Optical illusion: ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದೊಳಗೆ ಅಡಗಿರುವ ಜೀವಿಯನ್ನು ಗುರುತಿಸಬಲ್ಲಿರಾ?
ಐಕ್ಯೂ ಮಟ್ಟವನ್ನು ಪರೀಕ್ಷಿಸುವ, ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂಬುದನ್ನು ಪರೀಕ್ಷೆ ಮಾಡಬಹುದಾದಂತಹ ಆಪ್ಟಿಕಲ್ ಇಲ್ಯೂಷನ್, ಬ್ರೈನ್ ಟೀಸರ್ ಚಿತ್ರಗಳು ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್ ಆಗಿದ್ದು, ಅದರಲ್ಲಿ ಅಡಗಿರುವ ಜೀವಿ ಯಾವುದು ಎಂಬುದನ್ನು ಪತ್ತೆ ಹಚ್ಚಲು ನಿಮಗೆ ಸವಾಲನ್ನು ನೀಡಲಾಗಿದೆ. ಈ ಸವಾಲನ್ನು ಸ್ವೀಕರಿಸಿ, ನೀವು ಎಷ್ಟು ಪ್ರತಿಭಾನ್ವಿತರು ಎಂಬುದನ್ನು ಪರೀಕ್ಷಿಸಿ.

ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ, ಮನಸ್ಸನ್ನು ಗೊಂದಲಗೊಳಿಸುವ ಬ್ರೈನ್ ಟೀಸರ್, ಆಪ್ಟಿಕಲ್ ಇಲ್ಯೂಷನ್‌ನಂತಹ (Optical Illusion) ಒಗಟಿನ ಆಟಗಳನ್ನು ಆಡುವುದೇ ಒಂದು ರೀತಿಯ ಮಜಾ. ಇವುಗಳು ಮೋಜಿನ ಆಟಗಳು ಮಾತ್ರವಲ್ಲದೆ, ಇವುಗಳು ನಮ್ಮ ಮೆದುಳಿಗೆ ವ್ಯಾಯಾಮವನ್ನು ಕೂಡಾ ನೀಡುತ್ತವೆ. ಅಷ್ಟೇ ಯಾಕೆ ಈ ಚಿತ್ರಗಳ ಮೂಲಕ ನಮ್ಮ ಬುದ್ಧಿವಂತಿಕೆ, ಐಕ್ಯೂ ಮಟ್ಟ ಹಾಗೂ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂಬುದನ್ನು ಸಹ ಪರೀಕ್ಷಿಸಬಹುದು. ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್ ಆಗಿದ್ದು, ಕಪ್ಪು ಬಿಳುಪಿನ ಈ ಚಿತ್ರದ ನಡುವೆ ಅಡಗಿರುವ ಜೀವಿ ಯಾವುದೆಂದು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ಕೇವಲ 11 ಸೆಕೆಂಡುಗಳಲ್ಲಿ ಈ ಸವಾಲನ್ನು ಪೂರ್ಣಗೊಳಿಸುವ ಮೂಲಕ ನೀವು ನಿಮ್ಮ ಬುದ್ಧಿ ಶಕ್ತಿ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ.
ಕಪ್ಪು ಬಿಳುಪಿನ ಚಿತ್ರದ ನಡುವೆ ಅಡಗಿರುವ ಜೀವಿ ಯಾವುದು?

ಇದೀಗ ವೈರಲ್ ಆಗಿರುವ ಈ ಕಪ್ಪು ಬಿಳುಪಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಒಂದು ಜೀವಿ ಅಡಗಿ ಕುಳಿತಿದೆ. ಇದನ್ನು ಕಂಡು ಹಿಡಿಯುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಆದ್ರೆ ಏಕಾಗ್ರತೆಯಿಂದ ನೋಡಿದರೆ, ಅದರಲ್ಲಿ ಅಡಕವಾಗಿರುವ ಜೀವಿ ಯಾವುದೆಂದು ನಿಮಗೆ ಪತ್ತೆ ಹಚ್ಚಲು ಸಾಧ್ಯ. ಕಪ್ಪು ಮತ್ತು ಬಿಳಿ ರೇಖೆಯ ಈ ಚಿತ್ರದಲ್ಲಿ ಅಡಗಿರುವ ಆ ಜೀವಿ ಯಾವುದೆಂದು ನೀವು ಕೇವಲ 11 ಸೆಕೆಂಡುಗಳ ಒಳಗೆ ಹುಡುಕಬೇಕು.
ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?
ಈ ಸವಾಲನ್ನು ಪೂರ್ಣಗೊಳಿಸಲು ಉತ್ತಮ ಮಟ್ಟದ ಐಕ್ಯೂ ಇರಬೇಕೆನ್ನುತ್ತಾರೆ. ಹಾಗಿದ್ರೆ ಕಪ್ಪು ಬಿಳುಪಿನ ಗೆರೆಯ ಮಧ್ಯೆ ಅಡಗಿರುವ ಜೀವಿಯನ್ನು ಹುಡುಕಲು ನೀವು ಸಿದ್ಧರಿದ್ದೀರಾ? ಒಂದು ವೇಳೆ ಈ ಚಿತ್ರದಲ್ಲಿರುವ ಜೀವಿ ಯಾವುದೆಂದು ಕಂಡು ಹಿಡಿಯಲು ಸಾಧ್ಯವಾಗದಿದ್ದರೆ, ವೀಕ್ಷಣಾ ಕೌಶಲ್ಯವನ್ನು ಸುಧಾರಿಸಲು, ಮೆದುಳಿಗೆ ಮತ್ತು ಕಣ್ಣಿಗೆ ವ್ಯಾಯಾಮವನ್ನು ನೀಡಲು ಇಂತಹ ಒಗಟಿನ ಆಟಗಳನ್ನು ದಿನನಿತ್ಯ ಅಭ್ಯಾಸ ಮಾಡಬೇಕು.
ಇದನ್ನೂ ಓದಿ: ನಿಮಗೊಂದು ಸವಾಲ್; ಈ ಚಿತ್ರದಲ್ಲಿ ತೋಳ ಎಲ್ಲಿದೆ ಎಂದು ಕಂಡು ಹಿಡಿಯುವಿರಾ?
ಉತ್ತರ ಇಲ್ಲಿದೆ:
ನೀವು 11 ಸೆಕೆಂಡುಗಳ ಒಳಗೆ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಜೀವಿಯನ್ನು ಹುಡುಕಿದರೆ ಧನ್ಯವಾದ. ನೀವು ಉತ್ತಮ ಐಕ್ಯೂ ಮಟ್ಟ ಮತ್ತು ವೀಕ್ಷಣಾ ಕೌಶಲ್ಯವನ್ನು ಹೊಂದಿದ್ದೀರಿ. ಒಂದು ವೇಳೆ ನಿಮಗೆ ಉತ್ತರ ಸಿಕ್ಕಿಲ್ಲ ಎಂದಾದ್ರೆ ಟೆನ್ಷನ್ ಬೇಡ. ಇಲ್ಲಿದೆ ಉತ್ತರ. ಅದೇನೆಂದರೆ ಈ ಆಪ್ಟಿಕಲ್ ಚಿತ್ರದೊಳಗೆ ಅಡಕವಾಗಿರುವ ಜೀವಿ ಅದು ಕಪ್ಪೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








