AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Friendship Day 2025: ರಕ್ತ ಸಂಬಂಧಕ್ಕೂ ಮೀರಿದ ಪವಿತ್ರ ಬಂಧ ಸ್ನೇಹ; ಸ್ನೇಹಿತರ ದಿನದ ಮಹತ್ವ ತಿಳಿಯಿರಿ

ಈ ಜಗತ್ತಿನಲ್ಲಿ ಎಲ್ಲಾ ಸಂಬಂಧಗಳಿಗಿಂತಲೂ ಶ್ರೇಷ್ಠವಾದ ಸಂಬಂಧ ಎಂದರೆ ಸ್ನೇಹ ಸಂಬಂಧ. ಈ ಪವಿತ್ರ ಬಂಧಕ್ಕೆ ಜಾತಿ-ಧರ್ಮ, ಆಸ್ತಿ-ಅಂತಸ್ತು ಯಾವುದರ ಗಡಿಯೂ ಇಲ್ಲ. ಅದೇ ರೀತಿ ಈ ಸಂಸ್ಕೃತಿಗಳು, ಜನಾಂಗಗಳು, ಧರ್ಮಗಳು ಮತ್ತು ರಾಷ್ಟ್ರ ರಾಷ್ಟ್ರಗಳಲ್ಲಿ ಸ್ನೇಹ, ಸಾಮರಸ್ಯವನ್ನು ಬೆಸೆಯುವ ಸಲುವಾಗಿ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

International Friendship Day 2025: ರಕ್ತ ಸಂಬಂಧಕ್ಕೂ ಮೀರಿದ ಪವಿತ್ರ ಬಂಧ ಸ್ನೇಹ; ಸ್ನೇಹಿತರ ದಿನದ ಮಹತ್ವ ತಿಳಿಯಿರಿ
ಅಂತಾರಾಷ್ಟ್ರೀಯ ಸ್ನೇಹ ದಿನ
ಮಾಲಾಶ್ರೀ ಅಂಚನ್​
|

Updated on: Jul 30, 2025 | 9:40 AM

Share

ಸ್ನೇಹ (Friendship) ಎನ್ನುವಂತಹದ್ದು ಸುಂದರ ಬಂಧ, ಜೀವನದ ಒಂದು ಅಮೂಲ್ಯವಾದ ನಿಧಿ ಅಂತಾನೇ ಹೇಳಬಹುದು. ನಮ್ಮ ನೋವು-ನಲಿವು ಎಲ್ಲದರಲ್ಲೂ ಜೊತೆಯಾಗಿ ಮೊದಲು ನಿಲ್ಲುವವರೇ ಸ್ನೇಹಿತರು. ಅದಕ್ಕಾಗಿಯೇ ಸ್ನೇಹವನ್ನು ರಕ್ತ ಸಂಬಂಧಕ್ಕೂ ಮೀರಿದ ಬಂಧ ಅಂತ ಹೇಳೋದು. ಸ್ನೇಹದ ಈ ಮಹತ್ವವನ್ನು ಗುರುತಿಸಲು ಮತ್ತು ಜನರು, ದೇಶಗಳು ಮತ್ತು ಸಂಸ್ಕೃತಿಗಳಲ್ಲಿ ಶಾಂತಿ, ಏಕತೆ ಮತ್ತು ಪರಸ್ಪರ ತಿಳುವಳಿಕೆಯನ್ನು ಉತ್ತೇಜಿಸುವ ಸಲುವಾಗಿ ಪ್ರತಿವರ್ಷ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ (International Friendship Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ಅಂತಾರಾಷ್ಟ್ರೀಯ ಸ್ನೇಹ ದಿನದ ಇತಿಹಾಸ:

ಜಾಗತಿಕ ಸ್ನೇಹ ದಿನದ ಪರಿಕಲ್ಪನೆಯನ್ನು ಮೊದಲು 1958 ರಲ್ಲಿ ಪರಾಗ್ವೆ ಮೂಲದ ನಾಗರಿಕ ಸಂಘಟನೆಯಾದ ವರ್ಲ್ಡ್ ಫ್ರೆಂಡ್‌ಶಿಪ್ ಕ್ರುಸೇಡ್ ಪ್ರಸ್ತಾಪಿಸಿತು. ದಶಕಗಳ ನಂತರ, ಅಂದರೆ  2011 ರಲ್ಲಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ ಜುಲೈ 30 ಅನ್ನು ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಅಧಿಕೃತವಾಗಿ ಘೋಷಿಸಿತು. ಅಂದಿನಿಂದ ಪ್ರತಿವರ್ಷ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಅಂತಾರಾಷ್ಟ್ರೀಯ ಸ್ನೇಹ ದಿನದ ಉದ್ದೇಶ:

ಶಾಂತಿ ನಿರ್ಮಾಣ ಪ್ರಯತ್ನಗಳಿಗೆ ಪ್ರೇರಣೆ ನೀಡುವುದು ಮತ್ತು ವ್ಯಕ್ತಿಗಳು, ಸಮುದಾಯ, ರಾಷ್ಟ್ರ ರಾಷ್ಟ್ರಗಳ  ನಡುವಿನ ಬಾಂಧವ್ಯವನ್ನು ಬಲಪಡಿಸುವುದು ಅಂತಾರಾಷ್ಟ್ರೀಯ ಸ್ನೇಹ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.   ಸ್ನೇಹವು ಶಾಂತಿ ಉಪಕ್ರಮಗಳಿಗೆ ಪ್ರೇರಣೆ ನೀಡುತ್ತದೆ ಮತ್ತು ಸಮುದಾಯಗಳ ನಡುವಿನ ಅಂತರವನ್ನು ಪುನಃಸ್ಥಾಪಿಸುತ್ತದೆ ಎಂಬ ನಂಬಿಕೆಯೊಂದಿಗೆ ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ
Image
ಹುಲಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
Image
ಕಾರ್ಗಿಲ್ ವಿಜಯ್ ದಿವಸದ ಇತಿಹಾಸ, ಮಹತ್ವವೇನು? ಇಲ್ಲಿದೆ ಮಾಹಿತಿ
Image
ಕಾನೂನಿನ ಮುಂದೆ ಎಲ್ಲರೂ ಸಮಾನರು
Image
ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸುವ ಉದ್ದೇಶವನ್ನು ತಿಳಿಯಿರಿ

ಇದನ್ನೂ ಓದಿ: ಆಗಸ್ಟ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳು ಯಾವುವು?

ಅಂತಾರಾಷ್ಟ್ರೀಯ ಸ್ನೇಹ ದಿನದ ಸ್ಮರಣಾರ್ಥವಾಗಿ, ವಿಶ್ವಸಂಸ್ಥೆಯು ಸರ್ಕಾರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ನಾಗರಿಕ ಸಮಾಜ ಗುಂಪುಗಳ ಜೊತೆಗೂಡಿ ನಾಗರಿಕ ಸಂವಾದ, ಒಗ್ಗಟ್ಟು, ಪರಸ್ಪರ ತಿಳುವಳಿಕೆ ಮತ್ತು ಸಮನ್ವಯವನ್ನು ಉತ್ತೇಜಿಸುವ ಅಂತಾರಾಷ್ಟ್ರೀಯ ಸಮುದಾಯದ ಪ್ರಯತ್ನಗಳನ್ನು ಬೆಂಬಲಿಸುವ ಕಾರ್ಯಕ್ರಮಗಳು, ಚಟುವಟಿಕೆಗಳು ಮತ್ತು ಉಪಕ್ರಮಗಳನ್ನು ಆಯೋಜಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ