ಪ್ರತಿದಿನ ಈ ಒಂದು ಬೀಜವನ್ನು ತಿಂದ್ರೆ ಸಾಕು ಕೂದಲು ಉದುರುವುದು ನಿಲ್ಲುತ್ತೆ ನೋಡಿ!
ಕೂದಲನ್ನು ನಾವು ಎಷ್ಟು ಇಷ್ಟಪಡುತ್ತೀವೋ, ಅದನ್ನು ಬೆಳೆಸುವುದಕ್ಕೆ ಅಷ್ಟೇ ಕಷ್ಟ ಪಡುತ್ತೇವೆ. ಹುಡುಗ, ಹುಡುಗಿಯರು ಎನ್ನದೆ ಎಲ್ಲರಲ್ಲಿಯೂ ಕೂದಲು ಉದುರುವುದು ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಬಹಳ ಹೆಚ್ಚಾಗುತ್ತಿದೆ. ಅದಕ್ಕಾಗಿಯೇ ಇದನ್ನು ತಡೆಯಲು ವಿವಿಧ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತದೆ. ಹಲವು ಪ್ಯಾಕ್‌ಗಳು, ಸೀರಮ್‌ಗಳು ಮತ್ತು ಎಣ್ಣೆಗಳನ್ನು ಒಂದರ ನಂತರ ಒಂದರಂತೆ ಬಳಸಲಾಗುತ್ತದೆ. ಆದರೆ ಯಾವುದರಿಂದಲೂ ನಾವು ಅಂದುಕೊಂಡಷ್ಟು ಉಪಯೋಗ ಸಿಗುವುದಿಲ್ಲ. ಹಾಗಾದರೆ ಕೂದಲನ್ನು ಪೋಷಿಸಲು ಏನು ಮಾಡಬೇಕು? ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೂದಲು (Hair) ಎಷ್ಟು ಇಷ್ಟವೋ, ಅದನ್ನು ಬೆಳೆಸುವುದು ಅಷ್ಟೇ ಕಷ್ಟ. ಇದಕ್ಕಾಗಿ ಪ್ರತಿನಿತ್ಯವೂ ವಿವಿಧ ಪ್ರಯತ್ನಗಳನ್ನು ಮಾಡಲಾಗುತ್ತದೆ. ಪ್ಯಾಕ್‌ಗಳು, ಸೀರಮ್‌ಗಳು ಮತ್ತು ಎಣ್ಣೆ ಹೀಗೆ ಒಂದರ ನಂತರ ಮತ್ತೊಂದನ್ನು ಬಳಸಲಾಗುತ್ತದೆ. ಆದರೂ ಕೆಲವು ಬಾರಿ ಯಾವುದೇ ರೀತಿಯ ಫಲಿತಾಂಶ ಸಿಗುವುದಿಲ್ಲ. ಇದಕ್ಕೆ ಕಾರಣವೆಂದರೆ ಕೂದಲಿಗೆ ಒಳಗಿನಿಂದ ಪೋಷಣೆ ಸಿಗಬೇಕಾಗುತ್ತದೆ. ಅಂದರೆ ಮೊದಲು ಬೇರುಗಳಿಗೆ ಅಥವಾ ಕೂದಲಿನ ಬುಡಕ್ಕೆ ಬಲವನ್ನು ಒದಗಿಸಬೇಕು. ಅದಕ್ಕೆ ಸರಿಯಾಗಿ ಪೋಷಣೆಯನ್ನು ನೀಡಬೇಕು. ಆಗ ಮಾತ್ರ ಕೂದಲಿನ ಸಮಸ್ಯೆಗಳು ನಿವಾರಣೆಯಾಗಿ, ದಪ್ಪ ಮತ್ತು ಆರೋಗ್ಯಕರವಾಗಿ ಬೆಳೆಯುತ್ತದೆ. ಇಲ್ಲದಿದ್ದರೆ, ಕೂದಲಿನ ಮೇಲೆ ಎಷ್ಟೇ ಮಾಸ್ಕ್‌ಗಳು (Hair Mask), ಪ್ಯಾಕ್‌ಗಳು ಅಥವಾ ಸೀರಮ್‌ಗಳನ್ನು ಹಚ್ಚಿದರೂ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಹಾಗಾದರೆ ಕೂದಲನ್ನು ಪೋಷಿಸಲು ಏನು ಮಾಡಬೇಕು? ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಇದಕ್ಕೆ ಪೂರಕವಾಗಿ ಡಾ. ರಾಘವಂಶಿ (Dr.Raghuvamsi) ಅವರು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವ ಆಹಾರಗಳ ಬಗ್ಗೆ ತಿಳಿಸಿದ್ದು, ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡುವ ಮೂಲಕ ಕೂದಲು ಉದುರುವುದನ್ನು ತಡೆದು, ಉದ್ದ ಮತ್ತು ದಪ್ಪ ಬರುವಂತೆ ಮಾಡಬಹುದು ಎಂದಿದ್ದಾರೆ.
ಕೂದಲು ಉದುರುವುದಕ್ಕೆ ಕಾರಣಗಳೇನು?
ಸಾಮಾನ್ಯವಾಗಿ ಕೂದಲು ಉದುರುವುದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಒತ್ತಡ, ಮಾಲಿನ್ಯ, ಪೌಷ್ಟಿಕಾಂಶದ ಕೊರತೆ, ಹಾರ್ಮೋನುಗಳ ಬದಲಾವಣೆಗಳು ಮತ್ತು ಕೆಟ್ಟ ಅಭ್ಯಾಸಗಳು ಸೇರಿವೆ. ಈ ಕಾರಣಗಳಿಂದಾಗಿ ಕೂದಲು ಉದುರುವುದು ಹೆಚ್ಚಾಗುತ್ತವೆ ಬಳಿಕ ಏನೇ ಮಾಡಿದರೂ ಈ ಸಮಸ್ಯೆ ಕಡಿಮೆಯಾಗುವುದಿಲ್ಲ.
ಪುರುಷರಲ್ಲಿ ಕೂದಲು ಉದುರುವುದು
ಪುರುಷರಲ್ಲಿ ಕೂದಲು ಹೆಚ್ಚಾಗಿ ಉದುರುತ್ತದೆ. ಕೂದಲು ಉದುರುವುದು ಮಾತ್ರವಲ್ಲ, ಬೋಳು ಕೂಡ ಆಗುತ್ತದೆ. ಇದರಿಂದ ಮುಕ್ತಿ ಪಡೆಯಲು, ಸಮಸ್ಯೆಯ ಮೂಲವನ್ನು ಕಂಡುಹಿಡಿಯಬೇಕು. ಸಾಮಾನ್ಯವಾಗಿ ಪುರುಷರಲ್ಲಿ ಕೂದಲು ಉದುರುವಿಕೆಗೆ ಡೈಹೈಡ್ರೊಟೆಸ್ಟೊಸ್ಟೆರಾನ್ ಎಂಬ ಹಾರ್ಮೋನ್ ಕಾರಣವಾಗಿದೆ. ಹಾಗಾಗಿ ಆಹಾರದಲ್ಲಿ ಕೂದಲು ಬೆಳವಣಿಗೆಗೆ ಸಹಾಯ ಮಾಡುವ ಆಹಾರವನ್ನು ಹೆಚ್ಚಿಸುವುದರ ಜೊತೆಗೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವ ಆಹಾರವನ್ನು ಸೇವಿಸಬೇಕು. ಹಾಗಾದರೆ ಅಂತಹ ಆಹಾರಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ.
ಇದನ್ನೂ ಓದಿ: Hair Care: ಬೋಳು ತಲೆಯಲ್ಲಿಯೂ ಚಿಗುರುತ್ತೆ ಕೂದಲು, ಇದನ್ನು ಹಚ್ಚಿ ನೋಡಿ
ಒಮೆಗಾ 3, ಒಮೆಗಾ 6 ಕೊಬ್ಬಿನಾಮ್ಲಗಳು
ಡಾ. ರಾಘವಂಶಿ ಅವರು, ಸಾಮಾನ್ಯವಾಗಿ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳು ಹಲವು ವಿಧದ ಆಹಾರಗಳಲ್ಲಿ ಕಂಡುಬರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕೂದಲು ದಪ್ಪವಾಗಿ ಬೆಳೆಯುತ್ತದೆ. ಇದಕ್ಕಾಗಿ, ಮಾಂಸಾಹಾರಿಗಳು ತಮ್ಮ ಆಹಾರದಲ್ಲಿ ಸಾಲ್ಮನ್ ಮತ್ತು ಸಾರ್ಡೀನ್‌ಗಳನ್ನು ಸೇರಿಸಿಕೊಳ್ಳಬೇಕು, ಏಕೆಂದರೆ ಈ ಮೀನುಗಳು ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಆದ್ದರಿಂದ, ಅವುಗಳನ್ನು ನಿಯಮಿತವಾಗಿ ತಿನ್ನಬೇಕು. ಸಸ್ಯಾಹಾರಿಗಳಿಗೆ, ಅಗಸೆ ಬೀಜಗಳು, ಚಿಯಾ ಬೀಜಗಳು ಮತ್ತು ವಾಲ್ನಟ್ಗಳು ಉತ್ತಮ ಮೂಲಗಳಾಗಿವೆ. ಆದರೆ ಅಗಸೆ ಬೀಜಗಳನ್ನು ತಿನ್ನುವ ಮೊದಲು ಅವುಗಳನ್ನು ಪುಡಿಮಾಡಿ ತಿನ್ನುವುದು ಬಹಳ ಉತ್ತಮ ಎಂದಿದ್ದಾರೆ.
ಯಾವ ಪ್ರಮಾಣದಲ್ಲಿ ಸೇವನೆ ಮಾಡಬೇಕು?
ಪ್ರತಿದಿನ 1 ಚಮಚ ಚಿಯಾ ಬೀಜಗಳು, 1 ಚಮಚ ಅಗಸೆ ಬೀಜಗಳು ಅಥವಾ 7 ವಾಲ್ನಟ್ಗಳನ್ನು ಸೇವಿಸಬೇಕು. ಈ ರೀತಿ ತಪ್ಪದೆ ಮಾಡಿದರೆ ಕೂದಲು 3 ರಿಂದ 6 ತಿಂಗಳೊಳಗೆ ದಪ್ಪವಾಗಿ ಬೆಳೆಯುತ್ತದೆ. ಇದು ಕೂದಲು ಉದುರುವಿಕೆಯಲ್ಲಿ 90% ಕಡಿಮೆ ಮಾಡಲು ಸಹಾಯ ಮಾದುತ್ತದೆ, ಜೊತೆಗೆ ಕೂದಲು ಸೊಂಪಾಗಿ, ದಪ್ಪವಾಗಿ ಬೆಳವಣಿಗೆಯಾಗಲು ಅನುವು ಮಾಡಿಕೊಡುತ್ತದೆ. ದುಬಾರಿ ಎಣ್ಣೆಗಳು ಮತ್ತು ಪ್ಯಾಕ್‌ಗಳನ್ನು ಬಳಸುವ ಬದಲು, ಈ ರೀತಿಯ ಆಹಾರವನ್ನು ಸೇವಿಸುವುದು ಕೂದಲು ಆರೋಗ್ಯಕರವಾಗಿ ಬೆಳವಣಿಗೆಯಾಗಲು ತುಂಬಾ ಪ್ರಯೋಜನಕಾರಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








