Friendship Day 2025: ಸ್ನೇಹ ಅತಿ ಮಧುರ; ಸ್ನೇಹಿತರ ದಿನವನ್ನು ಆಚರಿಸುವುದರ ಹಿಂದಿನ ಕಾರಣವೇನು ಗೊತ್ತಾ?
ಸ್ವಾರ್ಥವಿಲ್ಲದ ಸಂಬಂಧಗಳಲ್ಲಿ ಸ್ನೇಹ ಸಂಬಂಧ ಕೂಡಾ ಒಂದು. ಈ ಸಿಹಿಯಾದ ಬಂಧಕ್ಕೆ ಜಾತಿ-ಧರ್ಮ, ಮೇಳು-ಕೀಳು ಇದ್ಯಾವುದರ ಗಡಿಯೂ ಇಲ್ಲ. ಅದಕ್ಕಾಗಿಯೇ ಈ ಪವಿತ್ರ ಬಂಧವನ್ನು ರಕ್ತ ಸಂಬಂಧಕ್ಕೂ ಮೀರಿದ ಬಂಧ ಎಂದು ಕರೆಯುವುದು. ಸ್ನೇಹ ಸಂಬಂಧವನ್ನು ಸಂಭ್ರಮಿಸಲು ಪ್ರತಿವರ್ಷ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವ ಏನೆಂಬುದನ್ನು ನೋಡೋಣ ಬನ್ನಿ.

ಸ್ನೇಹ (Friendship) ಸಂಬಂಧ ಎನ್ನುವುದು ಸುಂದರ ಬಂಧ ಮಾತ್ರವಲ್ಲ ಬದುಕಿಗೆ ಬೆಸೆದುಕೊಳ್ಳುವ ಅನೀರಿಕ್ಷಿತ ಋಖಾನುಬಂಧ. ಪ್ರತಿಯೊಬ್ಬರ ಜೀವನದಲ್ಲೂ ಒಂದೊಳ್ಳೆ ಸ್ನೇಹ, ಇದ್ದೇ ಇರುತ್ತದೆ. ಯಾವುದೇ ಗಡಿಯಿಲ್ಲದ ನಿಷ್ಕಲ್ಮಶ, ನಿಸ್ವಾರ್ಥ ಸ್ನೇಹವನ್ನು, ಸ್ನೇಹಿತರನ್ನು ಬದುಕಿನ ಭಾಗವೇ ಎನ್ನಬಹುದು. ರಕ್ತ ಸಂಬಂಧಕ್ಕೂ ಮೀರಿದ ಬಂಧವೇ ಎಂದು ಹೇಳಬಹುದು. ಇಂತಹ ಸುಂದರ ಸಂಬಂಧವನ್ನು ಸಂಭ್ರಮಿಸುವ, ಗೌರವಿಸುವ ಸಲುವಾಗಿ ಪ್ರತಿವರ್ಷ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು (Friendship Day 2025) ಆಚರಿಸಲಾಗುತ್ತದೆ. ಹೌದು ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸುವಂತೆ, ಆಗಸ್ಟ್ ಮೊದಲ ಭಾನುವಾರದಂದು ಭಾರತದಲ್ಲಿ ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ಆಚರಣೆಯ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ಸ್ನೇಹಿತರ ದಿನದ ಇತಿಹಾಸ:
ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸುವಂತೆ ಭಾರತ, ಅಮೆರಿಕ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ಸ್ನೇಹ ದಿನದ ಆಚರಣೆಯು 1950 ರ ದಶಕದಲ್ಲಿ ಅಮೆರಿಕದಲ್ಲಿ ಪ್ರಾರಂಭವಾಯಿತು. ಹಾಲ್‌ಮಾರ್ಕ್ ಕಾರ್ಡ್‌ಗಳ ಸಂಸ್ಥಾಪಕಿ ಜಾಯ್ಸ್ ಹಾಲ್ ಇದನ್ನು ಪ್ರಸ್ತಾಪಿಸಿದರು. ಸ್ನೇಹವೆಂಬ ಶುದ್ಧ ಸಂಬಂಧವನ್ನು ಸಂಭ್ರಮಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು.
ಜನರು ವಾರಾಂತ್ಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಆರಾಮವಾಗಿ ಸಮಯ ಕಳೆಯಬಹುದು ಎಂಬ ಕಾರಣದಿಂದ ಈ ದಿನವನ್ನು ಆಗಸ್ಟ್ ಮೊದಲ ಭಾನುವಾರದಂದೇ ಆಚರಿಸಲಾಗುತ್ತದೆ.
ಇದನ್ನೂ ಓದಿ: ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಈ ಉಡುಗೊರೆಗಳನ್ನು ನೀಡುವ ಮೂಲಕ ಸ್ನೇಹಿತರ ದಿನವನ್ನು ವಿಶೇಷವಾಗಿ ಆಚರಿಸಿ
ಸ್ನೇಹ ದಿನದ ಮಹತ್ವ:
ಸ್ನೇಹಿತರ ದಿನವು ಜನರಿಗೆ ತಮ್ಮ ಜೀವನದಲ್ಲಿನ ಸ್ನೇಹ ಹಾಗೂ ಸ್ನೇಹಿತರನ್ನು ಗೌರವಿಸಲು ಅವಕಾಶವನ್ನು ನೀಡುತ್ತದೆ ಮತ್ತು ಪರಸ್ಪರ ಬಾಂಧವ್ಯವನ್ನು ಬೆಳೆಸುವ ಸಂಬಂಧಗಳನ್ನು ನಿರ್ಮಿಸಲು ಉತ್ತೇಜಿಸುತ್ತದೆ. ಅಲ್ಲದೆ ಈ ದಿನ ಹಳೆಯ ಸ್ನೇಹಿತರೊಂದಿಗೆ ಮತ್ತೆ ಬೆರೆಯಲು, ಸಂಬಂಧಗಳನ್ನು ಸರಿಪಡಿಸಲು, ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯಲು, ಒಂದೊಳ್ಳೆ ಅವಕಾಶವಾಗಿದೆ. ಈ ದಿನ ನೀವು ಸ್ನೇಹಿತರನ್ನು ಭೇಟಿಯಾಗಬಹುದು, ಹಳೆಯ ಸ್ನೇಹಿತರೊಂದಿಗೆ ಮತ್ತೆ ಸೇರಬಹುದು. ಗಿಫ್ಟ್‌ಗಳನ್ನು ನೀಡಬಹುದು. ಇಲ್ಲವೆ ಮೂವಿ, ಪ್ರವಾಸಕ್ಕೆ ಹೋಗುವ ಮೂಲಕ ಸ್ನೇಹಿತರ ದಿನವನ್ನು ಸ್ಮರಣೀಯವಾಗಿ ಆಚರಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:54 pm, Sat, 2 August 25








