AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Morning habits: ಬೆಳಿಗ್ಗೆ ನೀವು ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗುತ್ತದೆ

ಬೆಳಗ್ಗಿನ ಸಮಯವು ಇಡೀ ದಿನ ಸ್ಥಿತಿಗತಿಯನ್ನು ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ. ಹೌದು ಬೆಳಗ್ಗಿನ ಹೊತ್ತು ಸಕಾರಾತ್ಮಕವಾಗಿದ್ದರೆ ಇಡೀ ದಿನವೇ ಚೆನ್ನಾಗಿರುತ್ತದೆ. ಅದಕ್ಕಾಗಿಯೇ ಬೆಳಗ್ಗಿನ ದಿನಚರಿಯನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಇದರ ಬದಲು ಬೆಳಗ್ಗಿನ ಹೊತ್ತು ಈ ಒಂದಷ್ಟು ಅಭ್ಯಾಸಗಳನ್ನು ಪಾಲಿಸಿದರೆ ನಿಮ್ಮ ಇಡೀ ದಿನವೇ ಹಾಳಾಗುತ್ತದೆ.

Morning habits: ಬೆಳಿಗ್ಗೆ ನೀವು ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗುತ್ತದೆ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 15, 2025 | 5:11 PM

Share

ಬೆಳಗ್ಗೆ ಚೆನ್ನಾಗಿ  ಪ್ರಾರಂಭವಾದರೆ, ನಿಮ್ಮ ಇಡೀ ದಿನ ಚೆನ್ನಾಗಿ ಮತ್ತು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ. ಹೌದು ನಮ್ಮ ಇಡೀ ದಿನ ಹೇಗಿರುತ್ತದೆ ಎಂಬುದು ಬೆಳಗಿನ ದಿನಚರಿಯ ಮೇಲೆ ಅವಲಂಬಿತವಾಗಿರುತ್ತದೆ. ಸಕಾರಾತ್ಮಕವಾಗಿ (Positivity)  ದಿನ ಆರಂಭವಾದರೆ ಆ ಇಡೀ ದಿನವೇ ಉಲ್ಲಾಸದಾಕವಾಗಿರುತ್ತದೆ. ಅದೇ ರೀತಿ ನಮ್ಮ ಬೆಳಗ್ಗಿನ ಕೆಲವೊಂದು ದಿನಚರಿಗಳಿಂದ (morning habits) ಇಡೀ ದಿನವೇ ಹಾಳಾಗುತ್ತಂತೆ. ನಿಮಗೂ ನಿಮ್ಮ ದಿನ ಧನಾತ್ಮಕವಾಗಿ ಆರಂಭವಾಗಬೇಕು, ಇಡೀ ದಿನ ಚೆನ್ನಾಗಿರಬೇಕು ಎಂಬ ಹಂಬಲವೇ? ಹೀಗೆ ನಿಮ್ಮ ಇಡೀ ದಿನ ಚೆನ್ನಾಗಿರಬೇಕೆಂದರೆ  ಈ ಕೆಲವೊಂದಿಷ್ಟು ಅಭ್ಯಾಸಗಳನ್ನುಬಿಟ್ಟು ಬಿಡಬೇಕು. ಹಾಗಿದ್ರೆ ದಿನವನ್ನು ಹಾಳು ಮಾಡುವ ಬೆಳಗ್ಗಿನ ಆ ಅಭ್ಯಾಸಗಳು ಯಾವುದೆಂಬುದನ್ನು ನೋಡೋಣ ಬನ್ನಿ.

ಬೆಳಗಿನ ಈ ದಿನಚರಿ ನಿಮ್ಮ ದಿನವನ್ನು ಹಾಳು ಮಾಡುತ್ತದೆ:

ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡುವುದು: ಅನೇಕರಿಗೆ ಬೆಳಗ್ಗೆ ಎದ್ದ ತಕ್ಷಣವೇ ಫೋನ್‌ ನೋಡುವ ಅಭ್ಯಾಸ ಇರುತ್ತದೆ. ಹೇಳಬೇಕೆಂದರೆ ಅವರ ದಿನ ಪ್ರಾರಂಭವಾಗುವುದೇ ಫೋನ್‌ನಿಂದ. ಹೀಗೆ ಬೆಳಗ್ಗೆ ಎದ್ದ ತಕ್ಷಣ ಫೋನ್‌ ನೋಡಬಾರದು. ಏಕೆಂದರೆ ಇದು ಮೆದುಳಿನ ಮೇಲಿನ ಹೊರೆಯನ್ನು ಹೆಚ್ಚಿಸುತ್ತದೆ, ಇದರಿಂದ ನೀವು ಕೆಲಸದ ಮೇಲೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಇನ್ನೊಂದು ಏನಪ್ಪಾ ಅಂದ್ರೆ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡಿದಾಗ ಕೆಟ್ಟ ಸುದ್ದಿಗಳನ್ನು ನೋಡಿದರೆ ನಿಮ್ಮ ಇಡೀ ದಿನವೇ ಹಾಳಾಗುತ್ತದೆ. ಆದ್ದರಿಂದ ಈ ಅಭ್ಯಾಸವನ್ನು ಬಿಟ್ಟುಬಿಡಿ.

ಉಪಹಾರ ಸೇವನೆ ಮಾಡದಿರುವುದು: ಕಾಲೇಜಿಗೆ, ಆಫೀಸ್‌ಗೆ ಲೇಟ್‌ ಆಯ್ತು ಎಂಬ ಕಾರಣಕ್ಕೆ ಅನೇಕರು ಬೆಳಗ್ಗಿನ ಉಪಹಾರವನ್ನೇ ಬಿಟ್ಟುಬಿಡುತ್ತಾರೆ. ಹೀಗೆ ಬೆಳಗ್ಗೆ ಆಹಾರ ಸೇವನೆ ಮಾಡದೆ ಹಸಿವಿನಿಂದ ಇರುವುದು ಹಾನಿಕಾರಕ. ಹೌದು ಇದು ಮೆದುಳಿನ ಶಕ್ತಿಯನ್ನು ಕುಗ್ಗಿಸುತ್ತದೆ. ಮತ್ತು ಇದು ನಿಮ್ಮ ಏಕಾಗ್ರತೆ, ಮನಸ್ಥಿತಿ ಎರಡರ ಮೇಲೂ ಪರಿಣಾಮ ಬೀರುತ್ತದೆ.

ಇದನ್ನೂ ಓದಿ
Image
ಈ ಅಭ್ಯಾಸಗಳಿದ್ದರೆ ಶ್ರೀಮಂತಿಕೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ
Image
ತಂದೆ ತನ್ನ ಮಗಳ ಮುಂದೆ ತಪ್ಪಿಯೂ ಈ ರೀತಿ ವರ್ತಿಸಬಾರದು
Image
ರೀಲ್ಸ್‌ ಗೀಳಿನಿಂದ ಹೊರ ಬರಲು ಈ ಸಲಹೆ ಪಾಲಿಸಿ
Image
“ಇಲ್ಲ” ಎಂದು ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಏಕೆ ಮುಖ್ಯ ಗೊತ್ತಾ?

ನೀರು ಕುಡಿಯದಿರುವುದು: ಬೆಳಗ್ಗೆ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ದೇಹವನ್ನು ಹೈಡ್ರೇಟ್‌ ಆಗಿಡುವುದು ಬಹಳ ಮುಖ್ಯ. ಅದಕ್ಕಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಹೀಗೆ ಬೆಳಿಗ್ಗೆ ನೀರು ಕುಡಿಯುವುದುದರಿಂದ ಮೆದುಳಿನ ಕೋಶಗಳು ತುಂಬಾ ಚುರುಕಾಗುತ್ತವೆ.

ಇದನ್ನೂ ಓದಿ: ಗಂಟೆಗಟ್ಟಲೆ ರೀಲ್ಸ್‌ ನೋಡುತ್ತಾ ಸಮಯ ಕಳೆಯುತ್ತಿದ್ದೀರಾ? ಈ ಗೀಳಿನಿಂದ ಹೊರ ಬರಲು ಈ ಸಲಹೆ ಪಾಲಿಸಿ

ಬೆಳಗ್ಗೆ ತಡವಾಡಿ ಏಳುವುದು: ಬೆಳಗ್ಗೆ ತಡವಾಗಿ ಏಳುವುದು ಕೂಡಾ ಒಳ್ಳೆಯದಲ್ಲ. ಹೀಗೆ ತಡವಾಗಿ ಎದ್ದರೆ, ಇಡೀ ದಿನ ಜಡತ್ವದಿಂದ ಕೂಡಿರುತ್ತದೆ. ನೀವು ಚೈತನ್ಯಶೀಲರಾಗಿರಬೇಕೆಂದರೆ, ದಿನಪೂರ್ತಿ ಆಕ್ಟಿವ್‌ ಆಗಿರಬೇಕೆಂದರೆ ಮುಂಜಾನೇ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ನೋವುಗಳ ಬಗ್ಗೆ ಯೋಚಿಸುವುದು: ಹೆಚ್ಚಿನವರಿಗೆ ಬೆಳಿಗ್ಗೆ ಎಚ್ಚರವಾದ ಬಳಿಕ ಹಾಸಿಗೆಯ ಮೇಲೆ ಒಂದಷ್ಟು ಹೊತ್ತು ಕುಳಿತು ತಮ್ಮ ನೋವಿನ ಸಂಗತಿಗಳನ್ನು ಮೆಲುಕು ಹಾಕುವ ಅಭ್ಯಾಸ ಇರುತ್ತದೆ. ಇದರಿಂದ ಮನಸ್ಸಿನ ಶಾಂತಿ ಎನ್ನುವಂತಹದ್ದು ಕದಡಿ ಹೋಗುತ್ತದೆ. ಜೊತೆಗೆ ಇದರಿಂದಾಗಿ ನಿಮ್ಮ ಇಡೀ ದಿನವೇ ಕಿರಿಕಿರಿದಾಯಕವಾಗಿರುತ್ತದೆ. ಹಾಗಾಗಿ  ಸಕಾರಾತ್ಮಕ ಯೋಚನೆಗಳೊಂದಿಗೆ ದಿನವನ್ನು ಆರಂಭಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ