ಈ ಆಹಾರಗಳು ತುಂಬಾ ರುಚಿಯಾಗಿರುತ್ತೆ ಅಂತ ತಿಂದ್ರೆ ಕಿಡ್ನಿ ಕಳೆದುಕೊಳ್ಳುತ್ತೀರಿ ಹುಷಾರ್!
ದೇಹದ ಭಾಗಗಳಲ್ಲಿ ಮೂತ್ರಪಿಂಡಗಳು ಬಹಳ ಮುಖ್ಯ. ಹಾಗಾಗಿ ಮೂತ್ರಪಿಂಡಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ, ನಾವು ಸೇವಿಸುವ ಆಹಾರ ನಮಗರಿವಿಲ್ಲದಂತೆ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದರೂ ನಾವು ಇಷ್ಟಪಟ್ಟು ಸೇವಿಸುವ ಈ 5 ಆಹಾರಗಳನ್ನು ಪದೇ ಪದೇ ಸೇವನೆ ಮಾಡಿದರೆ ಮೂತ್ರಪಿಂಡಗಳಿಗೆ ಹಾನಿಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಆ ಆಹಾರಗಳು ಯಾವವು? ಆ ಆಹಾರಗಳ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಮನುಷ್ಯನ ದೇಹದಲ್ಲಿ ಮೂತ್ರಪಿಂಡಗಳು ಬಹಳ ಮುಖ್ಯವಾದ ಕಾರ್ಯ ನಿರ್ವಹಿಸುತ್ತವೆ. ನಮ್ಮ ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕುವುದರ ಜೊತೆಗೆ ರಕ್ತ ಪೂರೈಕೆಗೆ ಅಗತ್ಯವಾದ ನೀರು, ಲವಣಗಳು ಮತ್ತು ಖನಿಜಗಳನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತವೆ. ಹಾಗಾಗಿ ಮೂತ್ರಪಿಂಡ ಅಥವಾ ಕಿಡ್ನಿ (Kidney) ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ನಾವು ಪ್ರತಿನಿತ್ಯ ಸೇವಿಸುವ ಆಹಾರವು ಮೂತ್ರಪಿಂಡದ ಸಮಸ್ಯೆಗೆ ಮತ್ತು ನಾನಾ ರೀತಿಯ ರೋಗಗಳಿಗೆ ಕಾರಣವಾಗಬಹುದು. ಅದರಲ್ಲಿಯೂ ಮಧುಮೇಹ (diabetes) ಮತ್ತು ಅಧಿಕ ರಕ್ತದೊತ್ತಡ (Hypertension) ಇರುವವರಿಗೆ ಮೂತ್ರಪಿಂಡದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜವಾಬ್ಧಾರಿಯನ್ನು ನಾವೇ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ನಮಗೆ ತಿಳಿದೋ, ತಿಳಿಯದೆಯೋ ನಾವು ಸೇವಿಸುವ ಈ 5 ಆಹಾರಗಳು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ. ಹಾಗಾದರೆ ಅವು ಯಾವುವು? ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಸಂಸ್ಕರಿಸಿದ ಮಾಂಸ:
ನಿಮಗೆ ತಿಳಿದಿರಬಹುದು ಸಂಸ್ಕರಿಸಿದ ಮಾಂಸವು ಹೆಚ್ಚಿನ ಸೋಡಿಯಂ ಮಟ್ಟವನ್ನು ಹೊಂದಿರುತ್ತದೆ. ಹಾಗಾಗಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಾಗುತ್ತದೆ ಮಾತ್ರವಲ್ಲ ಇದನ್ನು ತಿನ್ನುವುದರಿಂದ ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ. ಪ್ರಾಣಿ ಪ್ರೋಟೀನ್‌ಗಳ ಅತಿಯಾದ ಸೇವನೆಯು ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇನ್ನು ಸಂಸ್ಕರಿಸಿದ ಮಾಂಸದಿಂದ ಮಾತ್ರವಲ್ಲ, ಸಂಸ್ಕರಿಸಿದ ಆಹಾರವನ್ನು ಅತಿಯಾಗಿ ಸೇವನೆ ಮಾಡುವುದು ಕೂಡ ಒಳ್ಳೆಯದಲ್ಲ. ಇದನ್ನು ಸೇವಿಸುವುದರಿಂದ ಟೈಪ್ 2 ಮಧುಮೇಹದ ಬೆಳವಣಿಗೆಗೆ ಕಾರಣವಾಗಬಹುದು. ಈ ಆಹಾರಗಳಲ್ಲಿ ಸಕ್ಕರೆ, ಸೋಡಿಯಂ ಮತ್ತು ಕೊಬ್ಬು ಅಧಿಕವಾಗಿರುತ್ತದೆ. ಪರಿಣಾಮವಾಗಿ, ಮೂತ್ರಪಿಂಡಗಳು ಹಾನಿಗೊಳಗಾಗಬಹುದು.
ಮೇಯನೇಸ್:
ಇದನ್ನು ಸಲಾಡ್ ಅಥವಾ ಸ್ಯಾಂಡ್‌ವಿಚ್‌ಗಳಲ್ಲಿ ಯಥೇಚ್ಛವಾಗಿ ಬಳಸುವುದನ್ನು ನೀವು ನೋಡಿರಬಹುದು. ಇದನ್ನು ಅತಿಯಾಗಿ ಸೇವಿಸಿದರೆ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮಗೆ ಗೊತ್ತಾ? ಒಂದು ಚಮಚ ಮೇಯನೇಸ್ 103 ಕ್ಯಾಲೊರಿಗಳನ್ನು ಹೊಂದಿರುತ್ತದೆ ಮತ್ತು ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುವುದಲ್ಲದೆ ಮೂತ್ರಪಿಂಡದ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇದರ ಬದಲು ಇದರಂತೆ ರುಚಿ ನೀಡುವ ಗ್ರೀಕ್ ಮೊಸರನ್ನು ಬಳಸಿ.
ಹುರಿದ ಆಲೂಗಡ್ಡೆ:
ಅನೇಕ ಜನರು ಆಲೂಗಡ್ಡೆಯಿಂದ ತಯಾರಿಸಿದ ಫ್ರೆಂಚ್ ಫ್ರೈಸ್ ಮತ್ತು ಚಿಪ್ಸ್ ತಿನ್ನಲು ಇಷ್ಟಪಡುತ್ತಾರೆ. ಆದರೆ ಅವುಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗಬಹುದು. ಇವುಗಳ ಅತಿಯಾದ ಸೇವನೆ ನಮ್ಮ ಕಿಡ್ನಿಯ ಆರೋಗ್ಯವನ್ನು ಹಾಳು ಮಾಡಬಹುದು. ಹಾಗಾಗಿ ಹೃದಯ ಮತ್ತು ಮೂತ್ರಪಿಂಡದಂತಹ ಕಾಯಿಲೆಗಳನ್ನು ತಪ್ಪಿಸಲು, ಹುರಿದ ಆಹಾರಗಳಿಂದ ಅದರಲ್ಲಿಯೂ ಆಲೂಗಡ್ಡೆಯಿಂದ ದೂರವಿರಬೇಕು. ಜೊತೆಗೆ ಮೂತ್ರಪಿಂಡದ ಕಾಯಿಲೆ ಇರುವವರು ಆಲೂಗಡ್ಡೆಯಲ್ಲಿ ಹೆಚ್ಚಿನ ಪೊಟ್ಯಾಸಿಯಮ್ ಅಂಶವಿರುವುದರಿಂದ ಅದರ ಸೇವನೆಯನ್ನು ಮಿತಿಗೊಳಿಸಬೇಕೆಂದು ವೈದ್ಯರು ಶಿಫಾರಸು ಮಾಡುತ್ತಾರೆ.
ಇದನ್ನೂ ಓದಿ: Kidney Disease: ಬೆಳಗ್ಗಿನ ಸಮಯದಲ್ಲಿ ಈ ರೀತಿಯಾಗುವುದು ಕಿಡ್ನಿ ಸಮಸ್ಯೆಯ ಲಕ್ಷಣ
ಸೋಡಾ:
ನೀವು ಇಷ್ಟಪಟ್ಟು ಕುಡಿಯುವ ಸೋಡಾಗಳಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿರುತ್ತದೆ. ಇದರಲ್ಲಿ ಯಾವುದೇ ಪೌಷ್ಟಿಕಾಂಶದ ಮೌಲ್ಯಗಳಿಲ್ಲ. ಮಾತ್ರವಲ್ಲ ಇದರಲ್ಲಿನ ಹೆಚ್ಚುವರಿ ಕ್ಯಾಲೊರಿಗಳು ತೂಕ ಹೆಚ್ಚಾಗಲು ಕಾರಣವಾಗಬಹುದು. ಇದನ್ನು ಆಗಾಗ ಸೇವಿಸುವುದರಿಂದ ಮೂಳೆಗಳು ದುರ್ಬಲಗೊಳ್ಳಬಹುದು. ಜೊತೆಗೆ ಮೂತ್ರಪಿಂಡ ಕಾಯಿಲೆ, ಮೆಟಬಾಲಿಕ್ ಸಿಂಡ್ರೋಮ್ ಮತ್ತು ಹಲ್ಲಿನ ಸಮಸ್ಯೆಗಳಿಗೆ ಕಾರಣವಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








