೊಂದಿಗೆ ಒಂದೊಳ್ಳೆ ಸಮಯವನ್ನು ಕಳೆಯಿರಿ. ಹೀಗೆ ಮಾಡುವ ಮೂಲಕವೂ ನೀವು ಕ್ರಮೇಣ ರೀಲ್ಸ್ ಮತ್ತು ಮೊಬೈಲ್ ಚಟದಿಂದ ಹೊರ ಬರಬಹುದು.
ಫೋನನ್ನು ದೂರವಿಡಿ: ಸಾಧ್ಯವಾದಷ್ಟು ನೀವು ನಿಮ್ಮಿಂದ ನಿಮ್ಮ ಫೋನನ್ನು ದೂರವಿಡಲು ಪ್ರಯತ್ನಿಸಿ. ಮೊಬೈಲ್ ಹತ್ತರವಿದ್ದರೆ ನೀವು ಪದೇ ಪದೇ ಮೊಬೈಲ್ ಆನ್ ಮಾಡಿ ರೀಲ್ಸ್ ನೋಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊಬೈಲ್ ಫೋನ್ ದೂರವಿಡಿ. ಅಗತ್ಯವಿದ್ದಾಗ ಮಾತ್ರ ಅದನ್ನು ಬಳಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 pm, Thu, 10 July 25








