AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಯಿಸಿದ ಬೀಟ್ರೂಟ್ VS ಹಸಿ ಬೀಟ್ರೂಟ್: ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಕೆಂಬಣ್ಣದ ತರಕಾರಿ ಬೀಟ್ರೂಟ್ ಎಂದರೆ ಮೂಗುಮುರಿಯುವವರೇ ಹೆಚ್ಚು. ಆದರೆ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಬೀಟ್ರೂಟ್ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಪ್ರಯೋಜನಕಾರಿ. ಆಹಾರದಲ್ಲಿ ಈ ಬೀಟ್ರೂಟ್ ಸೇರಿಸಿಕೊಳ್ಳುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಬೇಯಿಸಿದರೆ ಬೀಟ್ರೂಟ್  ಹಾಗೂ ಹಸಿ ಬೀಟ್ರೂಟ್‌ ಇದರಲ್ಲಿ ಯಾವುದನ್ನು ಸೇವಿಸಿದರೆ ಆರೋಗ್ಯ ಪ್ರಯೋಜನ ಹೆಚ್ಚು ಎಂದು ನಿಮಗೆ ತಿಳಿದಿದೆಯೇ?. ಈ ತರಕಾರಿಯ ಸೇವನೆಗೂ ಮುನ್ನ ಈ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿರಲಿ.

ಬೇಯಿಸಿದ ಬೀಟ್ರೂಟ್ VS ಹಸಿ ಬೀಟ್ರೂಟ್: ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?
ಬೇಯಿಸಿದ ಬೀಟ್ರೂಟ್ VS ಹಸಿ ಬೀಟ್ರೂಟ್Image Credit source: Meighan Makarchuk/Moment/Getty Images
ಸಾಯಿನಂದಾ
|

Updated on: Jul 13, 2025 | 8:02 PM

Share

ಬೀಟ್ರೂಟ್  ದೇಹಕ್ಕೆ ಅಗತ್ಯವಿರುವ ತರಕಾರಿಗಳಲ್ಲೂ ಒಂದು. ಆದರೆ ಈ ತರಕಾರಿಯನ್ನು ಕತ್ತರಿಸಿದಾಗ ಕೆಂಪು ಬಣ್ಣದಿಂದ ಕೂಡಿದ್ದು, ನೋಡುವುದಕ್ಕೆ ಆಕರ್ಷಕವಾಗಿದ್ದರೂ ಅಷ್ಟಾಗಿ ಇದನ್ನು ಯಾರು ಇಷ್ಟಪಡಲ್ಲ. ಆರೋಗ್ಯದ ದೃಷ್ಟಿಯಿಂದ ಇದರ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು (health benefits) ಹಲವು. ಫೋಲೇಟ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿಯಿಂದ ಸಮೃದ್ಧವಾಗಿರುವ ಈ ತರಕಾರಿಯ ನಿಯಮಿತ ಸೇವನೆಯಿಂದ ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಸಿಗುತ್ತವೆ. ಆದರೆ ಬೇಯಿಸಿದ ಬೀಟ್ರೂಟ್ (Cooked Beetroot) ಹಾಗೂ ಹಸಿ ಬೀಟ್ರೂಟ್‌ನಲ್ಲಿ (Raw Beetroot) ಯಾವುದು ಆರೋಗ್ಯಕ್ಕೆ ಉತ್ತಮ. ಹಸಿಯಾಗಿ ಬೀಟ್ರೂಟ್ ತಿಂದರೆ ಆರೋಗ್ಯ ಲಾಭಗಳು ಹೆಚ್ಚು ಸಿಗುತ್ತಾ, ಈ ಬಗ್ಗೆ ಆರೋಗ್ಯ ತಜ್ಞರು ಏನು ಹೇಳ್ತಾರೆ ಗೊತ್ತಾ? ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಬೇಯಿಸಿದ ಬೀಟ್ರೂಟ್ ಸೇವನೆಯಿಂದ ಆರೋಗ್ಯ ಲಾಭಗಳು

ಆಹಾರದಲ್ಲಿ ಬೇಯಿಸಿ ಬೀಟ್ರೂಟ್ ಸೇರಿಸಿಕೊಳ್ಳುವುದರಿಂದ ಹಲವಾರು ಆರೋಗ್ಯ ಪಪ್ರಯೋಜನಗಳಿವೆ. ಬೀಟ್ರೂಟ್ ಬೇಯಿಸಿದಾಗ ಇದರಲ್ಲಿ ನಾರು ಮೃದುವಾಗುತ್ತದೆ. ಹೀಗಾಗಿ ಇದರ ಸೇವನೆಯೂ ಜೀರ್ಣಿಸಿಕೊಳ್ಳಬಹುದು. ಹೃದಯದ ಆರೋಗ್ಯ, ಆಮ್ಲಜನಕ ಮತ್ತು ಸ್ನಾಯುಗಳ ಕಾರ್ಯವನ್ನು ಬೆಂಬಲಿಸುವ ಪೊಟ್ಯಾಸಿಯಮ್, ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಪ್ರಮುಖ ಖನಿಜಗಳನ್ನು ಉಳಿಸಿಕೊಳ್ಳುವ ಸಲುವಾಗಿ ಈ ತರಕಾರಿಯನ್ನು ಬೇಯಿಸಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಬೇಯಿಸಿದ ಬೀಟ್ರೂಟ್ ಸೇವನೆಯಿಂದ ದೇಹಕ್ಕೆ ಅಗತ್ಯವಾದ ನೈಟ್ರೇಟ್‌ಗಳನ್ನು ದೊರೆಯುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಿ, ರಕ್ತದ ಹರಿವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ
Image
ಹೊಟ್ಟೆಯ ಕೊಬ್ಬು ಕರಗಲು ಪ್ರತಿದಿನ ಈ ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ
Image
ಹೃದಯದ ಆರೋಗ್ಯಕ್ಕೂ ಬೇಕು ಕಾಳಜಿ !
Image
ಈ ಆಹಾರಗಳು ರುಚಿಯಾಗಿರುತ್ತೆ ಅಂತ ತಿಂದ್ರೆ ಕಿಡ್ನಿ ಕಳೆದುಕೊಳ್ಳುತ್ತೀರಿ
Image
ಶುಗರ್ ಕಂಟ್ರೋಲ್ ಮಾಡ್ಬೇಕಾ? ಹಾಗಿದ್ರೆ ಈ ಟಿಪ್ಸ್ ತಪ್ಪದೆ ಪಾಲಿಸಿ

ಹಸಿ ಬೀಟ್ರೂಟ್ ಸೇವನೆಯ ಆರೋಗ್ಯ ಪ್ರಯೋಜನಗಳು

ಬೀಟ್ರೂಟ್ ಫೈಬರ್‌ನಿಂದ ಸಮೃದ್ಧವಾಗಿದ್ದು ಇದು ಜೀರ್ಣಕ್ರಿಯೆಯ ಆರೋಗ್ಯಕ್ಕೆ ಅಗತ್ಯವಾಗಿದೆ. ಇದರಲ್ಲಿರುವ ಫೋಲೇಟ್ ಜೀವಕೋಶಗಳ ಬೆಳವಣಿಗೆ ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಬೀಟ್ರೂಟನ್ನು ಹಸಿಯಾಗಿ ಸೇವನೆ ಮಾಡುವುದರಿಂದ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು, ಬೀಟಾಲೈನ್‌ಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಸಿಯಾಗಿ ತಿನ್ನುವುದರಿಂದ ಹೆಚ್ಚಿನ ವಿಟಮಿನ್ ಸಿ ದೇಹಕ್ಕೆ ಸಿಗುತ್ತದೆ. ಅದಲ್ಲದೇ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇನ್ನು ಚರ್ಮದ ಆರೋಗ್ಯಕ್ಕೂ ಹಸಿ ಬೀಟ್ರೂಟ್ ತುಂಬಾನೇ ಒಳ್ಳೆಯದು.

ಇದನ್ನೂ ಓದಿ: ಹೊಟ್ಟೆಯ ಕೊಬ್ಬು ಕರಗಿಸಲು ಪ್ರತಿದಿನ ಈ ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ

ಬೇಯಿಸಿದ ಬೀಟ್ರೂಟ್, ಹಸಿ ಬೀಟ್ರೂಟ್ : ಆರೋಗ್ಯಕ್ಕೆ ಯಾವುದು ಉತ್ತಮ?

ಬೇಯಿಸಿದ ಹಾಗೂ ಹಸಿ ಬೀಟ್ರೂಟ್‌ನಲ್ಲಿ ಯಾವುದು ಉತ್ತಮ ಎಂದು ಕೇಳಿದಾಗ  ಆರೋಗ್ಯಕ್ಕೆ ಎರಡು ಉತ್ತಮ ಎನ್ನಬಹುದು. ಆದರೆ ತಜ್ಞರು ಹೇಳುವಂತೆ ಹಸಿಯಾಗಿ ಈ ತರಕಾರಿಯನ್ನು ಸೇವಿಸುವುದರಿದ ಆರೋಗ್ಯ ಪ್ರಯೋಜನಗಳು ಹಲವಾರು ಇದೆಯಂತೆ. ಹಸಿ ಬೀಟ್ರೂಟ್‌ನಲ್ಲಿ  ವಿಟಮಿನ್ ಸಿ ಉತ್ಕರ್ಷಣ ನಿರೋಧಕಗಳು ಸೇರಿದಂತೆ ಹೆಚ್ಚಿನ ಪೋಷಕಾಂಶಗಳನ್ನು ದೇಹಕ್ಕೆ ಸಿಗುತ್ತದೆ. ಬೇಯಿಸಿದ ಬೀಟ್ರೂಟ್ ನಲ್ಲಿ ಫೈಬರ್ ಹೆಚ್ಚಿರುವುದರಿಂದ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ತಜ್ಞರು .

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ