ಡ್ರೈವಿಂಗ್ ಮಾಡುವಾಗ ಬರುವ ಬೆನ್ನುನೋವನ್ನು ತಡೆಯಲು ಇಲ್ಲಿದೆ ಸಿಂಪಲ್ ಟಿಪ್ಸ್
ದೂರದ ಪ್ರಯಾಣ ಮಾಡುವುದು ಕೆಲವರಿಗೆ ಖುಷಿ ನೀಡಿದರೆ ಇನ್ನು ಕೆಲವರಿಗೆ ಆಯಾಸವಾಗುತ್ತದೆ. ಅದರಲ್ಲಿಯೂ ಕೆಲವರಿಗೆ ಹೆಚ್ಚು ಹೊತ್ತು ವಾಹನ ಚಲಾಯಿಸಿದರೆ ದೇಹದಲ್ಲಿ ನೋವು, ಅದರಲ್ಲಿಯೂ ವಿಶೇಷವಾಗಿ ಬೆನ್ನು ನೋವಿನಿಂದ ಬಳಲುತ್ತಾರೆ. ನಿಮಗೂ ಈ ರೀತಿ ಸಮಸ್ಯೆ ಇದ್ದರೆ ಚಿಂತಿಸುವ ಅಗತ್ಯವಿಲ್ಲ. ನೀವು ಕೆಲವು ಸರಳ ಸಲಹೆಗಳನ್ನು ಅನುಸರಿಸಿದರೆ, ಈ ನೋವನ್ನು ಸುಲಭವಾಗಿ ನಿವಾರಿಸಬಹುದು. ನೀವು ಕಾರು ಚಾಲನೆ ಮಾಡುವಾಗ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಬೆನ್ನು ನೋವಿನ ಸಮಸ್ಯೆಯೇ ಬರುವುದಿಲ್ಲ. ಹಾಗಾದರೆ, ಏನು ಮಾಡಬೇಕು? ಇಲ್ಲಿದೆ ನೋಡಿ ಸರಳ ಸಲಹೆ.

ಪ್ರವಾಸ! (Journey) ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿಯೂ ನಮ್ಮ ಒತ್ತಡದ ಜೀವನಶೈಲಿಯಿಂದ ಮುಕ್ತಿ ಪಡೆಯಲು ಆಗಾಗ ದೂರದ ಊರುಗಳಿಗೆ ಪ್ರಯಾಣ ಮಾಡುವುದು ಎಲ್ಲ ರೀತಿಯಲ್ಲಿಯೂ ಒಳ್ಳೆಯದು. ಆದರೆ ನಮಗೆ ಬಸ್ಸಿಗಿಂತ ನಮ್ಮದೇ ವಾಹನ ಇದ್ದರೆ ಒಳ್ಳೆಯದು ಎಂದೆನಿಸುತ್ತದೆ. ಅದರಲ್ಲಿಯೂ ಕಾರು ಎಲ್ಲ ರೀತಿಯಿಂದಲೂ ಒಳ್ಳೆಯದು ಎಂದು ಮೊದಲು ಕಾರನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ ಕೆಲವರು, ತಮ್ಮ ಕಾರನ್ನು ಬೇರೆಯವರು ಡ್ರೈವ್ ಮಾಡುವುದಕ್ಕಿಂತ ನಾವೇ ಸ್ವಂತವಾಗಿ ಚಲಾಯಿಸಲು ಬಯಸುತ್ತಾರೆ. ಆದರೆ ದೀರ್ಘ ಪ್ರಯಾಣ ದೇಹದಲ್ಲಿ ನೋವು, ಅದರಲ್ಲಿಯೂ ಬೆನ್ನು ನೋವಿಗೆ (Back Pain) ಕಾರಣವಾಗಬಹುದು. ಈ ರೀತಿ ನಿಮಗೂ ಆಗುತ್ತಾ? ಪ್ರವಾಸಕ್ಕೆ ಹೋಗುವ ಆಸೆ ಇದ್ದರೂ ಬೆನ್ನು ನೋವಿನಿಂದ ಕ್ಯಾನ್ಸಲ್ ಮಾಡ್ತಾ ಇದ್ದರೆ ಚಿಂತೆ ಮಾಡಬೇಡಿ. ನೀವು ಕೆಲವು ಸರಳ ಸಲಹೆಗಳನ್ನು (Simple Tips) ಅನುಸರಿಸಿದರೆ, ಈ ನೋವನ್ನು ಸುಲಭವಾಗಿ ನಿವಾರಿಸಬಹುದು. ನೀವು ಕಾರು ಚಾಲನೆ ಮಾಡುವಾಗ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ಬೆನ್ನು ನೋವಿನ ಸಮಸ್ಯೆಯೇ ಬರುವುದಿಲ್ಲ. ಹಾಗಾದರೆ, ಏನು ಮಾಡಬೇಕು? ಇಲ್ಲಿದೆ ನೋಡಿ ಸರಳ ಸಲಹೆ.
ಸ್ಟೀರಿಂಗ್ ವೀಲ್ ನಿಂದ ಸರಿಯಾದ ಅಂತರ ಕಾಯ್ದುಕೊಳ್ಳಿ:
ಯಾವಾಗಲೂ ಕಾರು ಚಾಲನೆ ಮಾಡುವಾಗ ಸ್ಟೀರಿಂಗ್ ವೀಲ್ ನಿಂದ ಸರಿಯಾದ ಅಂತರವಿರಬೇಕು. ಸಾಮಾನ್ಯವಾಗಿ, ಕೆಲವರು ಕಾರು ಚಾಲನೆ ಮಾಡುವಾಗ ಸೀಟಿನಿಂದ ಸ್ವಲ್ಪ ಮುಂದಕ್ಕೆ ಬಾಗುತ್ತಾರೆ. ಇದರ ಪರಿಣಾಮವಾಗಿ ಅವರ ಕೈಗಳ ನಡುವೆ ಸರಿಯಾದ ಅಂತರ ಇರುವುದಿಲ್ಲ. ಇದರ ಪರಿಣಾಮ, ಹಿಂಭಾಗದಲ್ಲಿ ನೋವು ಉಂಟಾಗುತ್ತದೆ. ಆದ್ದರಿಂದ, ನಿಮ್ಮ ಸೀಟನ್ನು ಮುಂದಕ್ಕೆ ಅಥವಾ ಹಿಂದಕ್ಕೆ ಚಲಿಸಬೇಡಿ. ಏರ್‌ಬ್ಯಾಗ್ ಕೆಲಸ ಮಾಡಲು, ನೀವು ಸ್ಟೀರಿಂಗ್ ವೀಲ್‌ನ ಮಧ್ಯಭಾಗದಿಂದ ಕನಿಷ್ಠ 25 ರಿಂದ 30 ಸೆಂಟಿಮೀಟರ್‌ಗಳ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬುದನ್ನು ನೆನಪಿಡಿ.
ಇದನ್ನೂ ಓದಿ: ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿದ ನಂತರವೂ ಬೆನ್ನು ನೋವು ಬರಬಾರದು ಎಂದರೆ ಹೀಗೆ ಮಾಡಿ
ಸೀಟನ್ನು ತುಂಬಾ ಹಿಂದಕ್ಕೆ ಒರಗಿಸಬೇಡಿ:
ಕೆಲವರು ಡ್ರೈವಿಂಗ್ ಸೀಟನ್ನು ತುಂಬಾ ಹಿಂದಕ್ಕೆ ಫೋಲ್ಡ್ ಮಾಡುತ್ತಾರೆ, ಇದರಿಂದ ಹೆಚ್ಚು ಆರಾಮವಾಗಿ ಕುಳಿತುಕೊಳ್ಳಬಹುದು ಎಂದುಕೊಳ್ಳುತ್ತಾರೆ. ಆದರೆ ನೆನೆಪಿರಲಿ ಇದು ಸಮಸ್ಯೆಗಳಿಗೆ ಕಾರಣವಾಗಬಹುದು. ಚಾಲನೆ ಮಾಡುವಾಗ, ನೀವು 90 ಡಿಗ್ರಿಯಿಂದ ಪ್ರಾರಂಭಿಸಬೇಕು. ಯಾವುದೇ ಕಾರಣಕ್ಕೂ 10 ರಿಂದ 20 ಡಿಗ್ರಿಗಳಿಗಿಂತ ಹೆಚ್ಚು ಹಿಂದಕ್ಕೆ ಒರಗಬಾರದು.
ಆಸನದ ಎತ್ತರ ಸರಿಯಾಗಿರಲಿ:
ಚಾಲನೆ ಮಾಡುವಾಗ ಬರುವ ಬೆನ್ನು ನೋವನ್ನು ತಪ್ಪಿಸಲು, ನಿಮಗೆ ಆರಾಮದಾಯಕವಾಗುವ ಹಾಗೆ ನಿಮ್ಮ ಎತ್ತರವನ್ನು ಸಹ ಹೊಂದಿಸಿಕೊಳ್ಳಬೇಕು. ನಿಮ್ಮ ಮೊಣಕಾಲುಗಳು ತುಂಬಾ ಕೆಳಗೆ ಹೋಗದಂತೆ ನೋಡಿಕೊಳ್ಳಿ. ಅಲ್ಲದೆ, ಆಸನವನ್ನು ತುಂಬಾ ಎತ್ತರಕ್ಕೂ ಏರಿಸಬೇಡಿ, ಏಕೆಂದರೆ ಅದು ರಕ್ತ ಪರಿಚಲನೆಗೆ ಅಡ್ಡಿಯಾಗಬಹುದು. ಹಾಗಾಗಿ ನಿಮ್ಮ ಆಸನದ ಎತ್ತರ ಸರಿಯಾಗಿದ್ದರೆ ಬೆನ್ನು ನೋವು ಖಂಡಿತವಾಗಿಯೂ ಬರುವುದಿಲ್ಲ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








