Parenting Tips: ತಂದೆಯಾದವನು ತನ್ನ ಮಗಳ ಮುಂದೆ ಈ ಕೆಲಸಗಳನ್ನು ಮಾಡಲೇಬಾರದಂತೆ
ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಎಲ್ಲಿಲ್ಲದ ಪ್ರೀತಿ. ಹೀಗೆ ಅಪ್ಪನ ಮೇಲೆ ಎಷ್ಟೇ ಪ್ರೀತಿ ಇದ್ದರೂ ತಂದೆಯಾದವನು ಮಾಡುವ ಕೆಲವೊಂದಿಷ್ಟು ಕೆಲಸಗಳು ಮಗಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿಯೇ ತಂದೆ ತನ್ನ ಮಗಳ ಮುಂದೆ ಈ ಕೆಲವೊಂದಿಷ್ಟು ಕೆಲಸಗಳನ್ನು ಮಾಡಬಾರದಂತೆ. ಹಾಗಿದ್ರೆ ತಂದೆಯಾದವನು ಮಗಳ ಮುಂದೆ ಯಾವ ರೀತಿ ವರ್ತಿಸಬಾರದು ಎಂಬುದನ್ನು ನೋಡೋಣ ಬನ್ನಿ.

ಮಕ್ಕಳನ್ನು ಬೆಳೆಸುವಾಗ ಪೋಷಕರು (Parents) ತುಂಬಾನೇ ಜಾಗರೂಕರಾಗಿರಬೇಕು. ನಾನು ಏನು ಮಾಡುತ್ತಿದ್ದೇವೆ, ನಾವು ಏನು ಮಾತನಾಡುತ್ತಿದ್ದೇವೆ ಎಂಬುದರ ಸಂಪೂರ್ಣ ಅರಿವು ಇರಬೇಕು. ಏಕೆಂದರೆ ಪೋಷಕರ ವರ್ತನೆ ಮಕ್ಕಳ ಮೇಲೆ ಪ್ರಭಾವವನ್ನು ಬೀರುತ್ತದೆ. ನೀವು ಏನು ಮಾಡುತ್ತೀರೋ ಅದನ್ನೇ ಮಕ್ಕಳು ಸಹ ಕಲಿಯುತ್ತಾರೆ. ಅದಕ್ಕಾಗಿಯೇ ಮಕ್ಕಳ ಮುಂದೆ ಪೋಷಕರು ಬಹಳ ಜಾಗರೂಕತೆಯಿಂದ ನಡೆದುಕೊಳ್ಳಬೇಕು ಎಂದು ಹೇಳುವುದು. ಅದರಲ್ಲೂ ತಂದೆಯಾದವನು ತನ್ನ ಮಗಳ ಮುಂದೆ ಈ ಕೆಲವು ವರ್ತನೆಯನ್ನು ತೋರಲೇಬಾರದಂತೆ. ಸಾಮಾನ್ಯವಾಗಿ ಮಗಳಿಗೆ ತಂದೆಯೆಂದರೆ ಸಿಕ್ಕಾಪಟ್ಟೆ ಇಷ್ಟ. ಹೀಗಿರುವಾಗ ತಂದೆ ಮಾಡುವ ಈ ಕೆಲವು ತಪ್ಪುಗಳ ಮಗಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿಯೇ ತಂದೆಯಾದವನು ತಪ್ಪಿಯೂ ಮಗಳ (father should not behave like this in front of daughter) ಮುಂದೆ ಈ ಕೆಲವು ವರ್ತನೆಯನ್ನು ತೋರಬಾರದು.
ತಂದೆ ತನ್ನ ಮಗಳ ಮುಂದೆ ಈ ರೀತಿ ವರ್ತಿಸುವುದು ಸರಿಯಲ್ಲ:
ಹೆಂಡತಿಯ ಮೇಲೆ ಕೂಗಾಡುವುದು: ಕೆಲ ಪುರುಷರು ಎಲ್ಲಾ ವಿಷಯಗಳಿಗೂ ಹೆಂಡತಿಯ ಮೇಲೆ ಕೂಗಾಡುತ್ತಾರೆ. ಹೀಗೆ ನೀವು ಮಗಳ ಮುಂದೆ ನಿಮ್ಮ ಹೆಂಡತಿಯ ಮೇಲೆ ಕೂಗಾಡಿದರೆ ಇದು ಮಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಅಪ್ಪ ಯಾವಾಗಲೂ ಅಮ್ಮನ ಮೇಲೆ ಕೂಗಾಡುತ್ತಾರೆ ಎಂದು ನಿಮ್ಮ ಮೇಲೆ ಕೆಟ್ಟ ಅಭಿಪ್ರಾಯ ಬರುವುದು ಮಾತ್ರವಲ್ಲದೆ ಎಲ್ಲಾ ಪುರುಷರು ಕೂಡಾ ಇದೇ ರೀತಿ ಹೆಣ್ಣು ಮಕ್ಕಳ ಮೇಲೆ ಗದರುತ್ತಾರೆ ಎಂಬು ಭಾವನೆ ಅವರ ಮನಸ್ಸಲ್ಲಿ ಮೂಡುತ್ತದೆ.
ಮಹಿಳೆಯರ ಬಗ್ಗೆ ಕೀಳರಿಮೆ: ಮಗಳ ಮುಂದೆ ಮಹಿಳೆಯರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದು ಅಥವಾ ಮಹಿಳೆಯರು ಕೇವಲವೆಂಬಂತೆ ಮಾತನಾಡುವುದು ಸರಿಯಲ್ಲ. ನೀವು ತಮಾಷೆಗಾಗಿ ಹೀಗೆ ಹೇಳಿದರೂ ಇದು ಮಗಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನನ್ನ ತಂದೆ ಹೆಣ್ಣು ಮಕ್ಕಳ ಬಗ್ಗೆ ಹೀಗೆ ಏಕೆ ಮಾತನಾಡುತ್ತಾರೆ ಎಂದು ಪ್ರಶ್ನೆ ಮಗಳ ಮನಸ್ಸಲ್ಲಿ ಮೂಡುತ್ತದೆ ಮತ್ತು ಎಲ್ಲಾ ಪುರುಷರು ಇದೇ ರೀತಿ ಮಾತನಾಡುತ್ತಾರೋ ಎಂಬ ಭಾವನೆ ಕೂಡಾ ಮೂಡುತ್ತದೆ.
ಭಾವನೆಗಳನ್ನು ನಿರ್ಲಕ್ಷ್ಯಿಸುವುದು: ನೀವು ನಿಮ್ಮ ಮಗಳ ಭಾವನೆಗಳನ್ನು ಎಂದಿಗೂ ನಿರ್ಲಕ್ಷ್ಯಿಸಬೇಡಿ. ನೀವು ಮಗಳ ಭಾವನೆಗಳಿಗೆ ಬೆಲೆ ನೀಡದಿದ್ದರೆ ಅಥವಾ ಮಗಳ ಬಗ್ಗೆ ಹಗುರವಾಗಿ ಮಾತನಾಡಿದರೆ, ಇದು ಆಕೆಗೆ ತೀವ್ರವಾದ ನೋವನ್ನು ಉಂಟು ಮಾಡುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ತಂದೆಯಿಂದ ಭಾವನಾತ್ಮಕ ಬೆಂಬಲ ಬಯಸುತ್ತಾರೆ. ಆದ್ದರಿಂದ ಅವರನ್ನು ಕಡೆಗಣಿಸದೆ ಅವರ ಭಾವನೆಗಳಿಗೆ ಬೆಲೆ ಕೊಡಿ.
ಇದನ್ನೂ ಓದಿ: 10 ವರ್ಷ ತುಂಬುವ ಮೊದಲೇ ಮಕ್ಕಳಿಗೆ ಪೋಷಕರು ತಪ್ಪದೆ ಈ ವಿಚಾರಗಳನ್ನು ಕಲಿಸಬೇಕಂತೆ
ಹೆಂಡತಿಯ ಮೇಲೆ ಕೈ ಮಾಡುವುದು: ಕೋಪ ಮನುಷ್ಯನ ಸಹಜ ಗುಣ. ಕೆಲವರಂತೂ ಕೋಪ ಬಂದ್ರೆ ಹೆಂಡತಿಯ ಮೇಲೆ ಕೈ ಮಾಡುತ್ತಾರೆ. ಹೀಗೆ ನೀವು ಮಕ್ಕಳ ಮುಂದೆ ನಿಮ್ಮ ಹೆಂಡತಿಯ ಮೇಲೆ ಕೈ ಮಾಡಿದರೆ ಅವರಿಗೆ ನಿಮ್ಮ ಮೇಲೆ ದ್ವೇಷ ಭಾವನೆ ಮೂಡಲು ಆರಂಭಿಸುತ್ತದೆ. ನನ್ನ ತಂದೆ ತುಂಬಾನೇ ಕ್ರೂರ ವ್ಯಕ್ತಿ ಎಂದುಕೊಳ್ಳುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಿಗಂತೂ ಎಲ್ಲಾ ಪುರುಷರು ಇದೇ ರೀತಿ ಹೆಂಡತಿಯ ಮೇಲೆ ಕೈ ಮಾಡುತ್ತಾರೆ, ನೋವು ಕೊಡುತ್ತಾರೆ ಎಂಬ ಭಾವನೆ ಮೂಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಗಂಡ ಹೆಂಡತಿ ಮಕ್ಕಳ ಮುಂದೆ ಜಗಳವಾಡಬಾರದು.
ಕೆಟ್ಟ ಅಭ್ಯಾಸಗಳು: ಸಾಮಾನ್ಯವಾಗಿ ಶಾಲೆಯಲ್ಲಿ ಮಕ್ಕಳಿಗೆ ಮದ್ಯಪಾನ, ಧೂಮಪಾನ ಕೆಟ್ಟ ಅಭ್ಯಾಸ ಎಂದು ಹೇಳಿಕೊಡುತ್ತಾರೆ. ಹೀಗಿರುವಾಗ ನೀವು ಮಕ್ಕಳ ಮುಂದೆ ಕುಡಿಯುವಂತಹದ್ದು, ಧೂಮಪಾನ ಮಾಡುವಂತಹದ್ದು ಮಾಡಿದ್ರೆ ಅವರು ನಿಮ್ಮನ್ನು ಕೆಟ್ಟವರಂತೆ ನೋಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಗಳ ಮುಂದೆ ಮದ್ಯಪಾನ ಮಾಡಿದರೆ ನಿಮ್ಮ ಮತ್ತು ಮಗಳ ಅಂತರ ಹೆಚ್ಚಾಗುತ್ತದೆ. ಹಾಗಾಗಿ ಮಗಳು ಹಾಗೂ ನಿಮ್ಮ ಬಾಂಧವ್ಯ ಚೆನ್ನಾಗಿರಬೇಕೆಂದರೆ ಈ ಎಲ್ಲಾ ಅಭ್ಯಾಸಗಳನ್ನು ಬಿಟ್ಟುಬಿಡಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








