AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips: ಮೊಡವೆಯಿಂದ ಹಣೆಯ ಚೆಂದ ಹಾಳಾಗಿದ್ಯಾ? ಹಾಗಿದ್ರೆ ಈ ಟಿಪ್ಸ್ ಪಾಲಿಸಿ

ಮುಖದ ಮೇಲೆ ಮೊಡವೆಗಳು ಬರುವುದು ಸಾಮಾನ್ಯ. ಆದರೆ ಅದರಿಂದ ಮುಕ್ತಿ ಪಡೆಯಲು ರಾಸಾಯನಿಕ ಪ್ರಾಡಕ್ಟ್ ಬಳಸುವುದರ ಬದಲು ಯಾವುದೇ ರೀತಿಯ ಹಣ ವ್ಯಯ ಮಾಡದೆಯೇ ನೈಸರ್ಗಿಕವಾಗಿ ಮನೆಯ್ಲಲಿಯೇ ಕುಳಿತು ಪರಿಹಾರ ಕಂಡುಕೊಳ್ಳಬಹುದು. ಅಷ್ಟೇ ಅಲ್ಲ ಇವುಗಳಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ. ಹಾಗಾಗಿ ಇವುಗಳನ್ನು ಬಳಕೆ ಮಾಡುವ ಮೂಲಕ ಮೊಡವೆಗಳಿಗೆ ಅದರಲ್ಲಿಯೂ ಹಣೆ ಮೇಲೆ ಕಂಡು ಬರುವ ಗುಳ್ಳೆಗಳಿಂದ, ಕಪ್ಪು ಚುಕ್ಕೆಗಳಿಂದ ಮುಕ್ತಿ ಪಡೆಯಬಹುದು. ಹಾಗಾದರೆ ಮೊಡವೆ ಮತ್ತು ಮುಖದ ಮೇಲಿನ ಕಲೆ ತೆಗೆಯಲು ಏನು ಮಾಡಿದರೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

Beauty Tips: ಮೊಡವೆಯಿಂದ ಹಣೆಯ ಚೆಂದ ಹಾಳಾಗಿದ್ಯಾ? ಹಾಗಿದ್ರೆ ಈ ಟಿಪ್ಸ್ ಪಾಲಿಸಿ
ಹಣೆ ಮೇಲೆ ಮೊಡವೆ
ಪ್ರೀತಿ ಭಟ್​, ಗುಣವಂತೆ
|

Updated on: Jul 14, 2025 | 5:45 PM

Share

ಮುಖದಲ್ಲಿ ಮೊಡವೆಗಳು ಬಂದರೆ ಯಾರಿಗೆ ತಾನೇ ಖುಷಿ ಆಗುತ್ತೆ ಹೇಳಿ? ಮುಖ ಸ್ವಚ್ಛವಾಗಿ, ಕಾಂತಿಯುತವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ನಮ್ಮ ಇತ್ತೀಚಿನ ಜೀವನಶೈಲಿ (Lifestyle), ಪೌಷ್ಟಿಕಾಂಶದ ಕೊರತೆ, ಮಾಲಿನ್ಯ, ಧೂಳು ಸೇರಿದಂತೆ ನಾನಾ ರೀತಿಯ ಕಾರಣಗಳಿಂದ ಮುಖದಲ್ಲಿ ಮೊಡವೆಗಳು (Pimples) ಮತ್ತು ಕಪ್ಪು ಕಲೆಗಳು ಕಂಡುಬರುವುದು ಹೆಚ್ಚಾಗುತ್ತಿದೆ. ಅದೇ ರೀತಿ, ಕೆಲವರಲ್ಲಿ ಮೊಡವೆಗಳು ಹಣೆಯ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಅವುಗಳನ್ನು ನಿರ್ಲಕ್ಷಿಸುವುದರಿಂದ ಸಮಸ್ಯೆ ಇನ್ನಷ್ಟು ಹದಗೆಡಬಹುದು. ಅದೇ ರೀತಿ ಇವುಗಳಿಗೆ ಮುಕ್ತಿ ನೀಡಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ರಾಸಾಯನಿಕ ಪ್ರಾಡಕ್ಟ್ ಬಳಸುವುದು ಕೂಡ ಕೆಲವು ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಹಾಗಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೌಂದರ್ಯ ತಜ್ಞರು ಹೇಳಿರುವ ಕೆಲವು ನೈಸರ್ಗಿಕ ವಿಧಾನಗಳನ್ನು (natural method) ಅನುಸರಿಸುವ ಮೂಲಕ ಇವುಗಳಿಂದ ಶಾಶ್ವತ ಪರಿಹಾರ ಪಡೆಯಬಹುದು ಅದಲ್ಲದೆ ಇವುಗಳನ್ನು ಬಳಕೆ ಮಾಡಲು ಹೆಚ್ಚಿನ ಹಣ ವಿನಿಯೋಗಿಸುವ ಅವಶ್ಯಕೆತೆಯೂ ಬರುವುದಿಲ್ಲ. ಹಾಗಾದರೆ ಮೊಡವೆ ಮತ್ತು ಮುಖದ ಮೇಲಿನ ಕಲೆ ತೆಗೆಯಲು ಏನು ಮಾಡಿದರೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದಾಲ್ಚಿನ್ನಿ:

ಅಡುಗೆಗೆ ತನ್ನದೇ ಆದಂತಹ ಪರಿಮಳ ನೀಡುವ ದಾಲ್ಚಿನ್ನಿ, ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ಇದಕ್ಕಾಗಿ, ದಾಲ್ಚಿನ್ನಿ ಪುಡಿಯನ್ನು ತೆಗೆದುಕೊಂಡು ಸ್ವಲ್ಪ ಜೇನುತುಪ್ಪದೊಂದಿಗೆ ಬೆರೆಸಿ. ಆ ಪೇಸ್ಟ್ ಅನ್ನು ನಿಮ್ಮ ಹಣೆಯ ಮೇಲಿರುವ ಮೊಡವೆಗಳ ಮೇಲೆ ಹಚ್ಚಿ. ನೀವು ಇದನ್ನು ಕೆಲವು ದಿನಗಳ ವರೆಗೆ ತಪ್ಪದೆ ಮಾಡಿದರೆ ಮೊಡವೆಗಳು ಕಡಿಮೆಯಾಗಿ ನೈಸರ್ಗಿಕ, ಕಾಂತಿಯುತವಾದ ತ್ವಚೆ ನಿಮ್ಮದಾಗುತ್ತದೆ.

ಲೋಳೆಸರ, ಅಥವಾ ಅಲೋವೆರಾ:

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಲೋಳೆಸರ, ಅಥವಾ ಅಲೋವೆರಾ ಇದ್ದೆ ಇರುತ್ತದೆ. ಇನ್ನು ಇವುಗಳ ಪ್ರಯೋಜನಗಳ ಬಗ್ಗೆ ಹೇಳಬೇಕಾಗಿಲ್ಲ. ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಅಲೋವೆರಾ ಜೆಲ್ ಅನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ. ಇದನ್ನು ಮಾಡಲು, ರಾತ್ರಿ ಮಲಗುವ ಮುನ್ನ ಮೊಡವೆಗಳ ಮೇಲೆ ಅಲೋವೆರಾ ಜೆಲ್ ಅನ್ನು ಹಚ್ಚಬೇಕು. ಸ್ವಲ್ಪ ಸಮಯದ ನಂತರ, ಅದನ್ನು ಶುದ್ಧ ನೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದ ಮೊಡವೆಗಳಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ
Image
ರೀಲ್ಸ್‌ ಗೀಳಿನಿಂದ ಹೊರ ಬರಲು ಈ ಸಲಹೆ ಪಾಲಿಸಿ
Image
“ಇಲ್ಲ” ಎಂದು ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಏಕೆ ಮುಖ್ಯ ಗೊತ್ತಾ?
Image
ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿ
Image
ವರದಕ್ಷಿಣೆ ಅಪರಾಧವಾಗಿದ್ದರೆ, ಜೀವನಾಂಶ ಕೇಳುವುದು ಕಾನೂನುಬದ್ಧವಾಗಿದೆಯೇ?

ಗ್ರೀನ್ ಟೀ ಟೋನರ್:

ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಲು, ರಾತ್ರಿ ಮಲಗುವ ಮುನ್ನ ಟೋನರ್ ಹಚ್ಚುವುದು ಉತ್ತಮ. ನೀವು ಗ್ರೀನ್ ಟೀ ಬಳಸಿ ಮನೆಯಲ್ಲಿ ನೈಸರ್ಗಿಕವಾಗಿ ಟೋನರ್ ತಯಾರಿಸಬಹುದು. ಇದಕ್ಕಾಗಿ, ಗ್ರೀನ್ ಟೀ ಪುಡಿಯನ್ನು ತೆಗೆದುಕೊಂಡು ಸ್ವಲ್ಪ ರೋಸ್ ವಾಟರ್ ನೊಂದಿಗೆ ಬೆರೆಸಿ, ನಂತರ ಅದನ್ನು ಸ್ಪ್ರೇ ಬಾಟಲಿಯಲ್ಲಿ ಸಂಗ್ರಹಿಸಿ. ನಿಯಮಿತವಾಗಿ ಬಳಸಿದರೆ, ಅದು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಪುದೀನ, ರೋಸ್ ವಾಟರ್:

ಮುಖದ ಮೇಲಿನ ಮೊಡವೆಗಳನ್ನು ನಿವಾರಿಸಿ ಚರ್ಮದ ಆರೈಕೆ ಮಾಡಲು ಪುದೀನವನ್ನು ಬಳಸಿಕೊಳ್ಳಬಹುದು. ಇದಕ್ಕಾಗಿ, 10 ರಿಂದ 12 ಪುದೀನ ಎಲೆಗಳನ್ನು ಪುಡಿಮಾಡಿ ಸ್ವಲ್ಪ ರೋಸ್ ವಾಟರ್ ನೊಂದಿಗೆ ಮಿಶ್ರಣ ಮಾಡಿ. ಆ ಪೇಸ್ಟ್ ಅನ್ನು ಮೊಡವೆಗಳ ಮೇಲೆ ಹಚ್ಚಿ ಮತ್ತು ಕೆಲವು ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಈ ರೀತಿ ಮಾಡಿದರೆ ಮುಖದ ಮೇಲಿನ ಮೊಡವೆಗಳು ಮಾಯವಾಗುತ್ತದೆ.

ಇದನ್ನೂ ಓದಿ: ಪ್ರತಿದಿನ ಈ ಒಂದು ಬೀಜವನ್ನು ತಿಂದ್ರೆ ಸಾಕು ಕೂದಲು ಉದುರುವುದು ನಿಲ್ಲುತ್ತೆ ನೋಡಿ!

ಈ ರೀತಿ ಮಾಡಬೇಡಿ

ಹಣೆಯ ಮೇಲಾಗಲಿ ಅಥವಾ ಮುಖದ ಮೇಲೆ ಇರುವ ಮೊಡವೆಗಳನ್ನು ಸ್ಕ್ರಬ್ ಮಾಡಬೇಡಿ ಅಥವಾ ಪಾಪ್ ಮಾಡಬೇಡಿ. ಹೀಗೆ ಮಾಡುವುದರಿಂದ ಮೊಡವೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಮೇಲೆ ತಿಳಿಸಿದ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ. ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ಚರ್ಮದ ಆರೈಕೆ ಮಾಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ