AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ಈ ಚಿತ್ರದಲ್ಲಿ ಅಡಗಿರುವ ಮರಕುಟಿಕವನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?

ನಮ್ಮ ಕಣ್ಣುಗಳಿಗೆ ಸವಾಲೊಡ್ಡುವ ಆಪ್ಟಿಕಲ್‌ ಇಲ್ಯೂಷನ್‌ನಂತಹ ಕಣ್ಕಟ್ಟಿನ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಇಂತಹ ಸವಾಲಿನ ಆಟಗಳನ್ನು ನೀವು ಸಹ ಆಡಿರುತ್ತೀರಿ ಅಲ್ವಾ. ಇದೀಗ ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಅದರಲ್ಲಿ ಮರದಲ್ಲಿ ಅಡಗಿರುವ ಮರಕುಟಿಕವನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಕೇವಲ 5 ಸೆಕೆಂಡುಗಳಲ್ಲಿ ಮರಕುಟಿಕವನ್ನು ಹುಡುಕುವ ಮೂಲಕ ನಿಮ್ಮ ವೀಕ್ಷಣಾ ಕೌಶಲ್ಯ ಹೇಗಿದೆ ಎಂಬುದನ್ನು ಪರೀಕ್ಷಿಸಿ.

Optical Illusion: ಈ ಚಿತ್ರದಲ್ಲಿ ಅಡಗಿರುವ ಮರಕುಟಿಕವನ್ನು ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವೇ?
ಆಪ್ಟಿಕಲ್‌ ಇಲ್ಯೂಷನ್Image Credit source: Social Media
ಮಾಲಾಶ್ರೀ ಅಂಚನ್​
|

Updated on: Jul 30, 2025 | 5:48 PM

Share

ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದು ಮೋಜಿನ ಆಟ ಮಾತ್ರವಾಗಿರದೆ, ನಮ್ಮ ಬುದ್ಧಿವಂತಿಕೆ ಎಷ್ಟಿದೆ ಎಂಬುದನ್ನು ಸಾಬೀತುಪಡಿಸುವ ಸವಾಲಿನ ಆಟವಾಗಿದೆ. ಜೊತೆಗೆ ಇವುಗಳು ನಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಕೂಡಾ ಪ್ರಯೋಜನಕಾರಿಯಾಗಿದೆ. ನೀವು ಸಹ ಇಂತಹ ಸವಾಲಿನ ಆಟಗಳನ್ನು ಆಡಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ವೈರಲ್‌ ಆಗಿದ್ದು, ಅದರಲ್ಲಿ ಮರದಲ್ಲಿ ಅಡಗಿರುವಂತಹ ಮರಕುಟಿಕವನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಬರೀ 5 ಸೆಕೆಂಡುಗಳ ಒಳಗೆ ಈ ಸವಾಲನ್ನು ಪೂರ್ಣಗೊಳಿಸುವ ಮೂಲಕ ನೀವು ಬುದ್ಧಿವಂತ ವ್ಯಕ್ತಿಯೆಂದು ಸಾಬೀತುಪಡಿಸಿ.

ಮರದಲ್ಲಿ ಅಡಗಿರುವ ಮರಕುಟಿಕವನ್ನು ಹುಡುಕಲು ನಿಮ್ಮಿಂದ ಸಾಧ್ಯವೇ?

Optical Illusion1

ಮೇಲಿನ ಚಿತ್ರದಲ್ಲಿರುವ ಬೃಹದಾಕಾರದ ಮರದಲ್ಲೊಂದು ಮರಕುಟಿಕ ಕುಳಿತಿದ್ದು, ಅದನ್ನು ನೀವು ಬರೀ 5 ಸೆಕೆಂಡುಗಳಲ್ಲಿ ಹುಡುಕಬೇಕು. ಏಕಾಗ್ರತೆಯಿಂದ ಗಮನಿಸಿದರೆ ಈ ಸವಾಲಿನ ಆಟವನ್ನು ನೀವು ಬಹಳ ಸುಲಭವಾಗಿ ಪೂರ್ಣಗೊಳಿಸಬಹುದು. ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು r/FindTheSniper ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
Image
ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದೊಳಗೆ ಅಡಗಿರುವ ಜೀವಿಯನ್ನು ಗುರುತಿಸಬಲ್ಲಿರಾ
Image
ಈ ಚಿತ್ರದಲ್ಲಿ ತೋಳ ಎಲ್ಲಿದೆ ಎಂದು ಕಂಡು ಹಿಡಿಯುವಿರಾ?
Image
ಈ ಚಿತ್ರದಲ್ಲಿರುವ ಕಲ್ಲುಗಳ ಮಧ್ಯೆ ಅಡಗಿರುವ ಕಪ್ಪೆಯನ್ನು ಹುಡುಕಲು ಸಾಧ್ಯವೆ?
Image
ಈ ಚಿತ್ರದಲ್ಲಿ ಅಡಗಿರುವ ಮೊಲವನ್ನು ಹುಡುಕಬಲ್ಲಿರಾ?

ಪೋಸ್ಟ್ ಇಲ್ಲಿದೆ ನೋಡಿ:

Find the woodpecker byu/SCHFTW inFindTheSniper

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಇಂತಹ ಆಪ್ಟಿಕಲ್‌ ಇಲ್ಯೂಷನ್‌ ಸವಾಲಿನ ಆಟ ಮಾತ್ರವಾಗಿರದೆ, ನಮ್ಮ ಏಕಾಗ್ರತೆ ಮತ್ತು ದೃಷ್ಟಿ ತೀಕ್ಷ್ಣತೆಯನ್ನು ಸುಧಾರಿಸಲು ಇರುವಂತಹ ಮಾರ್ಗವು ಹೌದು. ಈ ಸವಾಲನ್ನು ಸ್ವೀಕರಿಸುವ ಮೂಲಕ ನಿಮ್ಮ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂಬುದನ್ನು ಪರೀಕ್ಷೆ ಮಾಡಿ. ಮೇಲೆ ನೀಡಿರುವ ಚಿತ್ರದಲ್ಲಿ ಮರದಲ್ಲೊಂದು ಮರಕುಟಿಕ ಕುಳಿತಿದೆ. ನಿಮ್ಮ ಗಮನವನ್ನು ಕೇಂದ್ರೀಕರಿಸಿ, ಏಕಾಗ್ರತೆಯಿಂದ ನೋಡಿದರೆ ಆ ಮರದಲ್ಲಿ ಕುಳಿತಿರುವ ಮರಕುಟಿಕವನ್ನು ನೀವು ಸುಲಭವಾಗಿ ಹುಡುಕಬಹುದು.

ಇದನ್ನೂ ಓದಿ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದೊಳಗೆ ಅಡಗಿರುವ ಜೀವಿಯನ್ನು ಗುರುತಿಸಬಲ್ಲಿರಾ?

ಉತ್ತರ ಇಲ್ಲಿದೆ?

ನೀವು ನಿಮ್ಮ ಬುದ್ಧಿವಂತಿಕೆಯನ್ನು ಬಳಸಿಕೊಂಡು ಬಹಳ ಸುಲಭವಾಗಿ ಮರದಲ್ಲಿ ಅಡಗಿರುವ ಮರಕುಟಿಕವನ್ನು ಕಂಡುಹಿಡಿದಿದ್ದೀರಿ ಎಂದಾದರೆ ನಿಮಗೆ ಧನ್ಯವಾದಗಳು. ಇನ್ನೂ ಮರಕುಟಿಕವನ್ನು ಹುಡುಕಲು ಸಾಧ್ಯವಾಗಿಲ್ಲ ಎಂದಾದರೆ ಇಲ್ಲಿದೆ ನೋಡಿ ಉತ್ತರ.

Optical Illusion Answer

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ