Parenting Tips: 10 ವರ್ಷ ತುಂಬುವ ಮೊದಲೇ ಮಕ್ಕಳಿಗೆ ಪೋಷಕರು ತಪ್ಪದೆ ಈ ವಿಚಾರಗಳನ್ನು ಕಲಿಸಬೇಕಂತೆ
ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು. ಪೋಷಕರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಮಕ್ಕಳಿಗೆ ಒಂದಷ್ಟು ಜೀವನ ಪಾಠ, ಮೌಲ್ಯಗಳನ್ನು ಕಲಿಸಿಕೊಡಬೇಕು. ಜೀವನವನ್ನು ಉತ್ತಮವಾಗಿ ರೂಪಿಸಲು ಮಾರ್ಗದರ್ಶನವನ್ನು ಕಲಿಸಿಕೊಡಬೇಕು. ಹೀಗಿದ್ದರೆ ಮಾತ್ರ ಮಕ್ಕಳ ಭವಿಷ್ಯವೂ ಚೆನ್ನಾಗಿರುತ್ತದೆ. ಅದರಲ್ಲೂ ಈ ಕೆಲವೊಂದಷ್ಟು ವಿಷಯಗಳನ್ನು ಮಕ್ಕಳಿಗೆ 10 ವರ್ಷ ತುಂಬುವ ಮೊದಲೇ ಪೋಷಕರು ಕಲಿಸಬೇಕಂತೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮಕ್ಕಳು (Children) ಒಂದು ಮಣ್ಣಿನ ಮುದ್ದೆಯಂತೆ. ಪೋಷಕರು ಅವರಿಗೆ ಯಾವ ರೂಪವನ್ನು ನೀಡುತ್ತಾರೋ ಅದರ ಮೇಲೆ ಮಕ್ಕಳ ಭವಿಷ್ಯ ಅನ್ನೋದು ನಿರ್ಧಾರವಾಗುತ್ತದೆ. ಹೌದು ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಶಿಕ್ಷಣದ ಜೊತೆಗೆ ಎಲ್ಲಿ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು ಹೀಗೆ ಒಂದಷ್ಟು ಮಾನವೀಯ, ಜೀವನ ಪಾಠವನ್ನು ಕಲಿಸಿದರೆ, ಆ ಮಕ್ಕಳು ತಂದೆ-ತಾಯಿಗೆ ಆದರ್ಶ ಮಕ್ಕಳಾಗಿ, ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತಾರೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗದು ಎಂಬ ಮಾತನ್ನು ಮನದಲ್ಲಿಟ್ಟುಕೊಂಡು ಕೇವಲ ಶಿಕ್ಷಣ ಮಾತ್ರವಲ್ಲ, ಈ ಕೆಲವೊಂದಷ್ಟು ವಿಚಾರಗಳನ್ನು ಪೋಷಕರು (parenting advice for children) ತಮ್ಮ ಮಕ್ಕಳಿಗೆ 10 ವರ್ಷ ತುಂಬುವ ಮೊದಲೇ ಕಲಿಸಿಕೊಡಬೇಕು. ಅವುಗಳು ಯಾವುವು ಎಂಬುದನ್ನು ನೋಡೋಣ.
10 ವರ್ಷ ತುಂಬುವ ಮೊದಲೇ ಮಕ್ಕಳಿಗೆ ಪೋಷಕರು ಈ ವಿಷಯಗಳನ್ನು ಕಲಿಸಬೇಕು:
ಸಮಯ ನಿರ್ವಹಣೆ: ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸಮಯ ನಿರ್ವಹಣೆಯ ಬಗ್ಗೆ ಕಲಿಸಬೇಕು. ಬೆಳಗ್ಗೆ ಬೇಗ ಎದ್ದೇಳುವುದು, ಬೇಗ ಹೋಮ್ ವರ್ಕ್ ಮಾಡಿ ಮುಗಿಸುವುದು, ಸಮಯಕ್ಕೆ ಸರಿಯಾಗಿ ಶಾಲೆಗೆ ಹೊರಡಲು ಸಿದ್ಧರಾಗುವುದು, ತಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವುದುದನ್ನು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಲಿಸಬೇಕು. ಇದು ಮಕ್ಕಳಿಗೆ ಜೀವನದಲ್ಲಿ ಸಮಯ ಪಾಲನೆಯನ್ನು ಬೆಳೆಸಲು ಸಹಾಯ ಮಾಡುತ್ತದೆ.
ಎಲ್ಲರನ್ನೂ ಗೌರವಿಸುವುದು: ಈ ವಿಚಾರವನ್ನು ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಕಲಿಸಿಕೊಡಲೇಬೇಕು. ಹಿರಿಯರ ಜೊತೆ ಹೇಗೆ ಮಾತನಾಡಬೇಕು, ತಮಗಿಂದ ಕಿರಿಯರನ್ನೂ ಹೇಗೆ ಗೌರವಯುತವಾಗಿ ಮಾತನಾಡಿಸಬೇಕು, ವಯಸ್ಸಾದವರ ಜೊತೆ ದಯೆಯಿಂದ ಹೇಗೆ ವರ್ತಿಸುವುದು ಇವೆಲ್ಲಾ ಸೂಕ್ಷ್ಮ ವಿಚಾರಗಳನ್ನು ಕಲಿಸಬೇಕು. ಇದು ಮಕ್ಕಳು ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ.
ನಿರ್ಧಾರಗಳನ್ನು ತೆಗೆದುಕೊಳ್ಳುವುದು: ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಲಿಸಿ. ಯಾವುದೇ ಕೆಲಸ ಮಾಡುವ ಮೊದಲು ಎರಡು ಬಾರಿ ಯೋಚಿಸಿ ಸರಿಯಾದ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳುವುದು ಎಂಬುದರ ಬಗ್ಗೆ ಕಲಿಸಿ. ಇದು ಅವರ ಆಲೋಚನಾ ಕೌಶಲ್ಯವನನು ಹೆಚ್ಚಿಸುತ್ತದೆ. ಮತ್ತು ಇದು ಅವರಿಗೆ ಜವಾಬ್ದಾರಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಶಿಸ್ತು: ಮಕ್ಕಳನ್ನು ಕೇವಲ ಕೇವಲ ಮುದ್ದು ಮಾಡುವುದು ಮಾತ್ರವಲ್ಲ, 10 ವರ್ಷ ತುಂಬುವ ಮೊದಲೇ ಮಗುವಿಗೆ ಬೆಳಗ್ಗೆ ಸಮಯಕ್ಕೆ ಸರಿಯಾಗಿ ಏಳುವುದು, ಬೆಡ್‌ಶೀಟ್ ಮಡಚುವುದು, ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ತಮ್ಮ ಆಟಿಕೆಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು, ಇತ್ಯಾದಿ ಶಿಸ್ತಿನ ಪಾಠವನ್ನು ಪೋಷಕರು ಕಲಿಸಲೇಬೇಕು.
ನೈರ್ಮಲ್ಯ: ಮಕ್ಕಳಿಗೆ ತಪ್ಪದೆ ನೈರ್ಮಲ್ಯದ ಪಾಠವನ್ನು ಸಹ ಹೇಳಿ ಕೊಡಬೇಕು. ಕೈ ತೊಳೆಯದೆ ಊಟ ಮಾಡಬಾರದು, ಹೊರಗಡೆಯಿಂದ ಮನೆಗೆ ಬಂದ ನಂತರ ಕೈ ಕಾಲು ಮುಖ ತೊಳೆಯಬೇಕು ಹೀಗೆ ಒಂದಷ್ಟು ನೈರ್ಮಲ್ಯದ ಬಗ್ಗೆಯೂ ಪೋಷಕರು ಮಕ್ಕಳಿಗೆ ಕಲಿಸಿಕೊಡಬೇಕು.
ಇದನ್ನೂ ಓದಿ: ಹದಿಹರೆಯದ ಮಕ್ಳು ಪ್ರೀತಿ-ಪ್ರೇಮ ಅಂತೆಲ್ಲಾ ದಾರಿ ತಪ್ಬಾರ್ದು ಎಂದ್ರೆ ಪೋಷಕರು ಏನು ಮಾಡ್ಬೇಕು
ಹಣದ ಮಹತ್ವ: ಚಿಕ್ಕ ಮಕ್ಕಳಿಗೆ ಹಣದ ಮಹತ್ವವನ್ನು ಕಲಿಸುವುದು ಕೂಡಾ ಮುಖ್ಯ. ಮಕ್ಕಳು ಹಠ ಮಾಡಿದರೆಂದು ಅವರು ಕೇಳಿದ್ದನ್ನೆಲ್ಲಾ ಕೊಡಿಸುವುದಲ್ಲ, ಬದಲಿಗೆ ಹಣ ಎಷ್ಟು ಮುಖ್ಯ, ಹಣವನ್ನು ಏಕೆ ದುಂದು ವೆಚ್ಚ ಮಾಡಬಾರದು ಎಂದು ಪಾಠವನ್ನು ಕಲಿಸಿಕೊಡಬೇಕು.
ಗಿಡಗಳಿಗೆ ನೀರು ಹಾಕುವುದು: ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಗಿಡಗಳಿಗೆ ನೀರು ಹಾಕುವ ಅಭ್ಯಾಸವನ್ನು ಹೇಳಿ ಕೊಡಿ. ಇದು ಮಕ್ಕಳಲ್ಲಿ ಪ್ರಕೃತಿ ಪ್ರೇಮವನ್ನು ಬೆಳೆಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ