AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಒಂದಿಷ್ಟು ಆಹಾರಗಳಿಗೆ ಎಕ್ಸ್‌ಪೈರಿ ಡೇಟ್‌ ಅನ್ನೋದೇ ಇಲ್ಲವಂತೆ

ನಾವು ಮಾರುಕಟ್ಟೆಯಿಂದ ಯಾವುದೇ ವಸ್ತುಗಳನ್ನು ಖರೀದಿಸಿದರೂ, ಅದರ ಬೆಲೆ ನೋಡುವುದಕ್ಕೂ ಮೊದಲು ಅದರ ಎಕ್ಸ್‌ಪೈರಿ ದಿನಾಂಕವನ್ನು ಚೆಕ್‌ ಮಾಡುತ್ತೇವೆ. ಹೀಗೆ ಆರೋಗ್ಯದ ದೃಷ್ಟಿಯಿಂದ ಎಕ್ಸ್‌ಪೈರಿ ಡೇಟ್‌ ಮೀರದ ಉತ್ಪನ್ನಗಳನ್ನೇ ಕೊಳ್ಳುತ್ತೇವೆ. ಆದ್ರೆ ಈ ಒಂದಷ್ಟು ಆಹಾರ ಪದಾರ್ಥಗಳಿಗೆ ಎಕ್ಸ್‌ಪೈರಿ ಡೇಟ್‌ ಅನ್ನೋದೇ ಇಲ್ಲವಂತೆ. ಅವುಗಳನ್ನು ನೀವು ಯಾವಾಗ ಬೇಕಾದ್ರೂ ಬಳಕೆ ಮಾಡ್ಬೋದಂತೆ. ಆ ಆಹಾರ ಪದಾರ್ಥಗಳು ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಒಂದಿಷ್ಟು ಆಹಾರಗಳಿಗೆ ಎಕ್ಸ್‌ಪೈರಿ ಡೇಟ್‌ ಅನ್ನೋದೇ ಇಲ್ಲವಂತೆ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 21, 2025 | 7:01 PM

Share

ಆಹಾರ ಉತ್ಪನ್ನಗಳಾಗಿರಬಹುದು, ಮೇಕಪ್-ಸ್ಕಿನ್‌ಕೇರ್‌ ಉತ್ಪನ್ನಗಳಾಗಿರಬಹುದು, ಔಷಧಿಗಳಾಗಿರಬಹುದು ಬಹುತೇಕ ಎಲ್ಲಾ ಉತ್ಪನ್ನಗಳಿಗೂ ಎಕ್ಸ್‌ಪೈರಿ ಡೇಟ್‌ (expiration date) ಅನ್ನೋದು ಇದ್ದೇ ಇರುತ್ತದೆ. ಆಹಾರ ಉತ್ಪನ್ನಗಳೇ ಆಗಿರಲಿ ಅಥವಾ ಸೌಂದರ್ಯವರ್ಧಕಗಳೇ ಆಗಿರಲಿ ಅವಧಿ ಮೀರಿದ ಯಾವುದೇ ವಸ್ತುಗಳನ್ನು ಬಳಸಿದರೆ ಸಮಸ್ಯೆ ಎದುರಾಗೋದು ಖಂಡಿತ. ಅದಕ್ಕಾಗಿಯೇ ನಾವು ಮಾರುಕಟ್ಟೆಯಲ್ಲಿ ಯಾವುದೇ ವಸ್ತುಗಳನ್ನು ಖರೀದಿಸಿದರೂ ಮೊದಲು ಅದರ ಎಕ್ಸ್‌ಪೈರಿ ಡೇಟ್‌ ಅಥವಾ ಶೆಲ್ಫ್‌ ಲೈಫನ್ನು ಚೆಕ್‌ ಮಾಡುತ್ತೇವೆ.  ಆದ್ರೆ ನಿಮ್ಗೊಂದು ವಿಷಯ ಗೊತ್ತಾ? ಒಂದಷ್ಟು ಆಹಾರ ಪದಾರ್ಥಗಳಿಗೆ ಎಕ್ಸ್‌ಪೈರಿ ಡೇಟ್‌ ಅನ್ನೋದೇ ಇಲ್ಲವಂತೆ. (Foods without an expiration date) ಹಾಗಿದ್ರೆ  ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ನೋಡೋಣ.

ಎಕ್ಸ್‌ಪೈರಿ ಡೇಟ್‌ ಇಲ್ಲದ ಆಹಾರಗಳು:

ಜೇನುತುಪ್ಪ: ಶುದ್ಧ ಜೇನುತುಪ್ಪ ಎಂದಿಗೂ ಕೆಡುವುದಿಲ್ಲ. ಜೇನುತುಪ್ಪ ಹೈಡ್ರೋಜನ್‌ ಪೆರಾಕ್ಸೈಡನ್ನು ಉತ್ಪಾದಿಸುತ್ತದೆ. ಇದು ಹೆಚ್ಚಿನ ಬ್ಯಾಕ್ಟೀರಿಯಾ ಮತ್ತು ಕೀಟಗಳ ಬೆಳವಣಿಗೆಯನ್ನು ತಪ್ಪಿಸುತ್ತದೆ. ಜೊತೆಗೆ ಇದರ ಕಡಿಮೆ ನೀರಿನ ಅಂಶವು ಬ್ಯಾಕ್ಟೀರಿಯಾ ಬದುಕಲು ಸೂಕ್ತವಲ್ಲ. ನೀವು ಆ ಜೇನುತುಪ್ಪವನ್ನು ಗಾಳಿಯಾಡದ ಬಾಟಲಿ ಅಥವಾ ಪಾತ್ರೆಯಲ್ಲಿ ಪ್ಯಾಕ್ ಮಾಡಿ ನಿಮಗೆ ಬೇಕಾದಾಗ ಸೇವಿಸಬಹುದು. ಗಾಜಿನ ಬಾಟಲಿಗಳಲ್ಲಿ ಸಂಗ್ರಹಿಸಿದರೆ ಇದನ್ನು ಹಲವು ವರ್ಷಗಳ ಕಾಲ ಬಳಕೆ ಮಾಡಬಹುದು. ಕಾಲನಂತರದಲ್ಲಿ ಇವುಗಳ ಗುಣಮಟ್ಟ ಕ್ಷೀಣಿಸಿದರೂ  ಇದು  ತಿನ್ನಲು ಸಂಪೂರ್ಣವಾಗಿ ಸುರಕ್ಷಿತವಾಗಿದೆ.

ಉಪ್ಪು: ಆಹಾರಗಳ ರುಚಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಉಪ್ಪಿಗೂ ಎಕ್ಸ್‌ಪೈರಿ ಡೇಟ್‌ ಇರೋದಿಲ್ಲ. ಉಪ್ಪನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿದರೆ ಅದು ಕೆಡುವುದಿಲ್ಲ. ಉಪ್ಪಿನಲ್ಲಿರುವ ಸೋಡಿಯಂ ಕ್ಲೋರೈಡ್‌ ಸ್ಥಿರವಾದ ರಾಸಾಯನಿಕ ಸಂಯುಕ್ತವಾಗಿದೆ. ಇದು ಉಪ್ಪು ಹಾಳಾಗುವುದನ್ನು ತಡೆಯುತ್ತದೆ. ನೀವು ಗಾಳಿಯಾಡದ ಗಾಜಿನ ಡಬ್ಬದಲ್ಲಿ ಉಪ್ಪನ್ನು ಸಂಗ್ರಹಿಸಿಡಬೇಕು.

ಇದನ್ನೂ ಓದಿ
Image
ಹೆಲ್ಮೆಟ್ ಧರಿಸುವುದರಿಂದ ನಿಜಕ್ಕೂ ಕೂದಲು ಉದುರುತ್ತಾ?
Image
ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬಾರದು
Image
ಅಕ್ಕಿಯನ್ನು ತೊಳೆಯದೆ ಅನ್ನ ಮಾಡಿದ್ರೆ ಏನಾಗುತ್ತೆ ಗೊತ್ತಾ?
Image
ಜನ ಬಹು ಬೇಗನೆ ಕೆಟ್ಟ ಚಟಗಳಿಗೆ ದಾಸರಾಗುವುದು ಏಕೆ ಗೊತ್ತಾ?

ಸಕ್ಕರೆ: ಸಕ್ಕರೆ ಕೂಡ ಎಂದಿಗೂ ಕೆಡುವುದಿಲ್ಲ. ತಜ್ಞರ ಪ್ರಕಾರ ಸಕ್ಕರೆಯನ್ನು ತೇವಾಂಶದಿಂದ ದೂರವಿಟ್ಟರೆ, ನೀವು ಅದನ್ನು ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದು.  ಸಕ್ಕರೆಯನ್ನು ಗಾಳಿಯಾಡದ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿಡುವುದು ಸೂಕ್ತ. ಯಾವಾಗಲೂ ಸಕ್ಕರೆ ಪಾತ್ರೆಯನ್ನು ತೇವಾಂಶ ಮತ್ತು ಶಾಖದಿಂದ ದೂರವಿಡಿ. ಇದು ಸಕ್ಕರೆ ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಸಹಕಾರಿ.

ಅಕ್ಕಿ: ದೀರ್ಘಕಾಲ ಶೇಖರಿಸಿಡಬಹುದಾದ ಆಹಾರಗಳಲ್ಲಿ ಅಕ್ಕಿ ಕೂಡ ಒಂದು. ಅವುಗಳಿಗೆ ಎಕ್ಸೈರಿ ಡೇಟ್‌ ಅನ್ನೋದು ಇರುವುದಿಲ್ಲ. ಅಕ್ಕಿ ಹಳೆಯದಾದಷ್ಟೂ ರುಚಿಕರವಾಗಿರುತ್ತದೆ ಎಂದು ಹೇಳಲಾಗುತ್ತದೆ. ಹೀಗಿರುವಾಗ ನಾವು ಅಕ್ಕಿಯನ್ನು ಶೇಖರಿಸಿಡುವ ವಿಧಾನವನ್ನು ಅವಲಂಬಿಸಿ ಅದರ ಗುಣಮಟ್ಟ ಅವಲಂಬಿಸಿರುತ್ತದೆ.

ಇದನ್ನೂ ಓದಿ: ಅನ್ನ ಮಾಡುವ ಮೊದಲು ಅಕ್ಕಿಯನ್ನು ತೊಳೆಯುವುದು ಅಗತ್ಯವೆ?

ವಿನೆಗರ್:‌ ವಿನೆಗರ್‌ ಒಂದು ಅಡುಗೆ ಪದಾರ್ಥವಾಗಿದ್ದು, ಉಪ್ಪಿನಕಾಯಿ ಸೇರಿದಂತೆ, ಹಲವು ಅಡುಗೆಗಳಲ್ಲಿ ಇದನ್ನು ಬಳಸಲಾಗುತ್ತದೆ.  ಇವುಗಳಿಗೆ ಕೂಡ ಎಕ್ಸ್‌ಪೈರಿ ಡೇಟ್‌ ಇಲ್ಲವಂತೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿದರೆ ಇವು  ದೀರ್ಘಕಾಲ ಕೆಡುವುದಿಲ್ಲ.

ಮದ್ಯ: ಮದ್ಯವು ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ, ಅದಕ್ಕೆ ಯಾವುದೇ ಎಕ್ಸ್‌ಪೈರಿ ಡೇಟ್‌ ಅನ್ನೋದು ಇಲ್ಲ. ಇವುಗಳು ಹಳೆಯದಾದಷ್ಟು ಇವುಗಳ ರುಚಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ