Optical Illusion: ಈ ಚಿತ್ರದಲ್ಲಿ ಅಡಗಿರುವ ಮೊಲವನ್ನು ನೀವು 10 ಸೆಕೆಂಡುಗಳಲ್ಲಿ ಹುಡುಕಬಲ್ಲಿರಾ?
ಮೆದುಳಿಗೆ ವ್ಯಾಯಾಮವನ್ನು ನೀಡುವ ಮೋಜಿನ ಆಟವಾದ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅಂತಹದ್ದೊಂದು ಚಿತ್ರ ಇದೀಗ ವೈರಲ್ ಆಗಿದ್ದು, ಅದರಲ್ಲಿ ಅಡಗಿ ಕುಳಿತಿರುವ ಮೊಲವನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಕೇವಲ 10 ಸೆಕೆಂಡುಗಳಲ್ಲಿ ಮೊಲವನ್ನು ಹುಡುಕುವ ಮೂಲಕ ನಿಮ್ಮ ಕಣ್ಣು ಎಷ್ಟು ಶಾರ್ಪ್ ಆಗಿದೆ ಎಂಬುದನ್ನು ಪರೀಕ್ಷಿಸಿ.

ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್‌ನಂತಹ ಒಗಟಿನ ಆಟಗಳು ಬುದ್ಧಿವಂತಿಕೆ ಮತ್ತು ದೃಷ್ಟಿ ತೀಕ್ಣತೆಗೆ ಸವಾಲೊಡ್ಡುವಂತಹ ಒಗಟಿನ ಆಟಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇವುಗಳು ಮೋಜಿನ ಆಟ ಮಾತ್ರವಲ್ಲದೆ, ನಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುವ ಒಂದು ವಿಧವಾಗಿದೆ. ಕಣ್ಣಿಗೆ ಸವಾಲು ಹಾಕುವಂತಹ ದೃಷ್ಟಿ ಭ್ರಮೆಯ ಇಂತಹ ಆಟಗಳನ್ನು ನೀವು ಸಹ ಆಡಿರಬಹುದಲ್ವಾ. ಇಲ್ಲೊಂದು ಅಂತಹದ್ದೇ ಆಪ್ಟಿಕಲ್ ಚಿತ್ರ ವೈರಲ್ ಆಗಿದ್ದು, ಅದರಲ್ಲಿ ಮೊಲವನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಕೇವಲ 10 ಸೆಕೆಂಡುಗಳಲ್ಲಿ ನೀವು ಅಡಗಿ ಕುಳಿತಿರುವ ಮೊಲವನ್ನು ಹುಡುಕಬೇಕು. ಹಾಗಿದ್ರೆ ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಿ ಅಲ್ವಾ.
ಚಿತ್ರದಲ್ಲಿ ಅಡಗಿರುವ ಮೊಲವನ್ನು ಹುಡುಕಿ:
ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಪೊದೆಯೊಳಗೆ ಅಡಗಿರುವ ಮೊಲವನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಮೇಲಿನ ಈ ಚಿತ್ರದಲ್ಲಿ ಹಸಿರು ಪೊದೆಯನ್ನು ಕಾಣಬಹುದು. ಆ ಪೊದೆಯೊಳಗೆ ಒಂದು ಮೊಲವು ಕೂಡ ಅಡಗಿ ಕುಳಿತಿದ್ದು, ಅದನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ.
Find the baby bunny – easy byu/kyliex2 inFindTheSniper
ಇದನ್ನೂ ಓದಿ
ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?
ನೀವು ಈ ಚಿತ್ರವನ್ನು ನೋಡಿದಾಗ ಮೇಲ್ನೋಟಕ್ಕೆ ಬರಿ ಪೊದೆ ಮಾತ್ರ ಕಾಣಿಸುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲೊಂದು ಮೊಲ ಕುಳಿತಿರುವುದನ್ನು ಕಾಣಬಹುದು. ನೀವು ಬರೀ 10 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿ ಕುಳಿತ ಮೊಲವನ್ನು ಹುಡುಕಬೇಕು.
ಇದನ್ನೂ ಓದಿ: ಈ ಜೇನು ನೊಣದ ಸರಿಯಾದ ನೆರಳು ಯಾವುದೆಂದು ಹೇಳಬಲ್ಲಿರಾ?
ಇಲ್ಲಿದೆ ಉತ್ತರ:
ಎಷ್ಟೇ ಹುಡುಕಿದರೂ ಮೊಲ ಮಾತ್ರ ಕಾಣಿಸುತ್ತಿಲ್ಲ ಎಂದು ಯೋಚಿಸುತ್ತಿದ್ದೀರಾ? ಟೆನ್ಷನ್ ಬೇಡ ಇಲ್ಲಿದೆ ಉತ್ತರ. ಈ ಚಿತ್ರದಲ್ಲಿ ನಿಮಗೆ ಮೇಲ್ನೋಟಕ್ಕೆ ಬರೀ ಪೊದೆ ಮತ್ತು ನೆಲದ ಮೇಲೆ ಬಿದ್ದಿರುವ ಎಲೆಗಳೇ ಕಾಣಿಸಬಹುದು. ಆ ನೆಲದ ಮೇಲೆ ಬಿದ್ದಿರುವ ಎಲೆಗಳ ಕಡೆಗೆ ಕಣ್ಣು ಹಾಯಿಸಿ ಸೂಕ್ಷ್ಮವಾಗಿ ನೋಡಿದರೆ ಅಲ್ಲಿ ಕಂದು ಬಣ್ಣದ ಮೊಲವನ್ನು ಕುಳಿತಿರುವುದು ಕಾಣಿಸುತ್ತದೆ.
ಈ ರೀತಿಯ ಒಗಟಿನ ಆಟಗಳು ಕೇವಲ ಮೋಜಿನ ಸಂಗತಿಯಲ್ಲ. ಇದು ನಮ್ಮ ಬುದ್ಧಿವಂತಿಕೆ ಮತ್ತು ದೃಷ್ಟಿ ಕೌಶಲ್ಯವನ್ನು ಹೇಗಿದೆ ಎಂಬುದನ್ನು ಪರೀಕ್ಷಿಸುವ ಒಂದು ಬಗೆಯ ಪರೀಕ್ಷೆಯೂ ಆಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ