AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಮ್ಮಿನ ಶಬ್ದದಿಂದಲೇ ಕಾಯಿಲೆ ಪತ್ತೆ ಹಚ್ಚುತ್ತೆ ಈ ಎಐ ಟೂಲ್! ಏಮ್ಸ್ ನಿಂದಲೂ ಸಿಕ್ಕಿದೆ ಗ್ರೀನ್ ಸಿಗ್ನಲ್!

ಜನರ ಆರೋಗ್ಯ ಕಾಪಾಡಲು ಎಐ ಅಥವಾ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೆಮ್ಮಿನಿಂದಲೇ ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಕೆಮ್ಮಿನ ಶಬ್ದವನ್ನು ಕೇಳುವ ಮೂಲಕ ಉಸಿರಾಟಕ್ಕೆ ಸಂಬಂಧ ಪಟ್ಟ ಕಾಯಿಲೆಗಳನ್ನು ಗುರುತಿಸಬಹುದಾದ ಸ್ವಾಸ ಎಂಬ ಎಐ ಅಪ್ಲಿಕೇಶನ್ ಅನ್ನು ರಚಿಸಲಾಗಿದೆ. ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ, ಇದರಿಂದ ಯಾವ ರೀತಿಯ ಉಪಯೋಗವಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೆಮ್ಮಿನ ಶಬ್ದದಿಂದಲೇ ಕಾಯಿಲೆ ಪತ್ತೆ ಹಚ್ಚುತ್ತೆ ಈ ಎಐ ಟೂಲ್! ಏಮ್ಸ್ ನಿಂದಲೂ ಸಿಕ್ಕಿದೆ ಗ್ರೀನ್ ಸಿಗ್ನಲ್!
New AI Tool for Asthma and COPD DiagnosisImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Feb 21, 2026 | 6:25 PM

Share

ಆರೋಗ್ಯ ವಲಯದಲ್ಲೂ ಎಐ (AI ) ಹೆಚ್ಚು ಪ್ರಯೋಜನಕಾರಿ ಎಂಬುದು ಸಾಬೀತಾಗುತ್ತಿದೆ. ಇದರ ಸಹಾಯದಿಂದ, ಕಡಿಮೆ ಸಮಯದಲ್ಲಿ ರೋಗಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೆಮ್ಮಿನಿಂದಲೇ ಉಸಿರಾಟಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಪತ್ತೆಹಚ್ಚುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದ್ದು, ಕೆಮ್ಮಿನ ಶಬ್ದವನ್ನು ಕೇಳುವ ಮೂಲಕ ಉಸಿರಾಟಕ್ಕೆ ಸಂಬಂಧ ಪಟ್ಟ ಕಾಯಿಲೆಗಳನ್ನು ಗುರುತಿಸುತ್ತದೆ. ಈ ಸ್ವಾಸ ಎಂಬ ಎಐ ಅಪ್ಲಿಕೇಶನ್ (AI Tool) ನಿಮಿಷಗಳಲ್ಲಿಯೇ ರಿಪೋರ್ಟ್ ನೀಡುವುದರಿಂದ ರೋಗಗಳನ್ನು ಬೇಗ ಪತ್ತೆ ಹಚ್ಚಬಹುದಾಗಿದೆ. ಈ ತಂತ್ರಜ್ಞಾನವನ್ನು ಏಮ್ಸ್ ಸಹ ಅನುಮೋದಿಸಿದೆ. ಹಾಗಾದರೆ ಈ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ, ಇದರಿಂದ ಯಾವ ರೀತಿಯ ಉಪಯೋಗವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತೆ?

ಈ ಎಐ ಆಧಾರಿತ ಅಪ್ಲಿಕೇಶನ್ ಅನ್ನು ಮೊಬೈಲ್ ಫೋನ್‌ ಮೂಲಕವೇ ಬಳಸಬಹುದಾಗಿದ್ದು, ಫೋನ್ ಮುಂದೆ ಎರಡರಿಂದ ಮೂರು ಬಾರಿ ಕೆಮ್ಮಬೇಕಾಗುತ್ತದೆ. ಅಪ್ಲಿಕೇಶನ್ ಕೆಮ್ಮಿನ ಶಬ್ದವನ್ನು ದಾಖಲಿಸಿ ಎಐ ಅಲ್ಗಾರಿದಮ್ ಬಳಸಿ ಅದನ್ನು ಪತ್ತೆ ಮಾಡುತ್ತದೆ. ಸುಮಾರು 8 ನಿಮಿಷಗಳಲ್ಲಿ ವರದಿಯನ್ನು ಸಿದ್ಧಪಡಿಸುತ್ತದೆ, ಉಸಿರಾಟದ ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ: ಮುಖ ನೋಡಿದ್ರೆ ಸಾಕು ನಿಮಗಿರುವ ರೋಗ ಹೇಳುತ್ತೆ ಈ ಯಂತ್ರ!

ಡಾ. ಹರ್ಷಲ್ ರಮೇಶ್ ಸಾಲ್ವೆ ಹೇಳುವಂತೆ ಏಮ್ಸ್ ನಲ್ಲಿ ಸುಮಾರು 460 ರೋಗಿಗಳ ಮೇಲೆ ಈ ಪ್ರಯೋಗವನ್ನು ನಡೆಸಲಾಗಿದ್ದು, ಈ ಅಪ್ಲಿಕೇಶನ್ ಆರಂಭಿಕ ಹಂತದ ಆಸ್ತಮಾ ಮತ್ತು ದೀರ್ಘಕಾಲದ ಶ್ವಾಸಕೋಶಕ್ಕೆ ಸಂಬಂಧ ಪಟ್ಟ ಕಾಯಿಲೆಯನ್ನು ಸುಲಭವಾಗಿ ಪತ್ತೆ ಮಾಡುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ಕೇವಲ ಕೆಮ್ಮುವಿಕೆಯ ಮೂಲಕ, ರೋಗಿಗೆ ಯಾವ ಉಸಿರಾಟದ ಕಾಯಿಲೆ ಇದೆ ಮತ್ತು ಯಾವ ಮಟ್ಟದಲ್ಲಿದೆ ಎಂಬುದನ್ನು ನಿರ್ಧರಿಸಬಹುದು. ಸಾಮಾನ್ಯವಾಗಿ ಈಗ ನಾವು ಉಸಿರಾಟದ ಕಾಯಿಲೆಗಳನ್ನು ಪತ್ತೆಹಚ್ಚಲು ಎಕ್ಸ್- ರೇ ಮತ್ತು ಸಿಟಿ ಸ್ಕ್ಯಾನ್‌ಗಳನ್ನು ಮಾಡಿಸುತ್ತೇವೆ. ಆದರೆ ಈ ಅಪ್ಲಿಕೇಶನ್‌ನ ಸಹಾಯದಿಂದ, ರೋಗಗಳ ಆರಂಭಿಕ ಹಂತಗಳನ್ನು ಸುಲಭವಾಗಿ ಗುರುತಿಸಬಹುದು. ಸ್ಪೈರೋಮೆಟ್ರಿಯಂತಹ ರೋಗನಿರ್ಣಯ ತಂತ್ರಗಳು ಲಭ್ಯವಿಲ್ಲದ ಪ್ರದೇಶಗಳಲ್ಲಿ ಈ ತಂತ್ರಜ್ಞಾನವು ಸಹಾಯಕವಾಗಿರುತ್ತದೆ. ಭವಿಷ್ಯದಲ್ಲಿ ಇದು ಕ್ಷಯರೋಗವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಟಿಕೆಟ್​​ಗಾಗಿ ಹೈಕಮಾಂಡ್​​ ಮಟ್ಟದಲ್ಲಿ ಲಾಭಿ
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
'ಹುಲಿ ಹುಲಿ' ಅಂತಾ ವೀಡಿಯೋ ಮಾಡಿ ಪೊಲೀಸ್ ಕೈಗೆ ತಗಲಾಕ್ಕೊಂಡ ರೀಲ್ಸ್ ಮಂಜು!
'ಹುಲಿ ಹುಲಿ' ಅಂತಾ ವೀಡಿಯೋ ಮಾಡಿ ಪೊಲೀಸ್ ಕೈಗೆ ತಗಲಾಕ್ಕೊಂಡ ರೀಲ್ಸ್ ಮಂಜು!
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಎಲ್​ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಕಾಳಸಂತೆಯಲ್ಲಿ ಸಿಲಿಂಡರ್ ಸೇಲ್ ! ಗ್ಯಾಸ್​ ದಂಧೆಕೋರರ ವಿರುದ್ಧ 3 ಎಫ್​ಐಆರ್
ಕಾಳಸಂತೆಯಲ್ಲಿ ಸಿಲಿಂಡರ್ ಸೇಲ್ ! ಗ್ಯಾಸ್​ ದಂಧೆಕೋರರ ವಿರುದ್ಧ 3 ಎಫ್​ಐಆರ್
ಬನ್ನೇರುಘಟ್ಟ ಝೂಗೆ ಹೊಸ ಅತಿಥಿಗಳ ಆಗಮನ: ಇಲ್ಲಿದೆ ವಿಡಿಯೋ
ಬನ್ನೇರುಘಟ್ಟ ಝೂಗೆ ಹೊಸ ಅತಿಥಿಗಳ ಆಗಮನ: ಇಲ್ಲಿದೆ ವಿಡಿಯೋ
ಜೀ5 ಅಲ್ಲಿ ಬರ್ತಿದೆ ಹೊಸ ವೆಬ್ ಸರಣಿ; ಡಾಲಿ ನಿರ್ಮಾಣ
ಜೀ5 ಅಲ್ಲಿ ಬರ್ತಿದೆ ಹೊಸ ವೆಬ್ ಸರಣಿ; ಡಾಲಿ ನಿರ್ಮಾಣ
ವೀಕೆಂಡ್​ನಲ್ಲೂ ನಂದಿ ಹಿಲ್ಸ್ ಖಾಲಿ! ಊಟ-ತಿಂಡಿ ಸಿಗಲ್ಲ ಎಂದು ಬಾರದ ಜನ
ವೀಕೆಂಡ್​ನಲ್ಲೂ ನಂದಿ ಹಿಲ್ಸ್ ಖಾಲಿ! ಊಟ-ತಿಂಡಿ ಸಿಗಲ್ಲ ಎಂದು ಬಾರದ ಜನ
ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಹೊಸ ಇತಿಹಾಸ ಬರೆದ ಬಾಂಗ್ಲಾದೇಶ್
ಪಾಕ್ ಪಡೆಯನ್ನು ಮಕಾಡೆ ಮಲಗಿಸಿ ಹೊಸ ಇತಿಹಾಸ ಬರೆದ ಬಾಂಗ್ಲಾದೇಶ್